logo
ಕನ್ನಡ ಸುದ್ದಿ  /  Sports  /  Up Warriorz Vs Delhi Capitals Women Match Results

WPL 2023: ಯುಪಿ ಮಣಿಸಿ ನೇರವಾಗಿ ಫೈನಲ್ ಪ್ರವೇಶಿಸಿದ ಡೆಲ್ಲಿ; ಎಲಿಮನೇಟರ್ ಪಂದ್ಯದಲ್ಲಿ ಮುಂಬೈ-ಯುಪಿ ಕಾದಾಟ

HT Kannada Desk HT Kannada

Mar 21, 2023 11:00 PM IST

ಡೆಲ್ಲಿ ತಂಡದ ಆಟಗಾರ್ತಿ

  • ಡೆಲ್ಲಿ ಪರ ನಾಯಕಿ ಲ್ಯಾನಿಂಗ್‌ 39 ರನ್‌ ಗಳಿಸಿದರೆ, ಶಫಾಲಿ ವರ್ಮಾ 21 ರನ್‌ ಗಳಿಸಿದರು. ಭರವಸೆಯ ಯುವ ಆಟಗಾರ್ತಿ ಜೆಮಿಮಾ 3 ರನ್‌ ಗಳಿಸಿ ಔಟಾದರು.‌ ಕೊನೆಯ ಹಂತದಲ್ಲಿ ಅಲಿಸ್‌ ಕ್ಯಾಪ್ಸೆ 34 ರನ್ ಗಳಿಸಿದರೆ, ಮರಿಜಾನ್ನೆ ಕಾಪ್‌ ಅಜೇಯ 34 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಡೆಲ್ಲಿ ತಂಡದ ಆಟಗಾರ್ತಿ
ಡೆಲ್ಲಿ ತಂಡದ ಆಟಗಾರ್ತಿ (PTI)

ವಿಮೆನ್ಸ್‌ ಪ್ರೀಮಿಯರ್‌‌ ಲೀಗ್‌ನ ಕೊನೆಯ ಲೀಗ್‌ ಹಂತದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಭರ್ಜರಿ ಜಯ ಗಳಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವುದರೊಂದಿಗೆ ನೇರವಾಗಿ ಫೈನಲ್‌ ಪ್ರವೇಶಿಸಿದೆ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಯುಪಿ ವಾರಿಯರ್ಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಡೆಲ್ಲಿ, 17.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿ ಗುರಿ ತಲುಪಿತು. ಆ ಮೂಲಕ 5 ವಿಕೆಟ್‌ಗಳಿಂದ ಜಯ ಗಳಿಸುವ ಮೂಲಕ ಫೈನಲ್‌ ಪ್ರವೇಶಿಸಿತು.

ಡೆಲ್ಲಿ ಪರ ನಾಯಕಿ ಲ್ಯಾನಿಂಗ್‌ 39 ರನ್‌ ಗಳಿಸಿದರೆ, ಶಫಾಲಿ ವರ್ಮಾ 21 ರನ್‌ ಗಳಿಸಿದರು. ಭರವಸೆಯ ಯುವ ಆಟಗಾರ್ತಿ ಜೆಮಿಮಾ 3 ರನ್‌ ಗಳಿಸಿ ಔಟಾದರು.‌ ಕೊನೆಯ ಹಂತದಲ್ಲಿ ಅಲಿಸ್‌ ಕ್ಯಾಪ್ಸೆ 34 ರನ್ ಗಳಿಸಿದರೆ, ಮರಿಜಾನ್ನೆ ಕಾಪ್‌ ಅಜೇಯ 34 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ, ತಹ್ಲಿಯಾ ಮೆಕ್‌ಗ್ರಾತ್ ಆಟದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. 32 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ತಹ್ಲಿಯಾ ಅಜೇಯ 58 ರನ್‌ ಸಿಡಿಸಿದರು. ಇವರನನ್ನು ಹೊರತುಪಡಿಸಿದರೆ, ತಂಡದ ಪರ ಹೆಚ್ಚು ರನ್‌ ಕಲೆ ಹಾಕಿದವರು ನಾಯಕಿ ಹೀಲಿ. ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದ ಅವರು, 36 ರನ್‌ ಗಳಿಸಿದರು. ಉಳಿದಂತೆ ಶ್ವೇತಾ ಸೆಹ್ರಾವತ್ 19 ರನ್ ಗಳಿಸಿದರೆ, ಸಿಮ್ರನ್ ಶೇಖ್ 11 ರನ್ ಗಳಿಸಿದರು.

ಈ ದಿನ ನಡೆದ ಮೊದಲ ಪಂದ್ಯದಲ್ಲಿ, ಆರ್‌ಸಿಬಿಯನ್ನು ಮಣಿಸುವ ಮೂಲಕ ಮುಂಬೈ ಅಗ್ರಸ್ಥಾನಕ್ಕೆ ಬಂದಿತ್ತು. ದಿನದ ಎರಡನೇ ಪಂದ್ಯದಲ್ಲಿ ಗೆದ್ದ ಡೆಲ್ಲಿ ಈಗ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಅಲ್ಲದೆ ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್‌ನ ಫೈನಲ್‌ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.

ಸದ್ಯ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ ಎರಡನೇ ಸ್ಥಾನದಲ್ಲಿದ್ದು, ಯುಪಿ ವಾರಿಯರ್ಸ್ ಮೂರನೇ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವೆ ಮಾರ್ಚ್‌ 24ರಂದು ಎಲಿಮನೇಟರ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ ಪ್ರವೇಶಿಸಲಿದೆ. ಇದೇ ವೇಳೆ ಸೋತ ತಂಡ ಟೂರ್ನಿಯಿಂದ ನಿರ್ಗಮಿಸಿಲಿದೆ. ಮಾರ್ಚ್‌ 26ರಂದು ಫೈನಲ್‌ ಪಂದ್ಯ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು