logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pfi Banned: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಿಷೇಧಕ್ಕೆ ಯಾರು ಏನಂದರು? ಇಲ್ಲಿದೆ ವಿವಿಧ ಅಭಿಪ್ರಾಯ

PFI Banned: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಿಷೇಧಕ್ಕೆ ಯಾರು ಏನಂದರು? ಇಲ್ಲಿದೆ ವಿವಿಧ ಅಭಿಪ್ರಾಯ

HT Kannada Desk HT Kannada

Sep 28, 2022 02:16 PM IST

PFI Banned: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಿಷೇಧಕ್ಕೆ ಯಾರು ಏನಂದರು?(PTI)

    •  ದೇಶದಲ್ಲಿ ಐದು ವರ್ಷ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾಕ್ಕೆ ನಿಷೇಧ ಹೇರಳಾಗಿದೆ. ಪಿಎಫ್‌ಐ ನಿಷೇಧದ ಕುರಿತು ಸಹಜವಾಗಿ ಬಿಜೆಪಿ ರಾಜಕಾರಣಿಗಳು ಮತ್ತು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಇತರೆ ಪಕ್ಷದವರಲ್ಲಿ ಕೆಲವರು ಆರ್‌ಎಸ್‌ಎಸ್‌ ಅನ್ನೂ ನಿಷೇಧಿಸಬೇಕು ಎಂದಿದ್ದಾರೆ. ಇನ್ನು ಕೆಲವರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಈ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
PFI Banned: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಿಷೇಧಕ್ಕೆ ಯಾರು ಏನಂದರು?(PTI)
PFI Banned: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಿಷೇಧಕ್ಕೆ ಯಾರು ಏನಂದರು?(PTI) (HT_PRINT)

ಬೆಂಗಳೂರು: ದೇಶದಲ್ಲಿ ಐದು ವರ್ಷ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾಕ್ಕೆ ನಿಷೇಧ ಹೇರಳಾಗಿದೆ. ಪಿಎಫ್‌ಐ ನಿಷೇಧದ ಕುರಿತು ಸಹಜವಾಗಿ ಬಿಜೆಪಿ ರಾಜಕಾರಣಿಗಳು ಮತ್ತು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಇತರೆ ಪಕ್ಷದವರಲ್ಲಿ ಕೆಲವರು ಆರ್‌ಎಸ್‌ಎಸ್‌ ಅನ್ನೂ ನಿಷೇಧಿಸಬೇಕು ಎಂದಿದ್ದಾರೆ. ಇನ್ನು ಕೆಲವರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಈ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.́

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಬಸವರಾಜ ಬೊಮ್ಮಾಯಿ

ನಿಷೇಧಿತ ಕೆ. ಎಫ್. ಡಿ ಮತ್ತು ಸಿಮಿ ಸಂಘಟನೆಗಳ ರೂಪಾಂತರಿಯೇ ಈ ಪಿ.ಎಫ್.ಐ. ಈ ದೇಶದ ಕಾನೂನು ಹಾಗೂ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಈ ಸಂಘಟನೆ, ವಿದೇಶಗಳಿಂದ ಬರುವ ಆಜ್ಞೆಯ ಪ್ರಕಾರ ಹಲವಾರು ವಿಧ್ವಂಸಕ ಚಟುವಟಿಕೆಯಲ್ಲಿ ಭಾಗಿಯಾಗಿದೆ.

ಈ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ. ಈ ಮಹತ್ವದ ಕ್ರಮವನ್ನು ಕೈಗೊಂಡ ಪ್ರಧಾನಿ ಶ್ರೀ @narendramodi , ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ‌.

ಅಸರುದ್ಧೀನ್‌ ಓವೈಸಿ

ಪಿಎಫ್‌ಐ ನಿಷೇಧಿಸಲಾಗಿದೆ. ಆದರೆ, ಖಾಜಾ ಅಜ್ಮೇರಿ ಬಾಂಬ್‌ ಬ್ಲಾಸ್ಟ್‌ಗೆ ಸಂಬಂಧಪಟ್ಟ ಸಂಘಟನೆಗಳನ್ನು ಏಕೆ ಬ್ಯಾನ್‌ ಮಾಡಲಾಗಿಲ್ಲ ಎನ್ನುವುದು ಸೇರಿದಂತೆ ಹಲವು ಅಭಿಪ್ರಾಯಗಳನ್ನು ಅಸರುದ್ಧೀನ್‌ ಓವೈಸಿ ವ್ಯಕ್ತಪಡಿಸಿದ್ದಾರೆ.

ಆರೀಫ್‌ ಅಯ್ಯುಬ್‌

ಪಿಎಫ್‌ಐ ಬ್ಯಾನ್‌ ಆಯ್ತು. ಪಾರ್ಲಿಮೆಂಟ್‌ ಮತ್ತು ರಾಜ್ಯ ಶಾಸಕಾಂಗದಲ್ಲಿ ಮುಸ್ಲಿಂಮರು ಕಡೆಗಣಿಸಲ್ಪಟ್ಟಿದ್ದಾರೆ. ಕಾನೂನು ಸಂಸ್ಥೆಗಳಲ್ಲಿಯೂ ಮುಸ್ಲಿಂ ಪ್ರಾಬಲ್ಯ ಅತ್ಯಂತ ಕಡಿಮೆ ಇದೆ. ನ್ಯಾಯಕ್ಕಾಗಿ ಹೋರಾಡುವ ಮುಸ್ಲಿಂಮರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಅಥವಾ ಜೈಲಿಗೆ ಕಳುಹಿಸಲಾಗುತ್ತಿದೆ.

ಲಾಲು ಪ್ರಸಾದ್‌ ಯಾದವ್‌

ಪಿಎಫ್‌ಐ ಮಾತ್ರವಲ್ಲ ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನೂ ಬ್ಯಾನ್‌ ಮಾಡಬೇಕು.

ಅಭಿಪ್ರಾಯಗಳ ಸಾಗರ

    ಹಂಚಿಕೊಳ್ಳಲು ಲೇಖನಗಳು