logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒಡಿಶಾ, ಜಾರ್ಖಂಡ್‌ನಲ್ಲಿ ಮದ್ಯ ತಯಾರಿಕಾ ಕಂಪನಿಗಳ ಮೇಲೆ ಐಟಿ ದಾಳಿ; ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ನಗದು ವಶ

ಒಡಿಶಾ, ಜಾರ್ಖಂಡ್‌ನಲ್ಲಿ ಮದ್ಯ ತಯಾರಿಕಾ ಕಂಪನಿಗಳ ಮೇಲೆ ಐಟಿ ದಾಳಿ; ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ನಗದು ವಶ

Raghavendra M Y HT Kannada

Dec 08, 2023 06:39 AM IST

ಜಾರ್ಖಂಡ್‌ನ ರಾಂಚಿಯಲ್ಲಿ ಮದ್ಯ ತಯಾರಿಕಾ ಸಂಸ್ಥೆಯಾದ ಬೌದ್ ಡಿಸ್ಲಿಲರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿ ಹಲವು ಕಡೆಗಳಲ್ಲಿ ನಡೆಸಿದ್ದ ಐಟಿ ದಾಳಿ ವೇಳೆ ಪತ್ತೆಯಾಗಿರುವ ಹಣ

  • 10 ಅಲ್ಲ 20 ಅಲ್ಲ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ನಗದನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಲ್ಲಿ ಅಂತೀರಾ ಇಲ್ಲಿದೆ ಮಾಹಿತಿ.

ಜಾರ್ಖಂಡ್‌ನ ರಾಂಚಿಯಲ್ಲಿ ಮದ್ಯ ತಯಾರಿಕಾ ಸಂಸ್ಥೆಯಾದ ಬೌದ್ ಡಿಸ್ಲಿಲರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿ ಹಲವು ಕಡೆಗಳಲ್ಲಿ ನಡೆಸಿದ್ದ ಐಟಿ ದಾಳಿ ವೇಳೆ ಪತ್ತೆಯಾಗಿರುವ ಹಣ
ಜಾರ್ಖಂಡ್‌ನ ರಾಂಚಿಯಲ್ಲಿ ಮದ್ಯ ತಯಾರಿಕಾ ಸಂಸ್ಥೆಯಾದ ಬೌದ್ ಡಿಸ್ಲಿಲರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿ ಹಲವು ಕಡೆಗಳಲ್ಲಿ ನಡೆಸಿದ್ದ ಐಟಿ ದಾಳಿ ವೇಳೆ ಪತ್ತೆಯಾಗಿರುವ ಹಣ

ಕಳೆದ ಬುಧವಾರದಿಂದ (ಡಿಸೆಂಬರ್ 6) ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಮದ್ಯ ತಯಾರಿಕಾ ಕಂಪನಿಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ (Income Tax) ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ನಗದನ್ನು ಅವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಎಸ್‌ ಶಿವ ಗಂಗಾ ಅಂಡ್ ಕಂಪನಿ, ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಹಾಗೂ ರಾಣಿಸತಿ ಪ್ಯಾಡಿ ಪ್ರೊಸಿಂಗ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಗಳ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಜಾರ್ಖಂಡ್‌ನ ಹಲವು ಜಿಲ್ಲೆಗಳಲ್ಲಿ ಈ ಸಂಸ್ಥೆಗಳಿಗೆ ಸೇರಿ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿಗಳು ದಾಳಿ ನಡೆಸಿದ್ದರು.

ಕಾಂಗ್ರೆಸ್ ನಾಯಕನಿಗೂ ಐಟಿ ಶಾಕ್

ಮದ್ಯ ತಯಾರಿ ಸಂಸ್ಥೆಗಳ ಮಾಲೀಕರೊಂದಿಗೆ ಸಂಪರ್ಕ ಹೊಂದಿದ್ದ ಜಾರ್ಖಂಡ್‌ ಕಾಂಗ್ರೆಸ್‌ನಿಂದ ರಾಜ್ಯಸಭೆಯ ಸದಸ್ಯರಾಗಿರುವ ದೀರಜ್ ಸಾಹು ಅವರ ಮನೆ ಹಾಗೂ ಇತರೆ ಸ್ಥಳಗಳಲ್ಲೂ ದಾಳಿ ಮಾಡಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು 12 ತಂಡಗಳಾಗಿ ಪ್ರತ್ಯೇಕ ಸ್ಥಳಗಳಲ್ಲಿ ರೇಡ್ ಮಾಡಿದ್ದಾರೆ. ಸಿಐಎಸ್‌ಎಫ್ ಭದ್ರತಾ ಪಡೆಯ 4 ತಂಡಗಳು ಐಟಿ ಅಧಿಕಾರಿಗಳಿಗೆ ಸಾಥ್ ನೀಡಿದ್ದು, ದಾಳಿ ನಡೆದಿರುವ ಸ್ಥಳಗಳಲ್ಲಿ ಭದ್ರತೆಯನ್ನು ಒದಗಿಸಿದ್ದಾರೆ.

ಒಂದೇ ಕಚೇರಿಯಲ್ಲಿ ಬರೋಬ್ಬರಿ 150 ಕೋಟಿ ನಗದ ಪತ್ತೆ

ಜಾರ್ಖಂಡ್‌ನ ರಾಂಚಿಯಲ್ಲಿರುವ ಮದ್ಯ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾದ ಬೌಧ್ ಡಿಸ್ಲಿಲರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿ ಹಲವು ಕಡೆಗಳಲ್ಲಿ ನಡೆಸಿದ್ದ ಐಟಿ ದಾಳಿ ವೇಳೆ ಒಂದೇ ಕಡೆ ಕಂತೆ ಕಂತೆ ಹಣವನ್ನು ನೋಡಿ ಐಟಿ ಅಧಿಕಾರಿಗಳಿಗೆ ದಂಗಾಗಿ ಹೋಗಿದ್ದಾರೆ. 500, 200 ಹಾಗೂ 100 ಮುಖ ಬೆಲೆಯ 150 ಕೋಟಿ ರೂಪಾಯಿ ಒಂದೇ ಕಡೆ ಪತ್ತೆಯಾಗಿದೆ. ಎಲ್ಲಾ ಕಡೆಗಳಿಂದ ಸೇರಿ ಈವರೆಗೆ ವಶಪಡಿಸಿಕೊಂಡಿರುವ 300 ಕೋಟಿ ರೂಪಾಯಿಗೂ ಅಧಿಕ ನಗದನ್ನು ಚೀಲಗಳಲ್ಲಿ ತುಂಬಿದ ನಂತರ ಟ್ರಕ್‌ನಲ್ಲಿ ಬೋಲಂಗಿರ್‌ನ ಎಸ್‌ಬಿಐ ಬ್ಯಾಂಕ್‌ಗೆ ತರಲಾಗಿದೆ.

ತಿತಿಲಗಢದಲ್ಲಿರುವ ಮದ್ಯ ತಯಾರಿಕಾ ಮತ್ತು ಮಾರಾಟ ಸಂಸ್ಥೆಯ ಮಾಲೀಕರಾದ ದೀಪಕ್ ಸಾಹು ಮತ್ತು ಸಂಜಯ್ ಸಾಹು ಅವರ ಮನೆಗಳಲ್ಲೂ ಶೋಧಕಾರ್ಯ ನಡೆದಿದೆ. ಆದರೆ ಐಟಿ ದಾಳಿಯ ಮಾಹಿತಿ ಸಿಕ್ಕ ಕೂಡಲೇ ಈ ಇವರಬ್ಬರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಪುಸ್ತಕದಲ್ಲಿ ಕಡಿಮೆ ಲಾಭ ತೋರಿಸಿ ಭಾರಿ ಅವ್ಯವಹಾರ

ಬೌಧ್, ರೈದಿಹ್, ಸಂಬಲ್‌ಪುರ ಹಾಗೂ ಬಲಂಗೀರ್ ಜಿಲ್ಲೆಗಳಲ್ಲಿರುವ ಬೌಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್-ಬಿಡಿಪಿಎಲ್ ಜಾರ್ಖಂಡ್‌ನಾದ್ಯಂತ ಮದ್ಯದ ಮಳಿಗೆಗಳನ್ನು ಹೊಂದಿದೆ. ಬಿಲ್‌ಗಳು ಮತ್ತು ವೋಚರ್‌ಗಳನ್ನು ನಿರ್ವಹಿಸಿದೆ ಮದ್ಯ ಮಾರಾಟ ಮಾಡಿರುವ ಮಾಹಿತಿ ಇದೆ. ಜೊತೆಗೆ ತೆರಿಗೆಯನ್ನು ತಪ್ಪಿಸಲು 2019 ಮತ್ತು 2021ರ ನಡುವೆ ಅಸಮಂಜಸ, ಕಡಿಮೆ ನಿವ್ವಳ ಲಾಭವನ್ನು ತೋರಿಸಿದೆ. ಇತರೆ ವಸ್ತುಗಳನ್ನು ಖರೀದಿಸಲು ಅನುಮಾನಾಸ್ಪದವಾದ ಪಾವತಿಗಳನ್ನೂ ವೆಚ್ಚದಲ್ಲಿ ತೋರಿಸಿರುವುದು ದಾಳಿಯ ವೇಳೆ ಕಂಡುಬಂದಿದೆ. ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರಿದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ