logo
ಕನ್ನಡ ಸುದ್ದಿ  /  Sports  /  Lionel Messi Says Difficult To Play In 2026 World Cup

Lionel Messi: ಮೆಸ್ಸಿ 2026ರ ವಿಶ್ವಕಪ್‌ನಲ್ಲಿ ಆಡ್ತಾರಾ? ಈ ಬಗ್ಗೆ ಅವರೇ ಹೇಳಿದ್ದು ಹೀಗೆ

HT Kannada Desk HT Kannada

Feb 03, 2023 08:01 PM IST

ಲಿಯೋನೆಲ್ ಮೆಸ್ಸಿ

    • “ನಾನು ಫುಟ್‌ಬಾಲ್ ಆಡುವುದನ್ನು ನಿಜಕ್ಕೂ ಇಷ್ಟಪಡುತ್ತೇನೆ. ಅಲ್ಲದೆ ಆಟದಿಂದಾಗಿ ನಾನು ಉತ್ತಮ ಸ್ಥಿತಿಯಲ್ಲಿರುತ್ತೇನೆ ಎಂದು ನಾನು ಭಾವಿಸಿದಾಗ, ಅದನ್ನು ಮುಂದುವರಿಸುತ್ತೇನೆ,” ಎಂದು ಮೆಸ್ಸಿ ಹೇಳಿದ್ದಾರೆ.
ಲಿಯೋನೆಲ್ ಮೆಸ್ಸಿ
ಲಿಯೋನೆಲ್ ಮೆಸ್ಸಿ (REUTERS)

ಕಳೆದ ಡಿಸೆಂಬರ್‌ನಲ್ಲಿ ಮುಗಿದ ಫಿಫಾ ವಿಶ್ವಕಪ್‌ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ, ಅಭಿಮಾನಿಗಳಿಗೆ ಸುದ್ದಿಯೊಂದನ್ನು ನೀಡಿದ್ದಾರೆ. ಫುಟ್ಬಾಲ್‌ ಕ್ರೀಡೆಯಲ್ಲಿ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದಿರುವ ಮೆಸ್ಸಿ, ತಮ್ಮ ಮೊದಲ ವಿಶ್ವಕಪ್ ಟ್ರೋಫಿಯನ್ನು ಎತ್ತಿದ ನಂತರ, ಮುಂದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಅವರು ಮುಂದಿನ ವಿಶ್ವಕಪ್‌ನಲ್ಲಿ ಭಾಗಿಯಾಗುವ ಸಾಧ್ಯತೆಯ ಬಗ್ಗೆ ತಿಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

“ನನ್ನ ವಯಸ್ಸಿನ ಕಾರಣದಿಂದಾಗಿ 2026ರ ವಿಶ್ವಕಪ್‌ ಆಡಲು ಕಷ್ಟವಾಗುತ್ತದೆ” ಎಂದು 35 ವರ್ಷದ ಮೆಸ್ಸಿ ಅರ್ಜೆಂಟೀನಾದ ಕ್ರೀಡಾ ಪತ್ರಿಕೆಯಾದ ಡಯಾರಿಯೊ ಓಲೆ(Diario Ole)ಗೆ ತಿಳಿಸಿದ್ದಾರೆ. “ನಾನು ಫುಟ್‌ಬಾಲ್ ಆಡುವುದನ್ನು ನಿಜಕ್ಕೂ ಇಷ್ಟಪಡುತ್ತೇನೆ. ಅಲ್ಲದೆ ಆಟದಿಂದಾಗಿ ನಾನು ಉತ್ತಮ ಸ್ಥಿತಿಯಲ್ಲಿರುತ್ತೇನೆ ಎಂದು ನಾನು ಭಾವಿಸಿದಾಗ, ಅದನ್ನು ಮುಂದುವರಿಸುತ್ತೇನೆ. ಮುಂದಿನ ವಿಶ್ವಕಪ್‌ಗೆ ಇನ್ನೂ ಬಹಳ ಸಮಯ ಇದೆ ಎಂದು ತೋರುತ್ತದೆ. ಆದರೆ, ಅದರಲ್ಲಿ ನಾನು ಭಾಗಿಯಾಗುವುದು ನನ್ನ ವೃತ್ತಿಜೀವನ ಹೇಗೆ ಸಾಗುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ,” ಎಂದು ಮೆಸ್ಸಿ ಹೇಳಿದ್ದಾರೆ.

ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಾಲೋನಿ ಅವರು ಕೂಡಾ, ಫುಟ್ಬಾಲ್‌ ಜಗತ್ತಿನ ಸೂಪರ್‌ಸ್ಟಾರ್ ಅನ್ನು ಮತ್ತೆ ಮೈದಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಏಕೆಂದರೆ, ಮೆಸ್ಸಿಯು ಐದು ವಿಶ್ವಕಪ್‌ಗಳಲ್ಲಿ ಆಡಿದ ಕೇವಲ ಆರು ಆಟಗಾರರಲ್ಲಿ ಒಬ್ಬರು ಎನಿಸಿಕೊಳ್ಳಲಿದ್ದಾರೆ. ಮುಂದಿನ ವಿಶ್ವಕಪ್‌ ಅವೃತ್ತಿಯು ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೋದಲ್ಲಿ ನಡೆಯಲಿದೆ.

“ಮೆಸ್ಸಿ ಮುಂದಿನ ವಿಶ್ವಕಪ್‌ ಆಡಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಸ್ಕಾಲೋನಿ ಕಳೆದ ತಿಂಗಳು ಸ್ಪ್ಯಾನಿಷ್ ರೇಡಿಯೊ ಕ್ಯಾಲ್ವಿಯಾ ಎಫ್‌ಎಂಗೆ ತಿಳಿಸಿದ್ದರು. “ಆದರೆ, ಅಂತಿಮ ನಿರ್ಧಾರ ಅವನ ಮೇಲಿದೆ. ಆತ ಏನು ಬಯಸುತ್ತಾನೆ ಮತ್ತು ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಆತನಿಗಾಗಿ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅವನು ಮೈದಾನದಲ್ಲಿ ಸಂತೋಷವಾಗಿರುತ್ತಾನೆ ಎಂದರೆ, ಅದುವೇ ನಮಗೆ ಖುಷಿ,” ಎಂದು ಅವರು ತಿಳಿಸಿದ್ದಾರೆ.

2022ರ ವಿಶ್ವಕಪ್‌ನಲ್ಲಿ ಏಳು ಗೋಲುಗಳನ್ನು ಗಳಿಸಿದ ಬಳಿಕ, ಮೆಸ್ಸಿ ಅವರು 2026ರಲ್ಲೂ ಆಡಿದರೆ ವಿಶ್ವಕಪ್‌ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಆಗಿ ಹೊರಹೊಮ್ಮಲಿದ್ದಾರೆ. ಸದ್ಯ ಅವರು 13 ಗೋಲುಗಳನ್ನು ಹೊಂದಿದ್ದು, ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಅವರಿಂದ ಮೂರು ಗೋಲುಗಳಷ್ಟು ಹಿಂದಿದ್ದಾರೆ.

ಮೆಸ್ಸಿ ಈಗಾಗಲೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. ಫ್ರಾನ್ಸ್ ವಿರುದ್ಧ 2022ರ ಅಂತಿಮ ಗೆಲುವಿನಲ್ಲಿ 26ನೇ ಬಾರಿಗೆ ಕಣಕ್ಕಿಳಿಯುವ ಮೂಲಕ ಜರ್ಮನಿಯ ಲೋಥರ್ ಮ್ಯಾಥೌಸ್ ಅವರ ದಾಖಲೆ ಬ್ರೇಕ್‌ ಮಾಡಿದ್ದಾರೆ.

ದೋಹಾದಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ರೋಮಾಂಚಕ 3-3ರ ಟೈ ವೇಳೆ, ಮೆಸ್ಸಿ ಎರಡು ಗೋಲು ಗಳಿಸಿದ್ದರು. ಅಂತಿಮವಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ವಿಶ್ವಕಪ್ ಗೆದ್ದುಕೊಂಡಿತು.‌

ಗಮನಿಸಬಹುದಾದ ಇತರೆ ಸುದ್ದಿಗಳು

ಇದೇ ಮೊದಲ ಬಾರಿಗೆ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ಆತಿಥ್ಯ; ಯಾವಾಗ?

ಇದೇ ಮೊದಲ ಬಾರಿಗೆ ಭಾರತವು ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌(Volleyball Club World Championships)ಗೆ ಆತಿಥ್ಯ ವಹಿಸಲಿದೆ. ವಾಲಿಬಾಲ್ ವರ್ಲ್ಡ್(Volleyball World) ಮತ್ತು ಅಂತಾರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ (International Volleyball Federation), ಪುರುಷರ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತವನ್ನು ಆತಿಥೇಯ ರಾಷ್ಟ್ರವಾಗಿ ಘೋಷಿಸಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು