logo
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಿಗ್ಗಜರ ಕಾಮೆಂಟರಿ; ಕನ್ನಡ ವೀಕ್ಷಕ ವಿವರಣೆಕಾರರು ಇವರೇ

WTC final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಿಗ್ಗಜರ ಕಾಮೆಂಟರಿ; ಕನ್ನಡ ವೀಕ್ಷಕ ವಿವರಣೆಕಾರರು ಇವರೇ

Jayaraj HT Kannada

Jun 02, 2023 04:59 PM IST

ಸೌರವ್ ಗಂಗೂಲಿ, ನಾಸರ್ ಹುಸೇನ್

    • WTC final commentators: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ವೀಕ್ಷಕ ವಿವರಣೆಕಾರರ ಪಟ್ಟಿ ಪ್ರಕಟವಾಗಿದೆ.
ಸೌರವ್ ಗಂಗೂಲಿ, ನಾಸರ್ ಹುಸೇನ್
ಸೌರವ್ ಗಂಗೂಲಿ, ನಾಸರ್ ಹುಸೇನ್

ಐಪಿಎಲ್ ಮುಗಿಯುತ್ತಿದ್ದಂತೆಯೇ, ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಅಭಿಮಾನಿಗಳ ಕುತೂಹಲದ ಚಿತ್ತ ಹರಿದಿದೆ. ಬರೋಬ್ಬರಿ ಮೂರು ತಿಂಗಳ ವಿರಾಮದ ನಂತರ, ಟೀಮ್ ಇಂಡಿಯಾ ಆಟಗಾರರು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದು, ಜೂನ್ 7ರಿಂದ ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ನಲ್ಲಿ World Test Championship final) ಮೈದಾನಕ್ಕಿಳಿಯಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಆಡಲಿರುವ ಟೀಮ್‌ ಇಂಡಿಯಾ ಆಟಗಾರರು, ಈಗಾಗಲೇ ಲಂಡನ್‌ಗೆ ತಲುಪಿದ್ದಾರೆ. ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಿನ ಮಹತ್ವದ ಪಂದ್ಯಕ್ಕೂ ಮುಂಚಿತವಾಗಿ, ಈ ಪಂದ್ಯದ ಅಧಿಕೃತ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಸಂಸ್ಥೆಯು ಕಾಮೆಂಟೇಟರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.

ಹಿರಿಯ ಹಾಗೂ ದಿಗ್ಗಜ ಕ್ರಿಕೆಟಿಗರು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಕಾಮೆಂಟರಿ ಬಾಕ್ಸ್‌ನಲ್ಲಿ ಕೂರಲಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿಯಲ್ಲಿಯೂ, ಕನ್ನಡ ವೀಕ್ಷಕ ವಿವರಣೆಯೊಂದಿಗೆ ಪಂದ್ಯದ ನೇರಪ್ರಸಾರ ಇರಲಿದೆ.

ಹಿಂದಿ ಭಾಷೆಯಲ್ಲಿ ಹರ್ಭಜನ್ ಸಿಂಗ್, ಸೌರವ್ ಗಂಗೂಲಿ, ದೀಪ್ ದಾಸ್‌ಗುಪ್ತಾ ಮತ್ತು ಎಸ್ ಶ್ರೀಶಾಂತ್ ಕಾಮೆಂಟರಿ ಮಾಡಲಿದ್ದಾರೆ. ಇಂಗ್ಲೀಷ್‌ ಭಾಷೆಯಲ್ಲಿ ದಿಗ್ಗಜ ಕ್ರಿಕೆಟಿಗರಾದ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್ ಮತ್ತು ನಾಸರ್ ಹುಸೇನ್ ವೀಕ್ಷಕ ವಿವರಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಹಿರಿಯ ಹಾಗೂ ಅನುಭವಿ ಕ್ರಿಕೆಟಿಗರ ಕಾಮೆಂಟರಿಯು, ಸಮಗ್ರ ವಿಶ್ಲೇಷಣೆ ಹಾಗೂ ಆಸಕ್ತಿದಾಯಕ ಚರ್ಚೆಗಳಿಗೆ ಅವಕಾಶ ನೀಡಲಿದೆ. ಸುದೀರ್ಘ ಅವಧಿಗೆ ನಡೆಯುವ ಟೆಸ್ಟ್‌ ಪಂದ್ಯದಲ್ಲಿಯೂ ವೀಕ್ಷಕರು ಆಸಕ್ತಿ ಕಳೆದುಕೊಳ್ಳದಂತೆ ವೀಕ್ಷಕ ವಿವರಣೆ ನೀಡಲು ಸಿದ್ಧರಾಗಿದ್ದಾರೆ.‌

ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ನೇರಪ್ರಸಾರ ಲಭ್ಯವಿರಲಿದೆ. ಭಾಷಾವಾರು ವೀಕ್ಷಕ ವಿವರಣೆಕಾರರ ಪಟ್ಟಿ ಹೀಗಿದೆ.

ಇಂಗ್ಲೀಷ್: ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್ ಮತ್ತು ನಾಸರ್ ಹುಸೇನ್

ಹಿಂದಿ : ಹರ್ಭಜನ್ ಸಿಂಗ್, ಸೌರವ್ ಗಂಗೂಲಿ, ದೀಪ್ ದಾಸ್ಗುಪ್ತಾ ಮತ್ತು ಎಸ್. ಶ್ರೀಶಾಂತ್

ಕನ್ನಡ : ವಿಜಯ್ ಭಾರದ್ವಾಜ್, ಶ್ರೀನಿವಾಸ ಎಂ, ಬಿ ಚಿಪ್ಲಿ, ಪವನ್ ದೇಶಪಾಂಡೆ ಮತ್ತು ಸುನಿಲ್ ಜೆ.

ತಮಿಳು : ಯೋ ಮಹೇಶ್, ಎಸ್ ರಮೇಶ್, ಎಲ್ ಬಾಲಾಜಿ ಮತ್ತು ಎಸ್ ಶ್ರೀರಾಮ್

ತೆಲುಗು : ಕೌಶಿಕ್ ಎನ್‌ಸಿ, ಆಶಿಶ್ ರೆಡ್ಡಿ, ಟಿ ಸುಮನ್ ಮತ್ತು ಕಲ್ಯಾಣ್ ಕೆ

ಡಬ್ಲ್ಯೂಟಿಸಿ ಫೈನಲ್ ಪಂದ್ಯವು ಜೂನ್ 7ರಿಂದ 11ರವರೆಗೆ ನಡೆಯಲಿದೆ. ಈ ಪಂದ್ಯವು ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಫೈನಲ್ ಪಂದ್ಯವು ಮಧ್ಯಾಹ್ನ 03:00 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 02:30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್‌ ಕೀಪರ್)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ