logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ; ಅಚ್ಚರಿ ಸಿಎಂ ಕುತೂಹಲಕ್ಕೆ ಬಿಜೆಪಿ ತೆರೆ

ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ; ಅಚ್ಚರಿ ಸಿಎಂ ಕುತೂಹಲಕ್ಕೆ ಬಿಜೆಪಿ ತೆರೆ

Raghavendra M Y HT Kannada

Dec 10, 2023 08:20 PM IST

ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

  • ಅನುಭವಿ ರಾಜಕಾರಣಿ ವಿಷ್ಣು ದೇವ್ ಸಾಯಿ ಅವರನ್ನು ಛತ್ತೀಸ್‌ಗಢ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದೆ. 

ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ರಾಯ್‌ಪುರ್: ಛತ್ತೀಸ್‌ಗಢ ವಿಧಾನಸಭೆ ಚುನಾವಣಾ (Chhattisgarh Assembly Election 2023) ಪ್ರಚಾರದ ವೇಳೆ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಅಲ್ಲಿನ ಮತದಾರರಲ್ಲಿ ಒಂದು ಮಾತನ್ನು ನೀಡಿದ್ದರು. ವಿಷ್ಣು ದೇವ್ ಜಿ ಅವರು ತುಂಬಾ ಅನುಭವ ರಾಜಕಾರಣಿ. ಅವರನ್ನು ನೀವು ಶಾಸಕರನ್ನಾಗಿ ಆಯ್ಕೆ ಮಾಡಿ, ನಾವು ಆತನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು. ಅಮಿತ್ ಶಾ ಅವರು ಹೇಳಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ವಿಷ್ಣು ದೇವ್ ಸಾಯಿ (Vishnu Deo Sai) ಅವರು ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಂದು (ಡಿಸೆಂಬರ್ 10, ಭಾನುವಾರ) ನಡೆದ ಬಿಜೆಪಿ ನೂತನ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಷ್ಣು ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಆ ಮೂಲಕ ಇತ್ತೀಚೆಗೆ ಕೇಳಿಬಂದಿದ್ದ ಅಚ್ಚರಿ ಸಿಎಂ ಹೆಸರಿಗೆ ಬಿಜೆಪಿ ತೆರೆ ಎಳೆದಿದೆ.

ವಿಷ್ಣು ದೇವ್ ಸಾಯಿ ಅವರು 2023ರ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಛತ್ತೀಸ್‌ಗಢ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಒಂದು ವಾರ ಕಳೆದರೂ ರಾಜ್ಯದ ಮುಖ್ಯಮಂತ್ರಿ ಹೆಸರು ಹೆಚ್ಚು ಸಸ್ಪೆನ್ಸ್ ಆಗಿ ಇಡಲಾಗಿತ್ತು. ಪಕ್ಷದ ಮಟ್ಟದಲ್ಲಿ ಚರ್ಚೆ, ವಿವಿಧ ಹಂತಗಳ ಮಾತುಕತೆಗಳ ಬಳಿಕ ವಿಷ್ಣು ದೇವ್ ಸಾಯಿ ಅವರ ಹೆಸರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಗಿದೆ. ಅಚ್ಚರಿ ಎಂದರೆ ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿ ಇವರ ಹೆಸರೇ ಇರಲಿಲ್ಲ.

ಸಂಸದ, ಶಾಸಕ ಹಾಗೂ ಛತ್ತೀಸ್‌ಗಢ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಾಯಿ ಅವರ ಹೆಸರನ್ನು ಕೇಸರಿ ನಾಯಕರು ಘೋಷಿಸಿದ್ದಾರೆ. 59 ವರ್ಷದ ವಿಷ್ಣು ದೇವ್ ಸಾಯಿ ಅವರು ಛತ್ತೀಸ್‌ಗಢ ಪ್ರಮುಖ ಬುಡಕಟ್ಟು ನಾಯಕರಾಗಿದ್ದಾರೆ. ತಳಮಟ್ಟದಿಂದ ರಾಜಕೀಯ ಜೀವನ ಆರಂಭಿಸಿದ ಇವರು ಗ್ರಾಮದ ಸರಪಂಚ್‌ನಿಂದ ಹಿಡಿದು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಛತ್ತೀಸ್‌ಗಢದ ಬಿಜೆಪಿ ಘಟಕವನ್ನು ರಾಜ್ಯಾಧ್ಯಕ್ಷರಾಗಿ ಮೂರು ಬಾರಿ ಮುನ್ನಡೆಸಿದ್ದಾರೆ.

ವಿಷ್ಣು ದೇವ್‌ ಅವರದ್ದು ರಾಜಕೀಯ ಹಿನ್ನಲೆಯ ಕುಟುಂಬ

ಸಾಯಿ ಅವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆಯಿದೆ. ಇವರ ತಾತ ದಿವಂಗತ ಬುಧನಾಥ್ ಸಾಯಿ 1947 ರಿಂದ 1952 ರವರೆಗೆ ನಾಮನಿರ್ದೇಶಿತ ಶಾಸಕರಾಗಿದ್ರು. ದೊಡ್ಡಪ್ಪ ದಿವಂಗತ ನರಹರಿ ಪ್ರಸಾದ್ ಸಾಯಿ ಜನಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟೇ ಅಳ್ಲಲ ಪ್ರಸಾದ್ ಸಾಯಿ ಅವರು 1962 ರಿಂದ 67 ಹಾಗೂ 1972 ರಿಂದ 77 ರವರೆಗೆ ಶಾಸಕರಾಗಿ, 1977 ರಿಂದ 7 ರವರೆಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರರು ಜನತಾ ಪಕ್ಷದ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಇವರ ಕುಟುಂಬದ ಕುಡಿಯಾಗಿರುವ ವಿಷ್ಣು ದೇವ್ ಸಾಯಿ ಅವರು ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದಾರೆ.

ನವೆಂಬರ್ 7 ರಿಂದ 30ರ ವರೆಗೆ ವಿವಿಧ ಹಂತಗಳಲ್ಲಿ ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ವಿಜೋರಾಂ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಡಿಸೆಂಬರ್ 3 ರಂದು ನಾಲ್ಕು ರಾಜ್ಯಗಳು, ಡಿಸೆಂಬರ್ 4 ರಂದು ಮಿಜೋರಾಂ ವಿಧಾನಸಭೆ ಚುನಾವಣೆಯ ಎಣಿಕೆ ನಡೆದಿತ್ತು. ಐದು ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ