logo
ಕನ್ನಡ ಸುದ್ದಿ  /  ಕ್ರೀಡೆ  /  Shubman Gill: ಸಚಿನ್​, ಕೊಹ್ಲಿ ಜೊತೆ ಹೋಲಿಕೆಗೆ ನಾನು ಸೂಕ್ತನಲ್ಲ, ಅವರು ನನಗೆ ಸ್ಫೂರ್ತಿ; ಮೌನ ಮುರಿದ ಶುಭ್ಮನ್​ ಗಿಲ್

Shubman Gill: ಸಚಿನ್​, ಕೊಹ್ಲಿ ಜೊತೆ ಹೋಲಿಕೆಗೆ ನಾನು ಸೂಕ್ತನಲ್ಲ, ಅವರು ನನಗೆ ಸ್ಫೂರ್ತಿ; ಮೌನ ಮುರಿದ ಶುಭ್ಮನ್​ ಗಿಲ್

Prasanna Kumar P N HT Kannada

May 29, 2023 06:22 PM IST

ಸಚಿನ್​ ತೆಂಡೂಲ್ಕರ್, ಶುಭ್ಮನ್ ಗಿಲ್, ವಿರಾಟ್​ ಕೊಹ್ಲಿ

    • Shubman Gill: ಪ್ರಸ್ತುತ ಕೊಹ್ಲಿ vs ಗಿಲ್​ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಮಾಜಿ ಕ್ರಿಕೆಟರ್​ಗಳು ಕೊಹ್ಲಿಗೆ ಗಿಲ್​ರನ್ನು ಹೋಲಿಸಿ ಗುಣಗಾನ ಮಾಡುತ್ತಿದ್ದಾರೆ. ತನ್ನನ್ನು ದಿಗ್ಗಜರಿಗೆ ಹೋಲಿಸುತ್ತಿರುವ ಕುರಿತು ಶುಭ್ಮನ್​ ಗಿಲ್, ಮೌನ ಮುರಿದಿದ್ದಾರೆ.
ಸಚಿನ್​ ತೆಂಡೂಲ್ಕರ್, ಶುಭ್ಮನ್ ಗಿಲ್, ವಿರಾಟ್​ ಕೊಹ್ಲಿ
ಸಚಿನ್​ ತೆಂಡೂಲ್ಕರ್, ಶುಭ್ಮನ್ ಗಿಲ್, ವಿರಾಟ್​ ಕೊಹ್ಲಿ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ (Indian Premier League 2023) ಗುಜರಾತ್​ ಟೈಟಾನ್ಸ್​​ ತಂಡದ ಆರಂಭಿಕ ಆಟಗಾರ ಶುಭ್ಮನ್​ ಗಿಲ್ (Shubman GIll)​ ರನ್​ ಪ್ರವಾಹ ಹರಿಸುತ್ತಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ 3 ಶತಕ ಸಿಡಿಸಿ ದಾಖಲೆಗಳನ್ನೂ ಬೇಟೆಯಾಡಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಆರೇಂಜ್​​ ಕ್ಯಾಪ್ (Orange Cap)​​ ಅನ್ನೂ ತನ್ನದಾಗಿಸಿಕೊಂಡಿದ್ದಾರೆ. ಐಪಿಎಲ್​ ಮಾತ್ರವಲ್ಲ, ಕಳೆದ 6 ತಿಂಗಳಿಂದಲೂ ರನ್​ ಬೇಟೆಯಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಈ ಹಿನ್ನೆಲೆಯಲ್ಲಿ ಶುಭ್ಮನ್​​ರನ್ನು ಭಾರತದ ಬ್ಯಾಟಿಂಗ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್ (Sachin Tendulkar)​, ವಿರಾಟ್​ ಕೊಹ್ಲಿ (Virat Kohli) ಅವರ ಉತ್ತಾರಾಧಿಕಾರಿ ಎಂದು ಕರೆಯಲಾಗುತ್ತಿದೆ. ಇದಕ್ಕೂ ಮೊದಲು ಸಚಿನ್​ vs ಕೊಹ್ಲಿ ಎಂಬ ಚರ್ಚೆಗಳು ನಡೆಯುತ್ತಿದ್ದವು. ಪ್ರಸ್ತುತ ಕೊಹ್ಲಿ vs ಗಿಲ್​ ಎಂಬ ಚರ್ಚೆಗಳು ಜೋರಾಗಿವೆ. ಮಾಜಿ ಕ್ರಿಕೆಟರ್​ಗಳು ಕೊಹ್ಲಿಗೆ ಗಿಲ್​ರನ್ನು ಹೋಲಿಸುತ್ತಿದ್ದಾರೆ. ತನ್ನನ್ನು ದಿಗ್ಗಜರಿಗೆ ಹೋಲಿಸುತ್ತಿರುವ ಕುರಿತು ಶುಭ್ಮನ್​ ಗಿಲ್, ಮೌನ ಮುರಿದಿದ್ದಾರೆ.

ಜನರ ಹೋಲಿಕೆ ಅದ್ಭುತವಾಗಿದೆ. ಆದರೆ, ಅವರ ಹೋಲಿಕೆಗೆ ನಾನು ಸೂಕ್ತನಲ್ಲ. ಸಚಿನ್ ಸರ್, ವಿರಾಟ್ ಭಾಯ್ ಮತ್ತು ರೋಹಿತ್ ಶರ್ಮಾ ಅವರು ಎಲ್ಲರಿಗೂ ಸ್ಫೂರ್ತಿ. ಒಂದು ಪೀಳಿಗೆಗೆ ಅವರೇ ರೋಲ್​ ಮಾಡೆಲ್​. 1983ರಲ್ಲಿ ವಿಶ್ವಕಪ್​ ಭಾರತ ಗೆದ್ದಿದ್ದು ಸಚಿನ್ ಅವರಿಗೆ ಸ್ಪೂರ್ತಿ ಕೊಟ್ಟಿತ್ತು. ಅಂದು ವಿಶ್ವಕಪ್​ ಗೆಲ್ಲದಿದ್ದರೆ ನಮಗೆ ಸಚಿನ್​ ತೆಂಡೂಲ್ಕರ್ ಇರುತ್ತಿರಲಿಲ್ಲ ಎಂದಿದ್ದಾರೆ.

ನಮ್ಮ ಪೀಳಿಗೆಯಲ್ಲಿ 2011ರ ಏಕದಿನ ವಿಶ್ವಕಪ್ ಸಾಕಷ್ಟು ಸ್ಪೂರ್ತಿ ಕೊಟ್ಟಿದೆ. ಒಂದು ವೇಳೆ ಗೆಲ್ಲದಿದ್ದರೆ ನನಗೆ ಸ್ಫೂರ್ತಿ ಸಿಗುತ್ತಿತ್ತೋ ಇಲ್ಲವೋ ಎಂದು ಕೂಡ ಪ್ರಮುಖ ಅಂಶವೇ. ಇಂತಹ ಆಟಗಾರರ ಪರಂಪರೆ ಎಂದಿಗೂ ಅಜರಾಮರ. ನೀವು ನಿಜವಾಗಿಯೂ ಅವರ ಶ್ರೇಷ್ಠ ಪರಂಪರೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ 23 ವರ್ಷದ ಯುವ ಆಟಗಾರ.

ಗಿಲ್ 2023ರಲ್ಲಿ ಬೆಂಕಿ ಪ್ರದರ್ಶನ ನೀಡುತ್ತಿದ್ದಾರೆ. ಕೇವಲ 9 ಏಕದಿನ ಪಂದ್ಯಗಳಿಂದ 2 ಶತಕ ಮತ್ತು ದ್ವಿಶತಕ ಸೇರಿದಂತೆ 624 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲೂ ಶತಕ ಸಮನ ಸೆಳೆದಿದ್ದಾರೆ. ಇದೀಗ ಐಪಿಎಲ್‌ ಟೂರ್ನಿ ಗಿಲ್​ಗೆ ಮತ್ತೆ ದೊಡ್ಡ ಹೆಸರನ್ನು ತಂದುಕೊಟ್ಟಿದೆ. ಆಡಿದ 16 ಪಂದ್ಯಗಳಲ್ಲಿ ಭರ್ಜರಿ 3 ಶತಕ ಸಹಾಯದಿಂದ 851 ರನ್‌ಗಳು ಸಿಡಿಸಿದ್ದಾರೆ.

ಈಗಾಗಲೇ ಗಿಲ್ ಆರೇಂಜ್ ಕ್ಯಾಪ್ ಪಡೆಯುವುದು ಬಹುತೇಕ ಖಚಿತವಾಗಿದೆ. 2016ರಲ್ಲಿ ಕೊಹ್ಲಿ ಸಿಡಿಸಿದ್ದ 973 ರನ್​ಗಳ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಯಾವುದೇ ಆಟಗಾರನ ಅತಿ ಹೆಚ್ಚು ಇದಾಗಿದೆ. ಲೀಗ್​ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಗಿಲ್​, ಮೊದಲ ಕ್ವಾಲಿಫೈಯರ್​​ನಲ್ಲಿ 40+ ರನ್​ ಗಳಿಸಿದ್ದರು. ಬಳಿಕ 2ನೇ ಕ್ವಾಲಿಫೈಯರ್​ನಲ್ಲಿ ಶತಕ ಸಿಡಿಸಿದರು. ಮುಂಬೈ ವಿರುದ್ಧ 129 ರನ್​ ಗಳಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ