ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Who Is Vijayapriya Nithyananda: ವಿಶ್ವಸಂಸ್ಥೆಯಲ್ಲಿ ಕೈಲಾಸದ ʻಪ್ರತಿನಿಧಿʼಎನಿಸಿಕೊಂಡ ವಿಜಯಪ್ರಿಯಾ ನಿತ್ಯಾನಂದ ಯಾರು?

Who is Vijayapriya Nithyananda: ವಿಶ್ವಸಂಸ್ಥೆಯಲ್ಲಿ ಕೈಲಾಸದ ʻಪ್ರತಿನಿಧಿʼಎನಿಸಿಕೊಂಡ ವಿಜಯಪ್ರಿಯಾ ನಿತ್ಯಾನಂದ ಯಾರು?

Who is Vijayapriya Nithyananda: ಸ್ವಘೋಷಿತ ದೇವಮಾನವ ನಿತ್ಯಾನಂದ ಫೆ.28ರಂದು ಮಾ ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಎರಡು ಫೋಟೋಗಳನ್ನು ಟ್ವೀಟಿ ಮಾಡಿದ್ದರು. ಇದಾದ ಬಳಿಕ, ಆಕೆಯ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿವೆ. ಯಾರು ಈ ವಿಜಯಪ್ರಿಯಾ ನಿತ್ಯಾನಂದ?

ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ವಿಜಯಪ್ರಿಯಾ ನಿತ್ಯಾನಂದ ಭಾವ-ಭಂಗಿ
ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ವಿಜಯಪ್ರಿಯಾ ನಿತ್ಯಾನಂದ ಭಾವ-ಭಂಗಿ (HT)

ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ನೀಡಿದ ಹೇಳಿಕೆಗೆ ವಿಜಯಪ್ರಿಯಾ ನಿತ್ಯಾನಂದ ಸ್ಪಷ್ಟನೆ ನೀಡಿದ್ದು, ಭಾರತವನ್ನು ಉನ್ನತ ಸ್ಥಾನಕ್ಕೇರಿಸುವ ಕೆಲಸವನ್ನು ಕೈಲಾಸ ಮಾಡುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ, ವಿಶ್ವಸಂಸ್ಥೆ ಕೂಡ ಈ ಕುರಿತು ಹೇಳಿಕೆ ನೀಡಿದ್ದು, ವಿಜಿಯಪ್ರಿಯಾ ಅವರು ಸಾರ್ವಜನಿಕ ಕಾರ್ಯಕ್ರಮಕ್ಕೆ ಎನ್‌ಜಿಒದ ಪ್ರತಿನಿಧಿಯಾಗಿ ಭಾಗವಹಿಸಿದ್ದು, ಅವರ ಹೇಳಿಕೆ ಅಪ್ರಸ್ತುತ ಎಂದು ಹೇಳಿದೆ.

ಭಾರತದಲ್ಲಿ ವಿವಿಧ ಕೇಸ್‌ಗಳನ್ನು ಎದುರಿಸಿ ತಲೆಮರೆಸಿಕೊಂಡಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಫೆ.28ರಂದು ಮಾ ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಎರಡು ಫೋಟೋಗಳನ್ನು ಟ್ವೀಟಿ ಮಾಡಿದ್ದರು. ಇದಾದ ಬಳಿಕ, ವಿಶಿಷ್ಟ ಪೇಟ ಧರಿಸಿ, ಹಣೆಯಲ್ಲಿ ಉದ್ದ ತಿಲಕ ಇಟ್ಟು, ಕೊರಳಲ್ಲಿ ರುದ್ರಾಕ್ಷಿ ಧರಿಸಿದ ಮಹಿಳೆಯೊಬ್ಬರು ವಿಶ್ವಸಂಸ್ಥೆ ಜಿನೀವಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿವೆ.

ವಿಶ್ವಸಂಸ್ಥೆಯ ಸಭಾ ಸ್ಥಳದಲ್ಲಿ ನಿತ್ಯಾನಂದನ ಫೋಟೋ ಜತೆಗೆ ನಿಯೋಗದ ಸದಸ್ಯೆಯರು ಪೋಸ್‌ ಕೊಟ್ಟ ಫೋಟೋ ಸೇರಿ ಕೆಲವು ಫೋಟೋಗಳು ಈ ವೈರಲ್‌ ಆದ ಫೋಟೋಗಳಲ್ಲಿವೆ. ಈ ಪೈಕಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಪ್ರಿಯಾ ನಿತ್ಯಾನಂದ ಜಗತ್ತಿನ ಗಮನಸೆಳದವರು.

ಯಾರು ಈ ವಿಜಯಪ್ರಿಯಾ ನಿತ್ಯಾನಂದ? ಆಕೆಯ ಕುರಿತು ಬಹಿರಂಗವಾಗಿರುವ ಐದು ಅಂಶಗಳಿವು.

1. ವಿಜಯಪ್ರಿಯಾ ನಿತ್ಯಾನಂದ ಅವರು ವಿಶ್ವಸಂಸ್ಥೆಯಲ್ಲಿ ಕೈಲಾಸ ಸಂಯುಕ್ತ ಸಂಸ್ಥಾನದ ಖಾಯಂ ರಾಯಭಾರಿ ಎಂದು ಜಗತ್ತಿನ ಎದುರು ಬಿಂಬಿಸಿಕೊಂಡಿದ್ದಾರೆ.

2. ವರದಿಗಳ ಪ್ರಕಾರ, ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. 2014 ರಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ವಿಷಯವನ್ನು ಅಧ್ಯಯನ ಮಾಡಿದರು.

3. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಉಲ್ಲೇಖವಾಗಿರುವ ಪ್ರಕಾರ, ವಿಜಯಪ್ರಿಯಾ ಇಂಗ್ಲಿಷ್, ಫ್ರೆಂಚ್, ಕ್ರಿಯೋಲ್ ಮತ್ತು ಪಿಜಿನ್ಸ್ ಅನ್ನು ನಿರರ್ಗಳವಾಗಿ ಮಾತನಾಡುತ್ತಾರೆ.

4. ನಿತ್ಯಾನಂದನ ವರ್ಚುವಲ್‌ ಹಿಂದು ರಾಷ್ಟ್ರ ಕೈಲಾಸದಲ್ಲಿ ವಿಜಯಪ್ರಿಯಾ ರಾಜತಾಂತ್ರಿಕ ಅಧಿಕಾರಿಯ ಸ್ಥಾನಮಾನ ಹೊಂದಿದ್ದಾರೆ.

5. ವಿಜಯಪ್ರಿಯಾ ಅವರ ಬಲಗೈನಲ್ಲಿ ನಿತ್ಯಾನಂದ ಅವರ ಟ್ಯಾಟೂ ಇದೆ. ಅದು ಫೋಟೋ ಮತ್ತು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ವಿಶ್ವಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮಕ್ಕೆ ಕೈಲಾಸದಿಂದ ತೆರಳಿದ ನಿಯೋಗದಲ್ಲಿ ಕೈಲಾಸ ಸಂತ ಲೂಯಿಸ್‌ ಮುಖ್ಯಸ್ಥೆ ಸೋನಾ ಕಾಮತ್‌, ಕೈಲಾಸ ಯುನೈಟೆಡ್‌ ಕಿಂಗ್ಡಂನ ಮುಖ್ಯಸ್ಥೆ ನಿತ್ಯ ಆತ್ಮದಾಯಕಿ, ಕೈಲಾಸ ಫ್ರಾನ್ಸ್‌ ಮುಖ್ಯಸ್ಥ ನಿತ್ಯ ವೆಂಕಟೇಶಾನಂದ, ಕೈಲಾಸ ಸ್ಲೋವೇನಿಯನ್‌ನ ಮಾ ಪ್ರಿಯಂಪರ ನಿತ್ಯಾನಂದ ಇದ್ದರು. ಅವರು ಸಭೆಯಲ್ಲಿ ನಿತ್ಯಾನಂದ ಪೋಸ್ಟರ್‌ ಪ್ರದರ್ಶಿಸಿದ್ದರು.

ಭಾರತದ ವಿರುದ್ಧ ವಿಜಯಪ್ರಿಯಾರ ಹೇಳಿಕೆ ಮತ್ತು ಸ್ಪಷ್ಟೀಕರಣ

ವಿಶ್ವಸಂಸ್ಥೆಯಲ್ಲಿ ವಿಜಯಪ್ರಿಯಾ ನೀಡಿದ ಹೇಳಿಕೆಯಲ್ಲಿ, ಭಾರತವು ತನ್ನ ಗುರು ನಿತ್ಯಾನಂದರನ್ನು ಹಿಂಸಿಸಿದೆ ಎಂದು ಹೇಳಿದ್ದರು. ನಂತರ, ಸ್ಪಷ್ಟೀಕರಣ ನೀಡಿದ ವಿಜಯಪ್ರಿಯಾ, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವು ಭಾರತವನ್ನು ಹೆಚ್ಚು ಗೌರವಿಸುತ್ತದೆ. "ಸ್ವಾಮಿ ಪರಮಹಂಸ ನಿತ್ಯಾನಂದ ಮತ್ತು ಕೈಲಾಸದ ವಿರುದ್ಧ ಆಕ್ರಮಣ ಮತ್ತು ಹಿಂಸೆಯನ್ನು ಪ್ರಚೋದಿಸುವ ಈ ಹಿಂದು ವಿರೋಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ. ಹಿಂದು ವಿರೋಧಿಗಳ ಕ್ರಮಗಳು ಬಹುಪಾಲು ಭಾರತೀಯರ ಮೌಲ್ಯಗಳು ಅಥವಾ ನಂಬಿಕೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ" ಎಂದು ವಿಜಯಪ್ರಿಯಾ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು.

ಅಪ್ರಸ್ತುತ ಹೇಳಿಕೆ ಎಂದ ವಿಶ್ವಸಂಸ್ಥೆ

ಕಳೆದ ವಾರ ಜಿನೀವಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾರತದಿಂದ ಪರಾರಿಯಾದ ನಿತ್ಯಾನಂದ ಸ್ಥಾಪಿಸಿದ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ)" ಪ್ರತಿನಿಧಿಗಳು ನೀಡಿದ ಹೇಳಿಕೆಗಳು "ಅಪ್ರಸ್ತುತ". ಆ ನಿಯೋಗವು ಎನ್‌ಜಿಒದ ಹೆಸರಿನಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು ಎಂದು ಯುಎನ್ ಮಾನವ ಹಕ್ಕುಗಳ ಕಚೇರಿ ಗುರುವಾರ ಹೇಳಿದೆ.

IPL_Entry_Point