Shubman gill Success story: ಮಗನಿಗಾಗಿ ಕೃಷಿಭೂಮಿಯನ್ನೇ ಕ್ರಿಕೆಟ್ ಮೈದಾನವಾಗಿಸಿದ್ರು ಅಪ್ಪ; ಅವರೇ ನನ್ನ ಹೀರೋ ಅಂದ್ರು ಗಿಲ್
Feb 02, 2023 06:45 PM IST
ಭಾರತ ಕ್ರಿಕೆಟ್ ತಂಡದಲ್ಲಿ ಯುವ ಕ್ರಿಕೆಟಿಗೆ ಶುಬ್ಮನ್ ಗಿಲ್ ಮಿಂಚು ಹರಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕದ ಸಾಧನೆ ಮಾಡಿದ್ದ ಅವರು, ಕಿವೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ನಿರ್ಮಿಸಿದರು. 23ರ ಹರೆಯದ ಗಿಲ್, ಭಾರತ ಕ್ರಿಕೆಟ್ನ ಭರವಸೆಯ ಬೆಳಕಾಗಿದ್ದಾರೆ. ಈಗಾಗಲೇ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯವರಂತಹ ದಿಗ್ಗಜರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲೂ ನಿರ್ಭೀತರಾಗಿ ಬ್ಯಾಟ್ ಬೀಸುವ ಇವರ ಚಾಣಾಕ್ಷ ಬ್ಯಾಟಿಂಗ್ ಸಮರ್ಥ್ಯಕ್ಕೆ ಕ್ರಿಕೆಟ್ ಜಗತ್ತು ತಲೆದೂಗುತ್ತಿದೆ. ಇದರ ಹಿಂದೆ ಇವರ ಅಪಾರ ಶ್ರಮವಿದೆ. ಸಣ್ಣ ವಯಸ್ಸಿನಕಲ್ಲೇ ದೊಡ್ಡ ಕ್ರಿಕೆಟರ್ ಆಗಬೇಕೆನ್ನುವ ಇವರ ಕನಸಿಗೆ ತಂದೆಯ ಅಪಾರ ಬೆಂಬಲವಿದೆ.
- ಭಾರತ ಕ್ರಿಕೆಟ್ ತಂಡದಲ್ಲಿ ಯುವ ಕ್ರಿಕೆಟಿಗೆ ಶುಬ್ಮನ್ ಗಿಲ್ ಮಿಂಚು ಹರಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕದ ಸಾಧನೆ ಮಾಡಿದ್ದ ಅವರು, ಕಿವೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ನಿರ್ಮಿಸಿದರು. 23ರ ಹರೆಯದ ಗಿಲ್, ಭಾರತ ಕ್ರಿಕೆಟ್ನ ಭರವಸೆಯ ಬೆಳಕಾಗಿದ್ದಾರೆ. ಈಗಾಗಲೇ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯವರಂತಹ ದಿಗ್ಗಜರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲೂ ನಿರ್ಭೀತರಾಗಿ ಬ್ಯಾಟ್ ಬೀಸುವ ಇವರ ಚಾಣಾಕ್ಷ ಬ್ಯಾಟಿಂಗ್ ಸಮರ್ಥ್ಯಕ್ಕೆ ಕ್ರಿಕೆಟ್ ಜಗತ್ತು ತಲೆದೂಗುತ್ತಿದೆ. ಇದರ ಹಿಂದೆ ಇವರ ಅಪಾರ ಶ್ರಮವಿದೆ. ಸಣ್ಣ ವಯಸ್ಸಿನಕಲ್ಲೇ ದೊಡ್ಡ ಕ್ರಿಕೆಟರ್ ಆಗಬೇಕೆನ್ನುವ ಇವರ ಕನಸಿಗೆ ತಂದೆಯ ಅಪಾರ ಬೆಂಬಲವಿದೆ.