logo
ಕನ್ನಡ ಸುದ್ದಿ  /  ಕ್ರೀಡೆ  /  World Richest Cricketer: ಸಚಿನ್, ಕೊಹ್ಲಿ, ಧೋನಿ ಅಲ್ಲ.. 15 ವರ್ಷಗಳ ಹಿಂದೆ ನಿವೃತ್ತಿ ಹೇಳಿದ್ದ ಈತನೇ ವಿಶ್ವದ ಶ್ರೀಮಂತ ಕ್ರಿಕೆಟಿಗ!

World Richest Cricketer: ಸಚಿನ್, ಕೊಹ್ಲಿ, ಧೋನಿ ಅಲ್ಲ.. 15 ವರ್ಷಗಳ ಹಿಂದೆ ನಿವೃತ್ತಿ ಹೇಳಿದ್ದ ಈತನೇ ವಿಶ್ವದ ಶ್ರೀಮಂತ ಕ್ರಿಕೆಟಿಗ!

HT Kannada Desk HT Kannada

Mar 15, 2023 07:09 AM IST

ಸಚಿನ್, ಧೋನಿ, ಕೊಹ್ಲಿ

    • World Richest Cricketer: ಮ್ಯಾಗ್​ಜಿನ್​​​​​​​ವೊಂದು ವರದಿಯ ಪ್ರಕಾರ, 15 ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆ್ಯಡಂ ಗಿಲ್‌ಕ್ರಿಸ್ಟ್‌ 2023ರ ವಿಶ್ವದ ಶ್ರೀಮಂತ ಕ್ರಿಕೆಟಿಗ ಎಂಬ ಮಾಹಿತಿ ಲಭ್ಯವಾಗಿದೆ.
ಸಚಿನ್, ಧೋನಿ, ಕೊಹ್ಲಿ
ಸಚಿನ್, ಧೋನಿ, ಕೊಹ್ಲಿ (Twitter)

ಹಾಕಿ ನಮ್ಮ ರಾಷ್ಟ್ರೀಯ ಆಟ ಎಂದೆನಿಸಿದ್ದರೂ ನಿಜಕ್ಕೂ ಈ ಮನ್ನಣೆ ಸಲ್ಲಬೇಕಾಗಿ­ರುವುದು ಕ್ರಿಕೆಟ್‌ಗೆ.! ಈ ನೆಲ ದೊಡ್ಡ ಸವ್ಯಸಾಚಿಗಳನ್ನು ಸೃಷ್ಟಿಸಿದೆ. ಗಲ್ಲಿ ಗಲ್ಲಿಗಳೂ ಕ್ರಿಕೆಟ್‌ ಕತೆ ಹೇಳುತ್ತವೆ. ಪುಟ್ಟ ಮಕ್ಕಳು ಬ್ಯಾಟು ಬಾಲು ದೀಕ್ಷೆ ಪಡೆದುಕೊಂಡು ದೊಡ್ಡವರಾಗುತ್ತಾರೆ. ಈ ದೃಷ್ಟಿಯಿಂದ ಭಾರತದಲ್ಲಿ ಕ್ರಿಕೆಟ್​ ಒಂದು ಧರ್ಮವಾಗಿ ಬೆಳೆದು ನಿಂತಿದೆ. ಕ್ರಿಕೆಟಿಗರನ್ನು ಅಭಿಮಾನಿಗಳು ಆರಾಧಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ಭಾರತದ ಜನಪ್ರಿಯ ಕ್ರೀಡೆ ಎಂಬ ಖ್ಯಾತಿಗೂ ಒಳಗಾಗಿದೆ. ಅದರಲ್ಲೂ ಟೀಮ್​ ಇಂಡಿಯಾದ ಕ್ರಿಕೆಟಿಗರಂತೂ ವರ್ಷದಿಂದ ವರ್ಷಕ್ಕೆ ಕೋಟಿ ಕೋಟಿಯ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​, ಐಪಿಎಲ್, ಜಾಹೀರಾತು.. ಹೀಗೆ ಈ ಎಲ್ಲದರಿಂದಲೂ ದುಡ್ಡಿನ ಹೊಳೆಯಲ್ಲಿ ಮಿಂದೇಳುತ್ತಿದ್ದಾರೆ. ಅದರಲ್ಲೂ ದಿಗ್ಗಜರಾದ ಸಚಿನ್​ ತೆಂಡೂಲ್ಕರ್ (Sachin Tendulkar)​, ವಿರಾಟ್​ ಕೊಹ್ಲಿ (Virat Kohli), ಎಂ.ಎಸ್​ ಧೋನಿ (MS Dhoni) ಮನೆಯ ಮುಂದೆ ಜಾಹೀರಾತು ಕಂಪನಿಗಳು ಕ್ಯೂ ನಿಲ್ಲುತ್ತವೆ ಎಂಬುದು ವಿಶೇಷ.

ಹಾಗಾಗಿ, ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂಬುದು ಆಗಾಗ್ಗೆ ಕುತೂಹಲ ಕೆರಳಿಸುವ ವಿಷಯವಾಗಿದೆ. ಈ ವಿಷಯ ಕಿವಿಗೆ ಬಿದ್ದಾಗ ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಹೆಸರು ಥಟ್‌ ಅಂತ ಹೊಳೆಯುವುದು ಸಾಮಾನ್ಯ. ಆದರೆ, ವಿಶ್ವದ ಶ್ರೀಮಂತ ಕ್ರಿಕೆಟಿಗ (World Richest Cricketer) ಯಾರು..?

ಆದರೆ, ಮ್ಯಾಗ್​ಜಿನ್​​​​​​​ವೊಂದು ವರದಿಯ ಪ್ರಕಾರ, 15 ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆ್ಯಡಂ ಗಿಲ್‌ಕ್ರಿಸ್ಟ್‌ (Adam Gilchrist) 2023ರ ವಿಶ್ವದ ಶ್ರೀಮಂತ ಕ್ರಿಕೆಟಿಗ ಎಂಬ ಮಾಹಿತಿ ಲಭ್ಯವಾಗಿದೆ. ಅದಲ್ಲದೆ ಅವರ ಆದಾಯದ ಮೂಲವೇನು.? ಇಷ್ಟು ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎಂಬುದರ ವಿವರಗಳನ್ನೂ ನೀಡಿದೆ.

'ಸಿಇಓ ವರ್ಲ್ಡ್ ಮ್ಯಾಗಜೀನ್' (CEOWORLD magazine) ವರದಿಯ ಪ್ರಕಾರ, ಈ ವಿಧ್ವಂಸಕ ಓಪನರ್ ಆ್ಯಡಂ ಗಿಲ್‌ಕ್ರಿಸ್ಟ್ ವಿಶ್ವದ ಶ್ರೀಮಂತ ಕ್ರಿಕೆಟಿಗ. ಅಂದಾಜು 3,130 ಕೋಟಿ ರೂಪಾಯಿ (380 ಮಿಲಿಯನ್‌ ಡಾಲರ್‌) ನಿವ್ವಳ ಮೌಲ್ಯ ಹೊಂದಿದ್ದಾರೆ. ಇನ್ನೂ 2ನೇ ಸ್ಥಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್‌ ಇದ್ದಾರೆ. ಸಚಿನ್‌ ನಿವ್ವಳ ಮೌಲ್ಯ 1400 ಕೋಟಿ (170 ಮಿಲಿಯನ್‌ ಡಾಲರ್‌) ಎಂದು ಹೇಳಲಾಗಿದೆ. ಇನ್ನೂ 3ನೇ ಸ್ಥಾನದಲ್ಲಿ ಟೀಮ್‌ ಇಂಡಿಯಾ ಮಾಜಿ ನಾಯಕ MS ಧೋನಿ ಇದ್ದು, ಮಾಹೀ ನಿವ್ವಳ ಮೌಲ್ಯ 947 ಕೋಟಿ ರೂಪಾಯಿ (115 ಮಿಲಿಯನ್‌ ಯುಎಸ್‌ ಡಾಲರ್‌) ಆಗಿದೆ.

ಇನ್ನೂ ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ನಾಯಕ ವಿರಾಟ್‌ ಕೊಹ್ಲಿ, 4ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಕೊಹ್ಲಿ, ನಿವ್ವಳ ಮೌಲ್ಯ 922 ಕೋಟಿ ರೂಪಾಯಿ ಆಗಿದ್ದು 4ನೇ ಸ್ಥಾನದಲ್ಲಿದ್ದಾರೆ. ವಿಶೇಷ ಅಂದರೆ ಸಚಿನ್, ಕೊಹ್ಲಿ ಹಾಗೂ ಧೋನಿ ಪ್ರಸಿದ್ಧ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಗಿಲ್‌ಕ್ರಿಸ್ಟ್‌ಗಿಂತ ಕಡಿಮೆ ಮೌಲ್ಯ ಹೊಂದಿದ್ದಾರೆ.

ಗಿಲ್​ಕ್ರಿಸ್ಟ್​ಗೆ ಬರುವ ಆದಾಯ ಎಲ್ಲಿಂದ.?

ಕ್ರಿಕೆಟ್​ನಿಂದ ಮಾತ್ರವಲ್ಲ, ಪ್ರಸಿದ್ಧ ಕಂಪನಿಗಳಿಂದಲೂ ಗಿಲ್‌ಕ್ರಿಸ್ಟ್‌ ಭಾರೀ ಸಂಪಾದನೆ ಮಾಡುತ್ತಿದ್ದಾರೆ. ಕಂಪನಿಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು, ದೊಡ್ಡ ಮೊತ್ತದ ವೇತನವನ್ನೇ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕ್ರಿಕೆಟ್‌ ಲೀಗ್‌ಗಳಲ್ಲಿ ಹಾಗೂ ವಿಶ್ಲೇಷಕರಾಗಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ. ಗಿಲ್‌ಕ್ರಿಸ್ಟ್‌ನ ನಿವ್ವಳ ಮೌಲ್ಯವನ್ನು ಹೆಚ್ಚಿಸುವಲ್ಲಿ ರಿಯಲ್ ಎಸ್ಟೇಟ್ ಕೂಡ ದೊಡ್ಡ ಪಾತ್ರವನ್ನು ವಹಿಸಿದೆ.

ಟಾಪ್​ -10ರಲ್ಲಿ ಯುವಿ, ಸೆಹ್ವಾಗ್​.!

ಭಾರತದ ಮಾಜಿ ಆಲ್​ರೌಂಡರ್​ ಯುವರಾಜ್‌ ಸಿಂಗ್‌ (Yuvraj Singh), ವೀರೇಂದ್ರ ಸೆಹ್ವಾಗ್‌ (Virender Sehwag) ವಿಶ್ವದ ಅಗ್ರ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಯುವರಾಜ್‌ ಸಿಂಗ್‌ 288 ಕೋಟಿ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದ್ದರೆ, ವೀರೇಂದ್ರ ಸೆಹ್ವಾಗ್‌ 329 ಕೋಟಿಯೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.

ವಿಶ್ವದ ಟಾಪ್ -10 ಶ್ರೀಮಂತ ಕ್ರಿಕೆಟಿಗರು (2023ರವರೆಗೆ)

ಆಟಗಾರದೇಶ ಮೌಲ್ಯ
ಆ್ಯಡಂ ಗಿಲ್​ಕ್ರಿಸ್ಟ್​ಆಸ್ಟ್ರೇಲಿಯಾ3130 ಕೋಟಿ
ಸಚಿನ್ ತೆಂಡೂಲ್ಕರ್​​ಭಾರತ1400 ಕೋಟಿ
ಎಂ.ಎಸ್​.ಧೋನಿಭಾರತ947 ಕೋಟಿ
ವಿರಾಟ್​ ಕೊಹ್ಲಿಭಾರತ922 ಕೋಟಿ
ರಿಕಿ ಪಾಂಟಿಂಗ್​​ಆಸ್ಟ್ರೇಲಿಯಾ576 ಕೋಟಿ
ಜಾಕ್​ ಕಾಲೀಸ್​​​​ಸೌತ್​ ಆಫ್ರಿಕಾ576 ಕೋಟಿ
ಬ್ರಿಯಾನ್​ ಲಾರಾ ವೆಸ್ಟ್​ ಇಂಡೀಸ್​​494 ಕೋಟಿ
ವೀರೇಂದ್ರ ಸೆಹ್ವಾಗ್​​​​ಭಾರತ329 ಕೋಟಿ
ಯುವರಾಜ್​ ಸಿಂಗ್​​​​ಭಾರತ288 ಕೋಟಿ
ಸ್ಟೀವ್​ಸ್ಮಿತ್​​​​ಆಸ್ಟ್ರೇಲಿಯಾ247 ಕೋಟಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ