logo
ಕನ್ನಡ ಸುದ್ದಿ  /  Photo Gallery  /  Diy Homemade Night Cream With The Goodness Of Almonds, Check Recipe

DIY Night Cream: ಈ ನೈಟ್​ ಕ್ರೀಮ್​ ನೀವೆ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ.. ಪಳಪಳ ಹೊಳೆಯುವ ತ್ವಚೆ ನಿಮ್ಮದಾಗುತ್ತೆ

Dec 05, 2022 09:18 PM IST

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಪುನರ್ಯೌವನಗೊಳಿಸಲು ಉತ್ತಮ ಗುಣಗಳನ್ನು ಹೊಂದಿರುವ ನೈಟ್ ಕ್ರೀಮ್ ಅನ್ನು ನೀವೇ ತಯಾರಿಸಿಕೊಳ್ಳಿ. ಇದನ್ನು ಬಳಸಿದರೆ ಎರಡು ವಾರಗಳಲ್ಲಿ ನೀವು ವ್ಯತ್ಯಾಸವನ್ನು ನೋಡುತ್ತೀರಿ. ಅದನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ..

  • ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಪುನರ್ಯೌವನಗೊಳಿಸಲು ಉತ್ತಮ ಗುಣಗಳನ್ನು ಹೊಂದಿರುವ ನೈಟ್ ಕ್ರೀಮ್ ಅನ್ನು ನೀವೇ ತಯಾರಿಸಿಕೊಳ್ಳಿ. ಇದನ್ನು ಬಳಸಿದರೆ ಎರಡು ವಾರಗಳಲ್ಲಿ ನೀವು ವ್ಯತ್ಯಾಸವನ್ನು ನೋಡುತ್ತೀರಿ. ಅದನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ..
ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಚರ್ಮದ, ಅದರಲ್ಲಿಯೂ ಮುಖದ ಚರ್ಮದ ಸಮಸ್ಯೆಗಳು ಕಾಡುತ್ತದೆ. ಚರ್ಮವು ಶುಷ್ಕ, ಬಿರುಕು ಮತ್ತು ಒರಟಾಗುತ್ತದೆ. ಅದನ್ನು ಸರಿಪಡಿಸಲು ಮಾರುಕಟ್ಟೆಯಿಂದಲೇ ಕ್ರೀಮ್​ ತಂದು ಬಳಸಬೇಕಾಗಿಲ್ಲ. ಬದಲಾಗಿ ಮನೆಯಲ್ಲಿ ನೀವೇ ಕ್ರೀಮ್​ ತಯಾರಿಸಬಹುದು.
(1 / 5)

ಈ DIY ನೈಟ್ ಕ್ರೀಮ್ ತಯಾರಿಸಲು ನಿಮಗೆ ಬಾದಾಮಿ ಅಗತ್ಯವಿದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ರೋಸ್ ವಾಟರ್, ಬಾದಾಮಿ ಎಣ್ಣೆ, ಅಲೋವೆರಾ ಜೆಲ್, ವಿಟಮಿನ್ ಇ ಕ್ಯಾಪ್ಸುಲ್​​ಗಳು ಬೇಕಾಗುತ್ತವೆ.
(2 / 5)

ಮೊದಲು 10-12 ಬಾದಾಮಿಯನ್ನು ತೆಗೆದುಕೊಂಡು ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ, ಅದರ ಚರ್ಮವನ್ನು ತೆಗೆದುಹಾಕಿ. ನಂತರ 1 ಚಮಚ ರೋಸ್ ವಾಟರ್ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ಈಗ ಮಿಶ್ರಣವನ್ನು ಸೋಸಿಕೊಳ್ಳಿ ಮತ್ತು ಸ್ವಚ್ಛವಾದ ಬಟ್ಟಲಿನಲ್ಲಿ ಇರಿಸಿ. ನಂತರ 2 ಚಮಚ ಬಾದಾಮಿ ಎಣ್ಣೆ, 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು, 2 ವಿಟಮಿನ್ ಇ ಕ್ಯಾಪ್ಸುಲ್​ಗಳ ಎಣ್ಣೆಯನ್ನು ಬಾದಾಮಿ ಪೇಸ್ಟ್​ನೊಂದಿಗೆ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಫ್ರಿಜ್​​ನಲ್ಲಿಡಿ. 
(3 / 5)

ಈ ಮಿಶ್ರಣವನ್ನು ರಾತ್ರಿ ಮಲಗುವ ಮುನ್ನ ಚರ್ಮಕ್ಕೆ ಅನ್ವಯಿಸಬೇಕು. ಇದನ್ನು ಮುಖಕ್ಕೆ ಹಚ್ಚುವ ಮೊದಲು ಕ್ಲೆನ್ಸರ್ ನಿಂದ ನಿಮ್ಮ ಮುಖವನ್ನು ತೊಳೆಯಿರಿ. ನಂತರ ಟೋನರ್ ಹಚ್ಚಿ. ನೀವು ಬಯಸಿದಲ್ಲಿ ಫೇಸ್ ಮಿಸ್ಟ್ ಅನ್ನು ಸಹ ಅನ್ವಯಿಸಬಹುದು. ಅಂತಿಮವಾಗಿ ಈ ಬಾದಾಮಿ ನೈಟ್ ಕ್ರೀಮ್ ಅನ್ನು ಅನ್ವಯಿಸಿ.
(4 / 5)

ಒಣ ಚರ್ಮಕ್ಕೆ ಬಾದಾಮಿ ತುಂಬಾ ಒಳ್ಳೆಯದು. ಚರ್ಮದ ಮೇಲಿನ ಕೆಂಪು ದದ್ದುಗಳನ್ನು ನಿವಾರಿಸುತ್ತದೆ. ನಯವಾದ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಹೊಳಪನ್ನು ತರುತ್ತದೆ. ಅಲ್ಲದೆ, ಟ್ಯಾನ್ ನಿಂದ ಚರ್ಮವನ್ನು ರಕ್ಷಿಸುತ್ತದೆ.
(5 / 5)

    ಹಂಚಿಕೊಳ್ಳಲು ಲೇಖನಗಳು