logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತೊಟ್ಟಿಲು ಬದಲು ಮಗುವನ್ನ ಓವನ್‌ನಲ್ಲಿ ಮಲಗಿಸಿದ ತಾಯಿ; ಅಮೆರಿಕದಲ್ಲಿ ದುರಂತ ಅಂತ್ಯ ಕಂಡ ಪುಟ್ಟ ಕಂದಮ್ಮ

ತೊಟ್ಟಿಲು ಬದಲು ಮಗುವನ್ನ ಓವನ್‌ನಲ್ಲಿ ಮಲಗಿಸಿದ ತಾಯಿ; ಅಮೆರಿಕದಲ್ಲಿ ದುರಂತ ಅಂತ್ಯ ಕಂಡ ಪುಟ್ಟ ಕಂದಮ್ಮ

Raghavendra M Y HT Kannada

Feb 12, 2024 08:35 PM IST

ತಾಯಿಯೊಬ್ಬಳು ಮಗುವನ್ನು ತೊಟ್ಟಿಲು ಬದಲು ಓವನ್‌ನಲ್ಲಿ ಮಲಗಿಸಿದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

  • ತಾಯಿಯೊಬ್ಬಳು ಮಾಡಿದ ತಪ್ಪಿನಿಂದ ಪುಟ್ಟ ಕಂದಮ್ಮ ದುರಂತ ಅಂತ್ಯಕಂಡಿದೆ. ತೊಟ್ಟಿಲು ಬದಲು ಓವನ್‌ನಲ್ಲಿ ಮಲಗಿಸಿದ್ದೇ ಮಗುವಿನ ಸಾವಿಗೆ ಕಾರಣವಾಗಿದೆ. ಯುಎಸ್‌ನಲ್ಲಿ ಘಟನೆ ನಡೆದಿದೆ.

ತಾಯಿಯೊಬ್ಬಳು ಮಗುವನ್ನು ತೊಟ್ಟಿಲು ಬದಲು ಓವನ್‌ನಲ್ಲಿ ಮಲಗಿಸಿದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ತಾಯಿಯೊಬ್ಬಳು ಮಗುವನ್ನು ತೊಟ್ಟಿಲು ಬದಲು ಓವನ್‌ನಲ್ಲಿ ಮಲಗಿಸಿದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. (Pixabay.)

ಮಹಾ ತಾಯಿಯೊಬ್ಬಳು ಮಗುವನ್ನು ತೊಟ್ಟಿಲು ಬದಲು ಓವನ್‌ನಲ್ಲಿ ಮಲಗಿಸಿ ಸುಟ್ಟಿರುವ ಹೃದಯ ವಿದ್ರಾವಕ ಘಟನೆ ಅಮೆರಿಕದ (America Crime News) ಕಾನ್ಸಾಸ್ ನಗರದ ಮಿಸ್ಸೌರಿಯಲ್ಲಿ ಎಂಬಲ್ಲಿ ನಡೆದಿದೆ. ಪಾಪಿ ತಾಯಿಯ ಈ ಕೃತ್ಯದಲ್ಲಿ ಪುಟ್ಟ ಕಂದಮ್ಮ ಅಸುನೀಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಮರಿಯಾ ಥಾಮಸ್ ಎಂಬುವರೇ ಈ ಪುಟ್ಟ ಮಗುವಿನ ಸಾವಿಗೆ ಕಾರಣವಾದ ಆರೋಪಿತ ತಾಯಿ. ವರದಿಗಳ ಪ್ರಕಾರ, ಮಗುವಿನ ತಾಯಿ ಮರಿಯಾ ಥಾಮಸ್ ವಿರುದ್ಧ ಮಗುವನ್ನು ಹತ್ಯೆ ಮಾಡಿದ ಕಾರಣಕ್ಕಾಗಿ ಯುಎಸ್‌ನ ಎ ದರ್ಜೆಯ ಅಪರಾಧದ ಆರೋಪ ಹೊರಿಸಲಾಗಿದೆ.

ಸ್ಕೈ ನ್ಯೂಸ್ ಪ್ರಕಾರ, ಮಗು ಉಸಿರಾಡುತ್ತಿಲ್ಲ ಎಂಬ ದೂರಿಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಸಂಭಾವ್ಯ ಕಾರಣ ಹೇಳಿಕೆಯ ಪ್ರಕಾರ, ಉಸಿರಾಟ ನಿಲ್ಲಿಸಿದ್ದ ಮಗುವಿನ ಮೇಲೆ ಸುಟ್ಟ ಗಾಯಗಳು ಕಂಡು ಬಂದಿವೆ. ಬಳಿಕ ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಲಾಗಿದೆ.

ಜಾಕ್ಸನ್ ಕೌಂಟಿ ಪ್ರಾಸಿಕ್ಯೂಟರ್ ಜೀನ್ ಪೀಟರ್ಸ್ ಬೇಕರ್ ಮಾಹಿತಿ ನೀಡಿದ್ದು, ತಾಯಿ ತನ್ನ ಮಗುವನ್ನು ನಿದ್ದೆಗಾಗಿ ಮಲಗಿಸುವಾಗ ಆಕಸ್ಮಿಕವಾಗಿ ತೊಟ್ಟಿಲಿನ ಬದಲು ಓವನ್‌ನಲ್ಲಿ ಇರಿಸಿದ್ದಾರೆ ಎಂದು ತಿಳಿಸಿರುವುದಾಗಿ ಫಾಕ್ಸ್ 4 ವರದಿ ಮಾಡಿದೆ. ಮತ್ತೊಂದು ವರದಿಯ ಪ್ರಕಾರ, ಹಸಿವಿನಿಂದ ಅಳುತ್ತಿದ್ದ ಮಗುವಿಗೆ ನಿದ್ದೆಕಣ್ಣಿನಲ್ಲಿ ತಾಯಿ ಮರಿಯಾ ಮೊದಲು ಹಾಲು ಕುಡಿಸಿದ್ದಾಳೆ. ನಂತರ ತಪ್ಪಾಗಿ ತೊಟ್ಟಿಲು ಬದಲು ಓವನ್‌ನಲ್ಲಿ ಮಲಗಿಸಿಬಿಟ್ಟಿದ್ದಾಳೆ. ಈಕೆಯ ಅರಿವಿಗೆ ಬಾರದೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಆರೋಪಿತ ಮಹಿಳೆ ಮಗುವನ್ನು ಹತ್ಯೆ ಮಾಡುವ ಉದ್ದೇಶದಿಂದ ಹೀಗೆ ಮಾಡಿದ್ದಾಳಾ ಇಲ್ಲವೇ ಆಕಸ್ಮಿಕವಾಗಿ ನಡೆದಿರುವ ಘಟನೆಯೇ ಎಂಬುದರ ಬಗ್ಗೆ ಕಾನ್ಸಾಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅದೇನೆ ಇರಲಿ ತಾಯಿಯ ಕೃತ್ಯಕ್ಕೆ ಜಗತ್ತಿನಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ