logo
ಕನ್ನಡ ಸುದ್ದಿ  /  Sports  /  Cricket News Punjab Kings Vs Delhi Capitals 64th Match In Ipl 2023 Playing 11 Pitch Report Head To Head Record Prs

PBKS vs DC: ಪ್ಲೇ ಆಫ್​ಗೇರಲು ಪಂಜಾಬ್​ ತಂಡಕ್ಕೆ ಗೆಲುವು ಅವಶ್ಯ; ಡೆಲ್ಲಿಗೆ ಔಪಚಾರಿಕ ಪಂದ್ಯ; ಸಂಭಾವ್ಯ ತಂಡ, ಪಿಚ್​ ರಿಪೋರ್ಟ್ ಇಲ್ಲಿದೆ

Prasanna Kumar P N HT Kannada

May 17, 2023 10:14 AM IST

ಡೇವಿಡ್​ ವಾರ್ನರ್​ ಮತ್ತು ಶಿಖರ್ ಧವನ್​

    • PBKS vs DC: 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು (Punjab Kings vs Delhi Capitals) ಎದುರಾಗುತ್ತಿವೆ. ಹಾಗಾದರೆ ಈ ಪಂದ್ಯಕ್ಕೆ ಆಡುವ 11ರ ಬಳಗ ಹೇಗಿರಲಿದೆ? ಪಿಚ್​ ರಿಪೋರ್ಟ್​​ ಹೇಗಿದೆ ಎಂಬುದನ್ನು ಈ ರಿಪೋರ್ಟ್​​ನಲ್ಲಿ ನೋಡೋಣ.
ಡೇವಿಡ್​ ವಾರ್ನರ್​ ಮತ್ತು ಶಿಖರ್ ಧವನ್​
ಡೇವಿಡ್​ ವಾರ್ನರ್​ ಮತ್ತು ಶಿಖರ್ ಧವನ್​

16ನೇ ಆವೃತ್ತಿಯ ಐಪಿಎಲ್​ (IPL 2023) ಪ್ಲೇ ಆಫ್ (Play off)​ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. 10 ತಂಡಗಳ ಪೈಕಿ, 9 ತಂಡಗಳ ಮೊದಲ 4 ಸ್ಥಾನಗಳಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಅಂತಿಮ ಹಂತ ತಲುಪಿದರೂ ಗೊಂದಲಕ್ಕೆ ತೆರೆ ಬೀಳದಿರುವುದು ವಿಶೇಷ. ಇಂದು ಪಂಜಾಬ್​ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು (Punjab Kings vs Delhi Capitals) ಪರಸ್ಪರ ಮುಖಾಮುಖಿಯಾಗುತ್ತಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಒಂದೆಡೆ ಪಂಜಾಬ್​ ಕಿಂಗ್ಸ್​ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್​​​ ತಂಡಕ್ಕೆ ಇದು ಔಪಚಾರಿಕ ಪಂದ್ಯವಷ್ಟೆ. ಏಕೆಂದರೆ ಡೆಲ್ಲಿ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಹಾಗಾಗಿ ಗೆದ್ದರೂ, ಸೋತರೂ ಯಾವುದೇ ನಷ್ಟ ಇಲ್ಲ. ಆದರೆ ಪಂಜಾಬ್​ಗೆ ಗೆಲುವು ಅನಿವಾರ್ಯ. ಗೆದ್ದರಷ್ಟೇ ಪ್ಲೇ ಆಫ್​ ಆಸೆ ಜೀವಂತವಾಗಿರಲಿದೆ.

ಪ್ರಭುಸಿಮ್ರಾನ್​ ಸಿಂಗ್​ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದು, ಪಂಜಾಬ್​ ಶಕ್ತಿ ಹೆಚ್ಚಿಸಿದೆ. ಆದರೆ ಉಳಿದ ಶಿಖರ್ ಧವನ್, ಲಿಯಾಮ್​ ಲಿವಿಂಗ್​ಸ್ಟೋನ್​, ಜಿತೇಶ್ ಶರ್ಮಾ, ಸಿಕಂದರ್ ರಾಜಾ, ಶಾರುಖ್ ಖಾನ್ ಪದೇ ಪದೇ ವೈಫಲ್ಯ ಮ್ಯಾನೇಜ್​ಮೆಂಟ್​ ನಿದ್ದೆಗೆಡಿಸಿದೆ. ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಆರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ ಕೂಡ ಬೌಲಿಂಗ್​​​ನಲ್ಲಿ ಮಿಂಚಬೇಕಿದೆ. ಬ್ಯಾಟಿಂಗ್​​-ಬೌಲಿಂಗ್​ ಆಲ್​ರೌಂಡ್​ ಪ್ರದರ್ಶನ ನೀಡಿದರಷ್ಟೆ, ಗೆಲುವು ಸಾಧ್ಯ. ಕೊನೆಯ ಸ್ಥಾನ ತಪ್ಪಿಸುವುದು ಅನಿವಾರ್ಯ.

ಮತ್ತೊಂದೆಡೆ ಡೆಲ್ಲಿ ತಂಡವು ಟೂರ್ನಿಯ ಕೊನೆಯ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಭಿಯಾನ ಮುಗಿಸಲು ಚಿಂತಿಸಿದೆ. ಆದರೆ ವಾರ್ನರ್​ ಹೊರತುಪಡಿಸಿ, ಯಾರೊಬ್ಬರೂ ಸಹ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದು ತಂಡದ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ಮನೀಶ್ ಪಾಂಡೆ ಹೀಗೆ ಯಾರೂ ಬ್ಯಾಟಿಂಗ್​​ನಲ್ಲಿ ನೆರವು ಆಗುತ್ತಿಲ್ಲ. ಬೌಲಿಂಗ್​​​ನಲ್ಲೂ ಕಳಾಹೀನ ಪ್ರದರ್ಶನ ನೀಡುತ್ತಿರುವುದು ಬೇಸರದ ಸಂಗತಿ.

ಪ್ಲೇ ಆಫ್​ ಲೆಕ್ಕಾಚಾರ

ಡೆಲ್ಲಿ ವಿರುದ್ಧ ಪಂಜಾಬ್​ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಗೆದ್ದರಷ್ಟೆ ಪ್ಲೇ ಆಫ್​ ಕನಸು ಜೀವಂತವಾಗಿರಲಿದೆ. 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 6ರಲ್ಲಿ ಸೋಲು ಕಂಡಿದೆ. 12 ಅಂಕ ಪಡೆದ ಪಂಜಾಬ್ ಉಳಿದ 2 ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆಲ್ಲಬೇಕು. ಉಳಿದ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರವೂ ಪಂಜಾಬ್​ ಪ್ಲೇ ಆಫ್​ ಮೇಲೆ ಪರಿಣಾಮ ಬೀರಲಿದೆ.

ಉಭಯ ತಂಡಗಳ ಮುಖಾಮುಖಿ

ಡೆಲ್ಲಿ ಮತ್ತು ಪಂಜಾಬ್​ ತಂಡಗಳು ಒಟ್ಟು 31 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಉಭಯ ತಂಡಗಳಿಂದಲೂ ಸಮನಾದ ಹೋರಾಟ ನಡೆದಿರುವುದು ವಿಶೇಷ. ಡೆಲ್ಲಿ 15 ಪಂದ್ಯಗಳಲ್ಲಿ ಜಯಿಸಿದ್ದರೆ, ಪಂಜಾಬ್ 16 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದೀಗ ಮತ್ತೊಂದು ಗೆಲುವಿನ ಮೇಲೆ ಎರಡು ತಂಡಗಳು ಕಣ್ಣಿಟ್ಟಿವೆ. ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಡೆಲ್ಲಿ ಸೋತಿತ್ತು. ಈಗ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.

ಪಿಚ್​​ ರಿಪೋರ್ಟ್​

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿಯಾಗಿದೆ. ಫಾಸ್ಟ್​ ಮತ್ತು ಬೌನ್ಸಿ ಟ್ರ್ಯಾಕ್​ಗೆ ಹೆಸರುವಾಗಿಯಾಗಿದೆ. ಬ್ಯಾಟರ್​​ಗಳು ನಿರಾಯಾಸವಾಗಿ ಬ್ಯಾಟ್​ ಬೀಸಲು ನೆರವಾಗುತ್ತದೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳಿಗೂ ಕೊಂಚ ಮಟ್ಟಿಗೆ ನೆರವಾಗುತ್ತದೆ. ಹೆಚ್ಚು ಟರ್ನ್​ ಆಗುವ ಸಾಧ್ಯತೆಯಿದೆ. ಜೊತೆಗೆ ಇಲ್ಲಿ ಹೈಸ್ಕೋರಿಂಗ್​ ಕಾದಾಟ ನಿರೀಕ್ಷಿಸಬಹುದು. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಪಂಜಾಬ್​ ಕಿಂಗ್ಸ್​ ಸಂಭಾವ್ಯ ತಂಡ

ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಸ್ಯಾಮ್ ಕರನ್, ಸಿಕಂದರ್ ರಾಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಆರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ.

ಡೆಲ್ಲಿ ಕ್ಯಾಪಿಟಲ್ಸ್​ ಸಂಭಾವ್ಯ ತಂಡ

ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್​ ಕೀಪರ್​), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ಆ್ಯನ್ರಿಚ್​ ನೋಕಿಯಾ.

    ಹಂಚಿಕೊಳ್ಳಲು ಲೇಖನಗಳು