logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Abhishek Aviva Wedding: ಅಭಿ ಕೈ ಮೇಲೆ ಮೂಡಿತು ತುತ್ತು ಕೊಟ್ಟವಳ, ಮುತ್ತು ಕೊಡುವವಳ ಹೆಸರು; ಜೂ. ಅಂಬಿ ಮನೆಯಲ್ಲಿ ಮದುವೆ ಸಂಭ್ರಮ

Abhishek Aviva wedding: ಅಭಿ ಕೈ ಮೇಲೆ ಮೂಡಿತು ತುತ್ತು ಕೊಟ್ಟವಳ, ಮುತ್ತು ಕೊಡುವವಳ ಹೆಸರು; ಜೂ. ಅಂಬಿ ಮನೆಯಲ್ಲಿ ಮದುವೆ ಸಂಭ್ರಮ

Jun 03, 2023 02:05 PM IST

Abhishek Ambareesh wedding: ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ ದಿನಗಣನೆ ಆರಂಭವಾಗಿದೆ. ಜೂನ್‌ 5ರಂದು ನೆರವೇರಲಿರುವ ಈ ಜೋಡಿಯ ವಿವಾಹಕ್ಕೆ ಸಂಬಂಧಿಸಿದಂತೆ ಅದ್ದೂರಿ ತಯಾರಿಯೂ ಜೋರಾಗಿದೆ. ಈ ನಡುವೆ ಕನ್ನಡದ ಹಲವು ಸಿನಿ ತಾರೆಯರು ಅಭಿ ಮನೆಗೆ ಭೇಟಿ ನೀಡಿದ್ದಾರೆ.

  • Abhishek Ambareesh wedding: ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ ದಿನಗಣನೆ ಆರಂಭವಾಗಿದೆ. ಜೂನ್‌ 5ರಂದು ನೆರವೇರಲಿರುವ ಈ ಜೋಡಿಯ ವಿವಾಹಕ್ಕೆ ಸಂಬಂಧಿಸಿದಂತೆ ಅದ್ದೂರಿ ತಯಾರಿಯೂ ಜೋರಾಗಿದೆ. ಈ ನಡುವೆ ಕನ್ನಡದ ಹಲವು ಸಿನಿ ತಾರೆಯರು ಅಭಿ ಮನೆಗೆ ಭೇಟಿ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮದುವೆ ಪೂರ್ವ ಕಾರ್ಯಗಳಿಗೆ ಈಗಾಗಲೇ ಚಾಲನೆ ದೊರಕಿದ್ದು, ಅರಿಶಿನ ಶಾಸ್ತ್ರ, ಮದರಂಗಿ ಶಾಸ್ತ್ರವನ್ನು ನೆರವೇರಿಸಲಾಗಿದೆ.
(1 / 6)

ಮದರಂಗಿ ಶಾಸ್ತ್ರದ ವೇಳೆ ಅಭಿಷೇಕ್‌ ಕೈ ಮೇಲೆ ಅಮ್ಮ ಸುಮಲತಾ ಮತ್ತು ಭಾವಿ ಪತ್ನಿ ಅವಿವಾ ಹೆಸರು ಮೂಡಿದೆ. ರೆಬೆಲ್‌ ಮತ್ತು ಮಂಡ್ಯ ಎಂಬ ಪದಗಳೂ ಇವೆ. 
(2 / 6)

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಅಭಿಷೇಕ್‌ ಮದುವೆ ತಯಾರಿಯ ಕೆಲವು ಫೋಟೋಗಳು ಹರಿದಾಡುತ್ತಿದ್ದು, ಈಗಾಗಲೇ ಅರಿಶಿನ ಶಾಸ್ತ್ರ ನೆರವೇರಿಸಲಾಗಿದೆ. ಮನೆಯನ್ನೂ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಹೂವು ಮತ್ತು ಹಸಿರು ತಳಿರು ತೋರಣದಿಂದ ಮನೆಯ ಮುಂದೆ ಚಪ್ಪರ ಹಾಕಲಾಗಿದೆ. ಜೂನ್‌ 4ರಂದು ಚಪ್ಪರ ಪೂಜೆ ನೆರವೇರಲಿದೆ. 
(3 / 6)

ಮದುವೆ ಹಿನ್ನೆಲೆಯಲ್ಲಿ ಜೆಪಿ ನಗರದಲ್ಲಿರುವ ಅಂಬಿ ಮನೆಗೆ ಸಿನಿಮಾ ಸೆಲೆಬ್ರಿಟಿಗಳ ಆಗಮನವಾಗುತ್ತಿದೆ. 
(4 / 6)

ನಟಿಯರಾದ ಪ್ರಿಯಾಂಕಾ ಉಪೇಂದ್ರ, ಮೇಘನಾ ರಾಜ್‌ ಸರ್ಜಾ ಸೇರಿ ಹಲವು ನಟ, ನಟಿಯರು ಆಗಮಿಸುತ್ತಿದ್ದಾರೆ. ಸುಮಲತಾ ಜತೆಗಿನ ಗ್ರೂಪ್‌ ಫೋಟೋಗಳೂ ವೈರಲ್‌ ಆಗುತ್ತಿವೆ. 
(5 / 6)

ಜೂನ್‌ 5ರಂದು ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅಭಿಷೇಕ್‌ ಮತ್ತು ಅವಿವಾ ಜೋಡಿ ಸಪ್ತಪದಿ ತುಳಿಯಲಿದೆ. 9:30ರಿಂದ 10:30ರ ನಡುವೆ ಸಲ್ಲುವ ಕರ್ಕಾಟಕ ಶುಭ ಲಗ್ನದ ಮುಹೂರ್ತದಲ್ಲಿ ಅವಿವಾಗೆ ಅಭಿಷೇಕ್‌ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಜೂನ್‌ 7ರಂದು ಪ್ಯಾಲೇಸ್‌ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಜೂನ್‌ 16ರಂದು ಮಂಡ್ಯದಲ್ಲಿ ಬೀಗರ ಊಟದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು