logo
ಕನ್ನಡ ಸುದ್ದಿ  /  ಕ್ರೀಡೆ  /  Irfan Pathan On Gill: 'ನಾನು ಆತನ ದೊಡ್ಡ ಅಭಿಮಾನಿ, ಎಲ್ಲಾ ಮಾದರಿಯಲ್ಲೂ ಆಡುವ ಸಾಮರ್ಥ್ಯ ಅವನಿಗಿದೆ'; ಗಿಲ್‌ ಹೊಗಳಿದ ಪಠಾಣ್‌

Irfan Pathan on Gill: 'ನಾನು ಆತನ ದೊಡ್ಡ ಅಭಿಮಾನಿ, ಎಲ್ಲಾ ಮಾದರಿಯಲ್ಲೂ ಆಡುವ ಸಾಮರ್ಥ್ಯ ಅವನಿಗಿದೆ'; ಗಿಲ್‌ ಹೊಗಳಿದ ಪಠಾಣ್‌

HT Kannada Desk HT Kannada

Feb 02, 2023 09:35 PM IST

ಇರ್ಫಾನ್ ಪಠಾಣ್ ಟೀಮ್ ಇಂಡಿಯಾ ಸ್ಟಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

    • “ಅವರು ಬ್ಯಾಟಿಂಗ್ ಮಾಡುತ್ತಿರುವ ಶೈಲಿಯನ್ನು ನೋಡಿ, ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರು ಭಾರತಕ್ಕೆ ಆಲ್ ಫಾರ್ಮ್ಯಾಟ್ ಆಟಗಾರನಾಗಬಹುದು ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ,” ಎಂದು ಪಠಾಣ್ ಹೇಳಿದ್ದಾರೆ.
ಇರ್ಫಾನ್ ಪಠಾಣ್ ಟೀಮ್ ಇಂಡಿಯಾ ಸ್ಟಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇರ್ಫಾನ್ ಪಠಾಣ್ ಟೀಮ್ ಇಂಡಿಯಾ ಸ್ಟಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ (AP-PTI)

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ದ್ವಿಪಕ್ಷೀಯ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ, ಶುಬ್ಮನ್ ಗಿಲ್ ಶತಕದ ನೆರವಿನಿಂದ ಟೀಮ್‌ ಇಂಡಿಯಾ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರವು 168 ರನ್‌ಗಳ ಅಂತರದಿಂದ ಬೃಹತ್ ಜಯ ಸಾಧಿಸುವ ಮೂಲಕ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ಅಹಮದಾಬಾದ್‌ನಲ್ಲಿ ಅಮೋಘ ಶತಕದೊಂದಿಗೆ ಆರಂಭಿಕ ಆಟಗಾರ ಗಿಲ್‌ ದಾಖಲೆ ನಿರ್ಮಿಸಿದರು. ಇವರ ಅಮೋಘ ಆಟಕ್ಕೆ ಮಾಜಿ ಭಾರತೀಯ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಕೇವಲ 23 ವರ್ಷ ವಯಸ್ಸಿನಲ್ಲಿ ಚುಟುಕು ಸ್ವರೂಪದಲ್ಲಿ ಶತಕ ಸಿಡಿಸಿದ ಆರಂಭಿಕ ಆಟಗಾರ ಗಿಲ್, ಈ ಸಾಧನೆ ಮಾಡಿದ ಕಿರಿಯ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇದೇ ವಿಚಾರವಾಗಿ ಗಿಲ್ ಅವರನ್ನು ಹೊಗಳಿದ ಮಾಜಿ ಆಲ್ ರೌಂಡರ್ ಇರ್ಫಾನ್‌ ಪಠಾಣ್, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಸಮರ್ಥವಾಗಿ ಆಟಗಾರನಾಗುವ ಗಿಲ್‌ ಅರ್ಹತೆಯ ಬಗ್ಗೆ ಮಾತನಾಡಿದರು. ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯಂತೆ ಎಲ್ಲಾ ಮೂರು ಸ್ವರೂಪಗಳಲ್ಲಿ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ಗಿಲ್ ಹೊಂದಿದ್ದಾರೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

“ಅವರು ಬ್ಯಾಟಿಂಗ್ ಮಾಡುತ್ತಿರುವ ಶೈಲಿಯನ್ನು ನೋಡಿ, ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರು ಭಾರತಕ್ಕೆ ಆಲ್ ಫಾರ್ಮ್ಯಾಟ್ ಆಟಗಾರನಾಗಬಹುದು ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್‌ ಅನ್ನು ಆಳಿದರು. ಈ ಬ್ಯಾಟರ್‌ಗೂ ಅಷ್ಟೇ ಸಾಮರ್ಥ್ಯವಿದೆ,” ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಗಿಲ್ ಪಂದ್ಯಶ್ರೇಷ್ಠ ಶತಕ ಸಿಡಿಸಿದ ಬಳಿಕ ಪಠಾಣ್ ಈ ಹೇಳಿಕೆ ನೀಡಿದ್ದಾರೆ. ಭಾರತದ ಆರಂಭಿಕ ಆಟಗಾರ ಗಿಲ್ 63 ಎಸೆತಗಳಲ್ಲಿ 126 ರನ್ ಗಳಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಭರ್ಜರಿ 234 ರನ್‌ ಗಳಿಸಿತು. ಶತಕವೀರ ಗಿಲ್ ಅಜೇಯರಾಗಿ ಉಳಿದರು. ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಐದನೇ ಭಾರತೀಯ ಬ್ಯಾಟರ್ ಆಗಿ ಗಿಲ್‌ ಹೊರಹೊಮ್ಮಿದರು. ಪ್ರವಾಸಿ ನ್ಯೂಜಿಲೆಂಡ್ ಕೇವಲ 66 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆತಿಥೇಯರು 168 ರನ್‌ಗಳಿಂದ ಜಯಗಳಿಸಿದರು. ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಕೇವಲ 23 ವರ್ಷ ಮತ್ತು 146 ದಿನಗಳಲ್ಲಿ, ಗಿಲ್ ಅವರು ಟಿ20 ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಎನಿಸಿಕೊಂಡರು. ಈ ಹಿಂದೆ ಈ ಸಾಧನೆಯನ್ನು 23 ವರ್ಷ ಮತ್ತು 156 ದಿನಗಳಲ್ಲಿ ಸುರೇಶ್ ರೈನಾ ಮಾಡಿದ್ದರು. ಪಾಕಿಸ್ತಾನದ ಅಹ್ಮದ್ ಶಹಜಾದ್ ಅವರು 22 ವರ್ಷ ಮತ್ತು 127 ದಿನಗಳಲ್ಲಿ ತಮ್ಮ ಮೊದಲ ಟಿ20 ಶತಕವನ್ನು ಸಿಡಿಸಿದ್ದು ವಿಶ್ವದಾಖಲೆಯಾಗಿದೆ.

“ಗಿಲ್‌ ಕಳೆದ ಆಗಸ್ಟ್‌ ತಿಂಗಳಲ್ಲಿ ತಮ್ಮ ಮೊದಲ ಶತಕ ಸಿಡಿಸಿದರು. ಗಿಲ್ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು ಆರು ಶತಕಗಳನ್ನು ಗಳಿಸಿದ್ದಾರೆ,” ಎಂದು ಪಠಾಣ್ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು