logo
ಕನ್ನಡ ಸುದ್ದಿ  /  Photo Gallery  /  Sugar Free Dessert Recipes For Diwali 2022

Sugar free dessert: ಶುಗರ್​ ಇದೆ ಅಂತಾ ಚಿಂತೆ ಮಾಡಬೇಡಿ: ದೀಪಾವಳಿಗೆ ಸಕ್ಕರೆ ಮುಕ್ತ ಈ ಸಿಹಿತಿಂಡಿಗಳನ್ನು ಮಾಡಿ ತಿನ್ನಿ

Oct 25, 2022 05:18 PM IST

ಎಲ್ಲರೂ ದೀಪಾವಳಿ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿರುತ್ತಾರೆ. ಆದರೆ ಮಧುಮೇಹ ಇರುವವರು ಸಿಕ್ಕಿದ್ದೆಲ್ಲಾ ಸಿಹಿ ಪದಾರ್ಥಗಳನ್ನು ತಿನ್ನಲು ಆಗುವುದಿಲ್ಲ. ಆರೋಗ್ಯದ ಕಡೆಗೂ ಗಮನ ಕೊಡಬೇಕು. ಹಾಗಂತ ಅವರು ಬಾಯಿಕಟ್ಟಿ ಕೂರಬೇಕೆಂದೂ ಇಲ್ಲ. ಶುಗರ್​ ಇರುವವರಿಗೆ ಶುಗರ್ ಫ್ರೀ ಸಿಹಿತಿಂಡಿಗಳನ್ನು ನೀವು ಮಾಡಿಕೊಡಬಹುದು. ಶುಗರ್​ ಇರುವವರಿಗೆ ಸಕ್ಕರೆಯನ್ನು ತಪ್ಪಿಸಲು ಹಾಗೂ ಸಕ್ಕರೆ ಬದಲಿಗೆ ಬೆಲ್ಲವನ್ನು ಮಿತವಾಗಿ ಬಳಸಲು ಸೂಚಿಸಲಾಗುತ್ತದೆ. ಹೀಗಾಗಿ ಬೆಲ್ಲವನ್ನು ಬಳಸಿ ತಯಾರಿಸಬಹುದಾದ ಸಿಹಿತಿಂಡಿಗಳು ಯಾವುವೆಂದು ನೋಡೋಣ ಬನ್ನಿ..

  • ಎಲ್ಲರೂ ದೀಪಾವಳಿ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿರುತ್ತಾರೆ. ಆದರೆ ಮಧುಮೇಹ ಇರುವವರು ಸಿಕ್ಕಿದ್ದೆಲ್ಲಾ ಸಿಹಿ ಪದಾರ್ಥಗಳನ್ನು ತಿನ್ನಲು ಆಗುವುದಿಲ್ಲ. ಆರೋಗ್ಯದ ಕಡೆಗೂ ಗಮನ ಕೊಡಬೇಕು. ಹಾಗಂತ ಅವರು ಬಾಯಿಕಟ್ಟಿ ಕೂರಬೇಕೆಂದೂ ಇಲ್ಲ. ಶುಗರ್​ ಇರುವವರಿಗೆ ಶುಗರ್ ಫ್ರೀ ಸಿಹಿತಿಂಡಿಗಳನ್ನು ನೀವು ಮಾಡಿಕೊಡಬಹುದು. ಶುಗರ್​ ಇರುವವರಿಗೆ ಸಕ್ಕರೆಯನ್ನು ತಪ್ಪಿಸಲು ಹಾಗೂ ಸಕ್ಕರೆ ಬದಲಿಗೆ ಬೆಲ್ಲವನ್ನು ಮಿತವಾಗಿ ಬಳಸಲು ಸೂಚಿಸಲಾಗುತ್ತದೆ. ಹೀಗಾಗಿ ಬೆಲ್ಲವನ್ನು ಬಳಸಿ ತಯಾರಿಸಬಹುದಾದ ಸಿಹಿತಿಂಡಿಗಳು ಯಾವುವೆಂದು ನೋಡೋಣ ಬನ್ನಿ..
ತೆಂಗಿನಕಾಯಿ ಲಡ್ಡು: ಶುಗರ್​ ಇರುವವರು ಚಿಂತೆ ಮಾಡಬೇಡಿ. ನಿಮಗಾಗಿ ತೆಂಗಿನಕಾಯಿ ಲಡ್ಡು ಇದೆ. ತೆಂಗಿನ ಕಾಯಿ ಪುಡಿ ಹಾಗೂ ಡ್ರೈ ಫ್ರೂಟ್ಸ್​ಗೆ ನೀವು ಸಕ್ಕರೆ ಬದಲಿಗೆ ಬೆಲ್ಲ ಸೇರಿಸಿ ಲಡ್ಡು ತಯಾರಿಸಿ ಸವಿಯಬಹುದು.
(1 / 6)
ತೆಂಗಿನಕಾಯಿ ಲಡ್ಡು: ಶುಗರ್​ ಇರುವವರು ಚಿಂತೆ ಮಾಡಬೇಡಿ. ನಿಮಗಾಗಿ ತೆಂಗಿನಕಾಯಿ ಲಡ್ಡು ಇದೆ. ತೆಂಗಿನ ಕಾಯಿ ಪುಡಿ ಹಾಗೂ ಡ್ರೈ ಫ್ರೂಟ್ಸ್​ಗೆ ನೀವು ಸಕ್ಕರೆ ಬದಲಿಗೆ ಬೆಲ್ಲ ಸೇರಿಸಿ ಲಡ್ಡು ತಯಾರಿಸಿ ಸವಿಯಬಹುದು.
ಹೆಸರು ಬೇಳೆ ಹಲ್ವಾ: ಸಕ್ಕರೆ ಹಾಕಿಯೇ ಹೆಸರು ಬೇಳೆ ಹಲ್ವಾ ಮಾಡಬೇಕೆಂದಿಲ್ಲ. ಬೆಲ್ಲವನ್ನು ಹಾಕಿಯೂ ಹಲ್ವಾ ಮಾಡಿ ತಿನ್ನಬಹುದು.
(2 / 6)
ಹೆಸರು ಬೇಳೆ ಹಲ್ವಾ: ಸಕ್ಕರೆ ಹಾಕಿಯೇ ಹೆಸರು ಬೇಳೆ ಹಲ್ವಾ ಮಾಡಬೇಕೆಂದಿಲ್ಲ. ಬೆಲ್ಲವನ್ನು ಹಾಕಿಯೂ ಹಲ್ವಾ ಮಾಡಿ ತಿನ್ನಬಹುದು.
ಫ್ರೂಟ್​ ಸಲಾಡ್​: ಹಾಲಿನ ಜೊತೆ ಬಾಳೆಹಣ್ಣು, ಸೇಬು, ದ್ರಾಕ್ಷಿ, ದಾಳಿಂಬೆ ಹೀಗೆ ಬಗೆ ಬಗೆಯ ಹಣ್ಣುಗಳನ್ನು ಬಳಸಿ ಫ್ರೂಟ್​ ಸಲಾಡ್ ಮಾಡಿ ತಿನ್ನಿ. ಆದರೆ ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಬಳಸಬಹುದು.
(3 / 6)
ಫ್ರೂಟ್​ ಸಲಾಡ್​: ಹಾಲಿನ ಜೊತೆ ಬಾಳೆಹಣ್ಣು, ಸೇಬು, ದ್ರಾಕ್ಷಿ, ದಾಳಿಂಬೆ ಹೀಗೆ ಬಗೆ ಬಗೆಯ ಹಣ್ಣುಗಳನ್ನು ಬಳಸಿ ಫ್ರೂಟ್​ ಸಲಾಡ್ ಮಾಡಿ ತಿನ್ನಿ. ಆದರೆ ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಬಳಸಬಹುದು.
ಕಡಲೆ ಹಿಟ್ಟಿನ ಲಡ್ಡು/ಬೇಸನ್​ ಲಡ್ಡು: ಕಡಲೆ ಹಿಟ್ಟಿನಿಂದ ಮಾಡುವ ಲಡ್ಡುವನ್ನು ನೀವು ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸಿ ತಯಾರಿಸಿ ಸವಿಯಬಹುದು.
(4 / 6)
ಕಡಲೆ ಹಿಟ್ಟಿನ ಲಡ್ಡು/ಬೇಸನ್​ ಲಡ್ಡು: ಕಡಲೆ ಹಿಟ್ಟಿನಿಂದ ಮಾಡುವ ಲಡ್ಡುವನ್ನು ನೀವು ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸಿ ತಯಾರಿಸಿ ಸವಿಯಬಹುದು.
ಮೈಸೂರು ಪಾಕ್: ಬೆಲ್ಲ ಮತ್ತು ತುಪ್ಪ ಬಳಸಿ ತಯಾರಿಸುವ ಮೈಸೂರು ಪಾಕ್​ ನಿಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.
(5 / 6)
ಮೈಸೂರು ಪಾಕ್: ಬೆಲ್ಲ ಮತ್ತು ತುಪ್ಪ ಬಳಸಿ ತಯಾರಿಸುವ ಮೈಸೂರು ಪಾಕ್​ ನಿಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.
ಈ ಮೇಲಿನ ಸಿಹಿತಿಂಡಿಗಳನ್ನು ಮನೆಯಲ್ಲಿ ಮಾಡಿದರೆ ಮಿತವಾಗಿ ತಿಂದು ಈ ದೀಪಾವಳಿ ಹಬ್ಬವನ್ನು ಸಂಭ್ರಮಿಸಿ..
(6 / 6)
ಈ ಮೇಲಿನ ಸಿಹಿತಿಂಡಿಗಳನ್ನು ಮನೆಯಲ್ಲಿ ಮಾಡಿದರೆ ಮಿತವಾಗಿ ತಿಂದು ಈ ದೀಪಾವಳಿ ಹಬ್ಬವನ್ನು ಸಂಭ್ರಮಿಸಿ..

    ಹಂಚಿಕೊಳ್ಳಲು ಲೇಖನಗಳು