logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Isi, Naxalite's Threat To Bhagwat: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಐಎಸ್‌ಐ, ನಕ್ಸಲರಿಂದ ಜೀವ ಬೆದರಿಕೆ

ISI, Naxalite's threat to Bhagwat: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಐಎಸ್‌ಐ, ನಕ್ಸಲರಿಂದ ಜೀವ ಬೆದರಿಕೆ

HT Kannada Desk HT Kannada

Feb 08, 2023 10:55 AM IST

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌

  • ISI, Naxalite's threat to Bhagwat: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಐಎಸ್‌ಐ, ನಕ್ಸಲರು ಮತ್ತು ಮೂಲಭೂತವಾದಿಗಳಿಂದ ಜೀವ ಬೆದರಿಕೆ ಎದುರಾಗಿದೆ. ಬಿಹಾರದ ಭಾಗಲ್‌ಪುರಕ್ಕೆ ಅವರ ಭೇಟಿ ಫೆ.10ಕ್ಕೆ ನಿಗದಿಯಾಗಿದ್ದು, ಅದಕ್ಕೂ ಮುನ್ನ ಈ ಬೆದರಿಕೆ ಬಂದಿದೆ ಎಂದು ಎಸ್‌ಎಸ್‌ಪಿ ಆನಂದ್‌ ಕುಮಾರ್‌ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ (PTI)

ಭಾಗಲ್‌ಪುರ(ಬಿಹಾರ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಐಎಸ್‌ಐ, ನಕ್ಸಲರು ಮತ್ತು ಮೂಲಭೂತವಾದಿಗಳಿಂದ ಜೀವ ಬೆದರಿಕೆ ಎದುರಾಗಿದೆ. ಬಿಹಾರದ ಭಾಗಲ್‌ಪುರಕ್ಕೆ ಅವರ ಭೇಟಿ ಫೆ.10ಕ್ಕೆ ನಿಗದಿಯಾಗಿದ್ದು, ಅದಕ್ಕೂ ಮುನ್ನ ಈ ಬೆದರಿಕೆ ಬಂದಿದೆ ಎಂದು ಎಸ್‌ಎಸ್‌ಪಿ ಆನಂದ್‌ ಕುಮಾರ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಎಎನ್‌ಐ ವರದಿ ಪ್ರಕಾರ, ಭಾಗವತ್‌ ಅವರ ಭೇಟಿಗೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಪೊಲೀಸ್‌ ಇಲಾಖೆ ಸೂಚಿಸಿದೆ. ಎಸ್‌ಎಸ್‌ಪಿ ಆನಂದ್‌ ಕುಮಾರ್‌ ಮತ್ತು ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಧನಂಜಯ್‌ ಕುಮಾರ್‌ ಅವರು ಅಲರ್ಟ್‌ ಆಗಿದ್ದು, ಕಾರ್ಯಕ್ರಮ ಆಯೋಜಕರಾದ ಮಹಾಸಭಾದ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೇ ವೇಳೆ, ಎಸ್‌ಎಸ್‌ಪಿ ಆನಂದ ಕುಮಾರ್‌ ಅವರು ಭಾಗವತ್‌ ಅವರು ಬೇಟಿ ನೀಡಲಿರುವ ಮಹರ್ಷಿಯ ಗುಹೆಯನ್ನೂ ಪರಿಶೀಲಿಸಿದ್ದಾರೆ.

"ನಾವು ಅಲರ್ಟ್ ಆಗಿದ್ದೇವೆ, ಎಸ್‌ಎಸ್‌ಪಿ ಕೂಡ ಪರಿಶೀಲನೆ ನಡೆಸಿದ್ದಾರೆ. ಭದ್ರತೆಗೆ ಸಂಬಂಧಿಸಿ, ವಿವಿಧ ಸ್ಥಳಗಳಲ್ಲಿ ಪೊಲೀಸ್ ಪಡೆಗಳ ನೇಮಕವನ್ನು ಖಚಿತಪಡಿಸಿಕೊಳ್ಳಲು ಯಾವುದೇ ಸಮಸ್ಯೆ ಇರುವುದಿಲ್ಲ. ಸೂಕ್ಷ್ಮ ಸ್ಥಳಗಳಲ್ಲಿ ಪಡೆಗಳ ನಿಯೋಜನೆ ಇರುತ್ತದೆ" ಎಂದು ಎಸ್‌ಡಿಎಂ ಧನಂಜಯ್‌ ಕುಮಾರ್‌ ಎಎನ್‌ಐಗೆ ತಿಳಿಸಿದ್ದಾರೆ.

"ಸಮಿತಿಯೊಂದಿಗೆ ನಿರಂತರ ಸಂಪರ್ಕ ಮತ್ತು ಸಂವಹನವಿದೆ. ಸಿಸಿಟಿವಿ ಕಣ್ಗಾವಲು ಕೂಡ ಇರುತ್ತದೆ. ಜತೆಗೆ ಪೊಲೀಸ್ ಪಡೆಗಳನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲಾಗುವುದು" ಎಂದು ಎಸ್‌ಡಿಎಂ ಧನಂಜಯ್‌ ಕುಮಾರ್‌ ವಿವರಿಸಿದರು.

"ಭಾಗವತ್‌ ಅವರು ಝಡ್ ಪ್ಲಸ್ ಭದ್ರತೆ ಹೊಂದಿರುವಂಥವರು. ಕಾರ್ಯಕ್ರಮದ ಸ್ಥಳ ಮತ್ತು ಸಂಚಾರಕ್ಕೆ ಸಂಬಂಧಿಸಿ ಭದ್ರತಾ ವ್ಯವಸ್ಥೆಗಳಿಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ" ಎಂದು ಎಸ್‌ಎಸ್‌ಪಿ ಆನಂದ ಕುಮಾರ್‌ ಎಎನ್‌ಐಗೆ ತಿಳಿಸಿದರು.

ಮಹರ್ಷಿಯ ಕುಪ್ಪಘಾಟ್ ಆಶ್ರಮದಲ್ಲಿ ಫೆಬ್ರವರಿ 10 ರಂದು ಸದ್ಗುರುಗಳ ನಿವಾಸದ ಉದ್ಘಾಟನಾ ಸಮಾರಂಭ ಇದೆ. ಅಲ್ಲೇ ಪರಮಹಂಸ ಮಹಾರಾಜರ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾಗವತ್ ಅವರ ಕಾರ್ಯಕ್ರಮ ಮೂರು ಗಂಟೆ 45 ನಿಮಿಷಗಳ ಕಾಲ ನಡೆಯಲಿದೆ. ಅವರು ಮಹರ್ಷಿ ಮೇಹಿಯ ತಪಸ್ಸಿನ ಪ್ರಸಿದ್ಧ ಗುಹೆಗೂ ಭೇಟಿ ನೀಡುತ್ತಾರೆ, ನಂತರ ಭಾಷಣ ಇರುತ್ತದೆ. ಅದಾಗಿ ಅವರು ನೌಗಾಚಿಯಾಗೆ ತೆರಳುತ್ತಾರೆ ಎಂದು ವರದಿ ಹೇಳಿದೆ.

ಗಮನಿಸಬಹುದಾದ ಸುದ್ದಿ

PARAKH: ದೇಶದ ಮೊದಲ ಮೌಲ್ಯಮಾಪನ ನಿಯಂತ್ರಕ ಪಾರಖ್‌; ಎನ್‌ಸಿಇಆರ್‌ಟಿ ಮೂಲಕ ಅನುಷ್ಠಾನಕ್ಕೆ

PARAKH: ಪರಖ್‌ (Performance Assessment, Review and Analysis of Knowledge) ಎಂದರೆ ಕಾರ್ಯಕ್ಷಮತೆಯ ಮೌಲ್ಯಮಾಪನ, ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ವಿಮರ್ಶೆ ಮತ್ತು ವಿಶ್ಲೇಷಣೆ. ಇದು ದೇಶದೆಲ್ಲ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಗಳಿಗೆ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಮೌಲ್ಯಮಾಪನದ ಮಾನದಂಡ, ಮಾರ್ಗಸೂಚಿ ಹೊಂದಿಸುವ ಉನ್ನತ ಸಂಸ್ಥೆಯಾಗಿರಲಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ