logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Electoral Bond: ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗ; ಟಾಪ್ 30 ಖರೀದಿದಾರರು, ವ್ಯಕ್ತಿಗಳ ವಿವರ ಹೀಗಿದೆ

Electoral Bond: ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗ; ಟಾಪ್ 30 ಖರೀದಿದಾರರು, ವ್ಯಕ್ತಿಗಳ ವಿವರ ಹೀಗಿದೆ

Umesh Kumar S HT Kannada

Mar 15, 2024 11:16 AM IST

google News

ಚುನಾವಣಾ ಬಾಂಡ್‌ನ ಮಾದರಿ (ಎಡ ಚಿತ್ರ); ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಬಲ ಚಿತ್ರ)

  • ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಚುನಾವಣಾ ಬಾಂಡ್ ಗಮನಸೆಳೆದಿದೆ. ಈ ಬಾಂಡ್ ಖರೀದಿದಾರರು ಮತ್ತು ಹಣ ನಗದೀಕರಿಸಿದ ಪಕ್ಷಗಳ ವಿವರ ಬಹಿರಂಗವಾಗಿದ್ದು, ಟಾಪ್ 30 ಪಟ್ಟಿಯಲ್ಲಿರುವ ಕಂಪನಿಗಳು, ವ್ಯಕ್ತಿಗಳಿವರು. 

     

ಚುನಾವಣಾ ಬಾಂಡ್‌ನ ಮಾದರಿ (ಎಡ ಚಿತ್ರ); ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಬಲ ಚಿತ್ರ)
ಚುನಾವಣಾ ಬಾಂಡ್‌ನ ಮಾದರಿ (ಎಡ ಚಿತ್ರ); ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಬಲ ಚಿತ್ರ)

ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ಚುನಾವಣಾ ಬಾಂಡ್‌ (Electoral Bond) ಸದ್ಯ ಲೋಕಸಭೆ ಚುನಾವಣೆ (Lok Sabha Election 2024) ಯ ಹೊಸ್ತಿಲಲ್ಲಿ ಚರ್ಚೆಯಲ್ಲಿರುವ ಪ್ರಮುಖ ವಿಷಯ. ಈ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಚುನಾವಣಾ ಆಯೋಗ ನಿನ್ನೆ (ಮಾರ್ಚ್‌ 14) ಸಂಜೆ ಚುನಾವಣಾ ಆಯೋಗ ಈ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಚುನಾವಣಾ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿರ್ವಹಿಸುತ್ತಿದ್ದು, ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ತನ್ನಲ್ಲಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಮಾರ್ಚ್ 12ರಂದು ಒದಗಿಸಿತ್ತು. ಚುನಾವಣಾ ಆಯೋಗವು ಎಸ್‌ಬಿಐ ಕೊಟ್ಟ ಎರಡು ಫೈಲ್‌ಗಳನ್ನು ಪ್ರತ್ಯೇಕವಾಗಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಒಂದು ಫೈಲ್‌ನಲ್ಲಿ ಚುನಾವಣಾ ಫಂಡ್ ಖರೀದಿಸಿದ ಕಂಪನಿಗಳು, ವ್ಯಕ್ತಿಗಳ ವಿವರ ಇದ್ದರೆ, ಇನ್ನೊಂದರಲ್ಲಿ ಆ ಹಣವನ್ನು ನಗದೀಕರಿಸಿದ ರಾಜಕೀಯ ಪಕ್ಷಗಳ ವಿವರ ಇದೆ.

ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್, ಏರ್‌ಟೆಲ್‌ನ ಸುನಿಲ್ ಭಾರ್ತಿ ಮಿತ್ತಲ್, ವೇದಾಂತ, ಐಟಿಸಿ, ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಮುಂತಾದ ಕಂಪನಿಗಳು ಸೇರಿ ಹಲವರು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದಾರೆ. ಇದಲ್ಲದೇ, ಜಾರಿ ನಿರ್ದೇಶನಾಲಯದ ಪರಿಶೀಲನೆಯಲ್ಲಿರುವ ಹೆಚ್ಚೇನೂ ಪ್ರಚಲಿತದಲ್ಲಿ ಇಲ್ಲದ ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವೀಸಸ್‌ 1,350 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿ ಗಮನಸೆಳೆದಿದೆ.

ಚುನಾವಣಾ ಬಾಂಡ್‌ ಖರೀದಿ; ಟಾಪ್ 30 ಕಂಪನಿಗಳಿವು

ಚುನಾವಣಾ ಬಾಂಡ್‌ ಖರೀದಿ; ಟಾಪ್ 30 ಕಂಪನಿಗಳ ಪೈಕಿ 15 ಕಂಪನಿಗಳ ವಿವರ

ಚುನಾವಣಾ ಬಾಂಡ್‌ ಖರೀದಿಸಿದ ಟಾಪ್ 30 ಕಂಪನಿಗಳ ಪೈಕಿ ಫ್ಯೂಚರ್‌ ಗೇಮಿಂಗ್‌ ಆಂಡ್‌ ಹೋಟೆಲ್ ಸರ್ವೀಸಸ್‌ ಪಿಆರ್ 1208 ಕೋಟಿ ರೂಪಾಯಿ, ಮೇಘಾ ಇಂಜಿನಿಯರಿಂಗ್‌ ಆಂಡ್ ಇನ್‌ಫ್ರಾಸ್ಟ್ರಕ್ಚರ್‌ ಲಿ., 821 ಕೋಟಿ ರೂ., ಕ್ವಿಕ್‌ಸಪ್ಲೈಚೇನ್ ಪ್ರೈ.ಲಿ. 410 ಕೋಟಿ ರೂಪಾಯಿ, ಹಾಲ್ಡಾ ಎನರ್ಜಿ ಲಿ., 377 ಕೋಟಿ ರೂಪಾಯಿ, ವೇದಾಂತ ಲಿಮಿಟೆಡ್ 375.65 ಕೋಟಿ ರೂಪಾಯಿ ಬಾಂಡ್ ಖರೀದಿಸಿ ಗಮನಸೆಳೆದಿವೆ.

ಚುನಾವಣಾ ಬಾಂಡ್‌ ಖರೀದಿ; ಟಾಪ್ 30 ಕಂಪನಿಗಳ ಪೈಕಿ 15 ಕಂಪನಿಗಳ ವಿವರ

ಗ್ರಾಸಿಮ್ ಇಂಡಸ್ಟ್ರೀಸ್, ಪಿರಮಾಲ್ ಎಂಟರ್ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್ಟೆಲ್, ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್ಸ್ಪನ್ ಮತ್ತು ಸನ್ ಫಾರ್ಮಾ ಇತರ ಪ್ರಮುಖ ಖರೀದಿದಾರರು.

ಈ ಖರೀದಿದಾರರ ಪೈಕಿ ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವೀಸಸ್‌ ಕಂಪನಿ ಈ ಹಿಂದೆ ಮಾರ್ಟಿನ್ ಲಾಟರಿ ಏಜೆನ್ಸಿಸ್ ಲಿಮಿಟೆಡ್ ಎಂದು ಗುರುತಿಸಿಕೊಂಡಿತ್ತು. ಇದು ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದಲ್ಲಿದೆ. ಇದು ಲಾಟರಿ ಕಂಪನಿಯಾಗಿದ್ದು, ಇದರ ವಿರುದ್ಧ 2022ರ ಮಾರ್ಚ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಪ್ರಕರಣ ದಾಖಲಿಸಿತ್ತು. ಇದು ಎರಡು ವಿಭಿನ್ನ ಕಂಪನಿಗಳ ಹೆಸರಿನಲ್ಲಿ 1,350 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಹಲವಾರು ದೊಡ್ಡ ಮೂಲಸೌಕರ್ಯ ಯೋಜನೆಗಳ ಗುತ್ತಿಗೆಗಳನ್ನು ಪಡೆದಿರುವ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ 966 ಕೋಟಿ ರೂ.ಗಳ ಬಾಂಡ್‌ಗಳನ್ನು ಖರೀದಿಸಿದೆ. ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಪಿಪಿ ರೆಡ್ಡಿ ಒಡೆತನದ ಗ್ಯಾಸ್ ಕಂಪನಿಯಾಗಿದೆ. ಮುಂಬೈ ಮೂಲದ ಕ್ವಿಕ್ ಸಪ್ಲೈಚೇನ್‌ ಪ್ರೈವೇಟ್ ಲಿಮಿಟೆಡ್ 410 ಕೋಟಿ ರೂಪಾಯಿ ಬಾಂಡ್‌ಗಳನ್ನು ಖರೀದಿಸಿದೆ.

ಬಾಂಡ್‌ಗಳನ್ನು ಖರೀದಿಸಿದ ವ್ಯಕ್ತಿಗಳು

ಲಕ್ಷ್ಮಿ ನಿವಾಸ್ ಮಿತ್ತಲ್, ಕಿರಣ್ ಮಜುಂದಾರ್ ಶಾ, ವರುಣ್ ಗುಪ್ತಾ, ಬಿ.ಕೆ.ಗೋಯೆಂಕಾ, ಜೈನೇಂದ್ರ ಶಾ ಮತ್ತು ಮೋನಿಕಾ ಹೆಸರುಗಳು ವೈಯಕ್ತಿಕ ಖರೀದಿದಾರರ ಪಟ್ಟಿಯಲ್ಲಿ ಕಂಡುಬಂದಿವೆ.

ದೇಶದಲ್ಲಿ 2019ರ ಏಪ್ರಿಲ್ 1ರಿಂದ 2024ರ ಫೆಬ್ರವರಿ 15ರ ನಡುವೆ, ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂದು ಎಸ್‌ಬಿಐ ಬಹಿರಂಗಪಡಿಸಿದೆ, ಹೆಚ್ಚಿನವುಗಳನ್ನು ರಾಜಕೀಯ ಪಕ್ಷಗಳು ರಿಡೀಮ್ ಮಾಡಿಕೊಂಡಿವೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಬಿಜೆಪಿ ಪಡೆದ ನಿಧಿಯನ್ನು ತೋರಿಸುವ ಪಟ್ಟಿಯ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅಂತಿಮವಾಗಿ ಅವರು ಕಾಗದವನ್ನು ತೋರಿಸಬೇಕಾಯಿತು ಎಂದು ಹೇಳಿದರು. "ಬಿಜೆಪಿ ಬಳಿ ಅಷ್ಟೊಂದು ಹಣವಿದ್ದರೆ, 2014 ರಿಂದ ಅವರ ಟ್ರೋಲ್‌ಗಳಿಗೆ ಕೇವಲ 2 ರೂಪಾಯಿಯನ್ನಷ್ಟೇ ಏಕೆ ಪಡೆಯುತ್ತಿದ್ದಾರೆ? ಈ ಬಗ್ಗೆ ತನಿಖೆಯಾಗಬೇಕು" ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಬಾಂಡ್‌ಗಳ ವಿವರ ಇರುವಂತಹ ಪೂರ್ಣ ಮಾಹಿತಿ ಬೇಕಾದರೆ ಈ ಯುಆರ್‌ಎಲ್‌ ಗಮನಿಸಬಹುದು. https://www.eci.gov.in/candidate-politicalparty

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ