logo
ಕನ್ನಡ ಸುದ್ದಿ  /  Sports  /  Suryakumar Achieves 2 Huge Milestones In 2nd T20i Against South Africa

IND vs SA suryakumar yadav: ಈ ದಾಂಡಿಗನ ಆರ್ಭಟಕ್ಕೆ ಬ್ರೇಕ್‌ ಹಾಕೋರಿಲ್ಲ; ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ ಸೂರ್ಯ

HT Kannada Desk HT Kannada

Oct 03, 2022 08:14 AM IST

ಸೂರ್ಯಕುಮಾರ್ ಯಾದವ್

    • ಸೂರ್ಯಕುಮಾರ್ ಅವರು ಗುವಾಹಟಿಯಲ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೃಹತ್ ಮೈಲಿಗಲ್ಲುಗಳನ್ನು ತಲುಪಿದರು. ಟಿ20 ಮಾದರಿಯಲ್ಲಿ 1000 ರನ್‌ಗಳನ್ನು ತಲುಪಿದ ಮೂರನೇ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಸ್ಕೈ ಪಾತ್ರರಾದರು.
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ (PTI)

ಗುವಾಹಟಿ : ಟೀಂ ಇಂಡಿಯಾದಲ್ಲಿ ಈ ವರ್ಷ ಹೆಚ್ಚು ಸದ್ದು ಮಾಡಿ ಸುದ್ದಿಯಾದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್. ನಿರ್ಭೀತಿಯಿಂದ ಬ್ಯಾಟ್‌ ಬೀಸುವ ಈ ಸ್ಫೋಟಕ ಬ್ಯಾಟರ್‌, ಮೇಲಿಂದ ಮೇಲೆ ಅರ್ಧಶತಕ ಸಿಡಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಸೂರ್ಯ, 2ನೇ ಟಿ20 ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಗುವಾಹಟಿಯಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ, ತಲಾ 5 ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸಿದರು. ಕೇವಲ 22 ಎಸೆತಗಳಲ್ಲಿ 61 ರನ್ ಗಳಿಸಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರಿಂದ ರನೌಟ್ ಆದರು.

ಸೂರ್ಯಕುಮಾರ್ ಅವರು ಗುವಾಹಟಿಯಲ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೃಹತ್ ಮೈಲಿಗಲ್ಲುಗಳನ್ನು ತಲುಪಿದರು. ಟಿ20 ಮಾದರಿಯಲ್ಲಿ 1000 ರನ್‌ಗಳನ್ನು ತಲುಪಿದ ಮೂರನೇ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಸ್ಕೈ ಪಾತ್ರರಾದರು. 32 ವರ್ಷ ವಯಸ್ಸಿನ ಬ್ಯಾಟರ್, ತನ್ನ 31 ನೇ ಇನ್ನಿಂಗ್ಸ್‌ನಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ನಾಲ್ಕು ಅಂಕಿಗಳನ್ನು ತಲುಪಿದರು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೊದಲೆರಡು ಸ್ಥಾನದಲ್ಲಿದ್ದಾರೆ.

ವೇಗವಾಗಿ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ

ವಿರಾಟ್ ಕೊಹ್ಲಿ - 27 ಇನ್ನಿಂಗ್ಸ್

ಕೆಎಲ್ ರಾಹುಲ್ - 29 ಇನ್ನಿಂಗ್ಸ್

ಸೂರ್ಯಕುಮಾರ್ ಯಾದವ್ - 31 ಇನ್ನಿಂಗ್ಸ್

ಇನ್ನೊಂದೆಡೆ ಸೂರ್ಯ ನಿನ್ನೆ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಕೂಡಾ ದಾಖಲೆ. ಭಾರತದ ಪರ ಕಡಿಮೆ ಎಸೆತದಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಇರುವುದು ಯುವರಾಜ್‌ ಸಿಂಗ್‌ ಹೆಸರಿನಲ್ಲಿ. ಈಗ ಇದೇ ಪಟ್ಟಿಯಲ್ಲಿ ಸೂರ್ಯ ಮೂರನೇ ಸ್ಥಾನದಲ್ಲಿ ಕುಳಿತಿದ್ದಾರೆ.

ಟಿ20ಯಲ್ಲಿ ಭಾರತದ ಪರ ಅತಿವೇಗದ ಅರ್ಧಶತಕಗಳ ಪಟ್ಟಿ ಇಲ್ಲಿದೆ

ಯುವರಾಜ್ ಸಿಂಗ್ - 12 ಎಸೆತಗಳು

ಗೌತಮ್ ಗಂಭೀರ್ - 18 ಎಸೆತಗಳು

ಸೂರ್ಯಕುಮಾರ್ ಯಾದವ್ - 18 ಎಸೆತಗಳು

ಗೌತಮ್ ಗಂಭೀರ್ - 19 ಎಸೆತಗಳು

ಭಾರತಕ್ಕೆ ಜಯ

ಇನ್ನು ನಿನ್ನೆಯ ಪಂದ್ಯದಲ್ಲಿ ಭಾರತ ರೋಚಕ ಜಯ ಗಳಿಸಿದೆ. ಬೃಹತ್‌ ಮೊತ್ತ ದಾಖಲಾದ ಈ ಪಂದ್ಯದಲ್ಲಿ, ಕೊನೆಯವರೆಗೂ ಪ್ರಬಲ ಹೋರಾಟ ನಡೆಸಿದ ಹರಿಣಗಳು ಅಂತಿಮವಾಗಿ ಸೋಲೊಪ್ಪಿಕೊಂಡಿದ್ದಾರೆ. ಸತತ ಎರಡು ಜಯ ದಾಖಲಿಸಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೊದಲ ಬಾರಿಗೆ ತವರಿನಲ್ಲಿ ದ್ವಿಪಕ್ಷೀಯ ಸರಣಿ ಗೆದ್ದಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಸೂರ್ಯಕುಮಾರ್‌ ಯಾದವ್‌ ಹಾಗೂ ಕೆ ಎಲ್‌ ರಾಹುಲ್‌ ಅವರ ಅದ್ಧೂರಿ ಬ್ಯಾಟಿಂಗ್‌ ನೆರವಿನಿಂದ 3 ವಿಕೆಟ್‌ ಕಳೆದುಕೊಂಡು 237 ರನ್‌ ಸಿಡಿಸಿತು. ಆರಂಭಿಕ ಆಘಾತದ ನಡುವೆ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಹರಿಣಗಳು, ಅಂತಿಮ ಹಂತದಲ್ಲಿ ಪ್ರಬಲ ಹೋರಾಟ ನೀಡಿ ಸೋತರು. ಮುರಿಯದ ನಾಲ್ಕನೇ ವಿಕೆಟ್‌ಗೆ 174 ರನ್‌ಗಳ ಜೊತೆಯಾಟ ನೀಡಿದ ಡೇವಿಡ್‌ ಮಿಲ್ಲರ್‌ ಹಾಗೂ ಕ್ವಿಂಟನ್‌ ಡಿ ಕಾಕ್‌, ಭಾರತದಿಂದ ಜಯವನ್ನು ಕಿತ್ತುಕೊಳ್ಳುವಲ್ಲಿ ವಿಫಲರಾದರು. ಈ ಮೂಲಕ ಭಾರತ 2-0 ಅಂತರದಿಂದ ಸರಣಿ ಜಯ ಸಾಧಿಸಿತು.

ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ನಾಳೆ ನಡೆಯಲಿದೆ. ಆ ಬಳಿಕ ಅಕ್ಟೋಬರ್‌ 6 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು