logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sonia Gandhi Hospitalized: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ ಎಂದ ಹೆಲ್ತ್‌ ಬುಲೆಟಿನ್‌

Sonia Gandhi Hospitalized: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ ಎಂದ ಹೆಲ್ತ್‌ ಬುಲೆಟಿನ್‌

HT Kannada Desk HT Kannada

Mar 03, 2023 02:10 PM IST

ಸೋನಿಯಾ ಗಾಂಧಿ (ಕಡತ ಚಿತ್ರ)

  • Sonia Gandhi Hospitalized: ಸೋನಿಯಾ ಗಾಂಧಿ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ. ಸೋನಿಯಾ ಗಾಂಧಿ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

ಸೋನಿಯಾ ಗಾಂಧಿ (ಕಡತ ಚಿತ್ರ)
ಸೋನಿಯಾ ಗಾಂಧಿ (ಕಡತ ಚಿತ್ರ) (PTI Photo/Manvender Vashist Lav)

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ದೆಹಲಿಯ ಸರ್‌ ಗಂಗಾ ರಾಮ್‌ ಹಾಸ್ಪಿಟಲ್‌ಗೆ ಅಡ್ಮಿಟ್‌ ಆಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಶುಕ್ರವಾರ ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸೋನಿಯಾ ಗಾಂಧಿ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ. ಸೋನಿಯಾ ಗಾಂಧಿ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

ಸರ್‌ ಗಂಗಾ ರಾಮ್‌ ಹಾಸ್ಪಿಟಲ್‌ನ ಟ್ರಸ್ಟ್‌ ಸೊಸೈಟಿ ಚೇರ್‌ಮನ್‌ ಡಿ.ಎಸ್.‌ ರಾಣಾ ಅವರು ಈ ವಿಚಾರ ತಿಳಿಸಿದ್ದು, ಚೆಸ್ಟ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರ ಅರೂಪ್ ಬಸು ಮತ್ತು ಅವರ ತಂಡದ ಮೇಲ್ವಿಚಾರಣೆಯಲ್ಲಿ "ಜ್ವರದ ಕಾರಣ" ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

" ಸೋನಿಯಾ ಗಾಂಧಿ ಅವರು ಆಸ್ಪತ್ರೆಯ ವೈದ್ಯ ತಂಡದ ನಿಗಾದಲ್ಲಿದ್ದಾರೆ ಮತ್ತು ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ಬುಲೆಟಿನ್ ಸೇರಿಸಲಾಗಿದೆ.

ಇದಕ್ಕೂ ಮೊದಲು ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲೂ ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿತಿ ಏರುಪೇರಾಗಿತ್ತು. ಅಂದು, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಜೈರಾಮ್‌ ರಮೇಶ್‌ ಮಾಹಿತಿ ನೀಡಿದ್ದರು. ಹಾಗೆ ಅಂದು ಈ ಗಾಂಧಿ ಪರಿವಾರ ಇಟೆಲಿಗೆ ಹೋಗಿ ಅಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿತ್ತು ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

ವಿಶ್ವಸಂಸ್ಥೆಯಲ್ಲಿ ಕೈಲಾಸದ ʻಪ್ರತಿನಿಧಿʼಎನಿಸಿಕೊಂಡ ವಿಜಯಪ್ರಿಯಾ ನಿತ್ಯಾನಂದ ಯಾರು?

Who is Vijayapriya Nithyananda: ಸ್ವಘೋಷಿತ ದೇವಮಾನವ ನಿತ್ಯಾನಂದ ಫೆ.28ರಂದು ಮಾ ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಎರಡು ಫೋಟೋಗಳನ್ನು ಟ್ವೀಟಿ ಮಾಡಿದ್ದರು. ಇದಾದ ಬಳಿಕ, ಆಕೆಯ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿವೆ. ಯಾರು ಈ ವಿಜಯಪ್ರಿಯಾ ನಿತ್ಯಾನಂದ? ಮಾಹಿತಿ ಇಲ್ಲಿದೆ ಕ್ಲಿಕ್‌ ಮಾಡಿ

ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಮೇಲೆ ಬಿಜೆಪಿ ಕಣ್ಣು; ಮೈನ್‌ಪುರಿ-ರಾಯ್ ಬರೇಲಿ ಗೆಲ್ಲೋದು ಸ್ವಲ್ಪ ಕಷ್ಟವೇ..

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಈಗಲೇ ಸಿದ್ಧತೆ ಶುರುವಾಗಿದೆ. ಉತ್ತರ ಪ್ರದೇಶದ ಎಲ್ಲ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಮೆಗಾ ಪ್ಲಾನ್‌ ಸಿದ್ಧಪಡಿಸುತ್ತಿದೆ. ಬಿಜೆಪಿಯು ಮಿಷನ್‌ 2024 (BJP Mission 2024) ಯೋಜನೆ ರೂಪಿಸಿಕೊಂಡಿದ್ದು, ಇದಕ್ಕೆ ಪೂರಕವಾಗಿ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಕ್ಕೆ ರಣತಂತ್ರ ರೂಪಿಸಲು ಸಜ್ಜಾಗಿದೆ. ಪಕ್ಷದ ವರಿಷ್ಠರ ಅಪೇಕ್ಷೆಯ ಪ್ರಕಾರ, ರಾಜ್ಯದ ಉಸ್ತುವಾರಿ-ಸಂಯೋಜಕರು ಈ ಕುರಿತು ಮಾರ್ಚ್‌ 15ರ ಒಳಗೆ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈ ನಗರದಲ್ಲಿ ಸಾಕು ನಾಯಿ ಜತೆಗೆ ವಾಕಿಂಗ್‌ ಹೋಗುವುದು ಕೂಡಾ ಕಷ್ಟ; ನಿಯಮವೇ ಹಾಗಿದೆ ನೋಡಿ!
ಮಹಾನಗರಗಳಲ್ಲಿ ನಾಯಿ ಸಾಕುವುದು ಎಂದರೆ ಅದೊಂದು ರೀತಿ ಪ್ಯಾಶನ್‌. ಇನ್ನು ಆ ಸಾಕು ನಾಯಿ ಜತೆಗೊಂದು ವಾಕಿಂಗ್‌ ಮಾಡುವುದು ನಗರವಾಸಿಗಳಿಗೆ ಅನೇಕರಿಗೆ ಮುದ ನೀಡುವ ವಿಚಾರವೂ, ಕೆಲವರಿಗೆ ಪ್ರತಿಷ್ಠೆಯ ವಿಚಾರವೂ ಹೌದು. ಇನ್ನು, ಆ ಸಾಕು ನಾಯಿಗಳಿಂದಾಗಿ ನೆರೆಹೊರೆಯವರಿಗೆ ಕಿರಿಕಿರಿ ಉಂಟಾಗುವುದೂ ಸಹಜ. ಆ ವಿಚಾರಕ್ಕೆ ಆಗಾಗ ವಾಕ್ಸಮರ, ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಪೊಲೀಸ್‌ ಕೇಸ್‌ ಇವೂ ನಡೆಯುವುದುಂಟು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ