logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganapathy Sachchidananda Ashrama: ಸಿಂಹಪ್ರಿಯಾ ಮದುವೆಯಾಗ್ತಿರೋ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ನೋಡಿದ್ದೀರಾ?

Ganapathy Sachchidananda Ashrama: ಸಿಂಹಪ್ರಿಯಾ ಮದುವೆಯಾಗ್ತಿರೋ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ನೋಡಿದ್ದೀರಾ?

Jan 23, 2023 06:59 PM IST

ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿಗಳಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ, ಇದೇ ಜನವರಿ 26, ಗಣರಾಜ್ಯೋತ್ಸವದಂದು ಮದುವೆಯಾಗುತ್ತಿದ್ದಾರೆ. ಇನ್ನು ಮೂರು ದಿನಗಳಲ್ಲಿ ಈ ಜೋಡಿ ಸತಿ-ಪತಿಗಳಾಗಲಿದ್ದಾರೆ.

  • ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿಗಳಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ, ಇದೇ ಜನವರಿ 26, ಗಣರಾಜ್ಯೋತ್ಸವದಂದು ಮದುವೆಯಾಗುತ್ತಿದ್ದಾರೆ. ಇನ್ನು ಮೂರು ದಿನಗಳಲ್ಲಿ ಈ ಜೋಡಿ ಸತಿ-ಪತಿಗಳಾಗಲಿದ್ದಾರೆ.
ಅಭಿಮಾನಿಗಳು ಇಬ್ಬರ ಹೆಸರನ್ನು ಒಂದು ಗೂಡಿಸಿ 'ಸಿಂಹಪ್ರಿಯಾ' ಎಂದು ಕರೆಯುತ್ತಿರುವ ಹೆಸರು ಈ ಜೋಡಿಗೆ ಕೂಡಾ ಬಹಳ ಇಷ್ಟವಾಗಿದೆ. ಆದ್ದರಿಂದ ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ಕೂಡಾ ತಮ್ಮ ಹೆಸರನ್ನು ಸಿಂಹಪ್ರಿಯಾ ಎಂದು ಅಚ್ಚು ಮಾಡಿಸಿದ್ದಾರೆ. ಈಗಾಗಲೇ ಗಣ್ಯರಿಗೆ, ಕುಟುಂಬಸ್ಥರು, ಆಪ್ತ ಸ್ನೇಹಿತರಿಗೆ ಈ ಜೋಡಿ ವೆಡ್ಡಿಂಗ್‌ ಕಾರ್ಡ್‌ ನೀಡಿ ಮದುವೆಗೆ ಆಹ್ವಾನಿಸಿದೆ.  
(1 / 13)

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯಾ ಮದುವೆಯಾಗುತ್ತಿದ್ದಾರೆ. ನಾನು ಮೈಸೂರಿನವನಾಗಿದ್ದು ಚಾಮುಂಡೇಶ್ವರಿ ಬೆಟ್ಟದ ಬಳಿ ಇರುವ ಈ ಆಶ್ರಮದಲ್ಲಿ ಮದುವೆಯಾಗಬೇಕೆಂದು ಆಸೆ ಇತ್ತು. ಆದ್ದರಿಂದ ಹರಿಪ್ರಿಯಾ ಜೊತೆ ಮಾತನಾಡಿ, ಅಲ್ಲೇ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದೇವೆ ಎಂದು ವಸಿಷ್ಠ ಸಿಂಹ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. 
(2 / 13)
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯಾ ಮದುವೆಯಾಗುತ್ತಿದ್ದಾರೆ. ನಾನು ಮೈಸೂರಿನವನಾಗಿದ್ದು ಚಾಮುಂಡೇಶ್ವರಿ ಬೆಟ್ಟದ ಬಳಿ ಇರುವ ಈ ಆಶ್ರಮದಲ್ಲಿ ಮದುವೆಯಾಗಬೇಕೆಂದು ಆಸೆ ಇತ್ತು. ಆದ್ದರಿಂದ ಹರಿಪ್ರಿಯಾ ಜೊತೆ ಮಾತನಾಡಿ, ಅಲ್ಲೇ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದೇವೆ ಎಂದು ವಸಿಷ್ಠ ಸಿಂಹ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. (PC: Twitter)
ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ. ಕೆಲವು ದಿನಗಳ ಹಿಂದೆ ಸಿಂಹಪ್ರಿಯಾ, ಇವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಆ ಫೋಟೋಗಳನ್ನು ಸಂಸದ ಪ್ರತಾಪ್‌ ಸಿಂಹ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
(3 / 13)
ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ. ಕೆಲವು ದಿನಗಳ ಹಿಂದೆ ಸಿಂಹಪ್ರಿಯಾ, ಇವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಆ ಫೋಟೋಗಳನ್ನು ಸಂಸದ ಪ್ರತಾಪ್‌ ಸಿಂಹ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. (PC: Sri Ganapathy Sachchidananda Swamiji Facebook)
ಪ್ರವಾಸಿಗರಿಗಾಗಿ ಆಶ್ರಮದ ಪ್ರವೇಶ ದ್ವಾರದ ಒಳಗೆ ವಿಶಾಲವಾದ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಇದೆ. ಕೆಲವೊಂದು ವಿಶೇಷ ದಿನಗಳಲ್ಲಿ ಆಶ್ರಮಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. 
(4 / 13)
ಪ್ರವಾಸಿಗರಿಗಾಗಿ ಆಶ್ರಮದ ಪ್ರವೇಶ ದ್ವಾರದ ಒಳಗೆ ವಿಶಾಲವಾದ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಇದೆ. ಕೆಲವೊಂದು ವಿಶೇಷ ದಿನಗಳಲ್ಲಿ ಆಶ್ರಮಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. (PC: Twitter)
ಆಶ್ರಮದ ಒಳಗೆ ನೇರವಾಗಿ ತೆರಳಿದರೆ ಎಡಭಾಗದಲ್ಲಿ ನಾದ ಮಂಟಪ ಇದೆ. ಸ್ವಾಮೀಜಿಯವರ ಪ್ರವಚನ ಹಾಗೂ ಬಹುತೇಕ ಎಲ್ಲಾ ಕಾರ್ಯಕ್ರಮಗಳೂ ಇದೇ ನಾದ ಮಂಟಪದಲ್ಲಿ ನಡೆಯುತ್ತದೆ. ಇಲ್ಲಿ ಸಾವಿರಾರು ಮಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದೆ. 
(5 / 13)

ಅಲ್ಲಿಂದ ವಾಪಸಾದರೆ ಪ್ರವೇಶ ದ್ವಾರದ ಬಲ ಭಾಗದಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಸ್ವಾಮೀಜಿಯವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ದೇವಸ್ಥಾನ ಆರಂಭವಾಯ್ತು. ದೇವಸ್ಥಾನದ ಮೇಲ್ಬಾಗದಲ್ಲಿ ಸ್ಥಾಪಿಸಲಾಗಿರುವ 70 ಅಡಿಯ ಆಂಜನೇಯನ ಮೂರ್ತಿ ಈ ದೇವಸ್ಥಾನದ ಪ್ರಮುಖ ಆಕರ್ಷಣೆ. ವೀಕೆಂಡ್‌ ರಾತ್ರಿ, ಹನುಮಾನ್‌ ಮೂರ್ತಿಯ 3ಡಿ ಲೇಸರ್‌ ಶೋ ಕಣ್ಮನ ಸೆಳೆಯುತ್ತದೆ. 
(6 / 13)

ಹೆಸರೇ ಸೂಚಿಸುವಂತೆ ಈ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ನೀವು ಮನಸ್ಸಿನ ಕೋರಿಕೆಯನ್ನು ಪ್ರಾರ್ಥನೆ ಮಾಡಿ ಪೂರ್ಣಫಲ ಕಟ್ಟಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುವುದು ಎನ್ನಲಾಗಿದೆ. 
(7 / 13)

ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಪಕ್ಕದಲ್ಲಿರುವ (ಬಲಭಾಗ)  ವೆಂಕಟೇಶ್ವರ ದೇವಸ್ಥಾನ. 
(8 / 13)
ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಪಕ್ಕದಲ್ಲಿರುವ (ಬಲಭಾಗ)  ವೆಂಕಟೇಶ್ವರ ದೇವಸ್ಥಾನ. 
ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಎಡಭಾಗದಲ್ಲಿ ವಿಶ್ವಂ ಸಂಗ್ರಹಾಲಯವಿದೆ. ಈ ಮ್ಯೂಸಿಯಂನಲ್ಲಿ ಸಂಗೀತ ವಾದ್ಯಗಳು, ರತ್ನದ ಕಲ್ಲುಗಳು, ಹರಳುಗಳು,  ವರ್ಣಚಿತ್ರಗಳು ಹಾಗೂ ಇನ್ನಿತರ ಅಮೂಲ್ಯವಾದ ಸಂಗ್ರಹವಿದೆ. 1835 ಕ್ಕೂ ಮೊದಲಿನ ಅಂಚೆಚೀಟಿಗಳ ಸಂಪೂರ್ಣ ಸಂಗ್ರಹವಿದೆ. 
(9 / 13)

ದೇವಸ್ಥಾನದ ಹಿಂಭಾಗದಲ್ಲಿ ಶುಕವನ ಇದೆ. ಇಲ್ಲಿ ಅನೇಕ ರೀತಿಯ ಗಿಣಿಗಳನ್ನು ನೋಡಬಹುದು. ಈ ಗಿಣಿಗಳ ಕಲರವ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ನೀವು ಪಕ್ಷಿಗಳೊಂದಿಗೆ ಫೋಟೋ ಕೂಡಾ ತೆಗೆಸಿಕೊಳ್ಳಬಹುದು. 
(10 / 13)

ಶುಕವನದಲ್ಲಿ ಮಾತನಾಡುವ ಗಿಳಿಗಳಿವೆ. ನೀವು ಅಲ್ಲಿಂದ ವಾಪಸ್‌ ಬರುವಾಗ ಗಿಣಿಗಳು 'ಟಾ ಟಾ' ಹೇಳುವುದನ್ನು ಕೇಳಿ ಆಶ್ಚರ್ಯವಾಗುವುದು ಖಂಡಿತ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಗಿಣಿಗಳೊಂದಿಗೆ ಮಾತನಾಡುವ ವಿಡಿಯೋವನ್ನು ನೀವು ಯೂಟ್ಯೂಬ್‌ನಲ್ಲಿ ನೋಡಬಹುದು.
(11 / 13)

ಶುಕವನದ ಎದುರಿಗ್ ಬೋನ್ಸಾಯ್‌ ಗಾರ್ಡನ್‌ ಇದೆ. ಇಲ್ಲಿ ನಿಮ್ಮ ಮನೆಗೆ ಬೇಕಾದ ಬೋನ್ಸಾಯ್‌ ಗಿಡಗಳನ್ನು ಖರೀದಿಸಬಹುದು. 
(12 / 13)

ಆಶ್ರಮದ ಆವರಣದ ಉದ್ದಕ್ಕೂ ಇಂತಹ ಸುಂದರ ಶಿಲ್ಪಗಳು ನಿಮ್ಮನ್ನು ಆಕರ್ಷಿಸುತ್ತವೆ. 
(13 / 13)
ಆಶ್ರಮದ ಆವರಣದ ಉದ್ದಕ್ಕೂ ಇಂತಹ ಸುಂದರ ಶಿಲ್ಪಗಳು ನಿಮ್ಮನ್ನು ಆಕರ್ಷಿಸುತ್ತವೆ. 

    ಹಂಚಿಕೊಳ್ಳಲು ಲೇಖನಗಳು