logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Blood Pressure: ಬಾಳೆಹಣ್ಣಿನಿಂದ ಮಾವಿನಹಣ್ಣಿನವರೆಗೆ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುವ ಹಣ್ಣುಗಳಿವು; ಇವುಗಳ ನಿರಂತರ ಸೇವನೆ ಉತ್ತಮ

Blood Pressure: ಬಾಳೆಹಣ್ಣಿನಿಂದ ಮಾವಿನಹಣ್ಣಿನವರೆಗೆ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುವ ಹಣ್ಣುಗಳಿವು; ಇವುಗಳ ನಿರಂತರ ಸೇವನೆ ಉತ್ತಮ

May 17, 2023 06:23 PM IST

Blood Pressure: ಇತ್ತೀಚೆಗೆ ಜೀವನಶೈಲಿ ಹಾಗೂ ಒತ್ತಡದ ಕಾರಣದಿಂದ ಹಲವರು ರಕ್ತದೊತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡುವುದರಿಂದ ಗಂಭೀರ ಅಪಾಯ ಉಂಟಾಗಬಹುದು. ಆದರೆ ಪ್ರತಿನಿತ್ಯ ಹಣ್ಣುಗಳ ಸೇವನೆಯನ್ನು ರೂಢಿಸಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು ಎನ್ನುತ್ತಾರೆ ತಜ್ಞರು. ಅಂತಹ ಕೆಲವು ಹಣ್ಣುಗಳು ಹೀಗಿವೆ.

  • Blood Pressure: ಇತ್ತೀಚೆಗೆ ಜೀವನಶೈಲಿ ಹಾಗೂ ಒತ್ತಡದ ಕಾರಣದಿಂದ ಹಲವರು ರಕ್ತದೊತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡುವುದರಿಂದ ಗಂಭೀರ ಅಪಾಯ ಉಂಟಾಗಬಹುದು. ಆದರೆ ಪ್ರತಿನಿತ್ಯ ಹಣ್ಣುಗಳ ಸೇವನೆಯನ್ನು ರೂಢಿಸಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು ಎನ್ನುತ್ತಾರೆ ತಜ್ಞರು. ಅಂತಹ ಕೆಲವು ಹಣ್ಣುಗಳು ಹೀಗಿವೆ.
ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವು ಹಣ್ಣುಗಳ ನಿರಂತರ ಸೇವನೆಗೆ ಒತ್ತು ನೀಡಬೇಕು. ಇದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಬಹುದು. ಆದರೆ ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುವ ಜೊತೆಗೆ ಹಣ್ಣುಗಳ ಸೇವನೆಗೂ ಒತ್ತು ನೀಡಬೇಕು. ಔಷಧಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. 
(1 / 5)
ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವು ಹಣ್ಣುಗಳ ನಿರಂತರ ಸೇವನೆಗೆ ಒತ್ತು ನೀಡಬೇಕು. ಇದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಬಹುದು. ಆದರೆ ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುವ ಜೊತೆಗೆ ಹಣ್ಣುಗಳ ಸೇವನೆಗೂ ಒತ್ತು ನೀಡಬೇಕು. ಔಷಧಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. (unsplash)
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಬಾಳೆಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(2 / 5)
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಬಾಳೆಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(unsplash)
ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆ ಇರುತ್ತದೆ, ನೀರಿನಾಂಶ ಹೆಚ್ಚಿರುತ್ತದೆ. ವಿಟಮಿನ್ ಸಿ, ಪೊಟ್ಯಾಸಿಯಮ್, ಲೈಕೋಪಿನ್, ಆಂಟಿಆಕ್ಸಿಡೆಂಟ್‌ಗಳು ಸಹ ಈ ಹಣ್ಣಿನಲ್ಲಿವೆ. ಹೀಗಾಗಿ, ಕಲ್ಲಂಗಡಿ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಾಧ್ಯ.
(3 / 5)
ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆ ಇರುತ್ತದೆ, ನೀರಿನಾಂಶ ಹೆಚ್ಚಿರುತ್ತದೆ. ವಿಟಮಿನ್ ಸಿ, ಪೊಟ್ಯಾಸಿಯಮ್, ಲೈಕೋಪಿನ್, ಆಂಟಿಆಕ್ಸಿಡೆಂಟ್‌ಗಳು ಸಹ ಈ ಹಣ್ಣಿನಲ್ಲಿವೆ. ಹೀಗಾಗಿ, ಕಲ್ಲಂಗಡಿ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಾಧ್ಯ.(unsplash)
ದಾಳಿಂಬೆ: ದಾಳಿಂಬೆ ಹಣ್ಣು ರಕ್ತದ ವೃದ್ಧಿಗೆ ನೆರವಾಗುತ್ತದೆ, ಜೊತೆಗೆ ಈ ಹಣ್ಣಿನ ನಿರಂತರ ಸೇವನೆ ಬಿಪಿ ಅಥವಾ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. 
(4 / 5)
ದಾಳಿಂಬೆ: ದಾಳಿಂಬೆ ಹಣ್ಣು ರಕ್ತದ ವೃದ್ಧಿಗೆ ನೆರವಾಗುತ್ತದೆ, ಜೊತೆಗೆ ಈ ಹಣ್ಣಿನ ನಿರಂತರ ಸೇವನೆ ಬಿಪಿ ಅಥವಾ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. (unsplash)
ಮಾವು: ಮಾವಿನ ಹಣ್ಣಿನಲ್ಲಿರುವ ಬೀಟಾ ಕ್ಯಾರೋಟಿನ್, ಪೊಟಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(5 / 5)
ಮಾವು: ಮಾವಿನ ಹಣ್ಣಿನಲ್ಲಿರುವ ಬೀಟಾ ಕ್ಯಾರೋಟಿನ್, ಪೊಟಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(unsplash)

    ಹಂಚಿಕೊಳ್ಳಲು ಲೇಖನಗಳು