logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Zeenat Aman: 80ರ ದಶಕದ ಹಾಟೆಸ್ಟ್‌ ನಟಿ ಜೀನತ್‌ ಅಮನ್‌; ಸತ್ಯಂ ಶಿವಂ ಸುಂದರಂ ಹಿಂದಿ ಸಿನಿಮಾ ನಾಯಕಿ ಈಗ ಹೇಗಿದ್ದಾರೆ ನೋಡಿ

Zeenat Aman: 80ರ ದಶಕದ ಹಾಟೆಸ್ಟ್‌ ನಟಿ ಜೀನತ್‌ ಅಮನ್‌; ಸತ್ಯಂ ಶಿವಂ ಸುಂದರಂ ಹಿಂದಿ ಸಿನಿಮಾ ನಾಯಕಿ ಈಗ ಹೇಗಿದ್ದಾರೆ ನೋಡಿ

May 25, 2023 07:30 AM IST

ಜೀನತ್‌ ಅಮನ್‌, ಒಂದು ಕಾಲದಲ್ಲಿ ಬಾಲಿವುಡ್‌ನ ಟಾಪ್‌ ನಟಿ. ಈಕೆ ನಮ್ಮ ಸಿನಿಮಾದಲ್ಲಿ 5 ನಿಮಿಷ ಕಾಣಿಸಿಕೊಂಡರೆ ಸಾಕು ಎನ್ನುವಷ್ಟರ ಮಟ್ಟಿಗೆ ನಿರ್ಮಾಪಕರು ಆ ಸಮಯದಲ್ಲಿ ಆಕೆಯ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. 70-80ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಜೀನತ್‌ ಅಮನ್.‌

  • ಜೀನತ್‌ ಅಮನ್‌, ಒಂದು ಕಾಲದಲ್ಲಿ ಬಾಲಿವುಡ್‌ನ ಟಾಪ್‌ ನಟಿ. ಈಕೆ ನಮ್ಮ ಸಿನಿಮಾದಲ್ಲಿ 5 ನಿಮಿಷ ಕಾಣಿಸಿಕೊಂಡರೆ ಸಾಕು ಎನ್ನುವಷ್ಟರ ಮಟ್ಟಿಗೆ ನಿರ್ಮಾಪಕರು ಆ ಸಮಯದಲ್ಲಿ ಆಕೆಯ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. 70-80ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಜೀನತ್‌ ಅಮನ್.‌
ಇವರು ಬಾಲಿವುಡ್‌ನಲ್ಲಿ ಹಾಟೆಸ್ಟ್‌ ಬ್ಯೂಟಿ ಎಂದೇ ಹೆಸರಾದವರು. ಈಕೆಯ ಮೈಮಾಟ ನೋಡಲೆಂದೇ ಪಡ್ಡೆಗಳು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುತ್ತಿದ್ದ ಕಾಲ ಅದು. 
(1 / 12)
ಇವರು ಬಾಲಿವುಡ್‌ನಲ್ಲಿ ಹಾಟೆಸ್ಟ್‌ ಬ್ಯೂಟಿ ಎಂದೇ ಹೆಸರಾದವರು. ಈಕೆಯ ಮೈಮಾಟ ನೋಡಲೆಂದೇ ಪಡ್ಡೆಗಳು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುತ್ತಿದ್ದ ಕಾಲ ಅದು. (PC: Zeenat Aman Instagram)
ಬಹುತೇಕ ಸಿನಿಮಾಗಳಲ್ಲಿ ಜೀನತ್‌ ಅಮನ್‌ ಬೋಲ್ಡ್‌ ಆಗಿ ನಟಿಸಿದ್ದಾರೆ. ಅದರಲ್ಲೂ 'ಸತ್ಯಂ ಶಿವಂ ಸುಂದರಂ' ಸಿನಿಮಾದಲ್ಲಿ ಈ ನಟಿಯ ಎಕ್ಸ್‌ಪೋಸ್‌ ನೋಡಿ ಸಹ ನಟಿಯರೇ ದಂಗಾಗಿದ್ದರು. ಅನೇಕ ಮಂದಿ ಈಕೆಯ ಕಾಲೆಳೆದದ್ದೂ ಉಂಟು. ಅಷ್ಟೇ ಅಲ್ಲ ಚಿತ್ರದ ಮೂಲಕ ಅಶ್ಲೀಲತೆ ಪ್ರದರ್ಶಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದರು. 
(2 / 12)

ಜೀನತ್‌ ಅಮನ್‌ಗೆ ಈಗ 71 ವರ್ಷ ವಯಸ್ಸು. ಕೆಲವು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಈ ಎವರ್‌ಗ್ರೀನ್‌ ಬ್ಯೂಟಿ ಈಗ ಮತ್ತೆ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. 
(3 / 12)

ಜೀನತ್‌ ಅಮನ್‌ ಇದೇ ವರ್ಷ ಇನ್‌ಸ್ಟಾಗ್ರಾಮ್‌ ಖಾತೆ ಕೂಡಾ ತೆರೆಯವ ಮೂಲಕ ಸೋಷಿಯಲ್‌ ಮೀಡಿಯಾಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. 
(4 / 12)

ಜೀನತ್‌ ಅಮನ್‌ ಮೂಲತ: ಮಹಾರಾಷ್ಟ್ರದವರು. ಆಕೆ ಹುಟ್ಟಿದ್ದು 19 ನವೆಂಬರ್‌ 1951 ರಲ್ಲಿ. ಇವರ ತಂದೆ ಅಮಾನುಲ್ಲಾ ಖಾನ್‌ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೆ ತಾಯಿ ವರ್ಧಿನಿ ಕರ್ವಸ್ತೆ ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. 
(5 / 12)

ತಂದೆ ಅಮಾನುಲ್ಲಾ ಖಾನ್‌ ಚಿತ್ರರಂದಲ್ಲಿ ಸ್ಕ್ರಿಪ್ಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದರು. 13ನೇ ವರ್ಷಕ್ಕೆ ಜೀನತ್‌ ಅಮನ್‌ ತಂದೆಯನ್ನು ಕಳೆದುಕೊಂಡರು. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಜೀನತ್‌ ಅಮನ್ ಪದವಿ ಪಡೆದರು. 
(6 / 12)

ಸ್ಕೂಲ್‌ ಕಾಲೇಜಿನಲ್ಲಿದ್ದಾಗಲೇ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಜೀನತ್‌ ಅಮನ್‌, 1970ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ರನ್ನರ್‌ ಅಪ್‌ ಸ್ಥಾನ ಪಡೆದರು. ನಂತರ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಒದಗಿ ಬಂತು. 
(7 / 12)

ಜೀನತ್‌, ಮೊದಲು ನಟಿಸಿದ್ದು ದಿ ಈವೆಲ್‌ ವಿತ್‌ಇನ್‌. ಆದರೆ ಈ ಸಿನಿಮಾ ಸೋಲು ಕಂಡಿತು. ಇದಾದ ನಂತರ ಆಕೆ ನಟಿಸಿದ 2 ಸಿನಿಮಾಗಳು ಕೂಡಾ ಫ್ಲಾಪ್‌ ಆಯ್ತು. ಆದರೆ 1971ರಲ್ಲಿ ತೆರೆ ಕಂಡ 'ಹರೇ ರಾಮ ಹರೇ ಕೃಷ್ಣ' ಈಕೆಗೆ ಬ್ರೇಕ್‌ ತಂದುಕೊಟ್ಟಿತು. 
(8 / 12)

 'ಹರೇ ರಾಮ ಹರೇ ಕೃಷ್ಣ' ಸಿನಿಮಾ ನಂತರ ಆಕೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಅಜನಬಿ, ಪಾಪಿ , ಡಾರ್ಲಿಂಗ್‌ ಡಾರ್ಲಿಂಗ್‌, ಗೋಲ್‌ಮಾಲ್‌, ಕುರ್ಬಾನಿ, ದೋಸ್ತಾನಾ, ಲಾವರಿಸ್‌, ದೌಲತ್‌, ಮೇರಿ ಅದಾಲತ್‌, ಅಗ್ಲಿ ಔರ್‌ ಪಗ್ಲಿ ಸೇರಿದಂತೇ ಅನೇಕ ಸಿನಿಮಾಗಳಲ್ಲಿ ಜೀನತ್‌ ಅಮನ್‌ ನಟಿಸಿದ್ದಾರೆ. ಈ ಚಿತ್ರದ ಧಮ್‌ ಮಾರೋ ಧಮ್‌.. ಹಾಡು ಇಂದಿಗೂ ಬಹಳ ಫೇಮಸ್.‌ 
(9 / 12)

1978ರಲ್ಲಿ ಜೀನತ್‌ ಅಮನ್‌ ನಟ ಸಂಜಯ್‌ ಖಾನ್‌ ಮದುವೆ ಆದರು. ಆದರೆ ಈ ಮದುವೆ ಮುರಿದುಬಿತ್ತು. ನಂತರ ಜೀನತ್‌ ಮಾಜರ್‌ ಖಾನ್‌ ಕೈ ಹಿಡಿದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 
(10 / 12)

ಸದ್ಯಕ್ಕೆ ಜೀನತ್‌ ಅಮನ್‌ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಮೊದಲ ಮಗ ಆಜಾನ್‌ ಖಾನ್‌ ಬಾಲಿವುಡ್‌ನಲ್ಲಿ ನಿರ್ದೇಶಕನಾಗಿ ಎರಡನೇ ಮಗ ಜಹಾನ್‌ ಖಾನ್‌ ಮ್ಯೂಸಿಕ್‌ ಕಂಪೋಸರ್‌ ಆಗಿ ಗುರುತಿಸಿಕೊಂಡಿದ್ದಾರೆ. 
(11 / 12)

ಸದ್ಯಕ್ಕೆ ಜೀನತ್‌ ಅಮನ್‌, 'ಗೋರ್‌ಗಾವ್:‌ ದಿ ಕ್ಲೋಸ್‌ ಫೈಲ್‌' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2019ರಲ್ಲಿ ತೆರೆ ಕಂಡ 'ಪಾನಿಪತ್‌' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
(12 / 12)

    ಹಂಚಿಕೊಳ್ಳಲು ಲೇಖನಗಳು