logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Csk Ipl Trophies: ಚೆನ್ನೈ ಬತ್ತಳಿಕೆಯಲ್ಲಿ 5 ಐಪಿಎಲ್ ಟ್ರೋಫಿ; ಸೂಪರ್ ಕಿಂಗ್ಸ್ ಕಪ್ ಗೆಲುವಿನ ಇತಿಹಾಸ ಮೆಲುಕು ಹಾಕೋಣ

CSK IPL Trophies: ಚೆನ್ನೈ ಬತ್ತಳಿಕೆಯಲ್ಲಿ 5 ಐಪಿಎಲ್ ಟ್ರೋಫಿ; ಸೂಪರ್ ಕಿಂಗ್ಸ್ ಕಪ್ ಗೆಲುವಿನ ಇತಿಹಾಸ ಮೆಲುಕು ಹಾಕೋಣ

May 30, 2023 12:05 PM IST

CSK vs GT IPL 2023 Final : ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದುವರೆಗೆ 10 ಬಾರಿ ಐಪಿಎಲ್ ಫೈನಲ್‌ಗೆ‌ ಪ್ರವೇಶಿಸಿದೆ. ಇದರಲ್ಲಿ ಪ್ರಸಕ್ತ ಆವೃತ್ತಿಯ ಟ್ರೋಫಿ ಸೇರಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಈ ಹಿಂದೆ ಸಿಎಸ್‌ಕೆ ಐಪಿಎಲ್‌ ಕಪ್ ಗೆದ್ದಿರುವ ವರ್ಷಗಳು ಹೀಗಿವೆ.

  • CSK vs GT IPL 2023 Final : ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದುವರೆಗೆ 10 ಬಾರಿ ಐಪಿಎಲ್ ಫೈನಲ್‌ಗೆ‌ ಪ್ರವೇಶಿಸಿದೆ. ಇದರಲ್ಲಿ ಪ್ರಸಕ್ತ ಆವೃತ್ತಿಯ ಟ್ರೋಫಿ ಸೇರಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಈ ಹಿಂದೆ ಸಿಎಸ್‌ಕೆ ಐಪಿಎಲ್‌ ಕಪ್ ಗೆದ್ದಿರುವ ವರ್ಷಗಳು ಹೀಗಿವೆ.
ಐಪಿಎಲ್‌ನಲ್ಲಿ ಬರೋಬ್ಬರಿ 10 ಬಾರಿ ಫೈನಲ್‌ ಪ್ರವೇಶಿಸಿರುವ ಸಿಎಸ್‌ಕೆ ತಂಡವು, 5 ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಆ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. 14 ಋತುಗಳಲ್ಲಿ ಆಡಿರುವ ತಂಡವು 12 ಬಾರಿ ಪ್ಲೇಆಫ್‌ ಪ್ರವೇಶಿಸಿದೆ.  ಐಪಿಎಲ್ 2023ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ ಧೋನಿ ಪಡೆ ಗೆದ್ದಿತು.
(1 / 5)

ಚೆನ್ನೈ ಸೂಪರ್ ಕಿಂಗ್ಸ್ 2010ರಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಧೋನಿ ಪಡೆಯು 22 ರನ್‌ಗಳ ಅಂತರದಲ್ಲಿ ಜಯ ಸಾಧಿಸಿಸಿತು. 
(2 / 5)

ಚೆನ್ನೈ ಸೂಪರ್ ಕಿಂಗ್ಸ್ 2011ರಲ್ಲಿ ಮತ್ತೊಮ್ಮೆ ಐಪಿಎಲ್‌ ಫೈನಲ್ ಪ್ರವೇಶಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 58 ರನ್‌ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತು. 
(3 / 5)

ಈ ನಡುವೆ 3 ಬಾರಿ ಐಪಿಎಲ್ ಫೈನಲ್‌ ಪ್ರವೇಶಿಸಿ ಸೋತ ಚೆನ್ನೈ 2018ರಲ್ಲಿ ಮತ್ತೊಮ್ಮೆ ಐಪಿಎಲ್ ಪ್ರಶಸ್ತಿ ಗೆದ್ದಿತು. ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ 8 ವಿಕೆಟ್‌ಗಳ ಜಯ ಸಾಧಿಸಿತು. ಇದು ತಂಡ ಗೆದ್ದ ಮೂರನೇ ಟ್ರೋಫಿಯಾಯ್ತು.
(4 / 5)

ಸಿಎಸ್‌ಕೆ ತಂಡವು 2021ರಲ್ಲಿ ಮತ್ತೊಮ್ಮೆ ಫೈನಲ್ ತಲುಪಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿದ ಧೋನಿ ಪಡೆ, ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 
(5 / 5)

    ಹಂಚಿಕೊಳ್ಳಲು ಲೇಖನಗಳು