logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Pneumonia: ಚೀನಾದ ಮಕ್ಕಳಲ್ಲಿ ಹೆಚ್ಚಿದ ನಿಗೂಢ ನ್ಯೂಮೋನಿಯಾ: ವರದಿ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ

China pneumonia: ಚೀನಾದ ಮಕ್ಕಳಲ್ಲಿ ಹೆಚ್ಚಿದ ನಿಗೂಢ ನ್ಯೂಮೋನಿಯಾ: ವರದಿ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ

HT Kannada Desk HT Kannada

Nov 23, 2023 12:53 PM IST

ಚೀನಾದ ಹಲವು ಆಸ್ಪತ್ರೆಗಳು ಅನಾರೋಗ್ಯ ಪೀಡಿತ ಮಕ್ಕಳಿಂದ ತುಂಬಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    • Mysterious pneumonia in China ನಾಲ್ಕು ವರ್ಷದಿಂದ ಒಂದಿಲ್ಲೊಂದು ಕಾರಣಕ್ಕೆ ಆರೋಗ್ಯದ ವಿಚಾರವಾಗಿ ಸುದ್ದಿಯಾಗುತ್ತಿರುವ ಚೀನಾದಲ್ಲಿ( China) ಈಗ ನಿಗೂಢ ನ್ಯುಮೋನಿಯಾ ಮಕ್ಕಳನ್ನುಕಾಡುತ್ತಿದೆ. 
ಚೀನಾದ ಹಲವು ಆಸ್ಪತ್ರೆಗಳು ಅನಾರೋಗ್ಯ ಪೀಡಿತ ಮಕ್ಕಳಿಂದ ತುಂಬಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಚೀನಾದ ಹಲವು ಆಸ್ಪತ್ರೆಗಳು ಅನಾರೋಗ್ಯ ಪೀಡಿತ ಮಕ್ಕಳಿಂದ ತುಂಬಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬೀಜಿಂಗ್‌: ಚೀನಾದಲ್ಲಿ ಕಾಣಿಸಿಕೊಂಡಿರುವ ನಿಗೂಢ ನ್ಯುಮೋನಿಯಾದಿಂದ ದೇಶದ ಹಲವೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚೀನಾದಲ್ಲಿ ಮಕ್ಕಳಿಗೆ ಶ್ವಾಸ ಕೋಶದ ಸಮಸ್ಯೆ ಕಾಣಿಸಿಕೊಂಡು ಅದು ನ್ಯುಮೋನಿಯಾಕ್ಕೆ ತಿರುಗಿದೆ. ಆದರೆ ಯಾವ ಕಾರಣದಿಂದ ಇದು ಆಗುತ್ತಿದೆ ಎನ್ನುವುದನ್ನು ಚೀನಾ ಈವರೆಗೂ ಕಂಡು ಹಿಡಿಯಲು ಆಗಿಲ್ಲ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಈಗಾಗಲೇ ಚೀನಾದ ರಾಜಧಾನಿ ಬೀಜಿಂಗ್‌ ಸೇರಿದಂತೆ ಹಲವು ಕಡೆಗಳಲ್ಲಿ ಆಸ್ಪತ್ರೆಗಳು ಮಕ್ಕಳಿಂದ ತುಂಬಿ ತುಳುಕುತ್ತಿವೆ. ಚಿಕಿತ್ಸೆಗಾಗಿ ಪೋಷಕರು ಮಕ್ಕಳೊಂದಿಗೆ ಎಡತಾಕುವುದು ಅಧಿಕವಾಗಿದೆ. ಹಲವು ಮಕ್ಕಳು ಆಸ್ಪತ್ರೆಗೂ ದಾಖಲಾಗಿದ್ದಾರೆ. ಎಲ್ಲೆಡೆ ಈ ನಿಗೂಢ ನ್ಯೂಮೋನಿಯಾ ಕಾಣಿಸಿಕೊಂಡಿರುವುದರಿಂದ ಚೀನಾದ ಹಲವು ಕಡೆ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.

ಚೀನಾದ ಆರೋಗ್ಯದ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ( who) ನಿಗೂಢ ನ್ಯುಮೋನಿಯಾ ಕುರಿತು ವರದಿ ನೀಡುವಂತೆ ಸೂಚಿಸಿದೆ.

ಯಾವ ಕಾರಣದಿಂದ ಹೀಗೆ ಆಗಿದೆ. ಏನೇನು ಕ್ರಮ ಕೈಗೊಂಡಿದ್ದೀರಿ, ಮುನ್ನೆಚ್ಚರಿಕಾ ಕ್ರಮಗಳು ಏನಾಗಿದೆ. ದೇಶದಲ್ಲಿನ ಸಾರ್ಸ್‌, ಕೋವಿಡ್‌, ಆರ್‌ಎಸ್‌ವಿ ಸಹಿತ ವಿವಿಧ ಜ್ವರಗಳ ಪ್ರಕರಣಗಳು ಸೇರಿದಂತೆ ಇಡೀ ಸ್ಥಿತಿಗತಿ ಕುರಿತು ಸಮಗ್ರ ವರದಿ ನೀಡುವಂತೆ ಆರೋಗ್ಯ ಸಂಸ್ಥೆ ಹೇಳಿದೆ.

ಕೆಲ ದಿನಗಳ ಹಿಂದೆಯೇ ಚೀನಾದಲ್ಲಿ ಶ್ವಾಸ ಕೋಶ ಸಂಬಂಧಿ ಸಮಸ್ಯೆಯ ಪ್ರಕರಣ ಇದ್ದವು. ಹತ್ತು ದಿನಗಳಲ್ಲಿ ಇದು ಅಧಿಕವಾಗಿವೆ. ಈ ಹಿನ್ನೆಲೆಯಲ್ಲಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗವು ತಕ್ಷಣವೇ ಸಭೆ ನಡೆಸಿ ಮುನ್ನೆಚ್ಚರಿಕೆಗೆ ಮುಂದಾಗಿತ್ತು. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಆಯೋಗದ ಪ್ರಮುಖರು, ಚೀನಾದಲ್ಲಿ ಕೋವಿಡ್‌ 19 ಪ್ರಕರಣಗಳು ಅಧಿಕವಾಗಿದ್ದವು. ಪ್ರಕರಣ ಕಡಿಮೆಯಾದ ಕಾರಣಕ್ಕೆ ಚೀನಾದಲ್ಲಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ಈ ಕಾರಣದಿಂದ ಮತ್ತೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಿರಬಹುದು ಎನ್ನುವ ಶಂಕೆಯಿದೆ. ಇದೆಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದರು.

ನಿಗೂಢ ಕಾಯಿಲೆ ಸುತ್ತಾಮುತ್ತಾ...

  • ಚೀನಾದ ಮಕ್ಕಳಲ್ಲಿ ಅಧಿಕವಾಗಿ ನಿಗೂಢ ನ್ಯುಮೋನಿಯಾ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಮುನ್ನೆಚ್ಚರಿಕೆ ನೀಡುವ ಪ್ರೊಮೆಡ್‌ ಸಂಸ್ಥೆಈಗಾಗಲೇ ಸೂಚನೆ ನೀಡಿತ್ತು. ಈ ಹಿಂದೆ ಸಾರ್ಸ್‌ ಹಾಗೂ ಕೋವಿಡ್‌ ವೇಳೆಯೂ ಇದೇ ಸಂಸ್ಥೆ ಮುಂಜಾಗ್ರತ ಕ್ರಮದ ಸೂಚನೆ ನೀಡಿತ್ತು.
  • ಬೀಜಿಂಗ್‌, ಲಿಯಾನಿಂಗ್‌ ಸಹಿತ ಹಲವು ಕಡೆ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಎಂದು ಟೈವಾನ್ಸ್‌ ಎಫ್‌ಟಿವಿ ನ್ಯೂಸ್‌ ವರದಿ ಮಾಡಿದೆ.
  • ಚೀನಾದ ಬೀಜಿಂಗ್‌ ಹಾಗೂ ಲಿಯಾನಿಂಗ್‌ ನಡುವೆ 800 ಕಿ.ಮಿ ದೂರವಿದೆ. ಇದರಿಂದ ಇದು ಸ್ಥಳೀಯ ರೋಗಾಣುವಿನಿಂದ ಆಗಿರುವುದಲ್ಲ ಎಂದು ಹೇಳಲಾಗುತ್ತಿದೆ.
  • ಮಕ್ಕಳಿಗೆ ಕೆಮ್ಮು ಇಲ್ಲವೇ ಶೀತದ ವಾತಾವರಣವಿಲ್ಲ. ಆದರೆ ಅಧಿಕ ಉಷ್ಣಾಂಶ ಹಾಗೂ ಶ್ವಾಸಕೋಶದ ಗಂಟುಗಳಿಂದ ಬಳಲುತ್ತಿದ್ಧಾರೆ ಎಂದು ಎಫ್‌ಟಿವಿಗೆ ಮಕ್ಕಳ ಪೋಷಕರು ಹೇಳಿಕೊಂಡಿದ್ದಾರೆ.
  • ಚೀನಾದ ದಲಿಯನ್‌ ಮಕ್ಕಳ ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗದೇ ಬೀದಿಯಲ್ಲಿಯೇ ಮಕ್ಕಳು ಮಲಗಿರುವುದು, ಅಲ್ಲಿಯೇ ಅವರಿಗೆ ಡ್ರಿಪ್ಸ್‌ಗಳನ್ನು ಅಳವಡಿಸಿರುವುದು ಕಂಡು ಬರುತ್ತಿದೆ. ಚೀನಾದ ಸಾಂಪ್ರದಾಯಿಕ ಔಷಧ ಪದ್ದತಿ ಆಸ್ಪತ್ರೆಗಳ ಬಳಿಯೂ ಮಕ್ಕಳನ್ನು ಹಿಡಿದ ಪೋಷಕರು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ. ದಲಿಯನ್‌ ಆಸ್ಪತ್ರೆಯೀಗ ತುರ್ತು ಚಿಕಿತ್ಸಾ ಆಸ್ಪತ್ರೆಯಾಗಿಯೇ ಬದಲಾಗಿದೆ. ಕನಿಷ್ಠ ಎರಡು ಗಂಟೆಯಾದರೂ ಚಿಕಿತ್ಸೆಗೆ ಒಬ್ಬೊಬ್ಬರು ಕಾಯುವ ಸ್ಥಿತಿಯಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ.
  • ಮಕ್ಕಳ ಕಾರಣದಿಂದ ಶಿಕ್ಷಕರಿಗೂ ನಿಗೂಢ ನ್ಯುಮೋನಿಯಾ ಕಾಣಿಸಿಕೊಂಡಿದೆ. ಶಿಕ್ಷಕರು ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.
  • ಇದು ಯಾವಾಗ ಹಾಗೂ ಎಲ್ಲಿಂದ ಶುರುವಾಗಿದೆ. ಇದರ ಮೂಲ ಯಾವುದು ಎನ್ನುವುದು ನಮಗೆ ತಿಳಿದಿಲ್ಲ. ಮಕ್ಕಳಿಗೆ ಸುಲಭವಾಗಿ ಇದು ಹರಡುತ್ತಿದೆ ಎನ್ನುವುದು ಪ್ರೊಮೆಡ್‌ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.
  • ನಿಗೂಢ ನ್ಯಮೋನಿಯಾ ಕುರಿತು ಮಾಹಿತಿ ಕಲೆ ಹಾಕಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದರೂ ಏನು ಎನ್ನುವುದು ನಿಖರವಾಗಿ ತಿಳಿಯುತ್ತಿಲ್ಲ. ಇದಕ್ಕೆ ಇನ್ನಷ್ಟು ಸಂಶೋಧನೆ ಹಾಗೂ ಪ್ರಯೋಗಗಳು ಆಗಲೇಬೇಕಿದೆ ಎನ್ನುವುದು ತಜ್ಞರು ಹೇಳುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ