logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rss Meet: ಪಾಣಿಪತ್‌ ಸಭೆಯಲ್ಲಿ ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಸೂಚಿ ನಿರ್ಧಾರ: ಸಂಘದ ಸಂಗ ಬಯಸುವವರ ಸಂಖ್ಯೆ ಹೆಚ್ಚಳ

RSS Meet: ಪಾಣಿಪತ್‌ ಸಭೆಯಲ್ಲಿ ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಸೂಚಿ ನಿರ್ಧಾರ: ಸಂಘದ ಸಂಗ ಬಯಸುವವರ ಸಂಖ್ಯೆ ಹೆಚ್ಚಳ

HT Kannada Desk HT Kannada

Mar 11, 2023 01:53 PM IST

ಪತ್ರಿಕಾಗೋಷ್ಠಿ

    • ಮಾರ್ಚ್ 12 ರಿಂದ ಮಾರ್ಚ್ 14ರವರೆಗೆ ಪಾಣಿಪತ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ವಾರ್ಷಿಕ ಸಮ್ಮೇಳನ ನಡೆಯಲಿದೆ. ಆರ್‌ಎಸ್‌ಎಸ್‌ 2025ರಲ್ಲಿ100 ವರ್ಷಗಳನ್ನು ಪೂರೈಸಲಿದ್ದು, ಶತಮಾನೋತ್ಸವ ವರ್ಷದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಈ ಸಭೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗಿದೆ.
ಪತ್ರಿಕಾಗೋಷ್ಠಿ
ಪತ್ರಿಕಾಗೋಷ್ಠಿ (HT)

ಪಾಣಿಪತ್:‌ ಮಾರ್ಚ್ 12 ರಿಂದ ಮಾರ್ಚ್ 14ರವರೆಗೆ ಪಾಣಿಪತ್ ಜಿಲ್ಲೆಯ ಸಮಲ್ಖಾ ಮೂಲದ ಪಟ್ಟಿಕಲ್ಯಾಣದಲ್ಲಿರುವ ಸೇವಾ ಸಾಧನ ಏವಂ ಗ್ರಾಮ ವಿಕಾಸ ಕೇಂದ್ರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ವಾರ್ಷಿಕ ಸಮ್ಮೇಳನ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಈ ಕುರಿತು ಮಾಹಿತಿ ನೀಡಿರುವ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್, ಎಬಿಪಿಎಸ್‌ ವಾರ್ಷಿಕ ಸಭೆಯಲ್ಲಿ ಸಂಘದ ಹಿಂದಿನ ವರ್ಷದ ಚಟುವಟಿಕೆಗಳ ಪರಿಶೀಲನೆ ಮತ್ತು ಮುಂದಿನ ವರ್ಷದ ಕಾರ್ಯತಂತ್ರಗಳು ಮತ್ತು ಕಾರ್ಯಯೋಜನೆಗಳನ್ನು ರೂಪಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವರ್ಷದ ಎಬಿಪಿಎಸ್ ಸಭೆಯಲ್ಲಿ ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳಿಂದ ಸುಮಾರು 1,400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಲ್ಲದೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 34 ಸಂಘಟನೆಗಳ ಕಾರ್ಯಕರ್ತರು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅಂಬೇಕರ್ ತಿಳಿಸಿದ್ದಾರೆ.

ಹರಿಯಾಣ ಪ್ರಾಂತ ಸಂಘಚಾಲಕ ಪವನ್ ಜಿಂದಾಲ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ನರೇಂದ್ರ ಠಾಕೂರ್ ಮತ್ತು ಅಲೋಕ್ ಕುಮಾರ್, ಕ್ಷೇತ್ರ ಪ್ರಚಾರ ಪ್ರಮುಖ ಅನಿಲ್ ಕುಮಾರ್ ಮತ್ತು ಇತರ ಗಣ್ಯರು ಪಾಣಿಪತ್‌ನಲ್ಲಿ ನಡೆದ ಎಬಿಪಿಎಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎಬಿಪಿಎಸ್ ಸಭೆಗೂ ಮುನ್ನ ಅಖಿಲ ಭಾರತೀಯ ಕಾರ್ಯಕರ್ತರ ಮಂಡಲ (ಎಬಿಕೆಎಂ) ಮಾರ್ಚ್ 11ರಂದು ಸಭೆ ಸೇರಲಿದೆ. ಕಾರ್ಯಕಾರಿ ಮಂಡಲವು ಎಬಿಪಿಎಸ್‌ಗೆ ಹೋಗಬಹುದಾದ ನಿರ್ಣಯಗಳ ಬಗ್ಗೆ‌ ಸುದೀರ್ಘವಾಗಿ ಚರ್ಚಿಸಲಿದೆ. ಎಬಿಪಿಎಸ್ ಸಭೆಯ ಕೊನೆಯ ದಿನವಾದ ಮಾರ್ಚ್ 14ರಂದು ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಪತ್ರಿಕಾಗೋಷ್ಠಿ ನಡೆಸಿ, ಸಭೆಯಲ್ಲಿ ಕೈಗೊಂಡ ನಿರ್ಣಯಗಳ ವಿವರಗಳನ್ನು ಮಅಧ್ಯಮಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

ಮಾರ್ಚ್ 12ರಂದು ಎಬಿಪಿಎಸ್ ಸಭೆಯನ್ನು ಉದ್ಘಾಟಿಸಲಾಗುವುದು. ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಜಿ ಭಾಗವತ್, ದತ್ತಾತ್ರೇಯ ಹೊಸಬಾಳೆ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ವಿವಿಧ ಆರ್‌ಎಸ್‌ಎಸ್ ಅಂಗಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಮೂಲಗಳು ಖಚಿತಪಡಿಸಿವೆ.

ಆರ್‌ಎಸ್‌ಎಸ್‌ 2025ರಲ್ಲಿ100 ವರ್ಷಗಳನ್ನು ಪೂರೈಸಲಿದ್ದು, ಶತಮಾನೋತ್ಸವ ವರ್ಷದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಈ ಸಭೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗಿದೆ. 2022-23ರ ಕಾರ್ಯ ವಿಮರ್ಶೆ ಮತ್ತು ಅನುಭವಗಳ ಆಧಾರದ ಮೇಲೆ, 2023-24ಕ್ಕೆ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಈ ಸಭೆ ದೃಢೀಕರಿಸಲಿದೆ.

ಎಬಿಪಿಎಸ್ 2022-23ರ ಸಂಘದ ಚಟುವಟಿಕೆಗಳನ್ನು ಪರಿಶೀಲಿಸುವುದಲ್ಲದೆ, 2025ರ ವೇಳೆಗೆ ಆರ್‌ಎಸ್‌ಎಸ್‌ಗೆ ಹೊಸ ಸದಸ್ಯರನ್ನು ಸೇರಿಸಲು ಮತ್ತು 2023-24ಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸಲು ಕಾರ್ಯತಂತ್ರಗಳನ್ನು ರೂಪಿಸುತ್ತದೆ. ಶಾಖೆಯು ಆರ್‌ಎಸ್‌ಎಸ್‌ನ ಬೆನ್ನೆಲುಬು ಮತ್ತು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿದೆ ಎಂದು ಸುನೀಲ್ ಅಂಬೇಕರ್ ಒತ್ತಿ ಹೇಳಿದರು.

ಶಾಖಾಗಳ ಸ್ವಯಂಸೇವಕರು ತಮ್ಮ ನೆಲದ ವಾಸ್ತವತೆಗಳು ಮತ್ತು ಸಾಮಾಜಿಕ ಪರಿಸ್ಥಿತಿಗಳ ಅಧ್ಯಯನದ ಆಧಾರದ ಮೇಲೆ, ಸಮಸ್ಯೆಗಳನ್ನು ಆಯ್ಕೆ ಮಾಡುತ್ತಾರೆ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸುತ್ತಾರೆ. ಸ್ವಯಂಸೇವಕರು, ಶಾಖಾಗಳ ಮೂಲಕ ಸಮಾಜವನ್ನು ಸ್ವಾವಲಂಬಿಯನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಸೇವಾ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡುತ್ತಾರೆ ಎಂದು ಸುನೀಲ್ ಅಂಬೇಕರ್ ಸ್ಪಷ್ಟಪಡಿಸಿದರು.

ಸ್ವಯಂಸೇವಕರು ಪರಿಸರದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಾರೆ. ಅಲ್ಲದೇ ದೇಶದ ಅಮೃತ ಕಾಲದ ಸಮಯದಲ್ಲಿ ಕಾರ್ಯಗತಗೊಳಿಸಬಹುದಾದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಸಹ ನಿರ್ಧರಿಸುತ್ತಾರೆ ಎಂದು ಸುನೀಲ್ ಅಂಬೇಕರ್ ಮಾಹಿತಿ ನೀಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ