ಕನ್ನಡ ಸುದ್ದಿ  /  ಕರ್ನಾಟಕ  /  Bhoje Gowda Vs Pralhad Joshi: ಜೋಶಿ ವಿರುದ್ಧ ಬೋಜೇಗೌಡ ಭ್ರಷ್ಟಾಚಾರ ಆರೋಪ; ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ಜೋಶಿ; ಏನಿದು ವಿದ್ಯಮಾನ

Bhoje gowda vs Pralhad joshi: ಜೋಶಿ ವಿರುದ್ಧ ಬೋಜೇಗೌಡ ಭ್ರಷ್ಟಾಚಾರ ಆರೋಪ; ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ಜೋಶಿ; ಏನಿದು ವಿದ್ಯಮಾನ

Bhoje gowda vs Pralhad joshi: ವಿಧಾನ ಪರಿಷತ್‌ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡ ಅವರು ನಿನ್ನೆ ಗಂಭೀರ ಆರೋಪ ಮಾಡಿದ್ದರು. ಅವರು ಬಳಸಿಕೊಂಡ ದಾಖಲೆಗೂ ತನಗೂ ಸಂಬಂಧ ಇಲ್ಲ, ಸುಳ್ಳು ಆರೋಪ ಮಾಡಿದ್ದಕ್ಕಾಗಿ ಬೋಜೇಗೌಡರ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ. ವಿದ್ಯಮಾನದ ಪೂರ್ಣ ವಿವರ ಇಲ್ಲಿದೆ.

ಭೋಜೆಗೌಡ v/s ಪ್ರಲ್ಹಾದ್‌ ಜೋಶಿ
ಭೋಜೆಗೌಡ v/s ಪ್ರಲ್ಹಾದ್‌ ಜೋಶಿ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪರಸ್ಪರ ಆರೋಪ, ಪ್ರತ್ಯಾರೋಪ, ವಾಗ್ದಾಳಿ ಸಾಮಾನ್ಯ. ಜೆಡಿಎಸ್‌ನ ಪಂಚರತ್ನ ರಥ ಯಾತ್ರೆ ಟೀಕಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿರುದ್ಧ ಮುಗಿಬಿದ್ದಿರುವ ಜೆಡಿಎಸ್‌ ನಾಯಕರು, ತೀವ್ರ ಟೀಕಾಪ್ರಹಾರ, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದಾಖಲೆ ರಹಿತ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ ಪ್ರಲ್ಹಾದ್‌ ಜೋಶಿ.

ಟ್ರೆಂಡಿಂಗ್​ ಸುದ್ದಿ

ವಿಧಾನ ಪರಿಷತ್‌ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡ ಅವರು ನಿನ್ನೆ ಗಂಭೀರ ಆರೋಪ ಮಾಡಿದ್ದರು. ಅವರು ಬಳಸಿಕೊಂಡ ದಾಖಲೆಗೂ ತನಗೂ ಸಂಬಂಧ ಇಲ್ಲ, ಸುಳ್ಳು ಆರೋಪ ಮಾಡಿದ್ದಕ್ಕಾಗಿ ಬೋಜೇಗೌಡರ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ.

ಭೋಜೇಗೌಡರ ಆರೋಪ ಏನು?

ಕೇಂದ್ರ ಸರಕಾರದ ಅಧೀನದಲ್ಲಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್) ಯಲ್ಲಿ ಹುದ್ದೆ ಕೊಡಿಸಲು ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ)ಯ ಸದಸ್ಯತ್ವ ಕೊಡಿಸಲು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಚೇರಿ ಲಂಚ ಸ್ವೀಕರಿಸಿದೆ ಎಂದು ವಿಧಾನ ಪರಿಷತ್‌ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಗೆ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರಲ್ಹಾದ್‌ ಜೋಶಿ ಅವರು ನಮ್ಮ ಪಕ್ಷದ ಬಗ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕುರಿತು ಲಘುವಾಗಿ ಮಾತಾಡಿದ್ದಾರೆ. ಆದರೆ, ಅವರದ್ಧೇ ಕಚೇರಿಯಲ್ಲಿ ನಡೆದಿರುವ ಈ ಕಳ್ಳ ವ್ಯವಹಾರದ ಬಗ್ಗೆ ಕೇಂದ್ರ ಸಚಿವರು ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

ಹಣವನ್ನು ಎರಡು ಬಾರಿ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ ಭೋಜೇಗೌಡರು, ಅದಕ್ಕೆ ಸಂಬಂಧಿತ ಬ್ಯಾಂಕ್ ಖಾತೆಯ ವಿವರಗಳನ್ನು ಹಾಗೂ ಅಂದಿನ ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಪ್ರಲ್ಹಾದ್‌ ಜೋಶಿಗೆ ಬರೆದದ್ದು ಎಂದು ಹೇಳುತ್ತ ಪತ್ರವೊಂದನ್ನು ಕೂಡ ಬಿಡುಗಡೆ ಮಾಡಿದರು.

ಕೇಂದ್ರದ ಆರೋಗ್ಯ ಸಚಿವರು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಅವರ ಸಂಪುಟ ಸಹೋದ್ಯೋಗಿ ಆಗಿದ್ದ ಪ್ರಲ್ಹಾದ್‌ ಜೋಶಿ ಅವರ ಕಚೇರಿಗೆ ಹಣ ತಲುಪಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡಿದ ಅವರು, ಈ ಹಣವನ್ನು ಯಾರು ಯಾರಿಗೆ ಕೊಟ್ಟಿದ್ದಾರೆ. ಕಾಸಿಗಾಗಿ ಹುದ್ದೆ ಮಾರಾಟ ಮಾಡಿಕೊಂಡ ಈ ಬಹುಕೋಟಿ ಹಗರಣದ ನಿಜವಾದ ಕಿಂಗ್ ಪಿನ್ ಯಾರು? ಇದರಲ್ಲಿ ಪ್ರಲ್ಹಾದ್‌ ಜೋಶಿ ಅವರ ಪಾತ್ರ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ ಎಂದು ಹೇಳಿದರು.

ಒಟ್ಟು ಎರಡೂವರೆ ಕೋಟಿ ರೂಪಾಯಿ ಹಣ ಸಂದಾಯ ಆಗಿದೆ. ಈ ಹಣವನ್ನು ಯಾರಿಗೋಸ್ಕರ, ಯಾರು, ಯಾರಿಂದ ಹಣ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಲ್ಹಾದ್‌ ಜೋಶಿ ಉತ್ತರ ಕೊಡಬೇಕಿದೆ. ಅವರ ಕಚೇರಿಗೇ ಹಣ ಹೋಗಿದೆ ಎಂದು ಭೋಜೆಗೌಡರು ನೇರ ಆರೋಪ ಮಾಡಿದರು.

ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ನಲ್ಲಿ ಮೆಂಬರ್ ಮಾಡ್ತೀವಿ ಅಂತ ಹಣ ಪಡೆದಿದ್ದಾರೆ. ಹಾಗೆಯೇ, ಏಮ್ಸ್ ಡೈರಕ್ಡರ್ ಮಾಡ್ತೀನಿ ಅಂತ ಹಣ ಪಡೆಯಲಾಗಿದೆ. ಅಂದಿನ ಕೇಂದ್ರದ ಆರೋಗ್ಯ ಸಚಿವರು ಪ್ರಲ್ಹಾದ್‌ ಜೋಶಿಗೆ ಬರೆದಿರುವ ಪತ್ರಕ್ಕೂ ಹಾಗೂ ಈ ಹಣ ಸಂದಾಯಕ್ಕೂ ಇರುವ ಲಿಂಕ್ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆಗ್ರಹಪಡಿಸಿದರು.

ಬೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಜೋಶಿ ಎಚ್ಚರಿಕೆ

ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಪ್ರತಿಕ್ರಿಯಿಸಿದ್ದು, ಬೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.

'ಭೋಜೇಗೌಡರು ಪ್ರದರ್ಶಿಸಿರುವ ಪತ್ರವು ವೈದ್ಯರೊಬ್ಬರಿಗೆ ಬರೆದಿರುವುದು, ನಾನು ವೈದ್ಯ ಅಲ್ಲ, ಹೀಗಾಗಿ ಅದು ನನಗೆ ಬರೆದ ಪತ್ರವಲ್ಲ, ಇನ್ನು ಅವರು ಆರೋಪಿಸಿದ ಹೆಸರಿನ ವ್ಯಕ್ತಿ ನನ್ನ ಕಚೇರಿಯಲ್ಲೂ ಇಲ್ಲ. ಅವರಿಗೆ ದಾಖಲೆಯ ಮೇಲೆ ವಿಶ್ವಾಸವಿದ್ದರೆ ಹೆಸರನ್ನು ಏಕೆ ಅಡಗಿಸುತ್ತಿದ್ದಾರೆ?' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

'ಇಂತಹ ಆಧಾರರಹಿತ ಆರೋಪಗಳನ್ನು ಗಂಭೀರವಾಗಿ ಎದುರಿಸಲಾಗುವುದು. ನನ್ನ ವ್ಯಕ್ತಿತ್ವದ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದಿರುವ ಪ್ರಲ್ಹಾದ್ ಜೋಶಿ‌, ಈ ಹಿಂದೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರು ಡಾ.ಬಿ.ಡಿ. ಪಾಂಡೆ ಎಂಬುವವರಿಗೆ ಬರೆದಿದ್ದ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ.

ಆ ಟ್ವೀಟ್‌ ಇಲ್ಲಿದೆ.

IPL_Entry_Point