logo
ಕನ್ನಡ ಸುದ್ದಿ  /  Sports  /  Mumbai Indians Bags New York Franchise In Major League Cricket

Major League Cricket: ಸಪ್ತಸಾಗರದಾಚೆಯೂ ಎಂಐ ಹವಾ; ಯುಎಸ್ ಲೀಗ್‌ಗೆ ನ್ಯೂಯಾರ್ಕ್ ಫ್ರಾಂಚೈಸಿ ಖರೀದಿಸಿದ ಮುಂಬೈ ಇಂಡಿಯನ್ಸ್​

HT Kannada Desk HT Kannada

Mar 20, 2023 08:36 PM IST

ಎಂಐ ನ್ಯೂಯಾರ್ಕ್

  • 'ಮೇಜರ್​ ಲೀಗ್​ ಕ್ರಿಕೆಟ್​' ಅಮೆರಿಕದಲ್ಲಿ ಆಡಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್​ ಚಾಂಪಿಯನ್‌ಶಿಪ್‌ ಆಗಿದೆ. 2023ರ ಬೇಸಿಗೆ ಅವಧಿಯಲ್ಲಿ ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್​ ಕ್ರಿಕೆಟ್​ ಟೂರ್ನಿ ನಡೆಯಲಿದೆ.

ಎಂಐ ನ್ಯೂಯಾರ್ಕ್
ಎಂಐ ನ್ಯೂಯಾರ್ಕ್

ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ ಒಡೆತನದ ಮುಂಬೈ ಇಂಡಿಯನ್ಸ್ (Mumbai Indians), ತನ್ನ ಐದನೇ ಕ್ರಿಕೆಟ್​ ಫ್ರಾಂಚೈಸಿಯಾಗಿ 'ಎಂಐ ನ್ಯೂಯಾರ್ಕ್(MI New York)​' ತಂಡವನ್ನು ಇಂದು ಘೋಷಿಸಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಉತ್ತಮ ಬ್ರಾಂಡ್‌ ಆಗಿ ಜನಪ್ರಿಯವಾಗಿರುವ ಮುಂಬೈ ಇಂಡಿಯನ್ಸ್‌, ತನ್ನ ವ್ಯಾಪ್ತಿಯನ್ನು ಸಪ್ತಸಾಗರದಾಚೆಗೂ ವಿಸ್ತರಿಸಿದೆ.

ಟ್ರೆಂಡಿಂಗ್​ ಸುದ್ದಿ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮೇಜರ್ ಲೀಗ್ ಕ್ರಿಕೆಟ್ ((Major League Cricket)ನಲ್ಲಿ ತಂಡವನ್ನು ಹೊಂದಿದೆ. ಇದೀಗ ಮುಂಬೈ ಇಂಡಿಯನ್ಸ್‌ ಕೂಡಾ ಯುಎಸ್‌ನಲ್ಲಿ ಕ್ರಿಕೆಟ್ ಕ್ರಾಂತಿ ಹೆಚ್ಚಸಲು ಹೆಜ್ಜೆ ಇಟ್ಟಿದೆ. ನ್ಯೂಯಾರ್ಕ್​ ಮೂಲದ ಈ ತಂಡದಿಂದ ಎಂಐ ಫ್ರಾಂಚೈಸಿಯು ಮತ್ತಷ್ಟು ವಿಸ್ತಾರಗೊಂಡಿದೆ. ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್ ಕ್ರಿಕೆಟ್‌​(MLC) ನಲ್ಲಿ ಈ ಬಾರಿ ಕಣಕ್ಕಿಳಿಯಲಿದೆ.

‘ಬೆಳೆಯುತ್ತಿರುವ ಎಂಐ ಕುಟುಂಬಕ್ಕೆ ನ್ಯೂಯಾರ್ಕ್​ ಫ್ರಾಂಚೈಸಿಯನ್ನು ಸ್ವಾಗತಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಅಮೆರಿಕದ ಕ್ರಿಕೆಟ್​ ಲೀಗ್‌​ಗೆ ಇದೇ ಮೊದಲ ಬಾರಿಗೆ ನಾವು ಪ್ರವೇಶ ಪಡೆಯುತ್ತಿದ್ದೇವೆ. ನಿರ್ಭೀತಿ ಮತ್ತು ಮನರಂಜನೆಯ ಕ್ರಿಕೆಟ್​ ಆಟದ ಜಾಗತಿಕ ಬ್ರ್ಯಾಂಡ್​ ಆಗಿ ಮುಂಬೈ ಇಂಡಿಯನ್ಸ್ ಅನ್ನು ರೂಪಿಸುವ ಭರವಸೆ ನನ್ನದು. ಎಂಐಗೆ ಇದು ಇನ್ನೊಂದು ಹೊಸ ಆರಂಭ. ನಾನು ಇದರ ಮುಂದಿನ ಉತ್ಸಾಹಿ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ’ ಎಂದು ಫ್ರಾಂಚೈಸಿಯ ಮಾಲಕಿ ನೀತಾ ಅಂಬಾನಿ ಹೇಳಿದ್ದಾರೆ.

'ಎಂಐ ಕುಟುಂಬವು ಕ್ರಿಕೆಟ್​ ಆಟವನ್ನು ಜಗತ್ತಿನೆಲ್ಲೆಡೆ ವಿಸ್ತರಿಸಲು ಮತ್ತು ಉತ್ತೇಜಿಸಲು ಬದ್ಧವಾಗಿದೆ. ಜೊತೆಗೆ ಪ್ರತಿದಿನ ಬಲಿಷ್ಠವಾಗಿ ಬೆಳೆಯುತ್ತಲೇ ಇದೆ. ಎಂಐ ಕುಟುಂಬದಲ್ಲಿ ಮುಂಬೈ ಇಂಡಿಯನ್ಸ್ (ಐಪಿಎಲ್​), ಎಂಐ ಕೇಪ್‌​ಟೌನ್​ (ಎಸ್​ಎ20), ಎಂಐ ಎಮಿರೇಟ್ಸ್​ (ಐಎಲ್​ಟಿ20)ಮತ್ತು ಮುಂಬೈ ಇಂಡಿಯನ್ಸ್ (ಡಬ್ಲ್ಯುಪಿಎಲ್​) ಈಗಾಗಲೇ ಯಶಸ್ವಿಯಾಗಿವೆ. ಅದರ ಬೆನ್ನಲ್ಲೇ ಈಗ 'ಎಂಐ ನ್ಯೂಯಾರ್ಕ್'​ 5ನೇ ಫ್ರಾಂಚೈಸಿ ಆಗಿ ಈ ಕುಟುಂಬ ಸೇರಿಕೊಂಡಿದೆ. ಮೂರು ಭಿನ್ನ ಖಂಡಗಳಲ್ಲಿ, ನಾಲ್ಕು ಭಿನ್ನ ದೇಶಗಳಲ್ಲಿ ಮತ್ತು ಐದು ಭಿನ್ನ ಕ್ರಿಕೆಟ್​ ಲೀಗ್‌​ಗಳಲ್ಲಿ ಈಗ ಎಂಐ ತಂಡಗಳನ್ನು ಹೊಂದಿದಂತಾಗಿದೆ,' ಎಂದು ಅವರು ಹೇಳಿದ್ದಾರೆ.

ವಿಶ್ವದ ಎಲ್ಲೆಡೆ ಸುಮಾರು 50 ದಶಲಕ್ಷ ಡಿಜಿಟಲ್​ ಅಭಿಮಾನಿಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ಕ್ರಿಕೆಟ್​ ಬ್ರ್ಯಾಂಡ್​ ಎನಿಸಿಕೊಂಡಿದೆ. ವಿಶ್ವದೆಲ್ಲೆಡೆಯ ಪ್ರಮುಖ ಫ್ರಾಂಚೈಸಿ ಲೀಗ್‌​ಗಳಲ್ಲಿ ವರ್ಷದಲ್ಲಿ ಸರಿಸುಮಾರು 6 ತಿಂಗಳ ಕಾಲ ಕ್ರಿಕೆಟ್​ ಆಡುವ ಎಂಐ ಫ್ರಾಂಚೈಸಿಯ ಈ ತಂಡಗಳನ್ನು ಅಭಿಮಾನಿಗಳು ಬೆಂಬಲಿಸುತ್ತಾ ಬಂದಿದ್ದಾರೆ. 2009ರಿಂದ ಮುಂಬೈ ಇಂಡಿಯನ್ಸ್ ಶೇಕಡಾ 99ರಷ್ಟು ಬ್ರ್ಯಾಂಡ್​ ಮೌಲ್ಯದ (ಬ್ರ್ಯಾಂಡ್​ ಫೈನಾನ್ಸ್​) ಪ್ರಗತಿ ಕಂಡಿದೆ ಎಂದು ಫ್ರಾಂಚೈಸಿ ತಿಳಿಸಿದೆ.

'ಮೇಜರ್​ ಲೀಗ್​ ಕ್ರಿಕೆಟ್​' ಅಮೆರಿಕದಲ್ಲಿ ಆಡಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್​ ಚಾಂಪಿಯನ್‌ಶಿಪ್‌ ಆಗಿದೆ. 2023ರ ಬೇಸಿಗೆ ಅವಧಿಯಲ್ಲಿ ಚೊಚ್ಚಲ ಆವೃತ್ತಿಯ ಮೇಜರ್​ ಲೀಗ್​ ಕ್ರಿಕೆಟ್​ ಟೂರ್ನಿ ನಡೆಯಲಿದೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಭಾರಿ ಯಶಸ್ಸು ಗಳಿಸಿದೆ. ಬರೋಬ್ಬರಿ ಐದು ಬಾರಿ ಟ್ರೋಫಿ ಗೆಲ್ಲುವ ಮೂಲ ಲೀಗ್‌ನ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಇದೀಗ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲೂ ಫ್ರಾಂಚೈಸಿಯ ತಂಡ ಆಡುತ್ತಿದೆ. ಸದ್ಯ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡವು ಡಬ್ಲ್ಯೂಪಿಎಲ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು