ಐಪಿಎಲ್ 2024: ಐಪಿಎಲ್ 2024 ಲೈವ್ ಸ್ಕೋರ್, ಪಾಯಿಂಟ್ಸ್ ಟೇಬಲ್, IPL ಇಂದಿನ ಪಂದ್ಯದ ವೇಳಾಪಟ್ಟಿ, ಐಪಿಎಲ್ ಆಟಗಾರರು, ಐಪಿಎಲ್ ತಂಡ, ಐಪಿಎಲ್ ಪಂದ್ಯದ ಫಲಿತಾಂಶದ ಅಪ್‌ಡೇಟ್ಸ್‌ - ಹಿಂದೂಸ್ತಾನ್ ಟೈಮ್ಸ್ ಕನ್ನಡ
ABANDONEDMatch 70 Guwahati
RR
KKR
Match Abandoned
ABANDONEDMatch 66 Hyderabad
SRH
GT
Match Abandoned without toss
ABANDONEDMatch 63 Ahmedabad
GT
KKR
Match Abandoned without toss

ಐಪಿಎಲ್‌ 2024

IPL 2024 Latest News: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್‌ನ 17 ನೇ ಸೀಸನ್ ಇದು. 2008 ರಲ್ಲಿ ಪ್ರಾರಂಭವಾದ ಈ ಮೆಗಾ ಲೀಗ್ ಈಗಾಗಲೇ 16 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. 8 ತಂಡಗಳೊಂದಿಗೆ ಪ್ರಾರಂಭವಾದ ಈ ಲೀಗ್ ಪ್ರಸ್ತುತ ಹತ್ತು ತಂಡಗಳನ್ನು ಹೊಂದಿದೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಲೀಗ್‌ಗೆ ಪ್ರವೇಸಿದ್ದವು. ಕಳೆದ ಎರಡು ಸೀಸನ್‌ಗಳಲ್ಲಿ ಹದಿನೈದು ತಂಡಗಳು ಭಾಗವಹಿಸಿದ್ದವು.ಐಪಿಎಲ್ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಹೆಸರುವಾಸಿಯಾಗಿದೆ.ಪ್ರತಿ ವರ್ಷ ಈ ಮೆಗಾ ಲೀಗ್ ಮೂಲಕ ಭಾರತದ ಆರ್ಥಿಕತೆಗೆ ಹಲವಾರು ಸಾವಿರ ಕೋಟಿ ಹರಿದು ಬರುತ್ತಿದೆ.

ಐಪಿಎಲ್ ಆರಂಭವಾದ ನಂತರ ವಿಶ್ವದ ವಿವಿಧೆಡೆ ಇದೇ ಮಾದರಿಯಲ್ಲಿ ಹಲವು ಲೀಗ್‌ಗಳು ಹುಟ್ಟಿಕೊಂಡಿವೆ. ಆದರೆ ಅವುಗಳಲ್ಲಿ ಯಾವುದೂ ಜನಪ್ರಿಯತೆ ಮತ್ತು ಆದಾಯದ ದೃಷ್ಟಿಯಲ್ಲಿ ಐಪಿಎಲ್‌ನ ಹತ್ತಿರವೂ ಬಂದಿಲ್ಲ. ಬಿಗ್ ಬ್ಯಾಷ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್, SA20, ILT20, ಪಾಕಿಸ್ತಾನ್ ಸೂಪರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್ ಇವೆಲ್ಲವೂ IPL ಪ್ರೇರಣೆಯಿಂದಲೇ ಆರಂಭವಾಗಿವೆ. 2009, 2014 ಮತ್ತು 2019 ರಲ್ಲಿ ಎದುರಾದ ಸಮಸ್ಯೆಯನ್ನೇ ಈ ಬಾರಿಯ ಐಪಿಎಲ್ ಸಹ ಎದುರಿಸಿದೆ. ಸಾರ್ವತ್ರಿಕ ಚುನಾವಣೆಗಳ ಕಾರಣ ಐಪಿಎಲ್‌ ಭಾರತದ ವಿವಿಧ ಸ್ಥಳಗಳೊಂದಿಗೆ ಹೊರ ದೇಶಗಳಲ್ಲಿಯೂ ನಡೆಯುವಂತಾಯಿತು.

ಐಪಿಎಲ್ ವೇಳಾಪಟ್ಟಿ ಕುರಿತಂತೆ ಈ ಬಾರಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಾರಿಯೂ 10 ತಂಡಗಳು ಮೆಗಾ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿಯ ಐಪಿಎಲ್ ಲೀಗ್‌ನಲ್ಲಿ ಸ್ಪರ್ಧಿಸಲಿವೆ. ಈ ಪೈಕಿ ಆರು ತಂಡಗಳು ಈಗಾಗಲೇ ಒಮ್ಮೆಯಾದರೂ ಪ್ರಶಸ್ತಿ ಜಯಿಸಿವೆ. ಇತರ ನಾಲ್ಕು ತಂಡಗಳು ಮೊದಲ ಪ್ರಶಸ್ತಿಗಾಗಿ ಸೆಣಸುತ್ತಿವೆ.

ಹತ್ತು ತಂಡಗಳು ಲೀಗ್‌ನಲ್ಲಿ ಭಾಗವಹಿಸಲು ಪ್ರಾರಂಭಿಸಿದ ನಂತರ, ಪಂದ್ಯಗಳ ಸಂಖ್ಯೆ 74 ಕ್ಕೆ ಏರಿತು. ಈ ಬಾರಿಯೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ 70 ಲೀಗ್ ಪಂದ್ಯಗಳಾಗಿದ್ದರೆ, ನಾಲ್ಕು ಪ್ಲೇ ಆಫ್ ಪಂದ್ಯಗಳಿವೆ. ಪ್ಲೇಆಫ್‌ನ ಭಾಗವಾಗಿ ಮೊದಲ ಕ್ವಾಲಿಫೈಯರ್ 1, ನಂತರ ಎಲಿಮಿನೇಟರ್, ನಂತರ ಕ್ವಾಲಿಫೈಯರ್ 2 ಮತ್ತು ಅಂತಿಮವಾಗಿ ಫೈನಲ್ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈವರೆಗೆ ಅತಿ ಹೆಚ್ಚು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡವಾಗಿದೆ. ಆ ತಂಡ 2013, 2015, 2017, 2019 ಮತ್ತು 2020ರಲ್ಲಿ ಪ್ರಶಸ್ತಿ ಗೆದ್ದಿತ್ತು.

ಕಳೆದ ವರ್ಷ ಆ ದಾಖಲೆಯನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಸರಿಗಟ್ಟಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 2010, 2011, 2018, 2021, 2023ರಲ್ಲಿ ಚಾಂಪಿಯನ್ ಆಗಿತ್ತು. ಮೊದಲ ಸೀಸನ್ ಗೆದ್ದ ನಂತರ ರಾಜಸ್ಥಾನ್ ರಾಯಲ್ಸ್ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ (2012, 2014) ಪ್ರಶಸ್ತಿ ಗೆದ್ದಿದೆ. ಹೈದರಾಬಾದ್ ತಂಡವು 2009 ರಲ್ಲಿ ‘ಡೆಕ್ಕನ್ ಚಾರ್ಜರ್ಸ್’ ಆಗಿ ಮತ್ತು 2016 ರಲ್ಲಿ ಮತ್ತೊಮ್ಮೆ ‘ಸನ್ ರೈಸರ್ಸ್ ಹೈದರಾಬಾದ್’ ಆಗಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಗುಜರಾತ್ ಟೈಟಾನ್ಸ್ ಮೊದಲ ಋತುವಿನಲ್ಲಿ ಅಂದರೆ 2022 ರಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತು. ಮೊದಲ ಸೀಸನ್‌ನಿಂದ ಆಡುತ್ತಿದ್ದರೂ ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ರಶಸ್ತಿ ಗೆದ್ದಿಲ್ಲ. ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡು ಋತುಗಳಲ್ಲಿ ಪ್ಲೇಆಫ್ ತಲುಪಿತು. ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದರೆ, ಕಳೆದ ಐಪಿಎಲ್ ಋತುವಿನಲ್ಲಿ ಗುಜರಾತ್ ರನ್ನರ್ ಅಪ್ ಆಗಿತ್ತು. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಹೊಸ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಆಡಲಿದೆ.

ಐಪಿಎಲ್‌ ಲೇಟೆಸ್ಟ್‌ ನ್ಯೂಸ್

ಐಪಿಎಲ್‌ ಪಾಯಿಂಟ್ಸ್ ಟೇಬಲ್

PosTeamMatchesWonLostTiedNRPointsNRRSeries Form
1KOLKATA KNIGHT RIDERSKolkata Knight Riders14930220+1.428
AAWWW
2SUNRISERS HYDERABADSunrisers Hyderabad14850117+0.414
WAWLW
3RAJASTHAN ROYALSRajasthan Royals14850117+0.273
ALLLL

ಐಪಿಎಲ್‌ ಲೇಟೆಸ್ಟ್‌ ಫೋಟೋಸ್‌

ಐಪಿಎಲ್‌ ದಾಖಲೆಗಳು

ಐಪಿಎಲ್‌ ಲೇಟೆಸ್ಟ್‌ ವೆಬ್‌ಸ್ಟೋರಿ

ಐಪಿಎಲ್‌ 2024 ವಿಡಿಯೋ

ಐಪಿಎಲ್‌ 2024 ಲೀಡರ್‌ಬೋರ್ಡ್

  • ಪ್ಲೇಯರ್ಸ್
  • ತಂಡಗಳು

Most Runs

Virat Kohli
Royal Challengers Bengaluru
741ರನ್‌ಗಳು

‌Most Wickets

Harshal Patel
Punjab Kings
24ವಿಕೆಟ್‌ಗಳು

ಐಪಿಎಲ್‌ ಟಾಪ್‌ ಆಟಗಾರರು

ಐಪಿಎಲ್‌ ಇತಿಹಾಸ

2008 ರಿಂದ 2023 ರವರೆಗೂ ಐಪಿಎಲ್ ವಿಜೇತರ ವಿವರಗಳು ಇಲ್ಲಿ ನೋಡಿ

ಐಪಿಎಲ್‌ FAQs

ಪ್ರಶ್ನೆ: ಐಪಿಎಲ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಯಾವುದು?

ಉತ್ತರ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ತಲಾ 5 ಬಾರಿ ಚಾಂಪಿಯನ್‌ಶಿಪ್ ಗೆದ್ದಿವೆ.

ಪ್ರಶ್ನೆ: ಈಗಾಗಲೇ IPL ನ ಎಷ್ಟು ಸೀಸನ್‌ಗಳು ಪೂರ್ಣಗೊಂಡಿವೆ?

ಉತ್ತರ: 2008ರಲ್ಲಿ ಆರಂಭವಾದ ಐಪಿಎಲ್ ಈಗಾಗಲೇ 16 ಸೀಸನ್‌ಗಳನ್ನು ಪೂರೈಸಿದೆ. 17 ನೇ ಸೀಸನ್ 2024 ರಲ್ಲಿ ನಡೆಯಲಿದೆ.

ಪ್ರಶ್ನೆ: ಇದುವರೆಗೆ ಯಾವ ತಂಡಗಳು ಐಪಿಎಲ್ ಗೆದ್ದಿಲ್ಲ?

ಉತ್ತರ: ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್‌ ಜೈಂಟ್ಸ್ ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ.

ಪ್ರಶ್ನೆ: ಸನ್‌ರೈಸರ್ಸ್ ಹೈದರಾಬಾದ್ ಇದುವರೆಗೆ ಎಷ್ಟು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ?

ಉತ್ತರ: 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪ್ರಶಸ್ತಿ ಗೆದ್ದಿತ್ತು. ಆದರೆ ಇದಕ್ಕೂ ಮುನ್ನ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ 2009ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು.