logo
ಕನ್ನಡ ಸುದ್ದಿ  /  ಕ್ರೀಡೆ  /  India Vs Australia 4th Test: ಆಸೀಸ್ ವಿರುದ್ಧ ಗಿಲ್ ಶತಕದಾಟ; ಒಂದೇ ವರ್ಷ ಮೂರು ಫಾರ್ಮೆಟ್‌ನಲ್ಲೂ ಸೆಂಚುರಿ

India vs Australia 4th Test: ಆಸೀಸ್ ವಿರುದ್ಧ ಗಿಲ್ ಶತಕದಾಟ; ಒಂದೇ ವರ್ಷ ಮೂರು ಫಾರ್ಮೆಟ್‌ನಲ್ಲೂ ಸೆಂಚುರಿ

HT Kannada Desk HT Kannada

Mar 11, 2023 04:42 PM IST

ಶುಬ್ಮನ್‌ ಗಿಲ್

    • ನಾಯಕ ರೋಹಿತ್ ಬೇಗನೆ ಔಟಾದರೂ, ಗಿಲ್ ಆಸೀಸ್ ಬ್ಯಾಟರ್‌ಗಳ ವಿರುದ್ಧ ಆಕ್ರಮಣಕಾರಿ ಆಟ ಮುಂದುವರೆಸಿದರು. 89 ಎಸೆತಗಳಲ್ಲಿ ಅರ್ಧಶತಕ ತಲುಪಿದ ಗಿಲ್‌, ಪೂಜಾರ ಜೊತೆಗೆ ಶತಕದ ಜೊತೆಯಾಟವಾಡಿದರು.
ಶುಬ್ಮನ್‌ ಗಿಲ್
ಶುಬ್ಮನ್‌ ಗಿಲ್

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಪಂದ್ಯದ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ತಮ್ಮ ಎರಡನೇ ಟೆಸ್ಟ್ ಶತಕ ಗಳಿಸಿದರು. ಆ ಮೂಲಕ ಈ ವರ್ಷ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ‌ ಶತಕ ಸಿಡಿಸಿದ ದಾಖಲೆ ನಿರ್ಮಿಸಿದರು.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಅಹಮದಾಬಾದ್‌ನಲ್ಲಿ 194 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಶುಬ್ಮನ್ ಮೂರಂಕಿ ಮೊತ್ತ ತಲುಪಿದರು. ಸರಣಿಯ ಹಿಂದಿನ ಟೆಸ್ಟ್‌ನಲ್ಲಿ ವಿಫಲವಾಗಿದ್ದ ಅವರು, ಅಪಾರ ಟೀಕೆ ಎದುರಿಸಿದ್ದರು. ಇಂದು ಎಲ್ಲಾ ಟೀಕೆಗಳಿಗೂ ಬ್ಯಾಟ್‌ನಲ್ಲೇ ಉತ್ತರಿಸಿದರು. ವೈಫಲ್ಯದ ನಂತರ ಇಂದಿನ ಪಂದ್ಯದಲ್ಲಿ ಬ್ಯಾಟ್‌ ಬೀಸುವಾಗ ಸಹಜವಾಗಿಯೇ ಅವರ ಮೇಲೆ ಒತ್ತಡ ಹೆಚ್ಚಿತ್ತು. ರಾಹುಲ್‌ ಬದಲಿಗೆ ಮೂರನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ್ದ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 21 ಮತ್ತು 5 ರನ್‌ ಮಾತ್ರ ಗಳಿಸಿದ್ದರು.

23 ವರ್ಷದ ಓಪನರ್ ಇನ್ನಿಂಗ್ಸ್‌ನ ಆರಂಭದಲ್ಲಿ ಆಕ್ರಮಣಕಾರಿ ವಿಧಾನ ಅನುಸರಿಸಿದರು. ಇನ್ನಿಂಗ್ಸ್‌ನ ಆರಂಭದಲ್ಲಿ ಅವರು 2ನೇ ದಿನದ ಅಂತಿಮ ಓವರ್‌ನಲ್ಲಿ ನಾಥನ್ ಲಿಯಾನ್ ಎಸೆತದಲ್ಲಿ ಲಾಂಗ್-ಆನ್‌ನಲ್ಲಿ ಬೃಹತ್ ಸಿಕ್ಸರ್‌ ಸಿಡಿಸಿದ್ದರು. ಇಂದೋರ್‌ನಲ್ಲಿ ನಡೆದ ಹಿಂದಿನ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ ಇದೇ ರೀತಿಯ ಹೊಡೆತ ಪ್ರಯತ್ನಿಸುವ ವೇಳೆ ಔಟಾಗಿದ್ದರು. ಹೀಗಾಗಿ ಅಹಮದಾಬಾದ್‌ನಲ್ಲಿ ತಮ್ಮ ಇನ್ನಿಂಗ್ಸ್‌ನ ಆರಂಭದಲ್ಲಿ ಮತ್ತೆ ಅದೇ ರೀತಿಯ ಹೊಡೆತ ಪ್ರಯತ್ನಿಸಿ ಯಶಸ್ವಿಯಾದರು.

ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಅವರು ಮತ್ತೆ ವೇಗದ ಆಟ ಮುಂದುವರೆಸಿದರು. ನಾಯಕ ರೋಹಿತ್ (35) ಬೇಗನೆ ಔಟಾದರೂ, ಗಿಲ್ ಆಸೀಸ್ ಬ್ಯಾಟರ್‌ಗಳ ವಿರುದ್ಧ ಆಕ್ರಮಣಕಾರಿ ಆಟ ಮುಂದುವರೆಸಿದರು. 89 ಎಸೆತಗಳಲ್ಲಿ ಅರ್ಧಶತಕ ತಲುಪಿದ ಗಿಲ್‌, ಪೂಜಾರ ಜೊತೆಗೆ ಶತಕದ ಜೊತೆಯಾಟವಾಡಿದರು.

ಚಹಾ ಅವಧಿಗೂ ಮುನ್ನ ಗಿಲ್ ತಮ್ಮ ಎರಡನೇ ಟೆಸ್ಟ್ ಶತಕ ಬಾರಿಸಿದರು. ಅಹಮದಾಬಾದ್‌ನ ಐತಿಹಾಸಿಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೈಲಿಗಲ್ಲು ತಲುಪಿ ಸಂಭ್ರಮಾಚರಿಸಿದರು. ಅಹಮದಾಬಾದ್‌ ಸ್ಟೇಡಿಯಂನಲ್ಲಿ 39 ದಿನಗಳಲ್ಲಿ ಇದು ಗಿಲ್ ಅವರ ಎರಡನೇ ಶತಕವಾಗಿದೆ. ಕಳೆದ ತಿಂಗಳು ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಯಲ್ಲಿ ಅವರು ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ಒಂದೇ ವರ್ಷದಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಬ್ಮನ್‌ ಪಾತ್ರರಾಗಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ, ಸುರೇಶ್ ರೈನಾ ಮತ್ತು ಕೆಎಲ್ ರಾಹುಲ್ ಈ ಸಾಧನೆ ಮಾಡಿದ್ದಾರೆ. ಗಿಲ್‌ ಶತಕಕ್ಕೆ ವಿರಾಟ್‌ ಹಾಗೂ ಪೂಜಾರ ನಗುವಿನ ಶುಭಾಶಯ ತಿಳಿಸಿದರು.

ಒಂದು ವರ್ಷದಲ್ಲಿ ಎಲ್ಲಾ ಮಾದರಿಗಳಲ್ಲಿ ಶತಕ ಗಳಿಸಿದವರು

2010 - ಜಯವರ್ಧನೆ

2010 -ರೈನಾ

2011 -ದಿಲ್ಶನ್

2014 -ಶೆಹಜಾದ್

2016 -ಕೆಎಲ್ ರಾಹುಲ್

2016 -ತಮೀಮ್

2017 -ರೋಹಿತ್

2019 -ವಾರ್ನರ್

2022 -ಬಾಬರ್

2023 -ಗಿಲ್

ಇದಕ್ಕೂ ಮೊದಲು, ನಾಲ್ಕನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್‌ಗಳ ಪ್ರಬಲ ಸ್ಕೋರ್ ಕಲೆ ಹಾಕಿತು. ಉಸ್ಮಾನ್ ಖವಾಜಾ 180 ರನ್‌ ಗಳಿಸಿದರೆ, ಕ್ಯಾಮರೂನ್ ಗ್ರೀನ್ 114 ರನ್‌ ಸಿಡಿಸಿದರು. ಭಾರತದ ಪರ ರವಿಚಂದ್ರನ್ ಅಶ್ವಿನ್ 32ನೇ ಬಾರಿ ಐದು ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

    ಹಂಚಿಕೊಳ್ಳಲು ಲೇಖನಗಳು