logo
ಕನ್ನಡ ಸುದ್ದಿ  /  Sports  /  India Vs Australia Fourth Test Day Five Preview

India vs Australia 4th Test day 5: ಡ್ರಾ ಸ್ಪಷ್ಟ, ಆಸೀಸ್ ಗೆಲುವು ಕಷ್ಟ ಕಷ್ಟ; ಭಾರತಕ್ಕಿದೆ ಗೆಲ್ಲುವ ಅವಕಾಶ

Jayaraj HT Kannada

Mar 13, 2023 09:20 AM IST

ಅಶ್ವಿನ್

    • ಸದ್ಯ ಆಟ ಸಾಗುತ್ತಿರುವ ರೀತಿ ಹಾಗೂ ಅಹಮದಾಬಾದ್‌ ಪಿಚ್‌ ಪರಿಸ್ಥಿತಿ ಪ್ರಕಾರ ಪಂದ್ಯವು ಡ್ರಾ ಆಗುವ ಸಾಧ್ಯತೆ ಹೆಚ್ಚು. ಉಭಯ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ಗಳಲ್ಲಿ ಕ್ರೀಸ್‌ಕಚ್ಚಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಪಂದ್ಯದ ನಾಲ್ಕೂ ದಿನಗಳು ಬ್ಯಾಟಿಂಗ್‌ ಸ್ನೇಹಿಯಾಗಿ ನಡೆದಿವೆ. ಹೀಗಾಗಿ ಐದನೇ ದಿನ ಕೂಡಾ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟ.
ಅಶ್ವಿನ್
ಅಶ್ವಿನ್

ಭಾರತ ಹಾಗೂ ಆಸೀಸ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯವು ಡ್ರಾ‌ ಆಗುವುದು ಬಹುತೇಕ ಖಚಿತವಾಗಿದೆ. ಸದ್ಯ ಒಂದು ದಿನದಾಟ ಬಾಕಿ ಇದ್ದು, ಗರಿಷ್ಠ 90 ಓವರ್‌ಗಳ ಆಟ ಮಾತ್ರ ನಡೆಯಲಿದೆ. ಇದರೊಳಗೆ ಆಸೀಸ್‌ ತಂಡವನ್ನು ಕಟ್ಟಿಹಾಕಿ, ಭಾರತ ಎರಡನೇ ಇನ್ನಿಂಗ್ಸ್‌ ಆಡಬೇಕಿದೆ. ಆದರೆ, ಸದ್ಯ ಈ ಪಿಚ್‌ ಬ್ಯಾಟರ್‌ಗಳಿಗೆ ಅನುಕೂಲಕರವಾಗಿ ನಿಂತಿದ್ದು, ಬೇಗನೆ ವಿಕೆಟ್‌ಗಳು ಉದುರುವುದು ಕಷ್ಟ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 480 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ ನಡೆಸಿದ ಭಾರತವು, ನಾಲ್ಕನೇ ದಿನದಾಟದ ಅಂತ್ಯಕ್ಕೂ ಮುನ್ನ 571 ರನ್‌ ಗಳಿಸಿ ಆಲೌಟ್‌ ಆಯ್ತು. 91 ರನ್‌ಗಳ ಮುನ್ನಡೆ ಕಾಯ್ದುಕೊಂಡ ಭಾರತವು, ಆಸೀಸ್‌ಗೆ ಎರಡನೇ ಇನ್ನಿಂಗ್ಸ್‌ ಆಡಲು ಅವಕಾಶ ಮಾಡಿಕೊಟ್ಟಿತು. 91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದಿನದ ಅಂತ್ಯದ ವೇಳೆಗೆ 6 ಓವರ್‌ಗಳಲ್ಲಿ 3 ರನ್‌ ಗಳಿಸಿತು. ಸದ್ಯ 88 ರನ್‌ಗಳ ಹಿನ್ನಡೆಯೊಂದಿಗೆ ಆಸೀಸ್‌ ಐದನೇ ಹಾಗೂ ಅಂತಿಮ ದಿನದಾಟ ಆರಂಭಿಸುತ್ತಿದೆ.

ಆಸೀಸ್‌ ಗೆಲುವಿನ ಸಾಧ್ಯತೆ ಎಷ್ಟು? (1.0ಶೇಕಡಾ)

ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 88 ರನ್‌ಗಳ ಹಿನ್ನಡೆ ಹೊಂದಿದೆ. ಐದನೇ ದಿನದಾಟದಲ್ಲಿ ಆಸೀಸ್‌ ಮುಂದೆ ಇರುವ ಮೊದಲ ಸವಾಲು, ಮುನ್ನಡೆ ಸಾಧಿಸುವುದು. ಈ ಮುನ್ನಡೆಯ ಬಳಿಕವೇ ಆಸೀಸ್‌ ಗೆಲುವಿನ ಲೆಕ್ಕಾಚಾರ ಹಾಕಬೇಕಿದೆ. ವೇಗದ ಆಟಕ್ಕೆ ಮುಂದಾದರೆ, ಆಸೀಸ್‌ ವಿಕೆಟ್‌ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತಾಳ್ಮೆಯ ಆಟ ಪ್ರದರ್ಶಿಸಿ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದಷ್ಟೇ ಆಸೀಸ್‌ ಮುಂದಿರುವ ದಾರಿ. ಆಸೀಸ್‌ ಗೆಲ್ಲುವ ಸಾಧ್ಯತೆ ಶೇಕಡಾ 1ರಷ್ಟು ಮಾತ್ರ ಇದೆ. ಏಕೆಂದರೆ, ಮುನ್ನಡೆ ಕಾಯ್ದುಕೊಂಡ ಬಳಿಕ, ಬೃಹತ್‌ ಮೊತ್ತ ಕಲೆ ಹಾಕಿ ಭಾರತದ ಎರಡನೇ ಇನ್ನಿಂಗ್ಸ್‌ಗೆ ಅವಕಾಶ ಮಾಡಿಕೊಡಬೇಕಿದೆ. ಅದು ಕೂಡಾ 90 ಓವರ್‌ಗಳ ಒಳಗೆ. ಹೀಗಾಗಿ ಇಲ್ಲಿ ಗೆಲುವಿಗಿಂತ ಡ್ರಾ ಮಾಡಕೊಳ್ಳುವುದೇ ಆಸೀಸ್‌ ಮುಂದಿರುವ ದಾರಿ.

ಭಾರತದ ಗೆಲುವಿನ ಸಾಧ್ಯತೆ(50 ಶೆಕಡಾ)

ಆಸೀಸ್‌ಗೆ ಹೋಲಿಸಿದರೆ, ಭಾರತಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾರಣ ಭಾರತದ ಮುನ್ನಡೆ. ಸದ್ಯ 88 ರನ್‌ಗಳ ಮುನ್ನಡೆ ಹೊಂದಿರುವ ಭಾರತ, ಆಸೀಸ್‌ ಬ್ಯಾಟ್‌ಂಗ್‌ ಲೈನಪ್‌ ಮೇಲೆ ಮಾರಕ್‌ ಬೌಲಿಂಗ್‌ ದಾಳಿ ನಡೆಸಬೇಕಿದೆ. ಹೀಗಾಗಿ ಭಾರತವೇನಾದರೂ ದಿನದ 70-80 ಓವರ್‌ಗಳ ಒಳಗಡೆ ಆಸೀಸ್‌ ತಂಡವನ್ನು 150-200 ರನ್‌ಗಳ ಒಳಗೆ ಕಟ್ಟಿ ಹಾಕಿದರೆ, ಭಾರತಕ್ಕೆ ಗೆಲ್ಲುವ ಸಾಧ್ಯತೆ ಇದೆ. ಏಕೆಂದರೆ ಕೊನೆಯಲ್ಲಿ 10ರಿಂದ 20 ಓವರ್‌ಗಳ ಆಟ ಭಾರತಕ್ಕೆ ಸಿಕ್ಕರೂ, 100 ರನ್‌ಗಳಿಗಿಂತ ಒಳಗಿನ ಗುರಿ ಸಿಕ್ಕರೆ ಗೆಲ್ಲುವ ಪ್ರಯತ್ನ ಮಾಡಬಹುದು. ಹೀಗಾಗಿ ಆಸೀಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಸವಾಲು ಭಾರತದ ಮುಂದಿದೆ. ಆದರೆ, ಇದಕ್ಕೆ ಆಸೀಸ್‌ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ.

ಡ್ರಾ ಸಾಧ್ಯತೆ ಎಷ್ಟು?(99 ಶೇಕಡಾ)

ಸದ್ಯ ಆಟ ಸಾಗುತ್ತಿರುವ ರೀತಿ ಹಾಗೂ ಅಹಮದಾಬಾದ್‌ ಪಿಚ್‌ ಪರಿಸ್ಥಿತಿ ಪ್ರಕಾರ ಪಂದ್ಯವು ಡ್ರಾ ಆಗುವ ಸಾಧ್ಯತೆ ಹೆಚ್ಚು. ಉಭಯ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ಗಳಲ್ಲಿ ಕ್ರೀಸ್‌ಕಚ್ಚಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಪಂದ್ಯದ ನಾಲ್ಕೂ ದಿನಗಳು ಬ್ಯಾಟಿಂಗ್‌ ಸ್ನೇಹಿಯಾಗಿ ನಡೆದಿವೆ. ಹೀಗಾಗಿ ಐದನೇ ದಿನ ಕೂಡಾ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟ. ಹೀಗಾಗಿ ಆಸೀಸ್‌ ಈದಿನ ಸುದೀರ್ಘ ಅವಧಿಗೆ ಬ್ಯಾಟ್‌ ಬೀಸಿ, ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯಲಿದೆ. ಏಕೆಂದರೆ ತಂಡಕ್ಕೆ ಗೆಲುವಿನ ಸಾಧ್ಯತೆ ತುಂಬಾ ಕಡಿಮೆ.‌

    ಹಂಚಿಕೊಳ್ಳಲು ಲೇಖನಗಳು