logo
ಕನ್ನಡ ಸುದ್ದಿ  /  Nation And-world  /  Menstrual Hygiene Day 2023 Date Importance Theme And Menstrual Hygiene Tips Rmy

Menstrual Hygiene Day 2023: ಇಂದು ಮುಟ್ಟಿನ ನೈರ್ಮಲ್ಯ ದಿನ; ಮಹತ್ವ, ಥೀಮ್, ನೈರ್ಮಲ್ಯಕ್ಕೆ ಸಲಹೆಗಳು ಹೀಗಿವೆ

HT Kannada Desk HT Kannada

May 28, 2023 06:30 AM IST

ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ

  • Menstrual Hygiene Day: ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆ ಮತ್ತು ಮುಟ್ಟಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವುದು ಹೇಗೆ ಮತ್ತು ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ
ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ

ಬೆಂಗಳೂರು: ಇಂದು (ಮೇ 28, ಭಾನುವಾರ) ಮುಟ್ಟಿನ ನೈರ್ಮಲ್ಯ ದಿನ (Menstrual Hygiene Day 2023). ಮುಟ್ಟಿನ ನೈರ್ಮಲ್ಯದ ಮಹತ್ವವನ್ನು ಎತ್ತಿ ಹಿಡಿಯಲು, ಮುಟ್ಟಿನ ಬಗ್ಗೆ ಇರುವ ಕಳಂಕವನ್ನು ತೊಡೆದುಹಾಕುವುದು ಹಾಗೂ ಮುಟ್ಟಿನ ಬಗ್ಗೆ ಇರುವ ಸವಾಲುಗಳನ್ನು ಎದುರಿಸುವ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

Gold Rate Today: ವಾರಾಂತ್ಯದಲ್ಲಿ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಗೋಲ್ಡ್‌ ರೇಟ್‌ ಎಷ್ಟಿದೆ ಗಮನಿಸಿ

Lok Sabha Election 2024: ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಶೇ 61 ರಷ್ಟು ಮತದಾನ; ತ್ರಿಪುರಾಗೆ ಅಗ್ರ ಸ್ಥಾನ

ಋತುಚಕ್ರ ನೈರ್ಮಲ್ಯ ದಿನವನ್ನು ಒಂದು ಜಾಗತಿಕ ವೇದಿಕೆಯಾಗಿ ಆಚರಿಸಲಾಗುತ್ತದೆ. ಉತ್ತಮ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ಲಾಭರಹಿತ, ಸರ್ಕಾರಿ ಸಂಸ್ಥೆಗಳು, ವ್ಯಕ್ತಿಗಳು, ಖಾಸಗಿ ವಲಯ ಹಾಗೂ ಮಾಧ್ಯಮವನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಲಾಗುತ್ತದೆ.

ಯುನಿಸೆಫ್ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 1.8 ಶತಕೋಟಿ ಜನರು ಪ್ರತಿ ತಿಂಗಳು ಋತುಚಕ್ರ ಆಗುತ್ತಾರೆ. ಇದರಲ್ಲಿ ಯುವತಿಯರು, ಮಹಿಳೆಯರು, ಟ್ರಾನ್ಸ್‌ಜೆಂಡರ್‌ ಪುರುಷರು ಮತ್ತು ಬೈನರಿ ಅಲ್ಲದ ವ್ಯಕ್ತಿಗಳು ಸೇರಿದ್ದಾರೆ. ಇವರಲ್ಲಿ ಹಲವರು ಕಳಂಕದಿಂದ ಸಾಮಾಜಿಕ ಬಹಿಷ್ಕಾರದವರಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.

ಮೂಲಭೂತ ಕೊರತೆಯಿಂದಾಗಿ ಮುಟ್ಟಿನ ನೈರ್ಮಲ್ಯ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಲಿಂಗ ಅಸಮಾನತೆ, ತಾರತಮ್ಯ, ಸಾಮಾಜಿಕ ಕಟ್ಟುಪಾಡುಗಳು, ಸಾಂಸ್ಕೃತಿಕ ನಿಷೇಧಗಳು, ಬಡತನ ಹಾಗೂ ಶೌಚಾಲಯಗಳು ಕಾರಣವಾಗಿದೆ.

ಮುಟ್ಟಿನ ನೈರ್ಮಲ್ಯ ಎಂದರೇನು?

ಗರ್ಭಾಶಯವು ಗರ್ಭಾಶಯದ ಒಳಪದರದಿಂದ ರಕ್ತ ಮತ್ತು ಅಂಗಾಂಶವನ್ನು ಯೋನಿಯ ಮೂಲಕ ಚೆಲ್ಲುತ್ತದೆ. ಈ ರೀತಿಯ ಪ್ರಕ್ರಿಯೆ ಆದಾಗ ಅಂದು ಒಂದು ಅವಧಿ ಯಾಗುತ್ತದೆ (ತಿಂಗಳು).

ಮುಟ್ಟಿನ ನೈರ್ಮಲ್ಯ ಎಂದರೆ ಮುಟ್ಟಿನ ಸಮಯಲ್ಲಿ ರಕ್ತದ ಹರಿವನ್ನು ಹೀರಿಕೊಳ್ಳುವ ಅಥವಾ ಸಂಗ್ರಹಿಸುವ ಉತ್ಪನ್ನಗಳ ಬಳಕೆಯಾಗಿದೆ. ಪ್ಯಾಡ್‌ಗಳು ಅಥವಾ ಮುಟ್ಟಿನ ಕಪ್‌ಗಳನ್ನು ಬದಲಾಯಿಸಲು ಗೌಪ್ಯತೆ ಮತ್ತು ಬಳಸಿದ ಉತ್ಪನ್ನಗಳನ್ನು ವಿಲೇವಾರಿ ಮಾಡುವ ಸೌಲಭ್ಯಗಳು ಮುಟ್ಟಿನ ನೈರ್ಮಲ್ಯದ ಭಾಗವಾಗಿ.

ಮೇ 28 ರಂದು ಯಾಕೆ ಆಚರಿಸಲಾಗುತ್ತದೆ?

ಮುಟ್ಟಿನ ನೈರ್ಮಲ್ಯ ದಿನವನ್ನು ಪ್ರತಿ ವರ್ಷ ಮೇ 28 ರಂದು ಆಚರಿಸಲಾಗುತ್ತದೆ. ಯಾಕೆಂದರೆ ಮುಟ್ಟಿನ ಚಕ್ರವು ಸರಾಸರಿ 28 ದಿನಗಳು ಮತ್ತು ಸರಾಸರಿ ಜನರಿಗೆ ಪ್ರತಿ ತಿಂಗಳು ಐದು ದಿನಗಳವರೆಗೆ ಮುಟ್ಟು ಇರುತ್ತದೆ.

ಮುಟ್ಟಿನ ನೈರ್ಮಲ್ಯ ದಿನದ ಇತಿಹಾಸ

ಮುಟ್ಟಿನ ನೈರ್ಮಲ್ಯ ದಿನವನ್ನು ಜರ್ಮನಿಯ ಎನ್‌ಜಿಒ ವಾಶ್ 2013 ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಾರಂಭಿಸಿತು. ಮುಟ್ಟಿನ ವಿವಿಧ ಅಂಶಗಳ ಬಗ್ಗೆ ಜಾಗೃತಿ ಮೂಡಿಲು 28 ದಿನಗಳ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಲಾಗಿಯಿತು. 2014ರ ಮೇ 28 ರಂದು ಮೊದಲ ಬಾರಿಗೆ ರಾಲಿಗಳು, ಪ್ರದರ್ಶನಗಳು, ಕಾರ್ಯಾಗಾರಗಳು, ಭಾಷಣಗಳೊಂದಿಗೆ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಯಿತು.

ಮುಟ್ಟಿನ ನೈರ್ಮಲ್ಯ ದಿನ 2023 ಥೀಮ್

2023ರ ಋತುಚಕ್ರದ ನೈರ್ಮಲ್ಯ ದಿನದ ಥೀಪ್ 2030ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದಾಗಿದೆ.

ಮುಟ್ಟಿನ ನೈರ್ಮಲ್ಯ ದಿನದ ಮಹತ್ವ

ಋತುಚಕ್ರದ ನೈರ್ಮಲ್ಯವು ಮುಟ್ಟಿನ ವ್ಯಕ್ತಿಗಳ ಯೋಗಕ್ಷೇಮ ಮತ್ತು ಘನತೆಗೆ ಮುಖ್ಯವಾಗಿದೆ. ಈ ದಿನವನ್ನು ಶುದ್ದ ಮತ್ತು ಸುರಕ್ಷಿತ ಮುಟ್ಟಿನ ಉತ್ಪನ್ನಗಳನ್ನು ಬಳಸುವುದಾಗಿದೆ. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಮುಟ್ಟಿನ ನೈರ್ಮಲ್ಯ ಅಭ್ಯಾಸಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಋತುಚಕ್ರದ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಾಮಾನ್ಯ ಮುಟ್ಟಿನ ಉತ್ಪನ್ನಗಳು ಪಟ್ಟಿ ಹೀಗಿದೆ.

  • ಮುಟ್ಟಿನ ಪ್ಯಾಡ್‌ಗಳು
  • ಮುಟ್ಟಿನ ಕಪ್‌ಗಳು
  • ಸಾವಯವ ಹತ್ತಿ ಟ್ಯಾಂಪೊನ್‌ಗಳು
  • ಅವಧಿಯ ಪ್ಯಾಂಟಿಗಳು
  • ಮರು ಬಳಕೆ ಮಾಡಬಹುದಾದ ಬಟ್ಟೆ ಪ್ಯಾಡ್‌ಗಳು

ಸಿಡಿಸಿ ಪ್ರಕಾರ, ಆರೋಗ್ಯಕರ ಅವಧಿಗೆ ಅನುಸರಿಸಬೇಗಾದ ಮಾರ್ಗಸೂಚಿಗಳು

  • ಮುಟ್ಟಿನ ಉತ್ಪನ್ನವನ್ನು ಬಳಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ
  • ಮುಟ್ಟಿನ ಉತ್ಪನ್ನಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಬೇಡಿ. ಬದಲಿಗೆ ಅವುಗಳನ್ನು ಶೌಚಾಲಯದ ಪೇಪರ್ ಅಥವಾ ಟಿಖ್ಯೂನಿಂದ ಸುತ್ತಿ ಡಸ್ಟ್‌ಬಿನ್‌ನಲ್ಲಿ ವಿಲೇವಾರಿ ಮಾಡಿ
  • ರಕ್ತದ ಹರಿವು ಕಡಿಮೆಯಾಗಿದ್ದರೂ ಪ್ರತಿ ಕೆಲವು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕು. ಹರಿವು ಭಾರೀ ಪ್ರಮಮಾಣಲ್ಲಿದ್ದರೆ ಅವುಗಳನ್ನು ಹೆಚ್ಚಾಗಿ ಬದಲಾಯಿಸಿ
  • ಪ್ರತಿ 4-8 ಗಂಟೆಗಳಿಗೊಮ್ಮೆ ಟ್ಆಂಪೂನ್‌ಗಳನ್ನು ಬದಲಾಯಿಸಿ
  • ಋತುಚಕ್ರದ ಕಪ್‌ಗಳ ಸಂದರ್ಭದಲ್ಲಿ ಒಂದು ದಿನದ ಬಳಕೆಯ ನಂತರ ಅವುಗಳನ್ನು ಸ್ವಚ್ಛಗೊಳಿಸಿ ಮತ್ತು ನಿಮ್ಮ ಅವಧಿ ಮುಗಿ ನಂತರ ಕೆಲವು ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಇರಿಸಿ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ
  • ಹತ್ತಿ ಒಳಉಡುಪುಗಳನ್ನು ಧರಿಸಿ ಮತ್ತು ನಿಮ್ಮ ಜನನಾಂಗದ ಪ್ರದೇಶವನ್ನು ಸ್ವಚ್ಛವಾಗಿಡಿ. ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ಸಾಕಷ್ಟು ದ್ರವನ್ನು ಕುಡಿಯಿರಿ

ಇದನ್ನೂ ಓದಿ: ಮೂಳೆಗಳ ಸಾಂದ್ರತೆ ವೃದ್ಧಿಗೆ ಹೀಗಿರಲಿ ನಿಮ್ಮ ಬೆಳಗಿನ ದಿನಚರಿ

    ಹಂಚಿಕೊಳ್ಳಲು ಲೇಖನಗಳು