ಕನ್ನಡ ಸುದ್ದಿ  /  ಕ್ರೀಡೆ  /  Record: 35 ರನ್​ ಗಳಿಸಿ ಸಚಿನ್​, ಕೊಹ್ಲಿ, ಧೋನಿ ಎಲೈಟ್​​​ ಪಟ್ಟಿಗೆ ಸೇರಿದ ರೋಹಿತ್.!

Record: 35 ರನ್​ ಗಳಿಸಿ ಸಚಿನ್​, ಕೊಹ್ಲಿ, ಧೋನಿ ಎಲೈಟ್​​​ ಪಟ್ಟಿಗೆ ಸೇರಿದ ರೋಹಿತ್.!

Rohit Sharma: ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​​ನಲ್ಲಿ 35 ರನ್​ಗಳಿಸಿ ಔಟಾದ ರೋಹಿತ್​ ಶರ್ಮಾ ಎರಡು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 17000 ರನ್​ ಸಿಡಿಸಿದ ಭಾರತದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ (Twitter)

ಟೀಮ್​ ಇಂಡಿಯಾ - ಆಸ್ಟ್ರೇಲಿಯಾ (India vs Australia) ಟೆಸ್ಟ್​​​ ಸರಣಿಯ 4 ಪಂದ್ಯವು ಕುತೂಹಲ ಘಟಕ್ಕೆ ತಲುಪಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ ನೀಡಿರುವ ಬೃಹತ್​ ಮೊತ್ತವನ್ನು ಹಿಂಬಾಲಿಸಿರುವ ಭಾರತಕ್ಕೆ ಭರ್ಜರಿ ಆರಂಭಕ್ಕೆ ಸಿಕ್ಕಿದೆ. ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟವೂ ಪಡೆದಿದೆ. ನಾಯಕ ರೋಹಿತ್ ಶರ್ಮಾ - ಶುಭ್​ಮನ್​​​ ಗಿಲ್ ಜೋಡಿ (Rohit Sharma - Shubman Gill) 74 ರನ್​ಗಳ ಕಾಣಿಕೆ ನೀಡಿದೆ.

ಆದರೆ ಅದ್ಭುತ ಜೊತೆಯಾಟಕ್ಕೆ ಮ್ಯಾಥ್ಯೂ ಕುಹ್ನೆಮನ್​, ಬ್ರೇಕ್​ ನೀಡಿದರು. ಉತ್ತಮ ಇನ್ನಿಂಗ್ಸ್​ ಕಟ್ಟಿದ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್ ಔಟಾದರೂ ದಾಖಲೆಯೊಂದನ್ನು ಕೂಡ ಮಾಡಿದ್ದು, ಸಚಿನ್ ತೆಂಡೂಲ್ಕರ್ (Sachin Tendulkar)​, ವಿರಾಟ್​ ಕೊಹ್ಲಿ (Virat Kohli), MS ಧೋನಿ (MS Dhoni) ಅವರ ಎಲೈಟ್​ ಲೀಸ್ಟ್​ಗೂ ಪ್ರವೇಶ ನೀಡಿದ್ದಾರೆ.

17 ಸಾವಿರ ರನ್​ ಪೂರೈಸಿದ ರೋಹಿತ್​​

ರೋಹಿತ್​ ಶರ್ಮಾ ತಮ್ಮ ಅಲ್ಪಾವಧಿ ಇನ್ನಿಂಗ್ಸ್​​​ನಲ್ಲಿ 3 ಸಿಕ್ಸರ್​​ ಮತ್ತು ಒಂದು ಸಿಕ್ಸರ್​​​​​ ಸಿಡಿಸಿದ್ದರು. ಆದರೂ 2 ದೊಡ್ಡ ದಾಖಲೆಗಳನ್ನೂ ಸೃಷ್ಟಿಸಿದ್ದಾರೆ. ಈ ಇನ್ನಿಂಗ್ಸ್​ ಜೊತೆಗೆ 17 ಸಾವಿರ ಅಂತಾರಾಷ್ಟ್ರೀಯ ರನ್ ಪೂರೈಸಿದ ರೋಹಿತ್ ಈ ಸಾಧನೆ ಮಾಡಿದ ಭಾರತದ 7ನೇ ಹಾಗೂ ವಿಶ್ವದ ಒಟ್ಟಾರೆ 28ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಭಾರತದ ಹೆಚ್ಚು ರನ್ ಗಳಿಸಿದ ಆಟಗಾರರು!

ಸಚಿನ್​​​ ತೆಂಡೂಲ್ಕರ್​​ - 34357

ವಿರಾಟ್​ ಕೊಹ್ಲಿ - 25047

ರಾಹುಲ್​ ದ್ರಾವಿಡ್​​​ - 24208

ಸೌರವ್​ ಗಂಗೂಲಿ - 18575

ಎಂ.ಎಸ್​.ಧೋನಿ - 17266

ವಿರೇಂದ್ರ ಸೆಹ್ವಾಗ್​​ - 17253

ರೋಹಿತ್​ ಶರ್ಮಾ - 17003*

2000 ರನ್​ ಪೂರೈಸಿದ ಹಿಟ್​ಮ್ಯಾನ್​

ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ 35 ರನ್​ ಗಳಿಸಿದ ರೋಹಿತ್​, ಭಾರತದ ನೆಲದಲ್ಲಿ 2000 ರನ್​ ಪೂರೈಸಿದ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಅದು ವೇಗವಾಗಿ ಎಂಬುದು ವಿಶೇಷ. ಭಾರತದಲ್ಲಿ ಈ ಸಾಧನೆ ಮಾಡಿದ 2ನೇ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದಿದ್ದಾರೆ. ಮೊದಲು ಮೊಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ನೆಲದಲ್ಲಿ 24 ಟೆಸ್ಟ್​ ಪಂದ್ಯಗಳನ್ನು ಆಡಿರುವ ರೋಹಿತ್​ ಶರ್ಮಾ, 2002 ರನ್​ ಸಿಡಿಸಿದ್ದಾರೆ. 8 ಶತಕ, 6 ಅರ್ಧಶತಕ ಸಿಡಿಸಿರುವ ಹಿಟ್​ಮ್ಯಾನ್​ 66.73ರ ಬ್ಯಾಟಿಂಗ್​​​ ಸರಾಸರಿ ಹೊಂದಿದ್ದಾರೆ.

ಈ ಪಂದ್ಯದ ಭಾರತಕ್ಕೆ ಗೆಲುವು ಅನಿವಾರ್ಯ

ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಗೆಲುವು ಅನಿವಾರ್ಯವಾಗಿದೆ. ವರ್ಲ್ಡ್​ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ಗೆ ಅರ್ಹತೆ ಪಡೆಯಬೇಕಂದರೆ, ಈ ಪಂದ್ಯ ಟೀಮ್​ ಇಂಡಿಯಾ ಗೆಲ್ಲುವ ಅನಿವಾರ್ಯತೆ ಇದೆ. ಈ ಪಂದ್ಯ ಡ್ರಾ ಸಾಧಿಸಿದರೂ ಶ್ರೀಲಂಕಾ ವಿರುದ್ಧದ ನ್ಯೂಜಿಲೆಂಡ್​​ ಪಂದ್ಯದ ಫಲಿತಾಂಶದ ನಿರ್ಧಾರದ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗಲಿದೆ.