logo
ಕನ್ನಡ ಸುದ್ದಿ  /  ಕ್ರೀಡೆ  /  ಕೈಗವಸು ತೆಗೆದಿಟ್ಟ ಒಲಿಂಪಿಕ್ ವಿಜೇತೆ; ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ 6 ಬಾರಿ ಚಾಂಪಿಯನ್ ಮೇರಿ ಕೋಮ್

ಕೈಗವಸು ತೆಗೆದಿಟ್ಟ ಒಲಿಂಪಿಕ್ ವಿಜೇತೆ; ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ 6 ಬಾರಿ ಚಾಂಪಿಯನ್ ಮೇರಿ ಕೋಮ್

Prasanna Kumar P N HT Kannada

Jan 25, 2024 06:47 AM IST

ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ 6 ಬಾರಿ ಚಾಂಪಿಯನ್ ಮೇರಿ ಕೋಮ್.

    • Mary Kom Announces Retirement: ಲೆಜೆಂಡರಿ ಬಾಕ್ಸರ್ ಮೇರಿ ಕೋಮ್ ಜನವರಿ 24ರಂದು ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ್ದಾರೆ. ವಯಸ್ಸಿನ ಮಿತಿಯ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ 6 ಬಾರಿ ಚಾಂಪಿಯನ್ ಮೇರಿ ಕೋಮ್.
ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ 6 ಬಾರಿ ಚಾಂಪಿಯನ್ ಮೇರಿ ಕೋಮ್.

ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ ಹಾಗೂ ಕ್ರೀಡಾ ಲೋಕದ ಲೆಜೆಂಡರಿ ಮೇರಿ ಕೋಮ್ (Mary Kom Retirement) ಬುಧವಾರ (ಜನವರಿ 24) ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್​​ ನಿಯಮ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್​ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್​ ಮಟ್ಟದಿಂದ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಆಡುವ ಹಸಿವು ಇನ್ನೂ ಇದೆ, ಆದರೆ…

ಸದ್ಯ, 41 ವರ್ಷದ ಮೇರಿ ಕೋಮ್​, ತನಗೆ ಆಡುವ ಹಂಬಲ ಇದ್ದರೂ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಿಂದ ತನ್ನ ವೃತ್ತಿಜೀವನಕ್ಕೆ ಗುಡ್​ಬೈ ಹೇಳಿದ್ದಾರೆ. ಈ ಬಗ್ಗೆ ಅವರು ಸಹ ಹೇಳಿದ್ದಾರೆ. ನನಗಿನ್ನೂ ಆಡುವ ಸಾಮರ್ಥ್ಯ ಇದೆ. ಹೆಚ್ಚೆಚ್ಚು ಆಡುವ ಬಯಕೆ ಇದೆ. ಆದರೆ ಬಲವಂತವಾಗಿ ಬಾಕ್ಸಿಂಗ್​​ನಿಂದ ಹಿಂದೆ ಸರಿಯುತ್ತಿದ್ದೇನೆ. ಜೀವನದಲ್ಲಿ ನಾನು ಎಲ್ಲವನ್ನೂ ಸಾಧಿಸಿದ್ದೇನೆ. ಇದೀಗ ನಿವೃತ್ತಿ ಹೊಂದುವ ಸಮಯ ಎಂದು ಮೇರಿ ಕೋಮ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚಾಂಪಿಯನ್ ಆಟಗಾರ್ತಿ ಮೇರಿ ಕೋಮ್

ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮೇರಿ ಕೋಮ್ ಪಾತ್ರರಾಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು, 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಕೂಡ ಆಗಿದ್ದಾರೆ. ಅನುಭವಿ ಆಟಗಾರ್ತಿ ಲಂಡನ್ 2012ರ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನೂ ಗೆದಿದ್ದರು. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ಉದ್ಘಾಟನಾ ವಿಶ್ವಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕ್ಕೆ ಪರಿಚಯವಾದಳು.

ಚಿನ್ನದ ಪದಕ; ಮೂವರು ಮಕ್ಕಳಿಗೆ ತಾಯಿ

ದಿಗ್ಗಜ ಆಟಗಾರ್ತಿ ಎಐಬಿಎ (AIBA) ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. 2005, 2006, 2008 ಮತ್ತು 2010ರ ಸೀಸನ್​ಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದರು. 2008ರಲ್ಲಿ ಪ್ರಶಸ್ತಿ ಗೆದ್ದ ನಂತರ ಮೇರಿ ತನ್ನ ಅವಳಿ ಮಕ್ಕಳ ತಾಯಿಯಾದರು. ಇದರಿಂದ ಕೆಲ ಕಾಲ ಬಾಕ್ಸಿಂಗ್​ನಿಂದ ಹೊರಗುಳಿದರು. 2012ರ ಒಲಿಂಪಿಕ್ ಪದಕ ಜಯಿಸಿದ ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದರು. ಆಗ ಮತ್ತೊಮ್ಮೆ ವಿಶ್ರಾಂತಿ ಪಡೆದರು.

ಮೇರಿ ಕೋಮ್ ಸಿನಿಮಾ

ಇದಾದ ನಂತರ ಬಾಕ್ಸಿಂಗ್​ಗೆ ಮರಳಿದ ಮೇರಿ ಮತ್ತೆ ಮಿಂಚು ಹರಿಸಿದರು. 2018ರ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಸ್ಥಾನ ಪಡೆದು ಉಕ್ರೇನ್​ನ ಹನ್ನಾ ಒಖೋಟಾ ವಿರುದ್ಧ 5-0 ಅಂತರದ ಗೆಲುವು ಸಾಧಿಸಿ 6ನೇ ಬಾರಿಗೆ ವಿಶ್ವ ಚಾಂಪಿಯನ್​ ಆದರು. ಇದಾದ 1 ವರ್ಷದ ನಂತರ ತಮ್ಮ ಎಂಟನೇ ವಿಶ್ವ ಪದಕಕ್ಕೆ ಮುತ್ತಿಕ್ಕಿದರು. ಅನೇಕರಿಗೆ ಮಾದರಿಯಾಗಿರುವ ಅವರ ಸಾಧನೆ ಸಾರುವ ಸಿನಿಮಾ ಕೂಡ ಜನಪ್ರಿಯವಾಗಿತ್ತು. ಮೇರಿ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು.

ಪ್ರಶಸ್ತಿಗಳು

ಪದ್ಮವಿಭೂಷಣ (2020)

ಪದ್ಮಭೂಷಣ (2013),

ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಅವಾರ್ಡ್ (2009)

ಪದ್ಮಶ್ರೀ (2006)

ಅರ್ಜನ್ ಅವಾರ್ಡ್ (2003)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ