Bhagwant Mann: ನನ್ನ ಲಿವರ್ ಏನು ಕಬ್ಬಿಣದಿಂದ ಮಾಡಿದ್ದಾ ಹಗಲಿರುಳು ಕುಡಿಯೋಕೆ; ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್
Jun 18, 2023 08:01 PM IST
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್
- Punjab CM Bhagwant Mann: ಜನವರಿ 2019 ರಲ್ಲಿ, ಭಗವಂತ್ ಮಾನ್ ಸಾರ್ವಜನಿಕ ರ್ಯಾಲಿಯಲ್ಲಿ ತನ್ನ ತಾಯಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಮದ್ಯಪಾನವನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದಾಗ್ಯೂ, ಆಲ್ಕೋಹಾಲ್ ಟ್ಯಾಗ್ ಅವರನ್ನು ಬಿಡಲಿಲ್ಲ.
ಚಂಡಿಗಢ (ಪಂಜಾಬ್): ನನ್ನ ಲಿವರ್ ಏನು ಕಬ್ಬಿಣದಿಂದ ಮಾಡಿದ್ದಾ ಹಗಲು ರಾತ್ರಿ ಕುಡಿಯೋಕೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಪ್ರಶ್ನಿಸಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಹೀಗೆ ಹೇಳೋಕೆ ಕಾರಣ ಇಲ್ಲಿದೆ.
ದೂರದರ್ಶನದ ಸಂದರ್ಶನವೊಂದರಲ್ಲಿ ಮಾತನಾಡಿದ ಭಗವಂತ್ ಮಾನ್, ತಮ್ಮ ಮೇಲೆ ಮದ್ಯಪಾನದ ಆರೋಪಗಳಿವೆ ಎಂದು ಹೇಳಿದರು. ಕಳೆದ 12 ವರ್ಷಗಳಿಂದ ನಾನು ಹಗಲು-ರಾತ್ರಿ ಇಡೀ ದಿನ ಕುಡಿತೀನಿ ಎಂಬ ಆರೋಪ ನನ್ನ ಮೇಲಿದೆ. ನನಗೆ ಒಂದು ವಿಚಾರ ಹೇಳಿ, ಒಬ್ಬ ವ್ಯಕ್ತಿ 12 ವರ್ಷಗಳಿಂದ ಹಗಲಿರುಳು ಕುಡಿಯುತ್ತಿದ್ದರೆ ಅವನು ಇನ್ನೂ ಬದುಕಿರಬಹುದೇ? ಅವರು ಜೀವಂತವಾಗಿರಲು ಸಾಧ್ಯವಿಲ್ಲ ಅಲ್ವಾ? ಹಾಗಿದ್ರೆ ನನ್ನ ಲಿವರ್ ಏನು ಕಬ್ಬಿಣದಿಂದ ಮಾಡಿದ್ದಾ? ಎಂದು ಕೇಳಿದರು.
ನನ್ನ ವಿರುದ್ಧ ತೋರಿಸಲು ಏನೂ ಇಲ್ಲದಿರುವಾಗ ಅವರು (ವಿರೋಧ ಪಕ್ಷದವರು) ನಾನು ಯಾವಾಗಲೂ ಕುಡಿಯುತ್ತೇನೆ ಅಂತ ಗೂಬೆ ಕೂರಿಸುತ್ತಾರೆ. ನಾನು ಬೆಳಿಗ್ಗೆ 6 ಗಂಟೆಗೇ ಎದ್ದು ಮೊದಲ ಫೈಲ್ ಅನ್ನು ಕೇಳುತ್ತೇನೆ. ಕಳೆದ 70 ವರ್ಷಗಳಲ್ಲಿ ಆಗದ ಕೆಲಸಗಳನ್ನು ಕಳೆದ ಒಂದೂವರೆ ವರ್ಷಗಳಲ್ಲಿ ನಾನು ಈಗಾಗಲೇ ಪೂರ್ಣಗೊಳಿಸಿದ್ದೇನೆ ಎಂದು ಆಪ್ ಕಿ ಅದಾಲತ್ ಶೋನಲ್ಲಿ ಹೇಳಿದ್ದಾರೆ.
ಜನವರಿ 2019 ರಲ್ಲಿ, ಭಗವಂತ್ ಮಾನ್ ಸಾರ್ವಜನಿಕ ರ್ಯಾಲಿಯಲ್ಲಿ ತನ್ನ ತಾಯಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಮದ್ಯಪಾನವನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದಾಗ್ಯೂ, ಆಲ್ಕೋಹಾಲ್ ಟ್ಯಾಗ್ ಅವರನ್ನು ಬಿಡಲಿಲ್ಲ, ಏಕೆಂದರೆ ಕಳೆದ ವರ್ಷ ಭಗವಂತ್ ಮಾನ್ ಅವರು ಜರ್ಮನಿಯಲ್ಲಿ ತುಂಬಾ ಕುಡಿದಿದ್ದರು, ಹೀಗಾಗಿ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಅವರು ನಡೆದಾಡಲೂ ಸಾಧ್ಯವಾಗದಷ್ಟು ಪಾನಮತ್ತರಾಗಿದ್ದರುಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಆದರೆ ಎಎಪಿ ಈ ಆರೋಪಗಳನ್ನು ತಳ್ಳಿಹಾಕಿತ್ತು.
ಸಂಸತ್ತಿನಲ್ಲಿ, ಅಂತ್ಯಸಂಸ್ಕಾರದ ವೇಳೆ ಮತ್ತು ಗುರುದ್ವಾರದಲ್ಲಿ ಭಗವಂತ್ ಮಾನ್ ಕುಡಿದಿದ್ದರು ಎಂಬ ಆರೋಪಗಳೂ ಭಗವಂತ್ ಮಾನ್ ಮೇಲಿದೆ.
Dreaming of Someone Dying: ಕನಸುಗಳಿಗೂ ನಮ್ಮ ನಿಜ ಜೀವನಕ್ಕೂ ಬಹಳ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಹಾಗಂತ ಕನಸಲ್ಲಿ ಕಂಡಿದ್ದೆಲ್ಲ ನಿಜ ಆಗಬೇಕೆಂದೇನಿಲ್ಲ. ನಿಮ್ಮ ಪ್ರೀತಿ ಪಾತ್ರರು ಸಾಯುವ ಕನಸನ್ನು ನೀವು ಕಂಡರೆ ಇದರರ್ಥ ಏನು? ಕೆಲವೊಮ್ಮೆ ನಿಮ್ಮ ಕನಸಲ್ಲಿ ನೀವೇ ಮೃತಪಡುತ್ತೀರಿ. ಇದು ಒಳ್ಳೆಯದೋ? ಕೆಟ್ಟದ್ದೋ? ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ