logo
ಕನ್ನಡ ಸುದ್ದಿ  /  ಕ್ರೀಡೆ  /  Rohit Sharma: ನಾಯಕನಾಗಿ ಒಂದೇ ಒಂದು ಫೈನಲ್ ಸೋಲದ ರೋಹಿತ್ ಶರ್ಮಾ; ಡಬ್ಲ್ಯುಟಿಸಿ ಅಂತಿಮ ಕದನಕ್ಕೂ ಮುನ್ನ ಟೀಮ್​ ಇಂಡಿಯಾಗೆ ಹೆಚ್ಚಿದ ವಿಶ್ವಾಸ

Rohit Sharma: ನಾಯಕನಾಗಿ ಒಂದೇ ಒಂದು ಫೈನಲ್ ಸೋಲದ ರೋಹಿತ್ ಶರ್ಮಾ; ಡಬ್ಲ್ಯುಟಿಸಿ ಅಂತಿಮ ಕದನಕ್ಕೂ ಮುನ್ನ ಟೀಮ್​ ಇಂಡಿಯಾಗೆ ಹೆಚ್ಚಿದ ವಿಶ್ವಾಸ

Prasanna Kumar P N HT Kannada

Jun 03, 2023 09:49 AM IST

ನಾಯಕನಾಗಿ ಒಂದೇ ಒಂದು ಫೈನಲ್ ಸೋಲದ ರೋಹಿತ್ ಶರ್ಮಾ

    • ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​​​​ಗೂ ಮುನ್ನ ರೋಹಿತ್​ ಶರ್ಮಾ ನಾಯಕತ್ವ ಟೀಮ್​ ಇಂಡಿಯಾ ಬಲ ಹೆಚ್ಚಿಸಿದೆ. ಯಾಕೆಂದರೆ ನಾಯಕನಾಗಿ ಹಿಟ್​ಮ್ಯಾನ್​ ಆಡಿದ ಯಾವುದೇ ಟೂರ್ನಿಯಲ್ಲೂ ಸೋತ ಇತಿಹಾಸವೇ ಇಲ್ಲ.
ನಾಯಕನಾಗಿ ಒಂದೇ ಒಂದು ಫೈನಲ್ ಸೋಲದ ರೋಹಿತ್ ಶರ್ಮಾ
ನಾಯಕನಾಗಿ ಒಂದೇ ಒಂದು ಫೈನಲ್ ಸೋಲದ ರೋಹಿತ್ ಶರ್ಮಾ

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ (ICC World test Championship final 2023) ಜೂನ್​ 7ರಿಂದ ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ನೆಟ್ಸ್​​ ಭರ್ಜರಿ ಅಭ್ಯಾಸ ನಡೆಸುತ್ತಿವೆ. ಚೊಚ್ಚಲ ಟೆಸ್ಟ್​ ಚಾಂಪಿಯನ್​ ಪ್ರಶಸ್ತಿ ಗೆಲ್ಲಲು ದೊಡ್ಡ ಮಟ್ಟದ ರಣತಂತ್ರಗಳನ್ನೇ ರೂಪಿಸುತ್ತಿವೆ. ಆದರೆ, ಟೀಮ್​ ಇಂಡಿಯಾಗೆ ಈ ಒಂದು ವಿಚಾರದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಹೊತ್ತು ತಂದ 19ನೇ ಶತಮಾನದ ಹಡಗು; ಜುಲೈ 26ರಂದು ಸೀನ್​ ನದಿಯಲ್ಲಿ ಉದ್ಘಾಟನಾ ಸಮಾರಂಭ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಹೌದು.. ರೋಹಿತ್​ ಶರ್ಮಾ (Rohit Sharma) ನಾಯಕತ್ವವೇ ಟೀಮ್​ ಇಂಡಿಯಾ ಬಲ ಹೆಚ್ಚಿಸಲು ಕಾರಣವಾಗಿದೆ. ಯಾಕೆಂದರೆ ನಾಯಕನಾಗಿ ಹಿಟ್​ಮ್ಯಾನ್​ ಆಡಿದ ಯಾವುದೇ ಟೂರ್ನಿಯಲ್ಲೂ ಸೋತ ಇತಿಹಾಸ ಇಲ್ಲ. ಕ್ಯಾಪ್ಟನ್​ ಆಗಿದ್ದ ಎಲ್ಲಾ ಫೈನಲ್​​ಗಳಲ್ಲೂ ಪ್ರಶಸ್ತಿ ಗೆದ್ದ ಚರಿತ್ರೆ ಬರೆದಿದ್ದಾರೆ. ಹಾಗಾಗಿ ಟೆಸ್ಟ್​ ಚಾಂಪಿಯನ್​ ಫೈನಲ್​​​ನಲ್ಲೂ ಭಾರತ ಚಾಂಪಿಯನ್​ ಆಗುತ್ತದೆ ಎಂಬುದು ಎಲ್ಲರ ಲೆಕ್ಕಾಚಾರ. ನಾಯಕನಾಗಿ 8 ಬಾರಿ ಫೈನಲ್​​​ಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

8 ಫೈನಲ್, 8 ಪ್ರಶಸ್ತಿ

ನಾಯಕನಾಗಿ ಕ್ರಿಕೆಟ್​ ಕರಿಯರ್​ನಲ್ಲಿ 8 ಫೈನಲ್‌ಗಳನ್ನು ಆಡಿರುವ ರೋಹಿತ್ ಶರ್ಮಾ, 8 ಬಾರಿಯೂ ಪ್ರಶಸ್ತಿ ಗೆದ್ದಿದ್ದಾರೆ. ಹಾಗಾಗಿ ಜೂನ್ 7 ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ನಾಯಕನಾಗಿ ರೋಹಿತ್ ಅವರ 9ನೇ ಫೈನಲ್ ಆಗಿದೆ. ರೋಹಿತ್ ಈ ಬಾರಿಯೂ ಗೆದ್ದು ತಮ್ಮ ದಾಖಲೆಯನ್ನು ಉಳಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

5 ಐಪಿಎಲ್​ ಟ್ರೋಫಿ, ಒಂದು ಚಾಂಪಿಯನ್​ ಲೀಗ್​

ಐಪಿಎಲ್​​ನಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿರುವ ಚೆನ್ನೈ ಸೂಪರ್ ಕಿಂಗ್ಸ್​​ ಫೈನಲ್​ಗೆ (Chennai Super Kings) ಮುಂಬೈ ಇಂಡಿಯನ್ಸ್ (Mumbai Indians)​ ಬರಬಾರದು ಎಂಬ ಭಯ ಹುಟ್ಟಿಸಿರುವ ಶ್ರೇಯ ನಾಯಕ ರೋಹಿತ್​ ಶರ್ಮಾ ಅವರಿಗೆ ಸಲ್ಲುತ್ತದೆ. ಏಕೆಂದರೆ ರೋಹಿತ್​​ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಆಡಿದ ಮೂರು ಬಾರಿಯೂ ಫೈನಲ್​​ನಲ್ಲಿ ಸಿಎಸ್​ಕೆ ಸೋಲು ಕಂಡಿದೆ. ಐಪಿಎಲ್​ನಲ್ಲಿ (IPL) ನಾಯಕನಾಗಿ 5 ಬಾರಿ ಫೈನಲ್​ ಆಡಿರುವ ಹಿಟ್​​​ಮ್ಯಾನ್ 5ರಲ್ಲೂ ಪ್ರಶಸ್ತಿ ಗೆದ್ದಿದ್ದಾರೆ.

ಈ ಐದು ಪ್ರಶಸ್ತಿಗಳ ಪೈಕಿ ಚೆನ್ನೈ (2013, 2015, 2019)​​ ವಿರುದ್ಧ 3 ಬಾರಿ ಎಂಬುದು ವಿಶೇಷ. 2013, 2015, 2017, 2019, 2020ರಲ್ಲೂ ಟ್ರೋಫಿ ಗೆದ್ದಿದ್ದಾರೆ. ಇನ್ನೂ 2013ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯ ಫೈನಲ್‌ನಲ್ಲೂ ರೋಹಿತ್​​ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಜಯಿಸಿತ್ತು.

ಏಷ್ಯಾಕಪ್​ ಮತ್ತು ನಿಧಾಹಾಸ್​ ಟ್ರೋಫಿ ಗೆದ್ದ ರೋಹಿತ್​

ಐಪಿಎಲ್​ನಲ್ಲಿ5, ಒಂದು ಟಿ20 ಚಾಂಪಿಯನ್​ ಲೀಗ್​​ ಸೇರಿ 6 ಕಪ್​ ಗೆದ್ದಿದ್ದ ಟೀಮ್​ ಇಂಡಿಯಾದಲ್ಲೂ ರೋಹಿತ್​ ತಮ್ಮ ಪ್ರಾಬಲ್ಯ ಮುಂದುವರೆಸಿದ್ದರು. ಅಂದು ಹಂಗಾಮಿ ನಾಯಕನಾಗಿ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 2018ರಲ್ಲಿ ನಡೆದ ಏಷ್ಯಾಕಪ್​​ ಟೂರ್ನಿಯಲ್ಲಿ (Asia Cup 2018) ರೋಹಿತ್​ ಸಾರಥ್ಯದಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದಿತ್ತು. ಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಮಣಿಸಿತ್ತು.

ಇನ್ನೂ ಅದೇ ವರ್ಷ ನಡೆದ ನಿದಾಹಾಸ್​ ಟ್ರೋಫಿಯನ್ನೂ ಮುಂಬೈಕರ್ ಮುಂದಾಳತ್ವದಲ್ಲಿ ಭಾರತ ಮತ್ತೊಂದು ಪ್ರಮುಖ ಪ್ರಶಸ್ತಿ ಗೆದ್ದಿತ್ತು. ಈ ಫೈನಲ್​ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಕೊನೆಯ ಎಸೆತದಲ್ಲಿ ಸಿಕ್ಸರ್​ ಬಾರಿಸಿ, ರೋಚಕ ಫೈನಲ್​ ಗೆಲುವಿಗೆ ಕಾರಣಕರ್ತರಾದರು. ನಾಯಕನಾಗಿ ರೋಹಿತ್​ ಶರ್ಮಾ ಈವರೆಗೂ ಆಡಿದ ಯಾವುದೇ ಫೈನಲ್​ ಪಂದ್ಯದಲ್ಲೂ ಸೋಲು ಕಂಡಿಲ್ಲ ಎಂಬುದು ವಿಶೇಷ.

10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲೋ ವಿಶ್ವಾಸ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆದ್ದರೆ, ಮಹೇಂದ್ರ ಸಿಂಗ್ ಧೋನಿ ನಂತರ ಟೀಮ್​ ಇಂಡಿಯಾಕ್ಕೆ ಐಸಿಸಿ ಪ್ರಶಸ್ತಿ ನೀಡಿದ ನಾಯಕ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ರಚಿಸಲಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆಡಿದರೂ ಭಾರತ ತಂಡ ಆಡಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲೂ ಭಾರತ ಸೋತಿತ್ತು. ಭಾರತ ಕೊನೆಯ 2013ರಲ್ಲಿ ಐಸಿಸಿ ಚಾಂಪಿಯನ್​ ಟ್ರೋಫಿ ಗೆದ್ದಿತ್ತು.

    ಹಂಚಿಕೊಳ್ಳಲು ಲೇಖನಗಳು