logo
ಕನ್ನಡ ಸುದ್ದಿ  /  Sports  /  Cricket News Shumban Gill Will Gobble Up The Trio Of Ms Dhoni Kohli Rohit Ex India Pacer Ahead Of Ipl 2023 Final Prs

Atul Wassan on Gill: ರೋಹಿತ್​​-ಕೊಹ್ಲಿಯನ್ನೇ ಹಿಂದಿಕ್ಕಿದ ಶುಭ್ಮನ್ ಮುಂದಿರುವ ಟಾರ್ಗೆಟ್ ಧೋನಿ; ಗಿಲ್​ ಆಟ ಮೆಚ್ಚಿದ ಮಾಜಿ ಕ್ರಿಕೆಟಿಗ

Prasanna Kumar P N HT Kannada

May 29, 2023 03:00 PM IST

ಶುಭ್ಮನ್​ ಗಿಲ್​ ಮತ್ತು ಎಂಎಸ್​ ಧೋನಿ

    • ಶುಭ್ಮನ್​ ಗಿಲ್ ಅವರು ಬ್ಯಾಟಿಂಗ್ ಮಾಡುವ ರೀತಿ ನೋಡುತ್ತಿದ್ದರೆ, ಧೋನಿಗೆ ಸಿಕ್ಕ ಸ್ಟಾರ್​ ಪಟ್ಟವನ್ನು ಕಸಿದುಕೊಳ್ಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಹೊರ ಹಾಕಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಹೇಳಿದ್ದಾರೆ.
ಶುಭ್ಮನ್​ ಗಿಲ್​ ಮತ್ತು ಎಂಎಸ್​ ಧೋನಿ
ಶುಭ್ಮನ್​ ಗಿಲ್​ ಮತ್ತು ಎಂಎಸ್​ ಧೋನಿ

ಶುಭ್ಮನ್​ ಗಿಲ್ (Shubman Gill)​, ಟೀಮ್​ ಇಂಡಿಯಾದ (Team India) ಯಂಗ್​ ಸೆನ್​ಸೇಷನ್​. ಕಳೆದ ಆರು ತಿಂಗಳಿಂದ ರನ್​ ಮಳೆ ಹರಿಸುತ್ತಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸುತ್ತಾ ದಾಖಲೆಗಳ ಮಾರಣಹೋಮ ನಡೆಸುತ್ತಿರುವ 23 ವರ್ಷದ ಆಟಗಾರ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸದ್ಯ ಐಪಿಎಲ್​​ನಲ್ಲೂ ರನ್​ ಬೇಟೆಯಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಿಲ್​ರನ್ನು ಸಚಿನ್​ ತೆಂಡೂಲ್ಕರ್ (Sachint Tendulkar), ವಿರಾಟ್​ ಕೊಹ್ಲಿಗೆ (Virat Kohli) ಹೋಲಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಆರು ತಿಂಗಳಿಂದ ರನ್​ ಪ್ರವಾಹ ಸೃಷ್ಟಿಸುತ್ತಿರುವ ಶುಭ್ಮನ್ ಗಿಲ್ ಭವಿಷ್ಯದಲ್ಲಿ ಸಚಿನ್, ಕೊಹ್ಲಿ ಅವರನ್ನು ಹಿಂದಿಕ್ಕಲಿದ್ದಾರೆ ಎಂಬುದು ಹಲವರ ಮಾತು. ಇನ್ನೂ ಕೆಲವರು ಶ್ರೇಷ್ಠನೆಂದು ಈಗಲೇ ಹಣೆಪಟ್ಟಿ ಕಟ್ಟುವುದು ತಪ್ಪು ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೆ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ (Former India pacer Atul Wassan), ಶುಭ್ಮನ್​ ಗಿಲ್​ ಕುರಿತು ಆಸಕ್ತಿದಾಯಕ ಹೇಳಿಕೆ ಕೊಟ್ಟಿದ್ದು, ವಿಶ್ವ ಮಟ್ಟದ ನಾಯಕನಾಗಲಿದ್ದಾರೆ ಎಂದಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ (Mahendra singh Dhoni) ಅವರು ನಾಯಕನಾಗಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು (ICC Trophy) ಗೆದ್ದುಕೊಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ದೇಶ-ವಿದೇಶದಲ್ಲಿ ಸರಣಿಗಳನ್ನು ಗೆದ್ದಿದೆ. ಇಡೀ ವಿಶ್ವವೇ ಆತನನ್ನು ಮೆಚ್ಚುತ್ತದೆ. ಇಷ್ಟಪಡುತ್ತದೆ. ದ್ವೇಷಿಸದವರೇ ಇಲ್ಲ. ಅಷ್ಟರ ಮಟ್ಟಿಗೆ ಸ್ಟಾರ್ ಪಟ್ಟ ಸಂದಾದಿಸಿರುವ ಧೋನಿಯನ್ನು ಶುಭ್ಮನ್​ ಗಿಲ್ ಶೀಘ್ರವೇ ಹಿಂದಿಕ್ಕಲಿದ್ದಾರೆ ಎಂದು ಗಿಲ್​ ಹೇಳಿದ್ದಾರೆ.

ಗಿಲ್ ಅವರು ಬ್ಯಾಟಿಂಗ್ ಮಾಡುವ ರೀತಿ ನೋಡುತ್ತಿದ್ದರೆ, ಧೋನಿಗೆ ಸಿಕ್ಕ ಸ್ಟಾರ್​ ಪಟ್ಟವನ್ನು ಕಸಿದುಕೊಳ್ಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಹೊರ ಹಾಕಿದ್ದಾರೆ. ಕೊಹ್ಲಿಗಿಂತ ಮೇಲುಗೈ ಸಾಧಿಸಿ ಆರ್‌ಸಿಬಿಯನ್ನು ಸೋಲಿಸಿದರು. ರೋಹಿತ್ ಶರ್ಮಾ ಮೇಲೆ ಪ್ರಾಬಲ್ಯ ಮೆರೆದ ಗಿಲ್​, ಮುಂಬೈ ಇಂಡಿಯನ್ಸ್​ಗೆ ಶಾಕ್ ನೀಡಿದರು ಎಂದು ಐಪಿಎಲ್​ ಸೋಲಿಗಳನ್ನೂ ಎಳೆದು ತಂದರು.

ಶುಭ್ಮನ್​ಗೆ ಸಿಎಸ್​ಕೆ ಪೈಪೋಟಿ ನೀಡಲ್ಲ

ಸದ್ಯ ಉಳಿದಿರುವುದು ಧೋನಿ ಮಾತ್ರ. ಆತನಲ್ಲಿರುವ ಫಾರ್ಮ್​ ಮುಂದಿವರೆಸಿದರೆ ಸಾಕು, ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸುವುದು ದೊಡ್ಡ ಕಷ್ಟವೇನಲ್ಲ. ಗುಜರಾತ್​ ಟೈಟಾನ್ಸ್ (Gujarat Titans)​ ಕೂಡ ಅದ್ಭುತ ಬೌಲಿಂಗ್​ ಲೈನಪ್ ಹೊಂದಿದೆ. ಬ್ಯಾಟಿಂಗ್​​ ಡೆಪ್ತ್​ ಇದೆ. ಬೌಲಿಂಗ್​ನಲ್ಲೂ ಅದ್ಭುತ ಆಯ್ಕೆಗಳು ಇವೆ. ಇದೇ ಕಾರಣಕ್ಕೆ ಗುಜರಾತ್​ ಟೈಟಾನ್ಸ್​ ಯಶಸ್ಸು ಕಾಣುತ್ತಿದೆ. ಸಿಎಸ್​ಕೆ ತಂಡದಲ್ಲಿ ಸೀನಿಯರ್ಸ್​​ ಇದ್ದರೂ, ಶುಭ್ಮನ್​ಗೆ ಪೈಪೋಟಿ ನೀಡೋಕೆ ಸಾಧ್ಯವಾಗಲ್ಲ ಎಂದಿದ್ದಾರೆ ಅತುಲ್​ ವಾಸನ್.

ಹಣ ಮತ್ತು ಜನಪ್ರಿಯತೆ ಎಲ್ಲರನ್ನೂ ಬದಲಿಸುತ್ತದೆ. ಆದರೆ, ಶುಭ್ಮನ್​​ ಗಮನಾರ್ಹ ಎನಿಸಿದ್ದಾರೆ. ಒಂದು ಐದಾರು ವರ್ಷಗಳು ಹೀಗೆಯೇ ಆಡಿದರೆ, ಗಿಲ್ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್ ಅತುಲ್​ ವಾಸನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತುಲ್​ ವಾಸನ್,​ ಶುಭ್ಮನ್ ಗಿಲ್​ ಅವರನ್ನು ಹಾಡಿ ಹೊಗಳಿದ್ದರೆ, ದಿಗ್ಗಜ ಕ್ರಿಕೆಟಿಗ ಕಪಿಲ್​​ ದೇವ್​ ಕೊಹ್ಲಿ, ಸಚಿನ್​ಗೆ ಈಗಲೇ ಹೋಲಿಕೆ ಸಲ್ಲದು ಎಂದು ಹೇಳಿದ್ದಾರೆ.

ಹೋಲಿಕೆ ಈಗಲೇ ಬೇಡ

23 ವರ್ಷದ ಶುಭ್ಮನ್ ರನ್‌ ಮಳೆ ಸುರಿಸುತ್ತಿದ್ದಂತೆ ಅಭಿಮಾನಿಗಳು ಸಚಿನ್ ಮತ್ತು ಕೊಹ್ಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಗಿಲ್ ಇನ್ನೂ ಆ ಹಂತಕ್ಕೆ ಬೆಳೆದಿಲ್ಲ ಎಂದು ಭಾರತದ ಮಾಜಿ ನಾಯಕ ಕಪಿಲ್ ಹೇಳಿದ್ದಾರೆ. ಆರಂಭಿಕ ಆಟಗಾರನನ್ನು ಶ್ರೇಷ್ಠ ಎಂದು ಪರಿಗಣಿಸಲು ಇನ್ನೂ ಒಂದೆರಡು ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು