logo
ಕನ್ನಡ ಸುದ್ದಿ  /  Sports  /  I Want A Chef Ready To Pay 4 5 Lakh Per Month Says Cristiano Ronaldo

Ronaldo wants Chef: ನನಗೆ ಒಬ್ಬ ಶೆಫ್ ಬೇಕು, ತಿಂಗಳಿಗೆ 4.5 ಲಕ್ಷ ಸಂಬಳ ಕೊಡ್ತೀನಿ: ರೊನಾಲ್ಡೊ

HT Kannada Desk HT Kannada

Jan 20, 2023 03:42 PM IST

ಎಂಬಾಪೆ ಮತ್ತು ರೊನಾಲ್ಡೊ (ಫೋಟೋ-AFP)

  • ನನಗೆ ಒಬ್ಬ ಶೆಫ್ ಬೇಕು. ತಿಂಗಳಿಗೆ 4.5 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಪೋರ್ಚುಗಲ್ ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ. ಇಂತಹ ದೊಡ್ಡ ಆಟಗಾರನಿಗೆ ಒಬ್ಬ ಪರ್ಸನಲ್ ಶೆಫ್ ಸಿಗುತ್ತಿಲ್ವಂತೆ.   

ಎಂಬಾಪೆ ಮತ್ತು ರೊನಾಲ್ಡೊ (ಫೋಟೋ-AFP)
ಎಂಬಾಪೆ ಮತ್ತು ರೊನಾಲ್ಡೊ (ಫೋಟೋ-AFP)

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ವಾಸ್ತವವಾಗಿ, ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ರೊನಾಲ್ಡೊ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ.

ಟ್ರೆಂಡಿಂಗ್​ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

ಇಂತಹ ಆಟಗಾರ ಈಗ ಅಡುಗೆಯವರನ್ನು ಹುಡುಕುತ್ತಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವುದಾಗಿ ಭರವಸೆ ನೀಡಿದರೂ ಯಾರೂ ಸಿಗದಿರುವುದು ರೊನಾಲ್ಡೊಗೆ ಬೇಸರ ತರಿಸಿದೆಯಂತೆ.

ರೊನಾಲ್ಡೊ ತನ್ನ ಪತ್ನಿಯೊಂದಿಗೆ ಪೋರ್ಚುಗಲ್‌ನ ಕ್ವಿಂಟಾ ಡ ಮರಿನಾದಲ್ಲಿ ನಿರ್ಮಿಸುತ್ತಿರುವ ಐಷಾರಾಮಿ ಮನೆಗೆ ಹೋಗಲು ಯೋಜಿಸುತ್ತಿದ್ದಾನೆ. ಆದರೆ ಅದಕ್ಕೂ ಮೊದಲು, ಅವರು ತಮ್ಮ ಕುಟುಂಬಕ್ಕೆ ವೈಯಕ್ತಿಕ ಅಡುಗೆಯವರನ್ನು ಬಯಸುತ್ತಿದ್ದಾರೆ.

ಬಾಯಲ್ಲಿ ನೀರೂರಿಸುವ ಪೋರ್ಚುಗೀಸ್ ಆಹಾರದ ಜೊತೆಗೆ ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳನ್ನು ಅಡುಗೆ ಮಾಡುವ ಬಾಣಸಿಗನನ್ನು ಹುಡುಕುತ್ತಿರುವುದಾಗಿ ರೊನಾಲ್ಡೊ ಹೇಳಿದಿದ್ದಾರೆ.

ಇದಲ್ಲದೆ, ಅಡುಗೆ ಕೆಲಸ ಮಾಡುವ ವ್ಯಕ್ತಿಗೆ ತಿಂಗಳಿಗೆ 4500 ಪೌಂಡ್ (ಸುಮಾರು 4.5 ಲಕ್ಷ ರೂ.) ನೀಡುವುದಾಗಿ ಘೋಷಿಸಿದ್ದಾರೆ. ಇಷ್ಟು ಮೊತ್ತದ ಸಂಬಲ ಕೊಡ್ತೀನಿ ಅಂತ ಹೇಳಿದರೂ ಇದುವರೆಗೆ ಯಾರೂ ಮುಂದೆ ಬಂದಿಲ್ಲ. ರೊನಾಲ್ಡೊ 170 ಕೋಟಿ ರೂ.ಗಳ ವೆಚ್ಚದಲ್ಲಿ ಕಣ್ಮನ ಸೆಳೆಯುವ ಕಟ್ಟಡ ನಿರ್ಮಿಸುತ್ತಿದ್ದಾರೆ.

ಈ ವರ್ಷದ ಜೂನ್ ವೇಳೆಗೆ ಮನೆ ನಿರ್ಮಾಣ ಪೂರ್ಣಗೊಳ್ಳಲಿದೆ. ಅದರ ನಂತರ, ರೊನಾಲ್ಡೊ ತನ್ನ ಹೆಂಡತಿ ಜಾರ್ಜಿನಾ ರೊಡ್ರಿಗಸ್ ಮತ್ತು ಮಕ್ಕಳೊಂದಿಗೆ ಹೊಸ ಮನೆಗೆ ಹೋಗುತ್ತಾರೆ.

ಹಾಗಾಗಿ ಆ ಮನೆಯಲ್ಲಿ ರೊನಾಲ್ಡೊ ಅವರಿಗೆ ಅಡುಗೆ ಮಾಡಲು ಶೆಫ್ ಅನ್ನು ಹುಡುಕುತ್ತಿದ್ದಾರೆ. ಅವರ ಕುಟುಂಬದವರು ಆಹಾರಪ್ರೇಮಿಗಳಾಗಿರುವುದರಿಂದ ಅವರ ಬೇಡಿಕೆಗಳು ಸಹ ಹೆಚ್ಚು. ರೊನಾಲ್ಡೊ ಪ್ರಪಂಚದಾದ್ಯಂತದ ವಿವಿಧ ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ಮತ್ತು ಸುಶಿಯಂತಹ ಜಪಾನೀಸ್ ಖಾದ್ಯಗಳನ್ನು ಮಾಡುವಂತೆ ಒತ್ತಾಯಿಸುತ್ತಾನೆ.

ಇತ್ತೀಚೆಗಷ್ಟೇ ರೊನಾಲ್ಡೊ ಸೌದಿ ಅರೇಬಿಯಾದ ಅಲ್ ನಾಸರ್ ಕ್ಲಬ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು, ಎರಡೂವರೆ ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪ್ರಸ್ತುತ ಅವರು ತಮ್ಮ ಕುಟುಂಬದೊಂದಿಗೆ ರಿಯಾದ್‌ನ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಾರೆ.

ಗುರುವಾರ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ವಿರುದ್ಧ ಆಡಿದ ರಿಯಾದ್ ಸೀಸನ್ಸ್ ತಂಡದಲ್ಲಿ ರೊನಾಲ್ಡೊ ಆಡಿದ್ದರು. ಈ ಪಂದ್ಯದಲ್ಲಿ ಪಿಎಸ್‌ಜಿ ರಿಯಾದ್ ಸೀಸನ್ ತಂಡದ ವಿರುದ್ಧ 5-4 ಅಂತರದಲ್ಲಿ ಜಯ ಸಾಧಿಸಿತು. ಇದರಲ್ಲಿ ರೊನಾಲ್ಡೊ ಎರಡು ಗೋಲು ಗಳಿಸಿ ಗಮನ ಸೆಳೆದಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು