logo
ಕನ್ನಡ ಸುದ್ದಿ  /  ಕ್ರೀಡೆ  /  Steve Smith: ವಿರಾಟ್ ಪ್ರಾಬಲ್ಯಕ್ಕೆ ಬ್ರೇಕ್; ಶತಕದೊಂದಿಗೆ ದ್ರಾವಿಡ್, ಪಾಂಟಿಂಗ್ ದಾಖಲೆ ಮುರಿದ ಸ್ಟೀವ್ ಸ್ಮಿತ್

Steve Smith: ವಿರಾಟ್ ಪ್ರಾಬಲ್ಯಕ್ಕೆ ಬ್ರೇಕ್; ಶತಕದೊಂದಿಗೆ ದ್ರಾವಿಡ್, ಪಾಂಟಿಂಗ್ ದಾಖಲೆ ಮುರಿದ ಸ್ಟೀವ್ ಸ್ಮಿತ್

Jayaraj HT Kannada

Jun 08, 2023 06:05 PM IST

ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ

    • WTC final 2023: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ‌ ಶತಕ ಸಿಡಿಸಿದ ಸ್ಟೀವ್ ಸ್ಮಿತ್, ಹಲವು ದಾಖಲೆಗಳನ್ನು ರಚಿಸಿದ್ದಾರೆ.
ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ
ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ (AP-Reuters)

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ (Steve Smith), ಇಂದು (ಗುರುವಾರ) ಟೀಮ್ ಇಂಡಿಯಾ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship final) ಫೈನಲ್‌ ಪಂದ್ಯದಲ್ಲಿ ನಿರ್ಣಾಯಕ ಸೆಂಚುರಿ ಸಿಡಿಸಿದರು. ಡಬ್ಲ್ಯುಟಿಸಿ ಫೈನಲ್‌ನ ಎರಡನೇ ದಿನದಂದು ಟೆಸ್ಟ್‌ ಕ್ರಿಕೆಟ್‌ನಲ್ಲಿ 31ನೇ ಶತಕ ಸಿಡಿಸಿದ ಸಾಧನೆ ಮಾಡಿದರು.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಮೊದಲನೆಯ ದಿನದಾಟದ ಅಂತ್ಯಕ್ಕೆ 85 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 327 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯ, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿತ್ತು. 95 ರನ್ ಗಳಿಸಿ ಅಜೇಯರಾಗಿದ್ದ ಸ್ಮಿತ್‌, ಇಂದು ಆರಂಭದಲ್ಲೇ ಮೂರಂಕಿ ಗಡಿ ದಾಟಿದರು. ಶತಕ ಗಳಿಸಲು ಸಮಯ ವ್ಯರ್ಥ ಮಾಡದ ಅವರು, ಐತಿಹಾಸಿಕ ಸಾಧನೆ ಪೂರ್ಣಗೊಳಿಸಲು ಕೇವಲ ಎರಡು ಎಸೆತಗಳನ್ನು ಮಾತ್ರ ತೆಗೆದುಕೊಂಡರು. 86ನೇ ಓವರ್‌ ಎಸೆಯಲು ಬಂದ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‌ನಲ್ಲಿ ಮೇಲಿಂದ ಮೇಲೆ ಎರಡು ಬೌಂಡರಿಗಳನ್ನು ಸಿಡಿಸಿ ಸೆಂಚುರಿ ಸಾಧನೆ ಮಾಡಿದರು. ಆ ಮೂಲಕ ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ಪರ ಏಳನೇ ಟೆಸ್ಟ್ ಶತಕ ಸಿಡಿಸಿದ ಸಾಧನೆ ಮಾಡಿದರು.

ಹಲವು ದಾಖಲೆ ಮುರಿದ ಸ್ಮಿತ್

ವಿರಾಟ್ ಕೊಹ್ಲಿಯ ರನ್‌ ಮಷಿನ್‌ ಪಟ್ಟವನ್ನು ಕಸಿದುಕೊಂಡ ಸ್ಮಿತ್, ಒಟ್ಟು 31 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅತ್ತ ಭಾರತದ ಮಾಜಿ ನಾಯಕ ವಿರಾಟ್‌ ಈವರೆಗೆ 28 ಶತಕಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ವಿದೇಶಿ ಆಟಗಾರ ಎಂಬ ಪಟ್ಟವನ್ನು ಪಡೆಯಲು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ (6) ಅವರನ್ನು‌ ಸ್ಮಿತ್‌ ಹಿಂದಿಕ್ಕಿದ್ದಾರೆ. ಸ್ಮಿತ್ ಮತ್ತು ಸ್ಟೀವ್ ವಾ (Steve Waugh) ಇಂಗ್ಲೆಂಡ್‌ನಲ್ಲಿ ತಲಾ 7 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ 11 ಟೆಸ್ಟ್ ಶತಕಗಳನ್ನು ಸಿಡಿಸಿದ ಡಾನ್ ಬ್ರಾಡ್‌ಮನ್‌ ಅಗ್ರಸ್ಥಾನದಲ್ಲಿದ್ದಾರೆ.

ಕಾಂಗರೂಗಳ ಪರ 31ನೇ ಶತಕ ಸಿಡಿಸುವ ಮೂಲಕ, ಮ್ಯಾಥ್ಯೂ ಹೇಡನ್ (30) ಅವರನ್ನು ಸ್ಮಿತ್ ಹಿಂದಿಕ್ಕಿದ್ದಾರೆ. ಸದ್ಯ, ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ಈಗ ಮೂರನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಬ್ರಾಡ್‌ಮನ್ ಇಂಗ್ಲೆಂಡ್‌ನ ಒಂದೇ ಸ್ಥಳದಲ್ಲಿ (ಹೆಡಿಂಗ್ಲಿ) ಅತಿ ಹೆಚ್ಚು ಶತಕಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

34 ವರ್ಷ ವಯಸ್ಸಿನ ಸ್ಮಿತ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಜೋ ರೂಟ್ ಮಾಡಿದ ಸಾಧನೆಯನ್ನು ಸರಿಗಟ್ಟಿದರು. ಸ್ಮಿತ್ ಮತ್ತು ರೂಟ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಶತಕಗಳನ್ನು (9) ಸಿಡಿಸಿದ್ದಾರೆ.

ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತದ ವಿರುದ್ಧ ತಮ್ಮ ಒಂಬತ್ತನೇ ಟೆಸ್ಟ್ ಶತಕ ಗಳಿಸುವ ಮೂಲಕ ರಿಕಿ ಪಾಂಟಿಂಗ್, ವಿವ್ ರಿಚರ್ಡ್ಸ್ ಮತ್ತು ಗಾರ್ಫೀಲ್ಡ್ ಸೋಬರ್ಸ್ ಅವರನ್ನು ಹಿಂದಿಕ್ಕಿದ್ದಾರೆ.

ಭರ್ಜರಿಯಾಗಿ ಬ್ಯಾಟ್‌ ಬೀಸುತ್ತಿದ್ದ ಸ್ಮಿತ್‌, ತಮ್ಮ ಇನ್ನಿಂಗ್ಸ್‌ನ 99ನೇ ಓವರ್‌ನಲ್ಲಿ ವೇಗಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಇನ್‌ಸೈಡ್‌ ಎಡ್ಜ್‌ ಮೂಲಕ ಕ್ಲೀನ್‌ ಬೌಲ್ಡ್‌ ಆದರು. ಅವರು 268 ಎಸೆತಗಳಲ್ಲಿ 121 ರನ್ ಗಳಿಸಿ ಔಟಾದರು.

ಮತ್ತೊಂದೆಡೆ, ಡಬ್ಲ್ಯೂಟಿಸಿ ಫೈನಲ್‌ ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ಹೆಡ್, ಅಂತಿಮವಾಗಿ 174 ಎಸೆತಗಳಲ್ಲಿ 25 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 163 ರನ್ ಗಳಿಸಿದರು. ಅಂತಿಮವಾಗಿ ಅವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಕಳುಹಿಸಿದರು. ವಿಕೆಟ್‌ ಕೀಪರ್‌ ಕೆಎಸ್ ಭರತ್‌ಗೆ ಕ್ಯಾಚ್‌ ನೀಡಿ ಹೆಡ್‌ ಔಟಾದರು.

ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಸ್ಟೀವ್ ಸ್ಮಿತ್ ಅವರೊಂದಿಗೆ ಹೆಡ್ ದಾಖಲೆಯ ಜೊತೆಯಾಟವಾಡಿದರು. ಇವರಿಬ್ಬರೂ ನಾಲ್ಕನೇ ವಿಕೆಟ್‌ಗೆ ದಿ ಓವಲ್‌ ಮೈದಾನದಲ್ಲಿ ಅತ್ಯಧಿಕ ಜೊತೆಯಾಟವಾಡಿದ ರೆಕಾರ್ಡ್‌ ಬರೆದರು. ಈ ಜೋಡಿಯು 285 ರನ್‌ಗಳ ಬೃಹತ್‌ ಜೊತೆಯಾಟವಾಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ