logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಖಾಲಿ ಖಜಾನೆ, ಗ್ಯಾರಂಟಿಗಳು ಜಾರಿಯ ಒತ್ತಡ; ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಂದಿನ ಕಠಿಣ ಸವಾಲುಗಳು

ಖಾಲಿ ಖಜಾನೆ, ಗ್ಯಾರಂಟಿಗಳು ಜಾರಿಯ ಒತ್ತಡ; ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಂದಿನ ಕಠಿಣ ಸವಾಲುಗಳು

Raghavendra M Y HT Kannada

Dec 14, 2023 03:23 PM IST

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೇವಂತ್ ರೆಡ್ಡಿ ಅವರು ವಿಧಾನಸಬೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

  • 3 ಲಕ್ಷ ಕೋಟಿ ಸರ್ಕಾರದ ಸಾಲ, ಖಜಾನೆ ಖಾಲಿಯ ನಡುವೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಹೇಗೆ ಜಾರಿ ಮಾಡುತ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೇವಂತ್ ರೆಡ್ಡಿ ಅವರು ವಿಧಾನಸಬೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೇವಂತ್ ರೆಡ್ಡಿ ಅವರು ವಿಧಾನಸಬೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಐದು ದಿನಗಳ ಬಳಿಕ ರೇವಂತ್ ರೆಡ್ಡಿ ಅವರನ್ನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಈ 5 ದಿನಗಳ ಅವಧಿಯಲ್ಲಿ ರೆಡ್ಡಿ ಅವರು ಸಿಎಂ ಆಕಾಂಕ್ಷಿಗಳು ಸೇರಿದಂತೆ ಎದುರಾಗಿದ್ದ ಎಲ್ಲಾ ಅಡೆತೆಡೆಗಳನ್ನು ಮೆಟ್ಟಿ ನಿಂತು ಅಂತಿಮವಾಗಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಆದರೆ ರೆಡ್ಡಿ ಅವರ ಮುಂದೆ ಹತ್ತಾರು ಸವಾಲುಗಳಿವೆ. ಮೊದಲೆನೆಯದಾಗಿ ಇವರು ಯಾವುದೇ ಯೋಜನೆ ಜಾರಿಗೆ ತರಬೇಕಾದರೂ ಹಣಬೇಕು. ಆದರೆ ಸರ್ಕಾರದ ಖಜಾನೆ ಖಾಲಿ ಇದೆ. ಸಾಲದ ಹೊರೆ ಲಕ್ಷ ಕೋಟಿಗಳ ಲೆಕ್ಕದಲ್ಲಿದೆ. ಪ್ರಮುಖವಾಗಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತಂದು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಹಾದಿ ಹೂ, ಮುಳ್ಳಿನಂತಾಗಿದೆ.

ತೆಲಂಗಾಣ ರಾಜ್ಯದ ಒಟ್ಟಾರೆ ಸಾಲ 3.14 ಲಕ್ಷ ಕೋಟಿ ರೂಪಾಯಿ ಇದೆ. ಇದರ ನಡುವೆ ಈ ಹೊಸ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಪ್ರಾಥಮಿಕ ಅಂದಾನಿನ ಪ್ರಕಾರ 70,000 ಕೋಟಿ ರೂಪಾಯಿ ಬೇಕಿದೆ. ಮಹಾಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ನೀಡಬೇಕು. ಅಡುಗೆ ಗ್ಯಾಸ್ ಸಿಲಿಂಡರ್‌ಗೆ 500 ರೂಪಾಯಿ ಸಬ್ಸಿಡಿ ಕೊಡಬೇಕು. ತೆಲಂಗಾಣದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ವಾರ್ಷಿಕವಾಗಿ ಸುಮಾರು 18,000 ಕೋಟಿ ರೂಪಾಯಿ ಖರ್ಚಾಗಲಿದೆ.

ಯಾವ ಯೋಜನೆಗೆ ಎಷ್ಟು ಹಣ ಬೇಕಾಗುತ್ತೆ?

ಇನ್ನ ರೈತರಿಗೆ ವಾರ್ಷಿಕವಾಗಿ ಪ್ರತಿ ಎಕರೆಗೆ 15,000, ಗೇಣಿದಾರ ರೈತರಿಗೆ 12,000, ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 500 ರೂಪಾಯಿ ಬೋನಸ್ ಸೇರಿದಂತೆ ರೈತ ಭರೋಸಾ ಖಾತರಿಗೆ ವಾರ್ಷಿಕವಾಗಿ 30,000 ಕೋಟಿ ರೂಪಾಯಿ, ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ.

ರಾಜ್ಯವು ಒಟ್ಟಾರೆ 3.14 ಲಕ್ಷ ಕೋಟಿ ರೂಪಾಯಿ ಸಾಲವನ್ನು ಹೊಂದಿದೆ ಮತ್ತು ಪ್ರಾಥಮಿಕ ಅಂದಾಜಿನ ಪ್ರಕಾರ ಆರು ಭರವಸೆಗಳನ್ನು ಜಾರಿಗೆ ತರಲು ಹೆಚ್ಚುವರಿ 70,000 ಕೋಟಿ ರೂ. ಮಹಾಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಮಾಸಿಕ 2,500 ರೂ. ಭತ್ಯೆ, 500 ರೂ.ಗೆ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಮತ್ತು ರಾಜ್ಯಾದ್ಯಂತ ಬಸ್‌ಗಳಲ್ಲಿ ಉಚಿತ ಪ್ರಯಾಣದ ಮೂಲಕ ಬೊಕ್ಕಸಕ್ಕೆ ವಾರ್ಷಿಕ ಸುಮಾರು 18,000 ಕೋಟಿ ರೂಪಾಯಿ ಹೊರೆಯಾಗಲಿದೆ.

ರೈತ ಬರೋಸಾ ಗ್ಯಾರಂಟಿ ಯೋಜನೆಯಡಿಯಲ್ಲಿ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕವಾಗಿ 15,000 ರೂಪಾಯಿ, ಗೇಣಿದಾರ ರೈತರಿಗೆ 12,000 ರೂಪಾಯಿ ಮತ್ತು ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ರೂ. 500 ಬೋನಸ್ ಭರವಸೆ ನೀಡಬೇಕು. ಈ ಯೋಜನೆಗಳಲ್ಲಿ ಸುಮಾರು 30,000 ಕೋಟಿ ರೂಪಾಯಿ ಬೇಕಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಗೃಹ ಜ್ಯೋತಿ ಯೋಜನೆಯು 200 ರವರೆಗೆ ಉಚಿತ ವಿದ್ಯುತ್ ಭರವಸೆ ನೀಡಲಾಗಿದೆ. ಈ ಗ್ಯಾರಂಟಿಗೆ ವಾರ್ಷಿಕವಾಗಿ 7,000 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. 45 ರಿಂದ 60 ವರ್ಷದೊಳಗಿನ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸಾಮಾಜಿಕ ಭದ್ರತಾ ಪಿಂಚಣಿಯಾಗಿ ತಿಂಗಳಿಗೆ 4,000 ರೂಪಾಯಿ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ಯೋಜನೆಯನ್ನು ಪೂರೈಸಲು ವಾರ್ಷಿಕವಾಗಿ ಅಂದಾಜು 16,000 ಕೋಟಿ ರೂಪಾಯಿಗಳ ವೆಚ್ಚವಾಗಲಿದೆ.

ಆದಾಯಕ್ಕೆ ಸಮನಾದ ವೆಚ್ಚ; ಹೊಸ ಯೋಜನೆಗಳಿಗೆ ದುಡ್ಡು ಹೇಗೆ?

ಇನ್ನು ತೆಲಂಗಾಣದಲ್ಲಿ 2022-23ರ ಬಜೆಟ್ ಅಂದಾಜಿನ ಪ್ರಕಾರ, ವಾರ್ಷಿಕವಾಗಿ ರಾಜ್ಯದಲ್ಲಿ 1.72 ಲಕ್ಷ ರೂಪಾಯಿ ಆದಾಯದ ವೆಚ್ಚ ಇದೆ. ಬಹುತೇಕ ಇದು ಸರ್ಕಾರದ ವಾರ್ಷಿಕ ಆದಾಯಕ್ಕೆ ಸಮನಾಗಿರುತ್ತದೆ.

ಕಾಂಗ್ರೆಸ್ ನೀಡಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ಗೊಳಿಸಲು ಹೆಚ್ಚುವರಿ ಆದಾಯ ಬೇಕೇ ಬೇಕು. ಆದರೆ ಆದಾಯದ ಮೂಲವೇ ಇಲ್ಲದಿರುವುದು ಸಿಎಂ ರೇವಂತ್ ರೆಡ್ಡಿ ಅವರಿಗೆ ತುಂಬಾ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಹೀಗಾಗಿ ಸಾಲವನ್ನು ಎತ್ತುವ ನಿರ್ಧಾರ ಮಾಡಬಹುದು.

ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐನ ಇತ್ತೀಚಿನ ವರದಿಯ ಪ್ರಕಾರ, 2022ರ ಮಾರ್ಚ್ ಅಂತ್ಯದ ವೇಳೆಗೆ ತೆಲಂಗಾಣದ ಒಟ್ಟಾರೆ ಸಾಲ 3,14,852.9 ಕೋಟಿ ರೂಪಾಯಿ. ಕಳೆದ ಒಂಬತ್ತೂವರೆಗೆ ವರ್ಷಗಗಳಲ್ಲಿ ಹಲವಾರು ಸರ್ಕಾರಿ ಸ್ವಾಮ್ಯದ ಕಾರ್ಪೊರೇಷನ್‌ಗಳ ಮೂಲಕ ಸರ್ಕಾರ ಸ್ಟ್ಯಾಂಡಿಂಗ್ ಗ್ಯಾರಂಟಿ ಮಾಡಿದ ಬಜೆಟ್‌ನ ಹೊರತಾಗಿ ಸಾಲ 1,35,282.5 ಕೋಟಿ ರೂಪಾಯಿ.

ಕಾಂಗ್ರೆಸ್ ಭರವಸೆಗಳ ಮೂಲಕ ಜನರನ್ನು ಮರಳು ಮಾಡಿದೆ-ಕೆಟಿಆರ್

ಇಷ್ಟೆಲ್ಲಾ ಹಣಕಾಸಿನ ಸಮಸ್ಯೆ ಇದ್ದಾಗ ಹೊಸ ಯೋಜನೆಗಳನ್ನು ಜಾರಿಗೆ ತರಲು ಹೆಚ್ಚುವರಿ ಅನುದಾನವನ್ನು ಹೇಗೆ ಕ್ರೂಢೀಕರಿಸುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಐಟಿ ಸಚಿವ ಡಿ ಶ್ರೀಧರ್ ಬಾಬು, ಸರ್ಕಾರ ಹೊಸ ಮಾರ್ಗಗಳನ್ನು ನೋಡುತ್ತಿದೆ ಎಂದಿದ್ದಾರೆ.

ಮಾಜಿ ಸಚಿವ ಹಾಗೂ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್, ಹೊಸ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಜವಾದ ಆಟ ಈಗ ಶುರುವಾಗಿದೆ. ಸರ್ಕಾರ ಹೇಗೆ ನಡೆಯುತ್ತದೆ ಎಂದು ನೋಡುತ್ತೇವೆ. ಕಾಂಗ್ರೆಸ್ ತನ್ನ ಭರವಸೆಗಳ ಮೂಲಕ ಜನರನ್ನು ಮರಳು ಮಾಡಿದೆ ಎಂದು ಕಿಡಿ ಕಾರಿದ್ದಾರೆ. ಅದೇನೇ ಇರಲಿ ರೇವಂತ್ ರೆಡ್ಡಿ ಅವರು ತೆಲಂಗಾಣದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಕ್ಷದ ಯೋಜನೆಗಳ ಜಾರಿಗೆ ಹಣವನ್ನು ಹೇಗೆ ಹೊಂದಿಸಲಿದ್ದಾರೆ ಎಂಬುದು ಸದ್ಯಕ್ಕೆ ಇರುವ ಕುತೂಹಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ