logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pakistan Latest: ಇಮ್ರಾನ್‌ ಖಾನ್‌ ಮನೆ ಶೋಧಕ್ಕೆ ಅನುಮತಿ ಕೇಳಿರುವ ಪೊಲೀಸರು; ನಿನ್ನೆಯಿಂದೀಚೆಗೆ ಏನೇನಾಯಿತೆಂಬ ವಿವರ

Pakistan Latest: ಇಮ್ರಾನ್‌ ಖಾನ್‌ ಮನೆ ಶೋಧಕ್ಕೆ ಅನುಮತಿ ಕೇಳಿರುವ ಪೊಲೀಸರು; ನಿನ್ನೆಯಿಂದೀಚೆಗೆ ಏನೇನಾಯಿತೆಂಬ ವಿವರ

HT Kannada Desk HT Kannada

May 19, 2023 01:40 PM IST

ಪಾಕಿಸ್ತಾನದ ಹೈದರಾಬಾದ್‌ ಪ್ರಾಂತ್ಯದಲ್ಲಿ ಸೇನೆಯನ್ನು ಬೆಂಬಲಿಸಿ, ಇಮ್ರಾನ್‌ ಖಾನ್‌ ಮತ್ತು ಬೆಂಬಲಿಗರ ವಿರುದ್ಧ ಪ್ರತಿಭಟನೆ ನಡೆಸಿದ ಜನ.

  • Pakistan Latest: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌  ಖಾನ್‌ಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಮೇ 9ರ ಹಿಂಸಾಚಾರ ಪ್ರಕರಣವನ್ನು ಬಹಿರಂಗವಾಗಿ ಖಂಡಿಸುವಂತೆ ಪಾಕಿಸ್ತಾನದ ಅಧ್ಯಕ್ಷರು ಇಮ್ರಾನ್‌ ಖಾನ್‌ ಮೇಲೆ ಒತ್ತಡ ಹೇರಿದ್ದಾರೆ. ಈ ನಡುವೆ ಅವರ ಮನೆ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.

ಪಾಕಿಸ್ತಾನದ ಹೈದರಾಬಾದ್‌ ಪ್ರಾಂತ್ಯದಲ್ಲಿ ಸೇನೆಯನ್ನು ಬೆಂಬಲಿಸಿ, ಇಮ್ರಾನ್‌ ಖಾನ್‌ ಮತ್ತು ಬೆಂಬಲಿಗರ ವಿರುದ್ಧ ಪ್ರತಿಭಟನೆ ನಡೆಸಿದ ಜನ.
ಪಾಕಿಸ್ತಾನದ ಹೈದರಾಬಾದ್‌ ಪ್ರಾಂತ್ಯದಲ್ಲಿ ಸೇನೆಯನ್ನು ಬೆಂಬಲಿಸಿ, ಇಮ್ರಾನ್‌ ಖಾನ್‌ ಮತ್ತು ಬೆಂಬಲಿಗರ ವಿರುದ್ಧ ಪ್ರತಿಭಟನೆ ನಡೆಸಿದ ಜನ. (AP)

ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನದ ವಿಚಾರ ಅಲ್ಲಿ ದಿನೇದಿನೆ ಇನ್ನಷ್ಟು ಬಿಕ್ಕಟ್ಟಿನ ಸನ್ನಿವೇಶವನ್ನು ಉಂಟುಮಾಡತೊಡಗಿದೆ. ಉಗ್ರರಿಗೆ ಆ‍ಶ್ರಯ ನೀಡಲಾಗಿದೆ ಎಂಬ ಆರೋಪದ ಮೇರೆಗೆ ಪಾಕಿಸ್ತಾನ ಪೊಲೀಸರು, ಇಮ್ರಾನ್‌ ಖಾನ್‌ ಮನೆಯ ಶೋಧಕ್ಕೆ ಅನುಮತಿ ಕೋರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಇಮ್ರಾನ್‌ ಖಾನ್‌ ಮನೆಯ ಶೋಧಕ್ಕೆ ಅನುಮತಿ ಕೋರಿದ ಪೊಲೀಸರು ಸಕಾರಣವನ್ನೂ ನೀಡಿದ್ದೂ, ಕಳೆದವಾರ ಗಲಭೆಯ ಸಂದರ್ಭದಲ್ಲಿ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಿದವರನ್ನು ಬಂಧಿಸಬೇಕಾಗಿದೆ. ಇದಕ್ಕಾಗಿ ಇಮ್ರಾನ್‌ ಖಾನ್‌ ಮತ್ತು ಅವರ ಬೆಂಬಲಿಗರ ಮನೆ ಶೋಧಿಸಲು ಪೊಲೀಸರು ಅನುಮತಿ ಕೋರುತ್ತಿದ್ದಾರೆ. ಇದು ಮಾಜಿ ಪ್ರಧಾನಿ ಮತ್ತು ಅಧಿಕಾರಿಗಳ ನಡುವಿನ ಉದ್ವಿಗ್ನತೆಯನ್ನು ತಣ್ಣಗಾಗಿಸುವ ಕ್ರಮ ಎಂದು ಹೇಳಲಾಗುತ್ತಿದೆ.

ಲಾಹೋರ್‌ ಪ್ರಾಂತೀಯ ಸರ್ಕಾರದ ಸಚಿವ ಅಮೀರ್ ಮಿರ್ ಪ್ರಕಾರ ಶುಕ್ರವಾರದ ಪ್ರಾರ್ಥನೆಯ ನಂತರ ಪಂಜಾಬ್‌ನಲ್ಲಿರುವ ಖಾನ್ ಅವರ ಲಾಹೋರ್ ನಿವಾಸಕ್ಕೆ ನಿಯೋಗವನ್ನು ಕಳುಹಿಸಲಾಗಿದೆ. ಇದಕ್ಕೂ ಮೊದಲು, ಪಂಜಾಬ್ ಸರ್ಕಾರವು 70 ವರ್ಷದ ಇಮ್ರಾನ್‌ ಖಾನ್‌ಗೆ ಮನೆ ಶೋಧಕ್ಕೆ ಅನುಮತಿ ನೀಡುವುದಕ್ಕೆ ಗುರುವಾರ ಗಡುವನ್ನು ನೀಡಿತ್ತು. ಕಳೆದ ವಾರದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಡಜನ್‌ಗಟ್ಟಲೆ ಜನರನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಸೂಚಿಸಿತ್ತು. ಆದರೆ ಅದನ್ನು ಇಮ್ರಾನ್‌ ಖಾನ್‌ ತಿರಸ್ಕರಿಸಿದ್ದರು.

ಮಾಜಿ-ಕ್ರಿಕೆಟ್ ತಾರೆಯ ಮನೆಯ ಸುತ್ತ ಭಾರೀ ಭದ್ರತೆ ಇದ್ದು, ಇದರ ಹೊರ ಆವರಣದಲ್ಲಿ ಪೊಲೀಸರು ಸುತ್ತುವರಿದಿದ್ದಾರೆ. ಇಮ್ರಾನ್‌ ಖಾನ್‌ ಈ ಸಂಬಂಧ ಸರಣಿ ಟ್ವೀಟ್‌ ಮಾಡಿ, ಮತ್ತೆ ಬಂಧಿಯಾಗುವ ಕಳವಳವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ತನ್ನ ನಿವಾಸಕ್ಕೆ ಬರುವಂತೆ ಮಾಧ್ಯಮದವರನ್ನು ಆಹ್ವಾನಿಸಿದ್ದು, ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿದ್ದರು.

ಕಳೆದ ವಾರದ ಹಿಂಸಾಚಾರದ ವೇಳೆ 8 ಜನ ಮೃತಪಟ್ಟಿದ್ದರು. ಈ ಹಿಂಸಾಚಾರವು ಇಮ್ರಾನ್‌ ಖಾನ್‌ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವೆ ಸಂಭವಿಸಿತ್ತು. ಕಳೆದ ವಾರ ಇಮ್ರಾನ್‌ ಖಾನ್‌ ಅವರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಿದಾಗ ಈ ಹಿಂಸಾಚಾರ ಸಂಭವಿಸಿತ್ತು. ಹಿಂಸಾಚಾರದಲ್ಲಿ ಸೇನಾ ಆಸ್ತಿಪಾಸ್ತಿಗೆ ಹಾನಿ ಎಸಗಿದವರನ್ನು ಬಂಧಿಸಿ, ಶಿಕ್ಷೆಗೊಳಪಡಿಸಲಾಗುವುದು ಎಂದು ಸೇನೆ ಹೇಳಿತ್ತು.

ನಿನ್ನೆಯಿಂದೀಚೆಗೆ ನಡೆದ ಪ್ರಮುಖ ವಿದ್ಯಮಾನಗಳು

ಪಾಕಿಸ್ತಾನದಲ್ಲಿ ನಿನ್ನೆ(ಮೇ18) ಯಿಂದೀಚೆಗೆ ನಡೆದ ವಿದ್ಯಮಾನಗಳ ವಿವರ ಅಲ್ಲಿನ ಸ್ಥಳೀಯ ಕಾಲಮಾನಕ್ಕೆ ಅನುಗುಣವಾಗಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಅದು ಹೀಗಿದೆ -

ಉಗ್ರ ಕೃತ್ಯಗಳಿಗೆ ಸಂಬಂಧಿಸಿ ಜಾಮೀನು ಕೋರಿ ಕೋರ್ಟ್‌ ಮೊರೆ ಹೋದ ಇಮ್ರಾನ್‌ ಖಾನ್‌ (ಬೆಳಗ್ಗೆ 10.20).

ಖಾನ್ ಅವರು ಎದುರಿಸುತ್ತಿರುವ ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಲಾಹೋರ್‌ನ ವಿಶೇಷ ನ್ಯಾಯಾಲಯದಿಂದ ಜಾಮೀನು ಕೋರುತ್ತಿದ್ದಾರೆ ಎಂದು ಅವರ ಕಾನೂನು ತಂಡದ ವಕೀಲ ಸಲ್ಮಾನ್ ಸಫ್ದರ್ ಫೋನ್ ಮೂಲಕ ಹೇಳಿರುವುದಾಗಿ ಬ್ಲೂಮ್‌ಬರ್ಗ್‌ ವರದಿ ಹೇಳಿದೆ.

ಖಾನ್ ಈ ಹಿಂದೆ ಆರೋಪಗಳನ್ನು ನಿರಾಕರಿಸಿದರು ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದ್ದರು. ಮಾಜಿ ಕ್ರಿಕೆಟಿಗ ಕಳೆದ ವರ್ಷ ಅಧಿಕಾರದಿಂದ ವಜಾಗೊಂಡ ನಂತರ ಭ್ರಷ್ಟಾಚಾರದಿಂದ ಕೊಲೆಯವರೆಗೆ ಸುಮಾರು 150 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇಂದು ತಡವಾಗಿ ಅವರು ಲಾಹೋರ್‌ ಹೈಕೋರ್ಟ್‌ಗೆ ಆಗಮಿಸುವ ನಿರೀಕ್ಷೆ ಇದೆ. ಅನೇಕ ಕೇಸ್‌ಗಳಿಂದ ತಡೆ ಮತ್ತು ಜಾಮೀನು ರಕ್ಷಣೆ ಪಡೆಯಲು ಇಮ್ರಾನ್‌ ಖಾನ್‌ ಈ ಪ್ರಯತ್ನ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಿನ್ನೆ ತಡರಾತ್ರಿ (11.35) ಪಾಕಿಸ್ತಾನದ ಅಧ್ಯಕ್ಷ ಆರಿಫ್‌ ಅಲ್ವಿ, ಮೇ9 ರ ಹಿಂಸಾಚಾರವನ್ನು ಬಹಿರಂಗವಾಗಿ ಖಂಡಿಸಬೇಕು ಎಂದು ಇಮ್ರಾನ್‌ ಖಾನ್‌ ಅವರನ್ನು ಆಗ್ರಹಿಸಿದರು. ಈ ಘಟನೆಯಲ್ಲಿಯೇ ಸೇನಾ ಮತ್ತು ಸರ್ಕಾರದ ಆಸ್ತಿಪಾಸ್ತಿ ಹಾನಿಗೀಡಾಗಿದ್ದವು. 8 ಜನ ಕೊಲ್ಲಲ್ಪಟ್ಟಿದ್ದರು.

ಇಂದು ಇಮ್ರಾನ್‌ ಖಾನ್‌ ಅವರ ಮನೆಯ ಶೋಧಕ್ಕೆ ಪೊಲೀಸರು, ಸ್ಥಳೀಯ ಅಧಿಕಾರಿಗಳು ಮುಂದಾಗುವ ಸಾಧ್ಯತೆ ಇದೆ. ಬುಧವಾರ ರಾತ್ರಿ ಇಮ್ರಾನ್‌ ಖಾನ್‌ ಅವರ ಕನಿಷ್ಠ 8 ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದರು. ಈ ನಡುವೆ, ಇಮ್ರಾನ್‌ ಖಾನ್‌ ಪಕ್ಷದ ಕೆಲವು ನಿಷ್ಠ ನಾಯಕರು ಸಂಭಾವ್ಯ ಅಪಾಯವನ್ನು ಮನಗಂಡು ಪಕ್ಷವನ್ನೇ ತೊರೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ