logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Idbi So Recruitment 2023: ಐಡಿಬಿಐ ಬ್ಯಾಂಕ್‌ನಲ್ಲಿ ಸ್ಪೆಷಲಿಸ್ಟ್‌ ಆಫೀಸರ್‌ಗಳ ನೇಮಕ, ನಾಳೆಯಿಂದ ಅರ್ಜಿ ಆರಂಭ, ಇಲ್ಲಿದೆ ವಿವರ

IDBI SO recruitment 2023: ಐಡಿಬಿಐ ಬ್ಯಾಂಕ್‌ನಲ್ಲಿ ಸ್ಪೆಷಲಿಸ್ಟ್‌ ಆಫೀಸರ್‌ಗಳ ನೇಮಕ, ನಾಳೆಯಿಂದ ಅರ್ಜಿ ಆರಂಭ, ಇಲ್ಲಿದೆ ವಿವರ

Praveen Chandra B HT Kannada

Feb 20, 2023 06:57 PM IST

Apply for SO vacancies from tomorrow at idbibank.in

    • IDBI SO recruitment 2023: ಐಡಿಬಿಐ ಬ್ಯಾಂಕ್‌ನ ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯಿಂದ ಅವಕಾಶವಿದೆ. ಬ್ಯಾಂಕ್‌ನಲ್ಲಿ ಆಫೀಸರ್‌ ಆಗಬೇಕೆಂದು ಬಯಸುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
 Apply for SO vacancies from tomorrow at idbibank.in
Apply for SO vacancies from tomorrow at idbibank.in

ಐಡಿಬಿಐ ಬ್ಯಾಂಕ್‌ ಲಿಮಿಟೆಡ್‌, ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನಾಳೆ ಅಂದರೆ ಫೆಬ್ರವರಿ 11ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಮಾರ್ಚ್‌ 3 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಐಡಿಬಿಐ ವೆಬ್‌ಸೈಟ್‌ www.idbibank.inನಲ್ಲಿ ಅರ್ಜಿ ಸಲ್ಲಿಸಬಹುದು.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಐಡಿಬಿಐ ಎಸ್‌ಒ ನೇಮಕ: ಹುದ್ದೆಗಳ ವಿವರ

IDBI SO recruitment 2023 vacancy details:ಐಡಿಬಿಐ ಬ್ಯಾಂಕ್‌ ಸುಮಾರು 144 ಸ್ಪೆಷಲಿಸ್ಟ್‌ ಕೇಡರ್‌ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ. ಇಷ್ಟು ಹುದ್ದೆಗಳಲ್ಲಿ 75 ಮ್ಯಾನೇಜರ್‌ ಹುದ್ದೆಗಳಾಗಿವೆ. 29 ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಮತ್ತು 10 ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಹುದ್ದೆಗಳಾಗಿವೆ.

ಐಡಿಬಿಐ ನೇಮಕ: ಅರ್ಜಿ ಶುಲ್ಕ

IDBI SO recruitment 2023 application fee: ಸಾಮಾನ್ಯ , ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳು 1000 ರೂ. ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

  • ಅರ್ಜಿ ಸಲ್ಲಿಸಲು ಲಿಂಕ್‌: www.idbibank.in.
  • ಈ ವೆಬ್‌ಸೈಟ್‌ನ ಕರಿಯರ್‌ ಪುಟಕ್ಕೆ ಹೋಗಿ, ಎಸ್‌ಒ ರಿಕ್ರೂಟ್‌ಮೆಂಟ್‌ ಎಂಬ ಆಯ್ಕೆ ಇರುವಲ್ಲಿ ಕ್ಲಿಕ್‌ ಮಾಡಿ.
  • ಬಳಿಕ ಅಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿರಿ.
  • ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್‌ ಮಾಡಿ
  • ಭರ್ತಿ ಮಾಡಿದ ಅರ್ಜಿ ನಮೂನೆಯ ಪ್ರಿಂಟೌಟ್‌ ತೆಗೆದುಕೊಳ್ಳಿ
  • ಇಲ್ಲಿದೆ ಅಧಿಸೂಚನೆ: ಡೌನ್‌ಲೋಡ್‌ ಮಾಡಿ

ಪದವಿ ಕಾಲೇಜುಗಳಲ್ಲಿ 1050 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಶೀಘ್ರ

ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಇನ್ನಷ್ಟು ಅಭ್ಯರ್ಥಿಗಳು ಶೀಘ್ರದಲ್ಲಿ ನೇಮಕಗೊಳ್ಳಲಿದ್ದಾರೆ. ಈ ಕುರಿತು ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ. "ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1050 ಸಹಾಯಕ ಪ್ರಾಧ್ಯಾಪಕರ ಹುದ್ದೆ ಆಯ್ಕೆಗೆ ಲಿಖಿತ ಪರೀಕ್ಷೆ ಮುಗಿದಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದುʼʼ ಎಂದು ಅವರು ಹೇಳಿದ್ದಾರೆ.

ಸೇನೆಯಿಂದ ಎರಡನೇ ಹಂತದ ಅಗ್ನಿವೀರರ ನೇಮಕಾತಿ, ಈ ಬಾರಿ ಆರಂಭದಲ್ಲಿ ಆನ್‌ಲೈನ್‌ ಪರೀಕ್ಷೆ, ಇಲ್ಲಿದೆ ಹೆಚ್ಚಿನ ಮಾಹಿತಿ

ಇದೀಗ ಮತ್ತೊಂದು ಹಂತದಲ್ಲಿ ನೇಮಕಾತಿ ಆರಂಭವಾಗಲಿದ್ದು, ಸಾವಿರಾರು ಜನರಿಗೆ ಭಾರತೀಯ ಸೇನೆಗೆ ಅಗ್ನಿವೀರರಾಗಿ ಸೇರುವ ಅವಕಾಶ ದೊರಕಲಿದೆ. ಎರಡನೇ ಹಂತದ ನೇಮಕಾತಿಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ನೇಮಕಾತಿ ರಾಲಿಗೆ ಮೊದಲು ಆನ್‌ಲೈನ್‌ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಇರಲಿದೆ ಎಂದು ಹೆಸರು ಹೇಳಲು ಬಯಸದ ಮೂಲಗಳು ಮಾಹಿತಿ ನೀಡಿವೆ. ಮೊದಲ ಹಂತದಲ್ಲಿ ಆನ್‌ಲೈನ್‌ ಪರೀಕ್ಷೆ ಇರದೆ ಇದ್ದರೂ ಮೊದಲ ಹಂತದ ನೇಮಕಾತಿ ನಡೆದ ಬಳಿಕ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯ ಬಳಿಕ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಈ ಕುರಿತ ವರದಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ