logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /   Iocl Recruitment 2023: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, 513 ಹುದ್ದೆಗಳಿಗೆ ಅರ್ಜಿ ಆಹ್ವಾನ

IOCL Recruitment 2023: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, 513 ಹುದ್ದೆಗಳಿಗೆ ಅರ್ಜಿ ಆಹ್ವಾನ

Praveen Chandra B HT Kannada

Feb 25, 2023 02:15 PM IST

IOCL Recruitment 2023: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, 513 ಹುದ್ದೆಗಳಿಗೆ ಅರ್ಜಿ ಆಹ್ವಾನ

    • IOCL Recruitment 2023: ಭಾರತೀಯ ತೈಲ ನಿಗಮದಲ್ಲಿ ವಿವಿಧ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಂದ ಮಾರ್ಚ್‌ 1ರಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ. ಆಸಕ್ತರು iocl.com/latest-job-opening ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
IOCL Recruitment 2023: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, 513 ಹುದ್ದೆಗಳಿಗೆ ಅರ್ಜಿ ಆಹ್ವಾನ
IOCL Recruitment 2023: ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ, 513 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ತೈಲ ನಿಗಮದಲ್ಲಿ ವಿವಿಧ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಂದ ಮಾರ್ಚ್‌ 1ರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 1 ಆರಂಭಿಕ ದಿನಾಂಕವಾಗಿದ್ದು, ಮಾರ್ಚ್‌ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೇವಲ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ಐಒಸಿಎಲ್‌ನಲ್ಲಿ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ ಮತ್ತು ಮೆಟೀರಿಯಲ್‌ ಅಸಿಸ್ಟೆಂಟ್‌ ಹುದ್ದೆಗಳಿದ್ದು, ಏಪ್ರಿಲ್‌ನಲ್ಲಿ ನೇಮಕಾತಿ ಪರೀಕ್ಷೆ ನಡೆಯಲಿದೆ. ಫಲಿತಾಂಶವು ಮೇ ಹದಿನೈದರಂದು ಪ್ರಕಟವಾಗಲಿದೆ. ಈ ಹುದ್ದೆಗಳಿಗೆ ಹುದ್ದೆಗಳಿಗೆ ತಕ್ಕಂತೆ 25 ಸಾವಿರ ರೂ.ನಿಂದ 1.05 ಲಕ್ಷ ರೂ.ವರೆಗೆ ವೇತನ ಶ್ರೇಣಿ ಇರುತ್ತದೆ.

ಒಟ್ಟು 513 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಗುವಾಹಟಿ, ಅಸ್ಸಾಂ, ಬಿಹಾರ, ಗುಜರಾತ್‌, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೇಮಕಾತಿ ನಡೆಯಲಿದೆ. ಆದರೆ ದೇಶದ ಯಾವುದೇ ರಾಜ್ಯದ ಉತ್ಸಾಹಿ ಉದ್ಯೋಗಾಕಾಂಕ್ಷಿಗಳಾಗಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಕರ್ನಾಟಕದ ಅಭ್ಯರ್ಥಿಗಳು ಹೊರರಾಜ್ಯದಲ್ಲಿ ಕೆಲಸ ಮಾಡಲು ಬಯಸಿದರೆ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಹುದ್ದೆಗಳಿವೆ?

ಭಾರತೀಯ ತೈಲ ನಿಗಮವು ಪ್ರೊಡಕ್ಷನ್‌ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ 296, ಪಿ ಅಂಡ್‌ ಯು ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ 35, ಎಲೆಕ್ಟ್ರಿಕ್‌ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ 65, ಮೆಕಾನಿಕಲ್‌ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ 32, ಇನ್‌ಸ್ಟ್ರುಮೆಂಟೇಷನ್‌ ಜೂನಿಯರ್‌ ಎಂಜಿನಿಯರ್‌ 37, ಜೂನಿಯರ್‌ ಕ್ವಾಲಿಟಿ ಕಂಟ್ರೋಲ್‌ ಅನಾಲಿಸ್ಟ್‌ 29, ಫೈರ್‌ ಅಂಡ್‌ ಸೇಫ್ಟಿ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ 14, ಜೂನಿಯರ್‌ ಮೆಟಿರಿಯಲ್‌ ಅಸಿಸ್ಟೆಂಟ್‌ 4, ಜೂನಿಯರ್‌ ನರ್ಸಿಂಗ್‌ ಅಸಿಸ್ಟೆಂಟ್‌ 1 ಹುದ್ದೆಗೆ ನೇಮಕ ಮಾಡಿಕೊಳ್ಳಲಿದೆ.

ವಿದ್ಯಾರ್ಹತೆ ಏನಿರಬೇಕು?

  • ಜೂನಿಯರ್‌ ನರ್ಸಿಂಗ್‌ ಅಸಿಸ್ಟೆಂಟ್‌ ಹುದ್ದೆಯ ಅಭ್ಯರ್ಥಿಗಳು 4 ವರ್ಷಗಳ ಬಿಎಸ್ಸಿ ನರ್ಸಿಂಗ್‌ ಅಥವಾ ಮೂರು ವರ್ಷಗಳ ಡಿಪ್ಲೊಮಾ (ನರ್ಸಿಂಗ್‌) ಮತ್ತು ಮಿಡ್‌ವೈಫರಿ ಕೋರ್ಸ್‌ ಪೂರ್ಣಗೊಳಿಸಿರಬೇಕು.
  • ಜೂನಿಯರ್‌ ಕ್ವಾಲಿಟಿ ಕಂಟ್ರೋಲ್‌ ಅನಾಲಿಸ್ಟ್‌ ಹುದ್ದೆಯ ಆಕಾಂಕ್ಷಿಗಳು ಕೂಡ ಬಿಎಸ್ಸಿ ಪದವೀಧರರಾಗಿರಬೇಕು.
  • ಇನ್ನುಳಿದಂತೆ ಎಲ್ಲಾ ಹುದ್ದೆಗಳಿಗೂ ಸಂಬಂಧಪಟ್ಟ ವಿಷಯಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿರಬೇಕು.
  • ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರದಲ್ಲಿ 1 ವರ್ಷದ ಸೇವಾನುಭವ ಕಡ್ಡಾಯ.
  • ನಿಗದಿತ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಶೇಕಡಾ 50 ಅಥವಾ ಅದಕ್ಕಿಂತ (ಎಸ್‌ಸಿ/ಎಸ್‌ಟಿ/ ವಿಶೇಷಚೇತನರು ಶೇಕಡಾ 40) ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

ಕನಿಷ್ಠ 18 ಮತ್ತು ಗರಿಷ್ಠ 26 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವರ್ಗವಾರು ಸರಕಾರದ ನಿಯಮಗಳನುಸಾರ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ, ದೈಹಿಕ ಸಾಮರ್ಥ್ಯ‌ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಪರೀಕ್ಷೆಗೆ ಪ್ರವೇಶಪತ್ರವನ್ನು ನಿಗಮದ ವೆಬ್‌ಸೈಟ್‌ನಲ್ಲಿಯೇ ಪ್ರಕಟಿಸಲಾಗುತ್ತದೆ. *ಯಾವುದೇ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನೇಮಕ ಪ್ರಕ್ರಿಯೆಯಲ್ಲಿ ಸೇವಾನುಭವವನ್ನು ಪ್ರಮುಖ ಆದ್ಯತೆಯಾಗಿಸಲಾಗುತ್ತದೆ. ಈ ಕುರಿತು ವಿವರವಾದ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು