logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Security Breach: ಲೋಕಸಭೆ ಭದ್ರತಾ ಲೋಪ ಪ್ರಕರಣ, 6 ಆರೋಪಿಗಳ ಪೈಕಿ ಇಬ್ಬರಿಗಷ್ಟೇ ವಿಸಿಟರ್ ಪಾಸ್ ಸಿಕ್ಕಿತ್ತು…

Security Breach: ಲೋಕಸಭೆ ಭದ್ರತಾ ಲೋಪ ಪ್ರಕರಣ, 6 ಆರೋಪಿಗಳ ಪೈಕಿ ಇಬ್ಬರಿಗಷ್ಟೇ ವಿಸಿಟರ್ ಪಾಸ್ ಸಿಕ್ಕಿತ್ತು…

HT Kannada Desk HT Kannada

Dec 13, 2023 09:47 PM IST

ಪಬ್ಲಿಕ್ ಗ್ಯಾಲರಿಯಿಂದ ಲೋಕ ಸಭೆಯ ಕಲಾಪ ಸ್ಥಳಕ್ಕೆ ಜಿಗಿದು ಹಳದಿ ಹೊಗೆ ಹಾಕಿದ ಸುರೇಶ್ ಶರ್ಮಾ ಮತ್ತು ಸಂಗಡಿಗನನ್ನು ನೋಡಿ ಬೆಚ್ಚಿದ ಸದಸ್ಯರು

  • Parliament security breach: ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಆರು ಆರೋಪಿಗಳು ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಹಲವು ಕುತೂಹಲಕಾರಿ ವಿಷಯಗಳು ಬಹಿರಂಗವಾಗಿವೆ.

ಪಬ್ಲಿಕ್ ಗ್ಯಾಲರಿಯಿಂದ ಲೋಕ ಸಭೆಯ ಕಲಾಪ ಸ್ಥಳಕ್ಕೆ ಜಿಗಿದು ಹಳದಿ ಹೊಗೆ ಹಾಕಿದ ಸುರೇಶ್ ಶರ್ಮಾ ಮತ್ತು ಸಂಗಡಿಗನನ್ನು ನೋಡಿ ಬೆಚ್ಚಿದ ಸದಸ್ಯರು
ಪಬ್ಲಿಕ್ ಗ್ಯಾಲರಿಯಿಂದ ಲೋಕ ಸಭೆಯ ಕಲಾಪ ಸ್ಥಳಕ್ಕೆ ಜಿಗಿದು ಹಳದಿ ಹೊಗೆ ಹಾಕಿದ ಸುರೇಶ್ ಶರ್ಮಾ ಮತ್ತು ಸಂಗಡಿಗನನ್ನು ನೋಡಿ ಬೆಚ್ಚಿದ ಸದಸ್ಯರು (ANI)

ಸಂಸತ್ತಿನಲ್ಲಿ ಲೋಕ ಸಭಾ ಕಲಾಪದ ವೇಳೆ ಇಂದು (ಡಿ.13) ಮಧ್ಯಾಹ್ನದ ವೇಳೆ ನಡೆದ ಭದ್ರತಾ ಲೋಪ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣದಲ್ಲಿ ಆರು ಆರೋಪಿಗಳು ಭಾಗಿಯಾಗಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಈ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಈ ವಿಚಾರಣೆ ಸಂದರ್ಭದಲ್ಲಿ ಕುತೂಹಲಕಾರಿ ಅಂಶಗಳು ಬಹಿರಂಗವಾಗಿವೆ. ಈ ಭದ್ರತಾ ಲೋಪ ಪ್ರಕರಣದಲ್ಲಿ ಆರು ಆರೋಪಿಗಳು ಭಾಗಿಯಾಗಿರುವುದು ದೃಢಪಟ್ಟಿದೆ. ಈ ಆರು ಆರೋಪಿಗಳು ಸಂಸತ್ ಭವನದ ಒಳಗೆ ಹೋಗಲು ಪ್ರಯತ್ನಿಸಿದ್ದರು. ಆದರೆ ಇಬ್ಬರಿಗೆ ಮಾತ್ರವೇ ವಿಸಿಟರ್‌ ಪಾಸ್ ಸಿಕ್ಕಿತ್ತು.

ಉಳಿದ ನಾಲ್ವರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ಹೊರಗೆ ಉಳಿದುಕೊಂಡು ಪ್ರತಿಭಟನೆ ನಡೆಸಿದ್ದರು ಎಂದು ತನಿಖಾ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ನಾಲ್ವರಲ್ಲ ಆರು ಆರೋಪಿಗಳು ಭದ್ರತಾ ಲೋಪ ಪ್ರಕರಣದಲ್ಲಿ ಭಾಗಿ

ಆರಂಭಿಕ ಮಾಹಿತಿಗಳ ಪ್ರಕಾರ, ಈ ಪ್ರಕರಣದಲ್ಲಿ ಭಾಗಿಯಾದವರು ನಾಲ್ವರು ಎಂಧು ಹೇಳಲಾಗಿತ್ತು. ಅವರನ್ನು ಮೈಸೂರಿನ ಮನೋರಂಜನ್‌, ಸಾಗರ ಶರ್ಮಾ, ಮಹಾರಾಷ್ಟ್ರ ಲಾತೋರ್‌ನ ಅಮೋಲ್ ಶಿಂಧೆ, ಹರಿಯಾಣ ಹಿಸ್ಸಾರ್‌ನ ನೀಲಂ ಕೌರ್ ಎಂದು ಗುರುತಿಸಲಾಗಿದೆ.

ಇನ್ನೂ ಒಬ್ಬನ್ನು ವಶಪಡಿಸಿಕೊಂಡಿದ್ದು, ಆರನೇ ಆರೋಪಿಯನ್ನು ಬಂಧಿಸಲು ತನಿಖಾ ತಂಡಗಳು ಪ್ರಯತ್ನಿಸುತ್ತಿವೆ ಎಂದು ದೆಹಲಿ ಪೊಲೀಸ್ ಮೂಲಗಳು ಬುಧವಾರ ಸಂಜೆ ತಿಳಿಸಿವೆ.

ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಲು ಆರು ಆರೋಪಿಗಳಿಗೆ ಯಾರಾದರೂ ಅಥವಾ ಸಂಸ್ಥೆಯಿಂದ ಸೂಚನೆ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಲು ಭದ್ರತಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ನಾಲ್ಕು ವರ್ಷದಿಂದ ಪರಿಚಿತರು, ಕೆಲದಿನಗಳ ಹಿಂದೆ ಸಂಚು ರೂಪಿಸಿದ ಆರೋಪಿಗಳು

ಲೋಕಸಭೆಯ ಭದ್ರತಾ ಲೋಪ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ನಾಲ್ಕು ವರ್ಷದಿಂದ ಪರಿಚಿತರು. ಸಂಸತ್ತಿನ ಭದ್ರತಾ ಉಲ್ಲಂಘನೆಯನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗಿತ್ತು. ಅದನ್ನು ಯಥಾವತ್ ಅನುಷ್ಠಾನಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ನೀಲಂ ಮತ್ತು ಅಮೋಲ್ ಅವರನ್ನು ಸಂಸತ್ತಿನ ಹೊರಗಿನಿಂದ, ಸಾರಿಗೆ ಭವನದ ಮುಂದೆ ಬಂಧಿಸಲಾಯಿತು. ಸಾಗರ್ ಮತ್ತು ಮನೋರಂಜನ್ ಅವರನ್ನು ಲೋಕಸಭೆಯ ಒಳಾಂಗಣದಲ್ಲಿ ಹಿಡಿದು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ದೆಹಲಿ ಪೊಲೀಸರು ಐದನೇ ಶಂಕಿತನನ್ನು ಗುರುಗ್ರಾಮ್‌ನಿಂದ ಬಂಧಿಸಿದ್ದಾರೆ. ಆದರೆ ಆರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ವರದಿಯಾಗಿದೆ.

ಸಾಗರ್ ಶರ್ಮಾಗೆ ಥಳಿಸಿದ ಸಂಸದರು- ವಿಡಿಯೋ ವೈರಲ್‌

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಪಬ್ಲಿಕ್ ಗ್ಯಾಲರಿಯಿಂದ ಕೆಳಗೆ ಧುಮುಕಿ ಸದಸ್ಯರ ಟೇಬಲ್‌, ಕುರ್ಚಿ ಮೇಲೆ ಹಾರುತ್ತ ಹೋದ ಸಾಗರ್ ಶರ್ಮಾನನ್ನು ಸದಸ್ಯರು ಹಿಡಿದು ಥಳಿಸಿದ ವಿಡಿಯೋ ವೈರಲ್ ಆಗಿದೆ.

ಸಾಗರ್ ಶರ್ಮಾ ಒಳನುಗ್ಗಿ ದಾಂದಲೆ ಶುರುಮಾಡಿದ ಕೂಡಲೇ ಕೆಲವು ಸದಸ್ಯರು ಕಕ್ಕಾಬಿಕ್ಕಿಯಾದರೆ, ಇನ್ನು ಕೆಲವರು ಭಯಭೀತರಾಗಿ ನಿಂತಲ್ಲೇ ಇದ್ದರು. ಇನ್ನು ಕೆಲವರು ಆತನನ್ನು ಹಿಡಿಯಲು ಸುತ್ತುವರಿದ ದೃಶ್ಯ ಬಹಿರಂಗವಾಗಿತ್ತು.

ಇದರ ಜತೆಗೆ, ಸಾಗರ್ ಶರ್ಮಾ ತನ್ನ ಶೂ ಹರಿದು ಅದರೊಳಗಿಂದ ಸಣ್ಣ ಡಬ್ಬ ತೆಗೆದು ಹಳದಿ ಹೊಗೆ ಹಾಕಿದ್ದು, ಆತಂಕ ಸೃಷ್ಟಿಯಾಗುವಂತೆ ಮಾಡಿದ್ದರು. ಕೆಲವು ಸದಸ್ಯರು ಸಾಗರ್‌ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆತ ಸಿಕ್ಕಿದ ಕೂಡಲೇ ಥಳಿಸಲಾರಂಭಿಸಿದ ದೃಶ್ಯ ವಿಡಿಯೋದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ