logo
ಕನ್ನಡ ಸುದ್ದಿ  /  Sports  /  Cricket News Pakistan Cricketer Salman Butt Makes Comparison Between Team India Captain Rohit Sharma And Ms Dhoni Jra

Salman Butt: ಧೋನಿ ರೋಹಿತ್ ನಡುವೆ ಅಜಗಜಾಂತರವಿದೆ; ಭಾರತದ ನಾಯಕನ ಕುರಿತು ಪಾಕ್ ಮಾಜಿ ಕ್ರಿಕೆಟಿಗ ಹೇಳಿದ್ದೇನು

Jayaraj HT Kannada

May 31, 2023 12:03 PM IST

ಎಂಎಸ್ ಧೋನಿ, ರೋಹಿತ್ ಶರ್ಮಾ

    • ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಲ್ಮಾನ್ ಬಟ್, ಎಂಎಸ್‌ ಧೋನಿ ಮತ್ತು ರೋಹಿತ್‌ ಶರ್ಮಾ ನಡುವೆ ಹೋಲಿಕೆ ಮಾಡುವಾಗ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.
ಎಂಎಸ್ ಧೋನಿ, ರೋಹಿತ್ ಶರ್ಮಾ
ಎಂಎಸ್ ಧೋನಿ, ರೋಹಿತ್ ಶರ್ಮಾ (IPL)

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಸೋಮವಾರ ರಾತ್ರಿ 2023ರ ಐಪಿಎಲ್‌ ಟ್ರೋಫಿ (IPL 2023 Finals) ಎತ್ತಿಹಿಡಿದು ಸಂಭ್ರಮಿಸಿತು. ಫೈನಲ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಸೋಲಿಸಿದರು. ಆ ಮೂಲಕ ಧೋನಿ ಪಡೆಯು ರೋಹಿತ್ ಶರ್ಮಾ ನಾಯಕತ್ವದಲ್ಲಿ ಐದು ಟ್ರೋಫಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನು ಸರಿಗಟ್ಟಿತು.

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಐಪಿಎಲ್‌ ಇತಿಹಾಸದಲ್ಲಿ ಧೋನಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಯಶಸ್ವಿ ನಾಯಕರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇದಕ್ಕೆ ಅಂಕಿ ಅಂಶಗಳು ಹಾಗೂ ಟ್ರೋಫಿಗಳ ಸಂಖ್ಯೆಯೇ ಸಾಕ್ಷಿ. ಆದರೆ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt), ಇಬ್ಬರಿಬ್ಬರ ನಡುವೆ ಹೋಲಿಕೆ ಮಾಡುವಾಗ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.

ಈ ಕುರಿತಾಗಿ ಯೂಟ್ಯೂಬ್‌ ಲೈವ್‌ನಲ್ಲಿ ಮಾತನಾಡಿದ ಬಟ್‌, ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಫಿಟ್‌ನೆಸ್ ಆಧಾರದ ಮೇಲೆ ಧೊನಿ ಮತ್ತು ರೋಹಿತ್ ಶರ್ಮಾ ನಡುವಿನ ವ್ಯತ್ಯಾಸದ ಬಗ್ಗೆ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಧೋನಿ ಮತ್ತು ರೋಹಿತ್ ನಡುವೆ ಫಿಟ್‌ನೆಸ್‌ ವಿಚಾರದಲ್ಲಿ ಅಜಗಜಾಂತರ ಇದೆ ಎಂದು ಹೇಳಿದಾರೆ. ಹೋಲಿಕೆ ಮಾಡಿವ ವೇಳೆ, ಸಿಎಸ್‌ಕೆ ನಾಯಕ ಮಾಹಿ ಕುರಿತಾಗಿ ಬಟ್‌ ಏನನ್ನೂ‌ ಹೇಳಿಲ್ಲ. ಆದರೆ, ಉತ್ತಮ ಫಿಟ್ನೆಸ್ ಪಾಡಿಕೊಳ್ಳದ ಟೀಮ್ ಇಂಡಿಯಾ ನಾಯಕನನ್ನು ಬಟ್ ಟೀಕಿಸಿದ್ದಾರೆ.

“ಇಬ್ಬರ ನಡುವೆ ಅಜಗಜಾಂತರವಿದೆ. ರೋಹಿತ್ ಶರ್ಮಾ ಭಾರತ ಕ್ರಿಕೆಟ್‌ ತಂಡದಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದಾರೆ. ಅವರು ಭಾರತ ತಂಡದ ನಾಯಕ. ಹೀಗಾಗಿ ಎಲ್ಲಾ ವಿಚಾರಗಳಲ್ಲೂ ಅವರು ತಂಡದ ಇತರ ಸದಸ್ಯರಿಗೆ ಮಾದರಿಯಾಗುವ ಮೂಲಕ ತಂಡವನ್ನು ಮುನ್ನಡೆಸಬೇಕು. ಇದರಲ್ಲಿ ಫಿಟ್ನೆಸ್ ಬಹಳ ಮುಖ್ಯವಾದ ಅಂಶ. ನಾಯಕನಾಗಿ ನಿಮ್ಮ ತಂಡದ ಆಟಗಾರರಿಂದ ಏನನ್ನಾದರೂ ಬಯಸುವುದಕ್ಕೂ ಮುನ್ನ, ಅದು ನಿಮ್ಮಲ್ಲೂ ಇರಬೇಕು. ನೀವು ಪ್ರತಿಯೊಂದರಲ್ಲೂ ಅಗ್ರಸ್ಥಾನದಲ್ಲಿರಬೇಕು,” ಎಂದು ಬಟ್ ಶರ್ಮಾ ಫಿಟ್‌ನೆಸ್‌ ಕುರಿತು ಟೀಕಿಸಿದ್ದಾರೆ.

“ರೋಹಿತ್ ಶರ್ಮಾ ಅವರನ್ನು ನೋಡಿದಾಗ, ಫಿಟ್ನೆಸ್ ವಿಚಾರದಲ್ಲಿ ಅವರು ಇನ್ನಷ್ಟು ಸುಧಾರಿಸಬೇಕಿತ್ತು ಎಂದು ಅನಿಸುತ್ತದೆ. ಫಿಟ್ನೆಟ್‌ ಉತ್ತಮವಾಗಿದ್ದರೆ ಅವರ ಬ್ಯಾಟಿಂಗ್ ಮತ್ತು ಆತ್ಮವಿಶ್ವಾಸ ಕೂಡಾ ಸುಧಾರಿಸುತ್ತದೆ. ಈ ಬಗ್ಗೆ ನಾವು ಬಹಳ ಸಮಯದಿಂದ ಮಾತನಾಡುತ್ತಿದ್ದೇವೆ. ಆದರೆ ಅವರು ಏಕೆ ಫಿಟ್ ಆಗಿಲ್ಲ ಎಂದು ನನಗೆ ತಿಳಿದಿಲ್ಲ. ಬಹುಶಃ ಅವರೇ ಇದಕ್ಕೆ ಕಾರಣ ತಿಳಿದಿರಬಹುದು,” ಎಂದು ಬಟ್ ಹೇಳಿದ್ದಾರೆ.

ಅತ್ತ ತಮ್ಮ 41ನೇ ವಯಸ್ಸಿನಲ್ಲಿಯೂ, ಧೋನಿ ಹೆಚ್ಚು ಫಿಟ್‌ ಆಗಿರುವಂತೆ ಕಾಣುತ್ತದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ತಡವಾಗಿ ಮೈದಾನಕ್ಕೆ ಆಗಮಿಸುವ ಧೋನಿ, ವಿಕೆಟ್‌ಗಳ ನಡುವೆ ವೇಗವಾಗಿ ಓಡುತ್ತಾರೆ.‌ ಸ್ಟಂಪ್ ಹಿಂದೆಯೂ ಅವರು ವೇಗವಾಗಿ ಕೆಲಸ ಮಾಡುತ್ತಾರೆ. ಐಪಿಎಲ್ ಫೈನಲ್‌ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರನ್ನು ಸ್ಟಂಪ್ ಔಟ್‌ ಮಾಡಲು ಅವರು ಕೇವಲ 0.1 ಸೆಕೆಂಡುಗಳನ್ನು ಮಾತ್ರ ತೆಗೆದುಕೊಂಡಿದ್ದರು.

ಸದ್ಯ ಭಾರತದಲ್ಲಿ ಐಪಿಎಲ್‌ ಮುಗಿದಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್‌ ಪಂದ್ಯದಲ್ಲಿ ಭಾಗಿಯಾಗಲು ಟೀಮ್‌ ಇಂಡಿಯಾ ಆಟಗಾರರು ಲಂಡನ್‌ಗೆ ಹಾರಿದ್ದಾರೆ. ಲಂಡನ್‌ನಲ್ಲಿ ಈಗಾಗಲೇ ಅನೇಕ ಆಟಗಾರರು ತರಬೇತಿ ಆರಂಭಿಸಿದ್ದಾರೆ. ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕೂಡಾ ಮಂಗಳವಾರ ತಂಡ ಸೇರಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು