logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rss 100 Years: ಆರೆಸ್ಸೆಸ್‌ಗೆ 100 ವರ್ಷವಾಗುವ ಮೊದಲೇ ದಂಡದಿಂದ ಹಿಡಿದು ತರಬೇತಿ ತನಕ ಹಲವು ಬದಲಾವಣೆ ಸಾಧ್ಯತೆ: ವರದಿ

RSS 100 Years: ಆರೆಸ್ಸೆಸ್‌ಗೆ 100 ವರ್ಷವಾಗುವ ಮೊದಲೇ ದಂಡದಿಂದ ಹಿಡಿದು ತರಬೇತಿ ತನಕ ಹಲವು ಬದಲಾವಣೆ ಸಾಧ್ಯತೆ: ವರದಿ

HT Kannada Desk HT Kannada

Jul 28, 2023 06:39 PM IST

ನಾಗಪುರದ ರೇಶಿಂಬಾಗ್‌ ಮೈದಾನದಲ್ಲಿ ಜೂನ್‌ ತಿಂಗಳಲ್ಲಿ ನಡೆದ ಆರ್‌ಎಸ್‌ಎಸ್‌ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗ(ಒಟಿಸಿ)ದ ಸಮಾರೋಪದಲ್ಲಿ ದಂಡ ವಿದ್ಯೆ ಪ್ರದರ್ಶಿಸಿದ ಸ್ವಯಂಸೇವಕರು.

  • RSS 100 Years: ಇನ್ನೆರಡು ವರ್ಷದಲ್ಲಿ ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷ. ಅದಕ್ಕೂ ಮೊದಲೇ ದಂಡದಿಂದ ಹಿಡಿದು ತರಬೇತಿ ತನಕ ಹಲವು ಬದಲಾವಣೆ ಆಗಲಿದೆ ಎನ್ನುತ್ತಿವೆ ಕೆಲವು ಮಾಧ್ಯಮ ವರದಿಗಳು. ಇದರ ವಿವರ ಹೀಗಿದೆ.

ನಾಗಪುರದ ರೇಶಿಂಬಾಗ್‌ ಮೈದಾನದಲ್ಲಿ ಜೂನ್‌ ತಿಂಗಳಲ್ಲಿ ನಡೆದ ಆರ್‌ಎಸ್‌ಎಸ್‌ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗ(ಒಟಿಸಿ)ದ ಸಮಾರೋಪದಲ್ಲಿ ದಂಡ ವಿದ್ಯೆ ಪ್ರದರ್ಶಿಸಿದ ಸ್ವಯಂಸೇವಕರು.
ನಾಗಪುರದ ರೇಶಿಂಬಾಗ್‌ ಮೈದಾನದಲ್ಲಿ ಜೂನ್‌ ತಿಂಗಳಲ್ಲಿ ನಡೆದ ಆರ್‌ಎಸ್‌ಎಸ್‌ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗ(ಒಟಿಸಿ)ದ ಸಮಾರೋಪದಲ್ಲಿ ದಂಡ ವಿದ್ಯೆ ಪ್ರದರ್ಶಿಸಿದ ಸ್ವಯಂಸೇವಕರು. (Chandrakant Paddhane / ANI Photo)

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸ್ಥಾಪನೆಯಾಗಿ 2025ರ ಸೆಪ್ಟೆಂಬರ್‌ 25ಕ್ಕೆ 100 ವರ್ಷ ಆಗಲಿದೆ. ಅದಕ್ಕೂ ಮೊದಲ ಸಂಘದಲ್ಲಿ ಹಲವು ಬದಲಾವಣೆಗಳಾಗಲಿವೆ ಎಂದು ಹೇಳಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಮಾಧ್ಯಮ ವರದಿಗಳ ಪ್ರಕಾರ, ಸಂಘದ ದಂಡದಿಂದ ಹಿಡಿದು ತರಬೇತಿ ಶಿಬಿರ (ಸಂಘ ಶಿಕ್ಷಾ ವರ್ಗ) ನಡೆಸುವ ರೀತಿಯಲ್ಲೂ ಬದಲಾವಣೆ ಮಾಡಲು ಸಿದ್ಧತೆ ನಡೆದಿದೆ. ಸಂಘದ ಪರಿವಾರ ಸಂಘಟನೆ, ಸಂಸ್ಥೆಗಳಾಗಿ 40ಕ್ಕೂ ಹೆಚ್ಚು ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ.

ಇತ್ತೀಚೆಗೆ ಊಟಿಯಲ್ಲಿ ಜುಲೈ 13 ರಿಂದ 15 ರವರೆಗೆ ನಡೆದ ಸಂಘದ ಬೈಠಕ್‌ನಲ್ಲಿ ಈ ಎಲ್ಲ ವಿಷಯಗಳನ್ನು ಚರ್ಚಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ನಡೆಯುವ ಕೇಂದ್ರ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಎಲ್ಲಾ ನಿರ್ಧಾರಗಳನ್ನು ಪ್ರಕಟಿಸಬಹುದು ಎಂದು ವರದಿ ಹೇಳಿದೆ.

ಸಂಘ ಶಿಕ್ಷಾ ವರ್ಗ ಮತ್ತು ಮುಂದುವರಿದ ಶಿಬಿರಗಳು

ಪ್ರಸ್ತುತ, ಸಂಘದ ಮೊದಲ ವರ್ಷ ಮತ್ತು ಎರಡನೇ ವರ್ಷದ ಶಿಬಿರವು 20 ದಿನಗಳು. ಮತ್ತು ಮೂರನೇ ವರ್ಷದ ತರಬೇತಿಯನ್ನು ನಾಗಪುರದಲ್ಲಿ ಮಾತ್ರ ಮಾಡಲಾಗುತ್ತದೆ. ಇದು 25 ದಿನಗಳವರೆಗೆ ಇರುತ್ತದೆ. ಮೊದಲ ವರ್ಷದ ಶಿಬಿರವನ್ನು 15 ದಿನಗಳು ಮತ್ತು ಉಳಿದವು ಎರಡರಿಂದ 20 ದಿನಗಳವರೆಗೆ ಮಾಡಲು ಹೆಚ್ಚಿನ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ವಿವರಿಸಿದೆ.

ಮೊದಲ ಶಿಬಿರವನ್ನು ಈಗ ಸಂಘ ಶಿಕ್ಷಾ ವರ್ಗ ಎಂದು ಕರೆಯಲಾಗುತ್ತದೆ ಮತ್ತು ಉಳಿದವುಗಳನ್ನು ಕಾರ್ಯಕರ್ತರ ವಿಕಾಸ ಶಿಬಿರ ಎಂದು ಕರೆಯಲಾಗುತ್ತದೆ. ಶಿಬಿರಗಳಲ್ಲಿ ತರಬೇತಿ ವೇಳೆ ಬಳಸಬೇಕಾದ ‘ದಂಡ’ದ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ದಂಡದ ಗಾತ್ರವನ್ನು ಕಡಿಮೆ ಮಾಡಬೇಕು ಎಂಬ ಸಲಹೆ ಇದೆ. ಪ್ರಸ್ತುತ, ಈ ಕೋಲು 5.3 ಅಡಿ ಇದೆ. ಇದು ಸಮವಸ್ತ್ರದ ಭಾಗವಾಗಿಲ್ಲದಿದ್ದರೂ, ಸ್ವಯಂಸೇವಕರು ದಂಡದ ಜತೆಗೆ ತರಬೇತಿಗೆ ಬರುತ್ತಾರೆ. ಆರ್‌ಎಸ್‌ಎಸ್‌ನ ಹೆಚ್ಚಿನ ಶಿಬಿರಗಳು ಏಪ್ರಿಲ್ ನಿಂದ ಜೂನ್ ತಿಂಗಳ ಅವಧಿಯಲ್ಲಿ ನಡೆಯುತ್ತವೆ. ಮತ್ತು ಕೆಲವು ಚಳಿಗಾಲದಲ್ಲಿ ಆಯೋಜಿಸಲಾಗಿದೆ. ಈ ಶಿಬಿರಗಳನ್ನು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಯುತ್ತದೆ. ಇದರಲ್ಲಿ 20 ಸಾವಿರ ಜನರು ಭಾಗವಹಿಸುತ್ತಾರೆ.

ಶಿಬಿರಗಳ ಸಮಯವಲ್ಲದೆ ಇನ್ನೂ ಹಲವು ಬದಲಾವಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇದರಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ಬದಲಾವಣೆ, ತಂತ್ರಜ್ಞಾನ ಮತ್ತು ಮಾಹಿತಿಗೆ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹ.

ಆರ್‌ಎಸ್‌ಎಸ್‌ ಪರಿವಾರ ಸಂಘಟನೆಗಳಿವು

ಆರ್‌ಎಸ್‌ಎಸ್‌ನ ಸಿದ್ಧಾಂತಕ್ಕೆ ಅನುಗುಣವಾಗಿ ಅಧೀನದಲ್ಲಿ 40 ಕ್ಕೂ ಹೆಚ್ಚು ಸಹವರ್ತಿ ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್, ಸ್ವದೇಶಿ ಜಾಗರಣ ಮಂಚ್, ವನವಾಸಿ ಕಲ್ಯಾಮ್ ಆಶ್ರಮ, ಭಾರತೀಯ ಮಜ್ದೂರ್ ಸಂಘ, ವಿಶ್ವ ಸಂವಾದ ಕೇಂದ್ರ, ರಾಷ್ಟ್ರ ಸೇವಿಕಾ ಸಮಿತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮುಸ್ಲಿಂ ರಾಷ್ಟ್ರೀಯ ಮಂಚ್, ಹಿಂದೂ ಜಾಗರಣ ಮಂಚ್, ವಿದ್ಯಾಭಾರತಿ, ವಿವೇಕಾನಂದ ಕೇಂದ್ರ, ಸೇವಾ ಭಾರತಿ ಕೇಂದ್ರ ಸೇರಿವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ