logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Medaram Jathara: 2 ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಜರುಗುವ ಮೇಡಾರಂ ಜಾತ್ರೆ; ಯಾರು ಸಮ್ಮಕ್ಕ ಸರಳಕ್ಕ? ಜಾತ್ರೆಯ ಹಿನ್ನೆಲೆ ಏನು?

Medaram Jathara: 2 ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಜರುಗುವ ಮೇಡಾರಂ ಜಾತ್ರೆ; ಯಾರು ಸಮ್ಮಕ್ಕ ಸರಳಕ್ಕ? ಜಾತ್ರೆಯ ಹಿನ್ನೆಲೆ ಏನು?

HT Kannada Desk HT Kannada

Feb 23, 2024 04:55 PM IST

4 ದಿನಗಳ ಕಾಲ ಮೇಡಾರಂನಲ್ಲಿ ನಡೆಯುವ ಸಮ್ಮಕ್ಕ, ಸರಳಕ್ಕನ ಜಾತ್ರೆ

  • Medaram Festival: ಫೆಬ್ರವರಿ 21 ರಿಂದ ಆರಂಭವಾಗಿರುವ ಮೇಡಾರಂ ಜಾತ್ರೆ 24 ವರೆಗೆ ನಡೆಯುತ್ತದೆ. ಜಾತ್ರೆಯಲ್ಲಿ ಸಮ್ಮಕ್ಕ ಸರಳಕ್ಕ ಎಂಬ ದೇವತೆಗಳಿಗೆ ಪೂಜಿಸಲಾಗುತ್ತದೆ. ಜನ ಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡಾ ಈ ಜಾತ್ರೆಗೆ ಬಂದು ದೇವಿಯರ ದರ್ಶನ ಪಡೆಯುತ್ತಾರೆ. 

4 ದಿನಗಳ ಕಾಲ ಮೇಡಾರಂನಲ್ಲಿ ನಡೆಯುವ ಸಮ್ಮಕ್ಕ, ಸರಳಕ್ಕನ ಜಾತ್ರೆ
4 ದಿನಗಳ ಕಾಲ ಮೇಡಾರಂನಲ್ಲಿ ನಡೆಯುವ ಸಮ್ಮಕ್ಕ, ಸರಳಕ್ಕನ ಜಾತ್ರೆ (PC: @TJSPartyOnline, @TribalAffairsIn)

Medaram Festival: ಪ್ರತಿ ರಾಜ್ಯದಿಂದ ರಾಜ್ಯಕ್ಕೆ ಸಂಸ್ಕೃತಿ, ಆಚಾರ, ವಿಚಾರ ಬೇರೆ ಇರುತ್ತದೆ. ಫೆಬ್ರವರಿ ತಿಂಗಳಲ್ಲಿ ಕೆಲವೊಂದು ರಾಜ್ಯಗಳಲ್ಲಿ ಜಾತ್ರೆ ನಡೆಯುತ್ತವೆ. ತೆಲಂಗಾಣದಲ್ಲಿ ಸದ್ಯಕ್ಕೆ ಮೇಡಾರಂ ಜಾತ್ರೆ ನಡೆಯತ್ತಿದೆ. ಈ ವರ್ಷ ಮೇಡಾರಂ ಜಾತ್ರೆ ಫೆಬ್ರವರಿ 21 ರಿಂದ 24 ವರೆಗೆ ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಇದನ್ನು ತೆಲಂಗಾಣ ಕುಂಭಮೇಳ ಎಂದೂ ಕರೆಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಮೇಡಾರಂ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇಬ್ಬರು ದೇವಿಯರಿಗೆ ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡುತ್ತಾರೆ. ದೇವಿಯರಿಗೆ ಪೂಜೆ ಮಾಡಿ ನೈವೇದ್ಯ ಅರ್ಪಿಸುವುದರಿಂದ ಅವರು ಭಕ್ತರ ಆಸೆಗಳನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆ ಇದೆ. 1996 ರಲ್ಲಿ ಈ ಜಾತ್ರೆಯನ್ನು ತೆಲಂಗಾಣ ರಾಜ್ಯ ಹಬ್ಬವೆಂದು ಘೋಷಿಸಲಾಯ್ತು. ಮೇಡಾರಂ ಜಾತ್ರೆ ಕುರಿತು ಕಥೆಯೊಂದು ಪ್ರಚಲಿತದಲ್ಲಿದೆ. ಈ ಜಾತ್ರೆಯಲ್ಲಿ ಸಮ್ಮಕ್ಕ-ಸರಳಕ್ಕ ಜಾತ್ರೆ ಎಂದೂ ಕರೆಯಲಾಗುತ್ತದೆ. ಈ ಜಾತ್ರೆಯ ಹಿನ್ನೆಲೆ, ವೈಶ್ಟಿಷ್ಟ್ಯತೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ.

ಕಾಕತೀಯರ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಮೇಡಾರಂ

ಮೇಡಾರಂ ಜಾತ್ರೆ ಬುಡಕಟ್ಟು ಜನಾಂಗದ ಜಾತ್ರೆ ಎಂದೇ ಫೇಮಸ್. ‌13ನೇ ಶತಮಾನದಲ್ಲಿ ಮೇಡಾರಂ, ಕಾಕತೀಯ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಒಂದು ದಿನ ಬುಡಕಟ್ಟು ಜನರು, ಕಾಡಿನಲ್ಲಿ ಭೇಟೆಯಾಡಲು ಹೋದಾಗ ಹುಲಿಗಳು ಕಾವಲು ಕಾಯುತ್ತಿರುವ ಹೆಣ್ಣು ಮಗುವೊಂದನ್ನು ನೋಡುತ್ತಾರೆ. ಸಮುದಾಯದ ಮುಖ್ಯಸ್ಥರು ಆ ಮಗುವನ್ನು ದೇವರ ರೂಪವೆಂದು ಪರಿಗಣಿಸಿದರು. ಆ ಮಗುವನ್ನು ಮನೆಗೆ ಕರೆತಂದರು. ಮನೆಗೆ ಬಂದಾಗಿನಿಂದ ಎಲ್ಲಾ ಶುಭವೇ ಜರುಗಿದ ಕಾರಣ ಆ ಮಗುವಿಗೆ ಮಾಘ ಮಾಸದ ಶುದ್ಧ ಹುಣ್ಣಿಮೆಯ ದಿನದಂದು ಸಮ್ಮಕ್ಕ ಎಂದು ಹೆಸರಿಟ್ಟರು. ಆ ಮಗು ಬೆಳೆದ ನಂತರ ಬುಡಕಟ್ಟು ರಾಜನೊಂದಿಗೆ ಮದುವೆ ಮಾಡಲಾಯ್ತು. ಈ ದಂಪತಿಗೆ ಜನಿಸಿದ ಮಕ್ಕಳಿಗೆ ಜಂಪಣ್ಣ, ಸರಳಮ್ಮ ಮತ್ತು ನಾಗುಲಮ್ಮ ಎಂದು ಹೆಸರಿಟ್ಟರು.

ಬುಡಕಟ್ಟು ಜನಾಂಗದ ಮೇಲೆ ಕಾಕತೀಯ ರಾಜ ಯುದ್ಧ

ಕಾಕತೀಯರ ಸಾಮಂತ ರಾಜನಾಗಿದ್ದ ಪಗಿಡಿದ್ದ ರಾಜನು ಮೇಡಾರವನ್ನು ಆಳುತ್ತಿದ್ದನು. ಒಮ್ಮೆ ಭೀಕರ ಬರಗಾಲ ಬಂದಿತ್ತು. ಬೆಳೆದ ಬೆಳೆ ಫಸಲು ಕೊಡದೆ, ನೆರೆ ರಾಜ್ಯದ ರಾಜನಿಗೆ ಕಪ್ಪ ಕೊಡಲು ಸಾಧ್ಯವಾಗಿರಲಿಲ್ಲ. ಎಷ್ಟೇ ಮನವಿ ಮಾಡಿದರೂ ಕಾಕತೀಯ ರಾಜ ಪ್ರತಾಪ ರುದ್ರ ಇದನ್ನೆಲ್ಲಾ ಕಡೆಗಣಿಸಿ ಬುಡಕಟ್ಟು ಜನಾಂಗದ ಮೇಲೆ ಯುದ್ಧ ಸಾರಿದ. ಸಂಪಂಗಿ ವಾಗು ಎಂಬಲ್ಲಿ ಭೀಕರ ಯುದ್ದ ಆರಂಭವಾಯ್ತು. ಈ ಯುದ್ಧದಲ್ಲಿ ಶತ್ರು ಸೈನ್ಯವು ಪಗಿಡಿದ್ದ ರಾಜನನ್ನು ಕೊಂದವು.

ರಾಜನನ್ನು ಸೋಲಿಸಲು ಹೋರಾಡಿ ಮಡಿದ ಸಮ್ಮಕ್ಕ, ಸರಳಕ್ಕ

ಕಾಕತೀಯ ರಾಜನ ಮೇಲೆ ಸಮ್ಮಕ್ಕನ ಅಳಿಯ ಗೋವಿಂದರಾಜು ಮತ್ತು ಮಗಳು ಸರಳಮ್ಮ ಒಟ್ಟಿಗೆ ಯುದ್ಧಕ್ಕೆ ಇಳಿದರು. ಕಾಕತೀಯ ಸೈನ್ಯವು ತನ್ನ ಅಸಾಧಾರಣ ಹೋರಾಟದ ಪರಾಕ್ರಮದಿಂದ ಸಮ್ಮಕ್ಕ ಮತ್ತು ಸರಳಕ್ಕನನ್ನು ಇರಿದು ಕೊಂದರು. ನಂತರ ಜಂಪಣ್ಣನನ್ನೂ ಕೊಂದು ನದಿಗೆ ಎಸೆಯಲಾಯಿತು. ಯುದ್ದದಲ್ಲಿ ಹೋರಾಡಿ ಮಡಿದ ನಂತರ ಜಂಪಣ್ಣನನ್ನು ಕೊಂದು ಎಸೆದ ನಂತರ ಇದನ್ನು ಜಂಪಣ್ಣ ವಾಗು ಎಂದು ಕರೆಯುತ್ತಾರೆ. ಮತ್ತೊಂದೆಡೆ ಸಮ್ಮಕ್ಕ ಮೈ ತುಂಬಾ ಬಾಣಗಳನ್ನು ಹೊತ್ತು ಮುಂದೆ ನಡೆದಳು. ಆಕೆಯನ್ನು ಹುಡುಕುತ್ತಾ ಗಿರಿಜನರು ಹಿಂದೆ ಹೋದರು. ಆದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಸಮ್ಮಕ್ಕ ಎಲ್ಲಿಯೂ ಕಾಣಸಿಗಲಿಲ್ಲ.

ಸಮ್ಮಕ್ಕನನ್ನು ಹಿಂಬಾಲಿಸಿಕೊಂಡು ಹೋದ ಜನರಿಗೆ ಚಿಲಕಲಗುಟ್ಟ ಬಳಿ ಒಂದು ಮರದ ಕೆಳಗೆ ಒಂದು ಕುಂಕುಮದ ಭರಣಿ ದೊರೆಯಿತು. ಸಮ್ಮಕ್ಕ, ಆ ರೀತಿ ಕುಂಕುಮ ಭರಣಿಯಾಗಿ ಬದಲಾಗಿದ್ದಾಳೆ ಹಾಗೂ ಮೇಡಾರಂನ ಕನ್ನೆಪಲ್ಲಿ ಎಂಬಲ್ಲಿ ಸಮ್ಮಕ್ಕಳ ತಾಯಿ ಸಾರಕ್ಕ, ಬೆಳಕಾಗಿ ಮಾರ್ಪಟ್ಟಿದ್ದಾಳೆ ಎಂದು ಜನರು ನಂಬಿದರು. ಈ ಘಟನೆ ನಡೆದ ನಂತರ ಪ್ರತಾಪರುದ್ರನಿಗೆ ತನ್ನ ತಪ್ಪಿನ ಅರಿವಾಗಿ ಸಮ್ಮಕ್ಕನ ಭಕ್ತನಾದನು. ಅಂದಿನಿಂದ ಪ್ರತಿ ವರ್ಷ ಸಮ್ಮಕ್ಕ ಮತ್ತು ಸರಳಕ್ಕನಿಗೆ ವಿಶೇಷ ಪೂಜೆ ನೆರವೇರಿಸುತ್ತಾ ಬರಲಾಗಿದೆ.

2 ವರ್ಷಗಳಿಗೊಮ್ಮೆ ನಡೆಯುವ ಮೇಡಾರಂ ಜಾತ್ರೆಯಲ್ಲಿ ಸಮ್ಮಕ್ಕ ಸರಳಕ್ಕನಿಗೆ ವಿಶೇಷ ಪೂಜೆ

ಪ್ರತಾಪರುದ್ರನು ಯುದ್ಧದಲ್ಲಿ ಗೆದ್ದರೂ ಸಮ್ಮಕ್ಕನ ಭಕ್ತನಾಗಿ ಬಹಳ ಬದಲಾಗುತ್ತಾನೆ. ಬುಡಕಟ್ಟು ಜನಾಂಗದವರು ತನಗೆ ಕೊಡಬೇಕಾದ ಕಪ್ಪವನ್ನು ಇನ್ಮುಂದೆ ತನಗೆ ನೀಡುವ ಅಗತ್ಯವಿಲ್ಲ ಎಂದು ಘೋಷಿಸುತ್ತಾನೆ. ಭಕ್ತನಾಗಿ ಸಮ್ಮಕ್ಕನಿಗೆ ಕಾಣಿಕೆಗಳನ್ನು ಅರ್ಪಿಸುತ್ತಾನೆ. ಅಲ್ಲದೆ ಅಂದಿನಿಂದ ತಪ್ಪದೆ 2 ವರ್ಷಗಳಿಗೊಮ್ಮೆ ಜಾತ್ರೆ ನಡೆಸುವಂತೆಯೂ ಆದೇಶ ಹೊರಡಿಸುತ್ತಾನೆ. ಆದ್ದರಿಂದಲೇ ಆ ಘಟನೆ ನಡೆದಾಗಿನಿಂದ 2 ವರ್ಷಗಳಿಗೊಮ್ಮೆ ಮಾಘ ಶುದ್ಧ ಹುಣ್ಣಿಮೆಯಂದು ಸಮ್ಮಕ್ಕ-ಸರಳಕ್ಕ ಜಾತ್ರೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ವಾರಂಗಲ್ ಜಿಲ್ಲೆಯ ತಡ್ವಾಯಿ ಮಂಡಲಮ್‌ನ ದೂರದ ಅರಣ್ಯ ಪ್ರದೇಶವಾದ ಮೇಡಾರಂನ ದಟ್ಟವಾದ ಕಾಡುಗಳು ಮತ್ತು ಬೆಟ್ಟದ ಇಳಿಜಾರುಗಳ ನಡುವೆ ಸಮ್ಮಕ್ಕ ಹಾಗೂ ಸಾರಕ್ಕ ಕಲ್ಲುಗಳ ರೂಪದಲ್ಲಿ ನೆಲೆಸಿದ್ದಾರೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಪ್ರತಿದಿನವೂ ಭಕ್ತರಿಗೆ ದೇವಾಲಯಕ್ಕೆ ಸಮ್ಮಕ್ಕ ಸರಳಕ್ಕನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೇಡಾರಂ ಗ್ರಾಮವು ಮುಲುಗು ಜಿಲ್ಲಾ ಕೇಂದ್ರದಿಂದ 44 ಕಿಮೀ ದೂರದಲ್ಲಿರುವ ತಾಡ್ವಾಯಿ ಮಂಡಲದ ದೂರದ ಅರಣ್ಯ ಪ್ರದೇಶದಲ್ಲಿದೆ. ಸುಮಾರು 4 ದಿನಗಳ ಕಾಲ ಜಾತ್ರೆ ನಡೆಯಲಿದ್ದು ಜನ ಸಾಮಾನ್ಯರ ಜೊತೆ ಸೆಲೆಬ್ರಿಟಿಗಳು ಕೂಡಾ ಇಲ್ಲಿ ಬಂದು ಸಮ್ಮಕ್ಕ ಸರಳಕ್ಕನ ದರ್ಶನ ಪಡೆಯುತ್ತಾರೆ.

ಪ್ರತಿವರ್ಷ ಎತ್ತಿನ ಬಂಡಿಯಲ್ಲಿ ಬರುವ ಮೂಲಕ ಸಂಪ್ರದಾಯ ಪಾಲಿಸುವ ಭಕ್ತರು

ಭಕ್ತರು ಪ್ರತಿ ವರ್ಷವೂ ಸಮ್ಮಕ್ಕ ಸರಳಕ್ಕನ ಜಾತ್ರೆಗೆ ಎತ್ತಿನ ಬಂಡಿ ಕಟ್ಟಿಕೊಂಡು ಕುಟುಂಬ ಸಹಿತ ಆಗಮಿಸುತ್ತಾರೆ. ಪ್ರತಿ ಬಾರಿಯೂ ಎತ್ತಿನ ಗಾಡಿಯಲ್ಲಿ ಬರುವ ಪುರಾತನ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಗಾಡಿಯ ಸದ್ದು, ಅಲಂಕೃತಗೊಂಡ ಎತ್ತುಗಳು, ಗಾಡಿಗಳು, ಗಂಟೆ ಸದ್ದು ನಿಜಕ್ಕೂ ಒಂದು ವಿಭಿನ್ನ ಅನುಭವವನ್ನೇ ನೀಡುತ್ತದೆ.

ಜಾತ್ರೆಗೆ ತೆಲುಗಿನಲ್ಲೇ ಶುಭ ಕೋರಿದ ಪ್ರಧಾನಿ ಮೋದಿ

ಬುಡಕಟ್ಟು ಜನಾಂಗದವರ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಈ ಸಮ್ಮಕ್ಕ ಸರಳಕ್ಕ ಮೇಡಾರಂ ಜಾತ್ರೆಯ ಶುಭಾಶಯಗಳು, ಇದು ಶಾಶ್ವತವಾಗಿ ಉಳಿಯುವ ನಮ್ಮ ಸಾಂಸ್ಕೃತಿಕ ಪರಂಪರೆಯ ರೋಮಾಂಚಕ ಅಭಿವ್ಯಕ್ತಿಯಾಗಿದೆ. ಈ ಜಾತ್ರೆಯು ಭಕ್ತಿ, ಸಂಪ್ರದಾಯ ಮತ್ತು ಸಮುದಾಯದ ಮನೋಭಾವದ ಉತ್ತಮ ಸಂಯೋಜನೆಯಾಗಿದೆ. ಸಮ್ಮಕ್ಕ-ಸರಳಕ್ಕನಿಗೆ ಭಕ್ತಿಯಿಂದ ನಮಸ್ಕರಿಸೋಣ ಮತ್ತು ಅವರು ತೋರಿದ ಏಕತೆ ಮತ್ತು ಶೌರ್ಯವನ್ನು ಸ್ಮರಿಸೋಣ ಎಂದು ಪ್ರಧಾನಿ ಮೋದಿ ತೆಲುಗಿನಲ್ಲೇ ಟ್ವೀಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ