logo
ಕನ್ನಡ ಸುದ್ದಿ  /  ಕ್ರೀಡೆ  /  India In T20i Run Chases: ಟಿ20 ಚೇಸಿಂಗ್‌ನಲ್ಲಿ ಭಾರತವೇ ಟಾಪ್‌, ಆಸೀಸ್‌ ವಿರುದ್ಧ ಹಲವು ದಾಖಲೆ

India in T20I run chases: ಟಿ20 ಚೇಸಿಂಗ್‌ನಲ್ಲಿ ಭಾರತವೇ ಟಾಪ್‌, ಆಸೀಸ್‌ ವಿರುದ್ಧ ಹಲವು ದಾಖಲೆ

HT Kannada Desk HT Kannada

Sep 26, 2022 10:29 AM IST

ಭಾರತದ ಚೇಸಿಂಗ್‌ ದಾಖಲೆ

    • ಚೇಸಿಂಗ್‌ನಲ್ಲಿ ಭಾರತದ ಗೆಲುವಿನ ಪ್ರಮಾಣ ತುಂಬಾ ಜಾಸ್ತಿಯಿದೆ. ಕಳೆದ 2021ರಿಂದ ಚೇಸಿಂಗ್‌ ಮಾಡಿದ 14 ಪಂದ್ಯಗಳಲ್ಲಿ‌ 13 ಪಂದ್ಯಗಳನ್ನು ಭಾರತ ಗೆದ್ದಿದೆ. ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ.
ಭಾರತದ ಚೇಸಿಂಗ್‌ ದಾಖಲೆ
ಭಾರತದ ಚೇಸಿಂಗ್‌ ದಾಖಲೆ (PTI)

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ. ಕೊನೆಯ ಟಿ20 ಪಂದ್ಯವನ್ನು ಭಾರತ ಗೆಲ್ಲುವುದರೊಂದಿಗೆ ಹಲವು ದಾಖಲೆಗಳನ್ನು ಕೂಡಾ ಬರೆದಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು, ಭಾರತ ಯಶಸ್ವಿಯಾಗಿ ಚೇಸಿಂಗ್‌ ಮಾಡಿ ಗೆದ್ದಿತು. ಈ ಮೂಲಕ ಚೇಸಿಂಗ್‌ನಲ್ಲಿ ರತ ಬಲಿಷ್ಠ ತಂಡ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಹೈದರಾಬಾದ್‌ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎಂಬ ಸಂಪ್ರದಾಯವನ್ನು ಭಾರತ ಸುಳ್ಳಾಗಿಸಿದೆ. ಟಾಸ್‌ ಗೆದ್ದ ರೋಹಿತ್‌ ಶರ್ಮಾ ಅಚ್ಚರಿ ಎಂಬಂತೆ ಬೌಲಿಂಗ್‌ ಆಯ್ಕೆ ಮಾಡಿದರು. ಮೊದಲು ಬ್ಯಾಟ್‌ ಮಾಡಿದ ಕಾಂಗರೂಗಳು 186 ರನ್‌ ಗಳಿಸಿ, ಭಾರತಕ್ಕೆ ಬಿಗ್‌ ಟಾರ್ಗೆಟ್‌ ನೀಡಿದರು. 187 ರನ್ ಗುರಿ ಪಡೆದ ಭಾರತ ದೊಡ್ಡ ಹೊಡೆತಗಳಿಗೆ ಮುನ್ನುಗ್ಗಿತು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 69 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 63 ರನ್‌ ಗಳಿಸಿದರು.

ಚೇಸಿಂಗ್‌ನಲ್ಲಿ ಭಾರತ ಟಾಪ್‌

ಚೇಸಿಂಗ್‌ನಲ್ಲಿ ಭಾರತದ ಗೆಲುವಿನ ಪ್ರಮಾಣ ತುಂಬಾ ಜಾಸ್ತಿಯಿದೆ. ಕಳೆದ 2021ರಿಂದ ಚೇಸಿಂಗ್‌ ಮಾಡಿದ 14 ಪಂದ್ಯಗಳಲ್ಲಿ‌ 13 ಪಂದ್ಯಗಳನ್ನು ಭಾರತ ಗೆದ್ದಿದೆ. ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತದ್ದೇ ಚೇಸಿಂಗ್‌ ದಾಖಲೆ

ಈವರೆಗೆ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಹಲವು ಚೇಸಿಂಗ್‌ ದಾಖಲೆ ಮಾಡಿದೆ. ಆಸೀಸ್‌ ವಿರುದ್ಧ ಅಗ್ರ ನಾಲ್ಕು ಯಶಸ್ವಿ ಚೇಸಿಂಗ್‌ ದಾಖಲೆ ಇರುವುದು ಭಾರತದ ಹೆಸರಿನಲ್ಲೇ. 2013ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಚೇಸಿಂಗ್‌ ವೇಳೆ 202 ರನ್‌ ಗಳಿಸಿ ಭಾರತ ದಾಖಲೆ ನಿರ್ಮಿಸಿತ್ತು. ಇದು ಕಾಂಗರೂಗಳ ವಿರುದ್ಧದ ಬೆಸ್ಟ್‌ ಚೇಸಿಂಗ್.‌

2016ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಯಶಸ್ವಿ ಚೇಸಿಂಗ್‌ ಮಾಡಿ 198 ರನ್‌ ಗಳಿಸಿತ್ತು. 2020ರಲ್ಲಿ ಮತ್ತೆ ಸಿಡ್ನಿ ಮೈದಾನದಲ್ಲಿ 195 ರನ್ ಸಿಡಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿಯೂ 187 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿದೆ. ಈ ಮೂಲಕ ಆಸೀಸ್‌ ವಿರುದ್ಧದ ಅಗ್ರ ನಾಲ್ಕು ಬೆಸ್ಟ್‌ ರನ್‌ ಚೇಸ್‌ ಭಾರತದ ಹೆಸರಿನಲ್ಲಿದೆ.

ನಾಯಕನಾಗಿ ಹೆಚ್ಚು ಪಂದ್ಯ ಗೆದ್ದವರು ಯಾರು?

ಟಿ20 ಕ್ರಿಕೆಟ್‌ನಲ್ಲಿ ಭಾರತ ನಾಯಕನಾಗಿ ಹೆಚ್ಚು ಪಂದ್ಯ ಗೆದ್ದ ಆಟಗಾರ ಎಂ ಎಸ್‌ ಧೋನಿ. ಇವರು 42 ಪಂದ್ಯ ಗೆದ್ದಿದ್ದಾರೆ. ಈಗ ಎರಡನೇ ಸ್ಥಾನಕ್ಕೆ ಕೊಹ್ಲಿಯನ್ನು ಹಿಂದಿಕ್ಕಿ ರೋಹಿತ್‌ ಶರ್ಮಾ ಲಗ್ಗೆಯಿಟ್ಟಿದ್ದಾರೆ. 33 ಪಂದ್ಯಗಳನ್ನು ರೋಹಿತ್‌ ಗೆದ್ದರೆ, ವಿರಾಟ್‌ ನಾಯಕನಾಗಿ 32 ಪಂದ್ಯ ಗೆದ್ದಿದ್ದಾರೆ.

ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಸೂರ್ಯಕುಮಾರ್‌

ಈ ವರ್ಷ ಸೂರ್ಯಕುಮಾರ್ ಯಾದವ್ 20 ಪಂದ್ಯಗಳಲ್ಲಿ 37.88 ಸರಾಸರಿಯಲ್ಲಿ 682 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಈ ವರ್ಷ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳು ಹೊರಬಂದಿವೆ. ಆಕರ್ಷಕ 182.84 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು