logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: 4ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಬೆಳ್ಳಿಯೂ ತಟಸ್ಥ; ಇಂದಿನ ಬಂಗಾರದ ಬೆಲೆ ಹೀಗಿದೆ

Gold Rate: 4ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಚಿನ್ನದ ದರ, ಬೆಳ್ಳಿಯೂ ತಟಸ್ಥ; ಇಂದಿನ ಬಂಗಾರದ ಬೆಲೆ ಹೀಗಿದೆ

Rakshitha Sowmya HT Kannada

Jan 24, 2024 06:00 AM IST

ಜನವರಿ 24ರ ಚಿನ್ನ, ಬೆಳ್ಳಿ ಬೆಲೆ

  • Gold Rate: ಕಳೆದ 3 ದಿನಗಳಿಂದ ಚಿನ್ನದ ಬೆಲೆಯಲ್ಲಿ ಸ್ಥಿರತೆ ಇತ್ತು. ಮಂಗಳವಾರ ಬೆಳ್ಳಿ ಇಳಿಕೆ ಆಗಿತ್ತು. ಆದರೆ ಬುಧವಾರ ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ತಟಸ್ಥವಾಗಿದೆ. ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗುವುದೋ, ಇಳಿಕೆ ಕಾಣುವುದೋ ನೋಡಬೇಕು.

ಜನವರಿ 24ರ ಚಿನ್ನ, ಬೆಳ್ಳಿ ಬೆಲೆ
ಜನವರಿ 24ರ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾರದಲ್ಲಿ 2 ಬಾರಿ ಕಡಿಮೆ ಆದರೆ ಉಳಿದ 5 ದಿನಗಳು ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ ಕಳೆದ 3 ದಿನಗಳಿಂದ ಚಿನ್ನದ ಬೆಲೆ ತಟಸ್ಥವಾಗಿದೆ. ಬುಧವಾರ ಕೂಡಾ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜ್ಯ ಹಾಗೂ ಭಾರತದ ವಿವಿಧೆಡೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ನೋಡೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ಬೆಲೆ

ಬುಧವಾರ 1 ಗ್ರಾಂ ಚಿನ್ನದ ಬೆಲೆ 5,780 ರೂ ಇದೆ. 8 ಗ್ರಾಂ ಚಿನ್ನ ಖರೀದಿಸಲು 46,240 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 57,800 ಇದ್ದರೆ, 100 ಗ್ರಾಂ ಚಿನ್ನದ ಬೆಲೆ 5,78,000 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ ಚಿನ್ನಕ್ಕೆ ಇಂದು 6,305 ಬೆಲೆ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 50,440 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸಲು 63,050 ರೂ. ಕೊಡಬೇಕು. ಹಾಗೇ 100 ಗ್ರಾಂ ಚಿನ್ನದ ಬೆಲೆ 6,30,500 ರೂ. ಇದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,800 ರೂ ಇದೆ. 24 ಕ್ಯಾರೆಟ್‌ಗೆ 60,050 ರೂ. ನಿಗದಿ ಆಗಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ಬೆಲೆ

10 ಗ್ರಾಂ ಚಿನ್ನಕ್ಕೆ ಚೆನ್ನೈನಲ್ಲಿ 58,250 ರೂ., ಮುಂಬೈನಲ್ಲಿ 57,800 ರೂ., ದೆಹಲಿಯಲ್ಲಿ 57,950 ರೂ., ಕೋಲ್ಕತಾದಲ್ಲಿ 57,800 ರೂ., ಹೈದರಾಬಾದ್‌ 57,800 ರೂ., ಕೇರಳ 57,800 ರೂ., ಪುಣೆ 57,800 ರೂ., ಅಹಮದಾಬಾದ್‌ 57,850 ರೂ., ಜೈಪುರ 57,950 ರೂ., ಲಖನೌ 57,950 ರೂ., ಕೊಯಂಬತ್ತೂರಿನಲ್ಲಿ 58,250 ರೂ., ಮಧುರೈ 58,250 ರೂ. ಹಾಗೂ ವಿಜಯವಾಡದಲ್ಲಿ 57,800 ರೂ. ಇದೆ.

24 ಕ್ಯಾರೆಟ್‌ ಚಿನ್ನದ ಬೆಲೆ

10 ಗ್ರಾಂ ಚಿನ್ನಕ್ಕೆ ಚೆನ್ನೈನಲ್ಲಿ 63,550 ರೂ., ಮುಂಬೈನಲ್ಲಿ 63,050 ರೂ., ದೆಹಲಿಯಲ್ಲಿ 63,220 ರೂ., ಕೋಲ್ಕತಾದಲ್ಲಿ 63,050 ರೂ., ಹೈದರಾಬಾದ್‌ 63,050 ರೂ., ಕೇರಳ 63,050 ರೂ., ಪುಣೆ 63,050 ರೂ., ಅಹಮದಾಬಾದ್‌ 63,100 ರೂ., ಜೈಪುರ 63,220 ರೂ., ಲಖನೌ 63,220 ರೂ., ಕೊಯಮತ್ತೂರು 63,550 ರೂ., ಮದುರೈ 63,550 ರೂ., ವಿಜಯವಾಡದಲ್ಲಿ 63,050 ರೂ. ಇದೆ.

ಬೆಳ್ಳಿ ದರ

ಮಂಗಳವಾರ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿತ್ತು. 1 ಗ್ರಾಂ ಬೆಳ್ಳಿಗೆ 73 ರೂ., ಇದೆ. 8ಗ್ರಾಂ ಗೆ 584 ರೂ. 10 ಗ್ರಾಂಗೆ 730 ರೂ. 100 ಗ್ರಾಂಗೆ 7,300 ರೂ ಇದೆ. ಹಾಗೂ 1 ಕೆಜಿ ಬೆಳ್ಳಿ ದರ 73,000 ರೂ., ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ