logo
ಕನ್ನಡ ಸುದ್ದಿ  /  ಕ್ರೀಡೆ  /   Iran Vs Wales Match Highlight: ಚೆಶ್ಮಿ, ರಮಿನ್ ಕೊನೆ ಕ್ಷಣದ ಚಮತ್ಕಾರ; ವೇಲ್ಸ್ ವಿರುದ್ಧ ಇರಾನ್ ಗೆ ಗೆಲುವು

Iran vs Wales match highlight: ಚೆಶ್ಮಿ, ರಮಿನ್ ಕೊನೆ ಕ್ಷಣದ ಚಮತ್ಕಾರ; ವೇಲ್ಸ್ ವಿರುದ್ಧ ಇರಾನ್ ಗೆ ಗೆಲುವು

HT Kannada Desk HT Kannada

Nov 25, 2022 07:40 PM IST

google News

ವೇಲ್ಸ್ ವಿರುದ್ಧ ಗೆದ್ದಾಗ ಇರಾನ್ ತಂಡದ ಸಂಭ್ರಮಾಚರಣೆ (ಫೋಟೋ-AP)

  • ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ವೇಲ್ಸ್ ವಿರುದ್ಧ ಪಂದ್ಯದಲ್ಲಿ ಇರಾನ್ 2-0 ಅಂತರದ ಗೆಲುವು ಸಾಧಿಸಿದೆ. ಆ ಮೂಲಕ ಬಿ ಗ್ರೂಪ್ ನಲ್ಲಿ ಉಳಿದುಕೊಂಡಿದೆ. 

ವೇಲ್ಸ್ ವಿರುದ್ಧ ಗೆದ್ದಾಗ ಇರಾನ್ ತಂಡದ ಸಂಭ್ರಮಾಚರಣೆ (ಫೋಟೋ-AP)
ವೇಲ್ಸ್ ವಿರುದ್ಧ ಗೆದ್ದಾಗ ಇರಾನ್ ತಂಡದ ಸಂಭ್ರಮಾಚರಣೆ (ಫೋಟೋ-AP)

ದೋಹಾ: ಇರಾನ್ ತಂಡದ ಆಟಗಾರ ರೌಜ್ ಬ್ಹೆ ಚೆಶ್ಮಿ ಮತ್ತು ರಮಿನ್ ಹೆಚ್ಚುವರಿ ಸಮಯದ ಅವಕಾಶವನ್ನು ಪಡೆದು ಬಾರಿಸಿದ ತಲಾ ಎರಡು ಗೋಲುಗಳಿಂದ ವೇಲ್ಸ್ ತಂಡವನ್ನು ಮಣಿಸಿ ಫಿಫಾ ವಿಶ್ವಕಪ್ ನ ಗ್ರೂಪ್ ಬಿ ನಲ್ಲಿ ಉಳಿದುಕೊಂಡಿದೆ.

ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಇರಾನ್ ತಂಡ ಇಂಜುರಿ ಟೈಮ್ ನಲ್ಲಿ ವೇಲ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದೆ.

ಉಭಯ ತಂಡಗಳು ನಿಗದಿತ 90 ನಿಮಿಷಗಳ ಆಟದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ವೇಲ್ಸ್ ತಂಡದ ಗೋಲ್ ಕೀವರ್ ವೇಯ್ನಿ ಹೆನ್ನೆಸ್ಸ್ಸಿ 86ನೇ ನಿಮಿಷದಲ್ಲಿ ಕೆಂಪು ಕಾರ್ಡ್ ಪಡೆದರು.

ಕೊನೆಯ ಕ್ಷಣದಲ್ಲಿ ವೇಯ್ನಿ ಅನುಪಸ್ಥಿತಿಯ ಲಾಭ ಪಡೆದ ಇರಾನ್ ಆಟಗಾರ ಚೆಶ್ಮಿ ಹೆಚ್ಚುವರಿ ಸಮಯದಲ್ಲಿ (90+8) 8ನೇ ನಿಮಿಷದಲ್ಲಿ ಹಾಗೂ ರಮಿನ್ ಹೆಚ್ಚುವರಿ ಸಮಯದ (90+11) 11ನೇ

ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸುವ ಮೂಲಕ ವೇಲ್ಸ್ ತಂಡವನ್ನು ಮಣಿಸಿದರು.

ಅಮೆರಿಕ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೇಲ್ಸ್ 1-1 ಗೋಲುಗಳೊಂದಿಗೆ ಡ್ರಾ ಸಾಧಿಸಿತ್ತು. ಇರಾನ್ ತನ್ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6-2 ರಿಂದ ಕುಸಿದು ಗುಂಪಿನಲ್ಲಿ ಕೊನೆಯ

ಸ್ಥಾನಕ್ಕೆ ಕುಸಿದಿತ್ತು. ವೇಲ್ಸ್ ತಂಡ ಒಟ್ಟಾರೆಯಾಗಿ ಎರಡನೇ ಬಾರಿಗೆ ವಿಶ್ವಕಪ್ ನಲ್ಲಿ ಕಾಣಿಸಿಕೊಂಡಂತಾಗಿದೆ. 1958 ನಂತರ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಆಡುತ್ತಿದೆ.

ಇರಾನ್‌ನ ಗೋಲ್‌ಕೀಪರ್‌ ಅಲಿ ಬೈರನ್‌ವಾಂಡ್‌ ಅವರು ಆರಂಭಿಕ ಪಂದ್ಯದಲ್ಲಿ ಗಾಯಗೊಂಡ ನಂತರ ಆಟದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಹೊಸೈನ್ ಹೊಸೇನಿ ಆಟ ಆರಂಭಿಸಿದರು.

ಕಳೆದ ಎರಡು ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಇರಾನ್, ನಾಕೌಟ್ ಸುತ್ತಿಗೆ ಮುನ್ನಡೆ ಪಡೆಯುವಲ್ಲಿ ವಿಫಲವಾಗಿತ್ತು.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ